Breaking News

ಒಳ ಮೀಸಲಾತಿ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ರಾಜ್ಯದ 3 ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ಸಂದರ್ಭದಲ್ಲೇ ಪರಿಶಿಷ್ಟ ಜಾತಿ ಮೀಸಲು ವರ್ಗೀಕರಣ ವಿಚಾರ ಸರ್ಕಾರಕ್ಕೆ ತಲೆಬೇನೆ ತರಿಸಿದೆ, ಎಡ ಸಮುದಾಯದ ವಿಶ್ವಾಸ ಗಳಿಸಲು ಸರ್ಕಸ್ ಆರಂಭಿಸಿರುವ ಸಿಎಂ ಸಿದ್ದರಾಮಯ್ಯ ಅ.24ರ ಸಚಿವ ಸಂಪುಟ ಸಭೆಯಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲು ನಿರ್ಧರಿಸಿದ್ದಾರೆ.
ಒಳಮೀಸಲಾತಿ ವಿಚಾರವಾಗಿ ನಡೆದ ಸಚಿವರು, ಮಾಜಿ ಸಚಿವರು, ಶಾಸಕರು, ಅಧಿಕಾರಿಗಳ ಸಭೆ ಯಲ್ಲಿ ಈ ತೀರ್ಮಾನ ಹೊರಬಿದ್ದಿದೆ. ಸಚಿವ ಮುನಿಯಪ್ಪ ಸಭೆಯ ನಿರ್ಧಾರಗಳ ಮಾಹಿತಿ ಹಂಚಿಕೊಂಡರು.
ಮೂರು ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ ಹೊಸ್ತಿಲಲ್ಲೇ ಪರಿಶಿಷ್ಟ ಜಾತಿ ಮೀಸಲು ವರ್ಗೀಕರಣ ವಿಷಯದಲ್ಲಿ ದಮನಿತರು ಅದರಲ್ಲೂ ಎಡ ಸಮುದಾಯಗಳ ವಿಶ್ವಾಸ ಗಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಕಸರತ್ತು ಆರಂಭಿಸಿದ್ದಾರೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಒಳಮೀಸಲಾತಿ ಕುರಿತು ಸಚಿವರು, ಮಾಜಿ ಸಚಿವರು, ಶಾಸಕರು ಹಾಗೂ ಅಧಿಕಾರಿಗಳ ಜಂಟಿ ಸಭೆ ನಡೆಸಿದ ಸಿದ್ದರಾಮಯ್ಯ 24ರ ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಬಗ್ಗೆ ರ್ಚಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುವ ಸಂದೇಶ ಸಾರಿದ್ದಾರೆ.
ಸುಪ್ರೀಂಕೋರ್ಟ್ ಸ್ಪಷ್ಟ ಆದೇಶ ನೀಡುವ ಜತೆಗೆ ಮರು ಪರಿಶೀಲನಾ ಅರ್ಜಿ ತಿರಸ್ಕೃತಗೊಂಡಿರುವ ಕಾರಣ ಒಳಮೀಸಲು ಜಾರಿಗೊಳಿಸಲೇಬೇಕಾದ ಅನಿವಾರ್ಯತೆ ರಾಜ್ಯ ಸರ್ಕಾರಕ್ಕೆ ಎದುರಾಗಿದೆ. ಎಸ್​ಸಿ, ಒಬಿಸಿಗಳಿಗೆ ಮೀಸಲು, ಸಾಮಾಜಿಕ ನ್ಯಾಯ ಹಂಚಿಕೆಯಲ್ಲಿ ಸದಾ ಮೇಲ್ಪಂಕ್ತಿ ನಿರ್ಣಯ ಕೈಗೊಂಡು, ಅನುಷ್ಠಾನಕ್ಕೆ ತರುವಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ಆದರೆ ಎಸ್​ಸಿ ಮೀಸಲು ವರ್ಗೀಕರಣ ವಿಳಂಬದಿಂದ ರಾಜ್ಯ ಸರ್ಕಾರ ಮಾತ್ರವಲ್ಲ, ಕಾಂಗ್ರೆಸ್ ನಡೆ ಬಗ್ಗೆ ಶೋಷಿತ ಸಮುದಾಯಗಳಲ್ಲಿ ಸಂದೇಹ, ಅಪನಂಬಿಕೆ ಹೆಚ್ಚತೊಡಗಿರುವುದು ಕೈಪಡೆಯನ್ನು ಚಿಂತೆಗೆ ದೂಡಿದೆ ಒಳಮೀಸಲು ಇತ್ಯರ್ಥವಾಗದೆ ಮೂರು ಕ್ಷೇತ್ರಗಳ ಉಪ ಚುನಾವಣೆ ಜತೆಗೆ ಮುಂಬರುವ ಎಲ್ಲ ಚುನಾವಣೆಗಳಲ್ಲೂ ನಷ್ಟವಾಗಲಿದೆ ಎಂಬ ಭೀತಿ ಕಾಂಗ್ರೆಸ್ ಅನ್ನು ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಮಾದಿಗ ಸಮುದಾಯದ ಹಿರಿಯರನ್ನು ಕರೆದು, ಉನ್ನತಾಧಿಕಾರಿಗಳ ಸಮ್ಮುಖ ಸಿಎಂ ಸಿದ್ದರಾಮಯ್ಯ ಸಮಾಲೋಚಿಸಿದ್ದಾರೆ. ಮಾದಿಗರು ಸಹಿತ ಇತರ ಸಮುದಾಯಗಳಿಗೆ ಒಳಮೀಸಲು ಜಾರಿಗೆ ಬದ್ಧವೆಂಬ ಸಂದೇಶ ರವಾನಿಸಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.

Share News

About BigTv News

Check Also

ಇ-ಖಾತೆಗಾಗಿ ₹50 ಸಾವಿರ ಲಂಚಕ್ಕೆ ಬೇಡಿಕೆ; ಮೊದಲ ಕಂತು ಪಡೆಯುವಾಗ ನಗರಸಭೆ ಸಿಬ್ಬಂದಿ ಲೋಕಾಯುಕ್ತ ಬಲೆಗೆ

ಶಿಡ್ಲಘಟ್ಟ: ಇ-ಖಾತೆ ಮಾಡಿಕೊಡಲು ₹50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು, ಮೊದಲ ಕಂತಿನ ₹25,500 ಸ್ವೀಕರಿಸುತ್ತಿದ್ದ ನಗರಸಭೆಯ ಎಸ್‌ಡಿಎ ನಾಗರಾಜ್ …

Leave a Reply

Your email address will not be published. Required fields are marked *