Breaking News

ಪತ್ರಕರ್ತೆಯ ಶವ ಸರೋವರದಲ್ಲಿ ಪತ್ತೆ

ಢಾಕಾ: 32 ವರ್ಷದ ಟಿವಿ ಪತ್ರಕರ್ತೆಯ ಶವವು ಬಾಂಗ್ಲಾದೇಶದ ರಾಜಧಾನಿ ಢಾಕಾದ ಹತಿರ್‌ಜೀಲ್‌ ಸರೋವರದಲ್ಲಿ ಪತ್ತೆಯಾಗಿದೆ.

ಮೃತ ಪತ್ರಕರ್ತೆಯನ್ನು ಗಾಝಿ ಟಿವಿ ಸುದ್ದಿ ವಾಹಿನಿಯ ಸುದ್ದಿ ಸಂಪಾದಕಿ ಸಾರಾ ರೆಹನುಮಾ ಎಂದು ಗುರುತಿಸಲಾಗಿದೆ.

ಸಾರಾ ಸಾಯುವ ಮುನ್ನಾದಿನ ಫೇಸ್‌ಬುಕ್ ನಲ್ಲಿ ಫಾಹಿಮ್ ಫೈಸಲ್ ಎನ್ನುವವರ ಬಗ್ಗೆ ‘ನಿಮ್ಮಂತಹ ಗೆಳೆಯನನ್ನು ಹೊಂದಿರುವುದು ಖುಷಿಯ ಸಂಗತಿ. ದೇವರು ಒಳ್ಳೆಯದು ಮಾಡಲಿ. ಆದಷ್ಟು ಬೇಗ ನಿಮ್ಮ ಕನಸುಗಳು ನನಸಾಗಿ. ನಾವಿಬ್ಬರು ಬಹಳಷ್ಟು ಕನಸುಗಳನ್ನು ಕಟ್ಟಿಕೊಂಡಿದ್ದೆವು. ಅದನ್ನು ನೆರವೇರಿಸಲು ಸಾಧ್ಯವಿಲ್ಲ. ಸತ್ತಂತೆ ಬದುಕುವುದಕ್ಕಿಂತ ಸಾಯುವುದೇ ಒಳಿತು’ ಎಂದು ಬರೆದುಕೊಂಡು ಪೋಸ್ಟ್ ಹಂಚಿಕೊಂಡಿದ್ದರು ಎಂದು ವರದಿಯಾಗಿದೆ.

ಸಾರಾ ಅವರ ಸಾವಿನ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಅದಾಗ್ಯೂ, ಸಾರಾ ಅವರ ಸಾವಿಗೆ ರಾಜಕೀಯ ಬಣ್ಣ ಬಳಿದಿರುವ ಶೇಖ್ ಹಸೀನಾ ಪುತ್ರ ಸಾಜೀಬ್ ವಾಝಿದ್, ‘ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಮತ್ತೊಂದು ಭೀಕರ ದಾಳಿಯಾಗಿದೆ’ ಎಂದಿದ್ದಾರೆ.

Share News

About BigTv News

Check Also

ಸರಗಳ್ಳತನ ಮಾಡುತ್ತಿದ್ದ ಅಪ್ರಾಪ್ತ ಸೇರಿ ಇಬ್ಬರು ಆರೋಪಿಗಳ ಬಂಧನ

ಬೆಂಗಳೂರು: ಅಪ್ರಾಪ್ತ ಬಾಲಕನೊಂದಿಗೆ ಸೇರಿ ಮಹಿಳೆಯರ ಚಿನ್ನದ ಮಾಂಗಲ್ಯ ಸರ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಡೇಪಾಳ್ಯ ಪೊಲೀಸರು ವಶಕ್ಕೆ …

Leave a Reply

Your email address will not be published. Required fields are marked *