ಚಿಕ್ಕಬಳ್ಳಾಪುರ: ಚಾಲಕನ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿ, ನಾಲ್ವರಿಗೆ ಗಂಭೀರ ಗಾಯಗಳಾಗಿರುವ ಘಟನೆ ಗೌರಿಬಿದನೂರು ತಾಲೂಕಿನ ಕುಡುಮಲಕುಂಟೆ ಕೈಗಾರಿಕಾ ಪ್ರದೇಶದ ಬಳಿ ಸಂಭವಿಸಿದೆ. ಮೃತರು ಉತ್ತರ ಪ್ರದೇಶದ ನಿವಾಸಿಗಳಾದ ಸೂರಜ್ (27) ಹಾಗೂ ಕಮಲ್ (26) ಎಂದು ತಿಳಿದು ಬಂದಿದೆ. ಗಾಯಗೊಂಡ ಜೈಸಿಂಗ್ ಹಾಗೂ ಜೈಸಿಂಗ್ ಎಂಬವರಿಗೆ ಗೌರಿಬಿದನೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಉಳಿದಿಬ್ಬರನ್ನು ಹಿಂದುಪೂರ ಆಸ್ಪತ್ರೆಗೆ ರವಾನಿಸಲಾಗಿದೆ. ಈ …
Read More »ಗಡಿಪಾರಾದ ರೌಡಿಶೀಟರ್ಗಳಿಗೆ ಎಚ್ಚರಿಕೆ ಕೊಟ್ಟ ಎಡಿಜಿಪಿ ಆರ್. ಹಿತೇಂದ್ರ
ಹುಬ್ಬಳ್ಳಿ : ಗಡಿಪಾರಾದ ರೌಡಿಶೀಟರ್ಗಳು ಅನಧಿಕೃತವಾಗಿ ಹುಬ್ಬಳ್ಳಿ ಧಾರವಾಡ ಮಹಾನಗರ ಪ್ರವೇಶಿಸಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಕಾನೂನು ಮತ್ತು ಸುವ್ಯಸ್ಥೆ ವಿಭಾಗದ ಎಡಿಜಿಪಿ ಆರ್. ಹಿತೇಂದ್ರ ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಉತ್ತಮ ಕಾರ್ಯ ಮಾಡುತ್ತಿದ್ದಾರೆ. ರೌಡಿಗಳ ನಿಗೃಹಕ್ಕೆ ಮತ್ತು ಮಾದಕ ವಸ್ತುಗಳ ನಿಯಂತ್ರಣಕ್ಕೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಈಗಾಗಲೇ ಕೆಲ ರೌಡಿಶೀಟರ್ಗಳನ್ನು …
Read More »ತೋಟಕ್ಕೆ ಕರೆದುಕೊಂಡು ಹೋಗಿ ಕೊಲೆ
ಬೆಂಗಳೂರು: ಪತಿ ತನ್ನ ಪತ್ನಿಯನ್ನು ತೋಟಕ್ಕೆ ಕರೆದುಕೊಂಡು ಹೋಗಿ ಆಕೆಯನ್ನು ಕೊಲೆ ಮಾಡಿದ್ದನು ಬಳಿಕ ಯಾರೋ ಕೊಲೆ ಮಾಡಿದ್ದಾರೆ ಎಂದು ನಾಟಕವಾಡಿದ್ದಾನೆ. ಸದ್ಯ ಇದೀಗ ಬಾಗಲೂರು ಪೊಲೀಸರು ಆರೋಪಿಯ ಕೃತ್ಯ ಬಯಲು ಮಾಡಿದ್ದು ಆರೋಪಿ ಅರೆಸ್ಟ್ ಆಗಿದ್ದಾನೆ. ಪತ್ನಿಯನ್ನ ತಾನೇ ಕೊಲೆ ಮಾಡಿ ನಾಟಕ ಆಡುತ್ತಿದ್ದ ಪತಿಯನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ. ಮೆಹಬೂಬ್ ಪಾಷಾ(50) ಬಂಧಿತ ಕೊಲೆ ಆರೋಪಿ. ಬಾಗಲೂರಿನ ರಜಾಕ್ ಸಾಬ್ ಪಾಳ್ಯದಲ್ಲಿ ವಾಸವಿದ್ದ ಮೆಹಬೂಬ್, ಕೂಲಿ ಕೆಲಸ …
Read More »ಟೆಲಿಗ್ರಾಮ್ ನ ಸ್ಥಾಪಕನಿಗೆ ಜಾಮೀನು ನೀಡಿ ಬಿಡುಗಡೆ
ಫ್ರಾನ್ಸ್: ಮೆಸೇಜಿಂಗ್ ಅಪ್ಲಿಕೇಶನ್ ಟೆಲಿಗ್ರಾಮ್ನಲ್ಲಿ ಅಪರಾಧ ಚಟುವಟಿಕೆ ಹರಡಲು ಅವಕಾಶ ಮಾಡಿಕೊಟ್ಟಿರುವ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಟೆಲಿಗ್ರಾಮ್ ನ ಸ್ಥಾಪಕ ಹಾಗೂ ಸಿಇಒ ಪಾವೆಲ್ ಡುರೊವ್ ಅವರನ್ನು ಫ್ರಾನ್ಸ್ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿ ಬುಧವಾರ ಬಿಡುಗಡೆ ಮಾಡಿದೆ. ನಾಲ್ಕು ದಿನಗಳ ಹಿಂದೆ ಬಂಧನಕ್ಕೊಳಗಾಗಿದ್ದ ಡುರೊವ್ ಅವರನ್ನು ನ್ಯಾಯಾಲಯ ಬಂಧನಮುಕ್ತಗೊಳಿಸಿದ್ದು, ಮುಂದಿನ ತನಿಖೆ ಸಂಬಂಧ ದೇಶ ತೊರೆಯದಂತೆ ನಿರ್ಬಂಧ ವಿಧಿಸಿದೆ. ಬುಧವಾರ ಪ್ಯಾರಿಸ್ನಲ್ಲಿ ಔಪಚಾರಿಕ ತನಿಖೆಗೊಳಪಡಿಸಿದ ಫ್ರೆಂಚ್ ನ್ಯಾಯಾಧೀಶರು ಡುರೊವ್ …
Read More »ಇತಿಹಾಸದಲ್ಲಿಯೇ ಮೊದಲ ಬಾರಿ ಓಂ ಪರ್ವತದಿಂದ ಮಂಜು ಕಾಣೆ
ಪಿತ್ತೋರ್ಗಢ: ಇತಿಹಾಸದಲ್ಲಿಯೇ ಮೊದಲ ಬಾರಿ ಓಂ ಪರ್ವತದಿಂದ ಮಂಜು ಕಾಣೆಯಾಗಿದೆ. ಪರ್ವತದ ಮೇಲೆ ನಿಚ್ಚಳವಾಗಿ ಕಾಣುತ್ತಿದ್ದ ಹಿಂದಿಯ ಓಂಕಾರ ಬರಹ ಕಾಣಿಸದೆ ಪ್ರವಾಸಿಗರು ಕಂಗಾಲಾಗಿದ್ದಾರೆ. ಹವಾಮಾನ ತಜ್ಞರು ಹೇಳುವ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ಹಿಮಾಲಯದ ಮೇಲೆ ಬಿದ್ದ ಕಡಿಮೆ ಮಳೆ ಬೆಟ್ಟಗಳ ಮೇಲೆ ಬೀಳುವ ಹಿಮವನ್ನು ಚದುರಿಸಿಕೊಂಡು ಹೋಗಿದೆ, ಇದೇ ಕಾರಣದಿಂದಾಗಿ ಈ ಬಾರಿ ಮೊದಲ ಬಾರಿಗೆ ಓಂ ಪರ್ವತದಲ್ಲಿ ಹಿಮ ಬಿದ್ದಿಲ್ಲ. ಅದು ಮಾತ್ರವಲ್ಲ, ಸದ್ಯ ವಾಹನಗಳಿಂದ …
Read More »ಕಸದ ತೊಟ್ಟಿಯಲ್ಲಿ ಪತ್ತೆಯಾದ ನವಜಾತ ಶಿಶುಗಳು
ಬೀದರ್: ನಗರದ ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಶೋಧನಾ ಸಂಸ್ಥೆಯ (ಬ್ರಿಮ್ಸ್) ಕಸದ ತೊಟ್ಟಿಯಲ್ಲಿ ಬಿಟ್ಟು ಹೋಗಿದ್ದ ಎರಡು ನವಜಾತ ಶಿಶುಗಳನ್ನು ರಕ್ಷಿಸಲಾಗಿದೆ. ನಾಲ್ಕು ದಿನಗಳ ಹಿಂದೆ ಈ ಘಟನೆ ನಡೆದಿದೆ. ಬ್ರಿಮ್ಸ್ ಸಿಬ್ಬಂದಿ ಗಮನಿಸಿ, ನವಜಾತ ಶಿಶುಗಳನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಉಪಚರಿಸಿದ್ದಾರೆ. ಒಂದು ಮಗು ಎರಡು ದಿನಗಳ ಹಿಂದೆ ಹುಟ್ಟಿದರೆ, ಇನ್ನೊಂದು ಮಗು ಎರಡು ತಿಂಗಳದ್ದು ಇರಬಹುದು ಎಂದು ಅಂದಾಜಿಸಲಾಗಿದೆ. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಆದೇಶದ …
Read More »ಬಳ್ಳಾರಿ ಜೈಲಿಗೆ ಸ್ಥಳಾಂತರಗೊಂಡ ನಟ ದರ್ಶನ್
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಅವರನ್ನು ಇಂದು ಬೆಳ್ಳಂಬೆಳಗ್ಗೆ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಗಿದೆ ಎಂದು ತಿಳಿದು ಬಂದಿದೆ. ದರ್ಶನ್ ಕಾಣಬಾರದು ಎನ್ನುವ ಕಾರಣಕ್ಕೆ ಬೊಲೆರೋ ಕಾರಿನ ಒಳಗೆ ಕರ್ಟನ್ ಹಾಕಲಾಗಿತ್ತು. ಬಳಿಕ ಬೆಲೊರೊ ವಾಹನದಿಂದ ದರ್ಶನ್ ರನ್ನು ಟಿಟಿ ವಾಹನಕ್ಕೆ ಶಿಫ್ಟ್ ಮಾಡಲಾಗಿತ್ತು. ಸದ್ಯ ಜೈಲಿನ ನಿಯಮ ಉಲ್ಲಂಘನೆ ಮಾಡಿದ ಆರೋಪ ದರ್ಶನ್ ಮೇಲೆ ಇದೆ. ಇನ್ನು ರೇಣುಕಾ ಸ್ವಾಮಿ ಕೊಲೆ ಆರೋಪಿಗಳನ್ನು ಬೇರೆ …
Read More »16 ನಗರಗಳಲ್ಲಿ 53 ಎಫ್ಎಂ ಕೇಂದ್ರ ತೆರೆಯಲು ಅನುಮತಿ
ನವದೆಹಲಿ: ಕರ್ನಾಟಕ 53 ಸೇರಿದಂತೆ ದೇಶಾದ್ಯಂತ 234 ನಗರಗಳಲ್ಲಿ 730 ಹೊಸ ಎಫ್ಎಂ ಚಾನೆಲ್ ತೆರೆಯಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಧಿಸೂಚನೆ ತಿಳಿಸಿದೆ. ಇ-ಹರಾಜು ಮೂಲಕ ಖಾಸಗಿ ಸಂಸ್ಥೆಗಳಿಗೆ ಎಫ್ಎಂ ಚಾನೆಲ್ ಅವಕಾಶ ಸಿಗಲಿದ್ದು 730 ಚಾನೆಲ್ಗಳಿಗೆ 784.87 ಕೋಟಿ ರೂ ಮೂಲ ಬಿಡ್ಡಿಂಗ್ …
Read More »ಮಲಯಾಳಂ ಚಿತ್ರರಂಗದ ಖ್ಯಾತ ನಟ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು
ಕೊಚ್ಚಿ: ನಟಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದ ಮೇಲೆ ಕೇರಳದ ಆಡಳಿತಾರೂಡ ಸಿಪಿಐ(ಎಂ) ಶಾಸಕ, ಮಲಯಾಳಂ ಚಿತ್ರರಂಗದ ಖ್ಯಾತ ನಟ ಮುಕೇಶ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಟ ಮುಕೇಶ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ನಟಿಯೊಬ್ಬರ ಆರೋಪದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಬುಧವಾರ ರಾತ್ರಿ ಕೊಚ್ಚಿ ನಗರದ ಮಾರಾಡು ಪೊಲೀಸ್ ಠಾಣೆಯಲ್ಲಿ ನಟನ ವಿರುದ್ಧ ಐಪಿಸಿ …
Read More »ಪತ್ರಕರ್ತೆಯ ಶವ ಸರೋವರದಲ್ಲಿ ಪತ್ತೆ
ಢಾಕಾ: 32 ವರ್ಷದ ಟಿವಿ ಪತ್ರಕರ್ತೆಯ ಶವವು ಬಾಂಗ್ಲಾದೇಶದ ರಾಜಧಾನಿ ಢಾಕಾದ ಹತಿರ್ಜೀಲ್ ಸರೋವರದಲ್ಲಿ ಪತ್ತೆಯಾಗಿದೆ. ಮೃತ ಪತ್ರಕರ್ತೆಯನ್ನು ಗಾಝಿ ಟಿವಿ ಸುದ್ದಿ ವಾಹಿನಿಯ ಸುದ್ದಿ ಸಂಪಾದಕಿ ಸಾರಾ ರೆಹನುಮಾ ಎಂದು ಗುರುತಿಸಲಾಗಿದೆ. ಸಾರಾ ಸಾಯುವ ಮುನ್ನಾದಿನ ಫೇಸ್ಬುಕ್ ನಲ್ಲಿ ಫಾಹಿಮ್ ಫೈಸಲ್ ಎನ್ನುವವರ ಬಗ್ಗೆ ‘ನಿಮ್ಮಂತಹ ಗೆಳೆಯನನ್ನು ಹೊಂದಿರುವುದು ಖುಷಿಯ ಸಂಗತಿ. ದೇವರು ಒಳ್ಳೆಯದು ಮಾಡಲಿ. ಆದಷ್ಟು ಬೇಗ ನಿಮ್ಮ ಕನಸುಗಳು ನನಸಾಗಿ. ನಾವಿಬ್ಬರು ಬಹಳಷ್ಟು ಕನಸುಗಳನ್ನು ಕಟ್ಟಿಕೊಂಡಿದ್ದೆವು. …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





