Breaking News

BigTv News

ಏಷ್ಯನ್ ಚಾಂಪಿಯನ್ಸ್ ಟ್ರೋಫಿ: ಚೀನಾವನ್ನು ಮಣಿಸಿದ ಭಾರತದ ಹಾಕಿ ತಂಡ

ನವದೆಹಲಿ : ಭಾರತ ಪುರುಷರ ಹಾಕಿ ತಂಡ ಭಾನುವಾರ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಆತಿಥೇಯ ಚೀನಾ ವಿರುದ್ಧ 3-0 ಅಂತರದ ಭರ್ಜರಿ ಜಯ ಸಾಧಿಸಿ ಶುಭಾರಂಭ ಮಾಡಿದೆ. ಭಾರತದ ಪರ ಸುಖಜಿತ್ ಸಿಂಗ್ (14ನೇ ನಿಮಿಷ), ಉತ್ತಮ್ ಸಿಂಗ್ (27ನೇ ನಿಮಿಷ) ಮತ್ತು ಅಭಿಷೇಕ್ (32ನೇ ನಿಮಿಷ) ಗೋಲು ಗಳಿಸಿದರೆ, ಚೀನಾ ಒಂದೂ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಒಲಿಂಪಿಕ್ಸ್‌ನಲ್ಲಿ ಸತತ ಎರಡನೇ ಕಂಚಿನ ಪದಕ ಗೆದ್ದ ನಂತರ ಭಾರತ ಟೂರ್ನಿಯಲ್ಲಿ …

Read More »

ಪ್ಯಾರಿಸ್ ಪ್ಯಾರಾಲಿಂಪಿಕ್ಸ್: 29 ಪದಕಗಳನ್ನು ಜಯಸಿದ ಭಾರತದ ಪ್ಯಾರಾ ಅಥ್ಲೀಟ್‌ಗಳು

ಪ್ಯಾರಿಸ್: ಬಹುನಿರೀಕ್ಷಿತ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತದ ಅಭಿಯಾನ ಭಾನುವಾರ ಅಂತ್ಯವಾಗಿದ್ದು, ದೇಶದ ಪ್ಯಾರಾ ಅಥ್ಲೀಟ್‌ಗಳ ಸರ್ವಶ್ರೇಷ್ಠ ಪ್ರದರ್ಶನ ತೋರಿವೆ. ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತ 7 ಚಿನ್ನ, 9 ಬೆಳ್ಳಿ ಹಾಗೂ 13 ಕಂಚಿನ ಪದಕಗಳೊಂದಿಗೆ ಒಟ್ಟಾರೆ 29 ಪದಕಗಳನ್ನು ಜಯಿಸುವಲ್ಲಿ ಯಶಸ್ವಿಯಾಗಿದೆ. ಇದು ಪ್ಯಾರಾಲಿಂಪಿಕ್ಸ್‌ ಇತಿಹಾಸದಲ್ಲೇ ಆವೃತ್ತಿಯೊಂದರಲ್ಲಿ ಭಾರತ ಗಳಿಸಿದ ಗರಿಷ್ಠ ಪದಕಗಳು ಎನಿಸಿಕೊಂಡಿವೆ. ಹೌದು, ಭಾರತದ ಪ್ಯಾರಾ ಅಥ್ಲೀಟ್‌ಗಳು 29 ಪದಕಗಳನ್ನು ಜಯಿಸುವ ಮೂಲಕ ಸಾರ್ವಕಾಲಿಕ …

Read More »

ಪಾಕಿಸ್ತಾನದ ಕಡಲ ತೀರದಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲದ ಬೃಹತ್‌ ಸಂಗ್ರಹ ಪತ್ತೆ

ಇಸ್ಲಾಮಾಬಾದ್‌: ಪಾಕಿಸ್ತಾನದ ಕಡ ತೀರದಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲದ ಬೃಹತ್‌ ಸಂಗ್ರಹ ಪತ್ತೆಯಾಗಿದ್ದು, ಇದು ಆರ್ಥಿಕವಾಗಿ ತತ್ತರಿಸಿದರುವ ಆ ದೇಶಕ್ಕೆ ಚೇತರಿಕೆ ನೀಡಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ತೈಲ ಮತ್ತು ಅನಿಲ ನಿಕ್ಷೇಪಗಳ ಉಪಸ್ಥಿತಿಯನ್ನು ಪರಿಶೀಲಿಸಲು ಮೂರು ವರ್ಷಗಳಿಂದ ಸಮೀಕ್ಷೆಯನ್ನು ಕೈಗೊಳ್ಳಲಾಯಿತು. ಈ ವೇಳೆ ವಿಶ್ವದ 4ನೇ ಅತೀದೊಡ್ಡ ತೈಲ ನಿಕ್ಷೇಪ ಪತ್ತೆಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈಗಲೇ ಈ ಸಂಗ್ರವನ್ನು ಬಳಸಿಕೊಳ್ಳಲು ಸಾಧ್ಯವಿಲ್ಲ ತೈಲ ಹೊರ ತೆಗೆಯುವ ಕಾಮಗಾರಿ …

Read More »

ಮಹದಾಯಿ ಯೋಜನೆಗೆ ಕಾಂಗ್ರೆಸ್ ನವರಿಂದಲೇ ಹಿನ್ನಡೆ: ಬಸವರಾಜ ಬೊಮ್ಮಾಯಿ

ಹಾವೇರಿ: ಮಹದಾಯಿ ಯೋಜನೆಗೆ ಕಾಂಗ್ರೆಸ್ ನವರಿಂದಲೇ ಹಿನ್ನಡೆಯಾಗಿದ್ದು, ಕರ್ನಾಟಕಕ್ಕೆ ಮಹದಾಯಿಯ ಹನಿ ನೀರನ್ನು ಕೊಡುವುದಿಲ್ಲ ಎಂದು 2009ರಲ್ಲಿ ಅಂದಿನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದರು. ಟ್ರಿಬ್ಯುನಲ್ ಮಾಡುವ ಅಗತ್ಯ ಇಲ್ಲದಿದ್ದರೂ ಟ್ರಿಬ್ಯುನಲ್ ಮಾಡಿದರು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಮಹಾದಾಯಿ ವಿಚಾರವಾಗಿ ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಕರೆದೊಯ್ಯುವುದಾಗಿ ಕಾನೂನು ಸಚಿವ ಎಚ್.ಕೆ.ಪಾಟೀಲ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಮಹದಾಯಿ ಯೋಜನೆಗೆ …

Read More »

ನಾನು ಸಿಎಂ ಆಗುವ ಅಗತ್ಯ ತಯಾರಿ ನಡೆಸಿದ್ದು, ಅದು ಇಗಲ್ಲ, ಬದಲಾಗಿ 2028 ಕ್ಕೆ: ಸತೀಶ ಜಾರಕಿಹೊಳಿ

ಬೆಳಗಾವಿ : ನಾನು ಸಿಎಂ ಆಗುವ ಸಂಬಂಧ ಅಗತ್ಯ ತಯಾರಿ ಮಾಡುತ್ತಿದ್ದು ಅದು ಈಗ ಆಗಲು ಅಲ್ಲ, ಬದಲಾಗಿ 2028ಕ್ಕೆ ಎಂದು ಸಚಿವ ಸತೀಶ್​​ ಜಾರಕಿಹೊಳಿ ಹೇಳಿದ್ದು, ಅಲ್ಲಿಯವರೆಗೆ ಅಭಿಮಾನಿಗಳು ಸಮಾಧಾನದಿಂದ ಕಾಯಬೇಕು ಎಂದಿದ್ದಾರೆ. ಸಿಎಂ ಸಿದ್ದರಾಮಯ್ಯ ಮುಡಾ ಪ್ರಕರಣದ ಇಕ್ಕಟ್ಟಿಗೆ ಸಿಲುಕಿದ ನಂತರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಬದಲಾವಣೆ ಹಾಗೂ ಯಾರು ರೇಸ್​​​ನಲ್ಲಿದ್ದಾರೆ ಎಂಬ ಚರ್ಚೆ ಮುನ್ನೆಲೆ ಬರುತ್ತಿರುವುದರಿಂದ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಆಗಿ ಸಿದ್ದರಾಮಯ್ಯ …

Read More »

ವಿದ್ಯುತ್ ಕಂಬ ಸ್ಪರ್ಶದಿಂದ ವ್ಯಕ್ತಿ ಸಾವು

ಕಲಬುರಗಿ: ಇಲ್ಲಿನ ಕೇಂದ್ರೀಯ ಬಸ್ ನಿಲ್ದಾಣದ ಎದುರಿನ ನ್ಯೂ ಲೈಫ್ ಆಸ್ಪತ್ರೆಯ ಹೈಲೈಟ್ ಬೋರ್ಡ್ ಗಾಗಿ ಹಾಕಿದ್ದ ಕಂಬದಲ್ಲಿ ಪ್ರವಹಿಸುತ್ತಿದ್ದ ವಿದ್ಯುತ್ ಸ್ಪರ್ಶಕ್ಕೆ ಒಳಗಾಗಿ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ನಡೆದಿದೆ. ಶಹಾಪುರ ಪಟ್ಟಣದ ಬಿ.ಬಿ.ರೋಡ್ ನಿವಾಸಿ ಮುಹಮ್ಮದ್ ಇರ್ಶಾದ್ ಮೃತಪಟ್ಟವರು. ಇವರು ತನ್ನ ಗರ್ಭಿಣಿ ಸಹೋದರಿಗೆ ಚಿಕಿತ್ಸೆಗೆಂದು ಶನಿವಾರ ಶಹಾಪುರದಿಂದ ಕಲಬುರಗಿ ನಗರದ ನ್ಯೂ ಲೈಫ್ ಆಸ್ಪತ್ರೆಗೆ ಕರೆತಂದಿದ್ದರು. ಈ ವೇಳೆಯಲ್ಲಿ ಆಸ್ಪತ್ರೆ ಆವರಣದಲ್ಲಿರುವ ಹೈಲೈಟ್ ಬೋರ್ಡ್ ಕಂಬವನ್ನು ಸ್ಪರ್ಶಿಸಿದಾಗ …

Read More »

ಚೀನಾದಲ್ಲಿ ವಿನಾಶಕಾರಿ ಚಂಡಮಾರುತ:ಸಂಕಷ್ಟಕ್ಕೆ ಸಿಲುಕಿದ ಅನೇಕ ಜನರು

ಚೀನಾ: ಪ್ರಕೃತಿ ಈ ವರ್ಷ ಚೀನಾದ ಮೇಲೆ ಸೇಡು ಸೇರಿಸಿಕೊಳ್ಳುತ್ತಿದ್ದು, ಕಂಡು ಕೇಳರಿಯದ ಚಂಡಮಾರುತ ಚೀನಾದಲ್ಲಿ ವಿನಾಶವನ್ನು ಸೃಷ್ಟಿಸುತ್ತಿದೆ. ಚೀನಾದಲ್ಲಿ ಮಾರ್ಚ್ ಮತ್ತು ಏಪ್ರಿಲ್ ನಲ್ಲಿ ಬಿಸಿಲು ಹೆಚ್ಚಾಗಿತ್ತು. ತಾಪಮಾನವು 50 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚಾಗಿದೆ.ಆಲಿಕಲ್ಲು ಮಳೆಯಿಂದಾಗಿ ಅನೇಕ ಜನರು ಸಾವನ್ನಪ್ಪಿದ್ದಾರೆ. ಮೌಂಟ್ ಕಿಯಾನ್ಲಿಂಗ್ ಶಾನ್ನಲ್ಲಿ ಸೆಕೆಂಡಿಗೆ 37.2 ಮೀಟರ್ ವೇಗದಲ್ಲಿ ಗಾಳಿ ಬೀಸಿದ್ದು, ಇದು ಚಂಡಮಾರುತದ ಬಲಕ್ಕೆ ಸಮನಾಗಿದೆ ಎಂದು ಹವಾಮಾನ ಅಧಿಕಾರಿಗಳು ತಿಳಿಸಿದ್ದಾರೆ. ಚಂಡಮಾರುತದ ಪ್ರಭಾವದಿಂದ, …

Read More »

ಗಣೇಶ ಚತುರ್ಥಿ: ಬೆಂಗಳೂರಿನಲ್ಲಿ 3 ಲಕ್ಷ ಗಣೇಶ ಮೂರ್ತಿಗಳ ವಿಸರ್ಜನೆ

ಬೆಂಗಳೂರು: ಬೆಂಗಳೂರಿನಲ್ಲಿ ಗಣೇಶ ಚತುರ್ಥಿ ಅದ್ದೂರಿಯಾಗಿ ಆಚರಣೆ ಮಾಡಲಾಗಿದ್ದು ಯಾವುದೇ ಅಹಿತಕರ ಘಟನೆಗಳಿಲ್ಲದಂತೆ ಹಬ್ಬ ನಡೆದಿದೆ. ಹಬ್ಬದ ದಿನಂದಂದೇ ಹಲವರು ಗಣೇಶ ವಿಸರ್ಜನೆ ಮಾಡಿದ್ದು, ನಗರದಲ್ಲಿ ಬರೊಬ್ಬರು 3 ಲಕ್ಷ ಗಣಪತಿ ಮೂರ್ತಿಗಳು ವಿರ್ಸಜನೆಗೊಂಡಿವೆ. ಬೆಂಗಳೂರಿನ,ಹಲಸೂರು ಕೆರೆ, ಯಡಿಯೂರು ಕೆರೆ ಸೇರಿದಂತೆ ಗಣೇಶ ಮೂರ್ತಿಗಳ ವಿಸರ್ಜನೆಗಾಗಿ 41 ಕೆರೆಗಳಲ್ಲಿ ಶಾಶ್ವತ ಮತ್ತು ತಾತ್ಕಾಲಿಕ ಕಲ್ಯಾಣಿಗಳು, 462 ಮೊಬೈಲ್‌ ಟ್ಯಾಂಕ್‌ಗಳ ವ್ಯವಸ್ಥೆ ಮಾಡಲಾಗಿದೆ. ಕಳೆದ ವರ್ಷ ಗಣೇಶೋತ್ಸವ ಸಂದರ್ಭ ಬೆಂಗಳೂರಿನ ಯಡಿಯೂರು …

Read More »

ನಕ್ಸಲ್‌ಪೀಡಿತ ಜಿಲ್ಲೆಗಳಲ್ಲಿ ಬೇಳೆಕಾಳು ಕೃಷಿ ಉತ್ತೇಜಿಸಲು ಕೇಂದ್ರ ಸರ್ಕಾರ ಕ್ರಮ

ನವದೆಹಲಿ: ಉತ್ಪಾದನೆ ಮತ್ತು ರೈತರ ಆದಾಯ ಹೆಚ್ಚಿಸಲು ಜಾರ್ಖಂಡ್‌ ಮತ್ತು ಛತ್ತೀಸ್‌ಗಢದ ನಕ್ಸಲ್‌ಪೀಡಿತ ಜಿಲ್ಲೆಗಳು ಹಾಗೂ ಬುಡಕಟ್ಟು ಸಮುದಾಯದವರು ಇರುವ ಪ್ರದೇಶದಲ್ಲಿ ಬೇಳೆಕಾಳು ಕೃಷಿಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಆಮದು ಪ್ರಮಾಣ ತಗ್ಗಿಸಲು ಪ್ರಾಯೋಗಿಕ ಯೋಜನೆಯ ಭಾಗವಾಗಿ ಸಾಂಪ್ರದಾಯಕವಲ್ಲದ ಪ್ರದೇಶದಲ್ಲಿ ಬೆಳೆಕಾಳು ಬೆಳೆಯಲಾಗುವುದು ಈ ಯೋಜನೆ ಯಶಸ್ವಿಯಾದರೆ ನಂತರ ಇದನ್ನು ದೇಶದಾದ್ಯಂತ ವಿಸ್ತರಿಸಲಿದೆ. ರಾಷ್ಟ್ರೀಯ ಸಹಕಾರ ಗ್ರಾಹಕರ ಮಹಾಮಂಡಳ ಯೋಜನೆ ಅನುಷ್ಠಾನಕ್ಕಾಗಿ ಜಾರ್ಖಂಡ್‌ನಲ್ಲಿ 4 ಮತ್ತು ಛತ್ತೀಸ್‌ಗಢದಲ್ಲಿ 5 …

Read More »

ಕಲಬುರಗಿಯಲ್ಲಿ ವ್ಯಕ್ತಿಯ ಭೀಕರ ಕೊಲೆ

ಕಲಬುರಗಿ: ಮಾರಕಾಸ್ತ್ರಗಳಿಂದ ಹೊಡೆದು ವ್ಯಕ್ತಿಯನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಕಲಬುರಗಿ ತಾಲೂಕಿನ ಕೆಸರಟಗಿ ಗ್ರಾಮದ ಬಳಿ ನಡೆದಿದೆ. ಕಪಿಲ್ ಗಾಯಕ್ವಾಡ್ (37) ಕೊಲೆಯಾದ ವ್ಯಕ್ತಿ. ಕಪಿಲ್ ಗಾಯಕ್ವಾಡ್ ಸೆಂಟ್ರಿಂಗ್ ಕೆಲಸ ಮುಗಿಸಿಕೊಂಡು ಕೆಸರಟಗಿಗೆ ಹೋಗುತ್ತಿದ್ದರು. ಮಾರ್ಗ ಮಧ್ಯೆ, ಕೆಸರಟಗಿ ಬಳಿಯ ರೈಲ್ವೆ ಅಂಡರ್ ಬ್ರೀಡ್ಜ್ ಬಳಿ ಕಪಿಲ್​ ಗಾಯಕ್ವಾಡ್​ ಅವರನ್ನು ಅಡ್ಡಗಟ್ಟಿ ಪತ್ನಿಯ ಮುಂದೆ ಹತ್ಯೆ ಮಾಡಲಾಗಿದೆ. ಕೊಲೆ ಹಿಂದೆ ಕಪಿಲ್ ಗಾಯಕ್ವಾಡ್ ಪತ್ನಿ ಭಾಗ್ಯ ಕೈವಾಡವಿದೆ ಎಂದು …

Read More »