Breaking News

BigTv News

ಸ್ನೇಹಿತನನ್ನು ಕೊಂದು ಸೈಲೆಂಟಾಗಿದ್ದ ಹಂತಕ ತಿಂಗಳ ಬಳಿಕ ಅರೆಸ್ಟ್!

ಚಿಕ್ಕಮಗಳೂರು ತಾಲೂಕಿನ ಹಿರೇಗೌಜ ಸಮೀಪ ನಡೆದಿದ್ದ ಅನುಮಾನಾಸ್ಪದ ‘ಹಿಟ್ & ರನ್’ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಅಪಘಾತದಲ್ಲಿ ಮೃತಪಟ್ಟಿದ್ದಾನೆ ಎಂದು ಭಾವಿಸಲಾಗಿದ್ದ ಹಾಸನದ ವಿಜಯನಗರ ನಿವಾಸಿ ಯಶವಂತ್ (26) ಅವರನ್ನು ಸ್ನೇಹಿತ ಸಚಿನ್ ಹಣಕಾಸಿನ ವೈಷಮ್ಯದಿಂದ ಕೊಲೆ ಮಾಡಿರುವುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಜೂನ್ 12ರಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಯಶವಂತ್ ಮೃತದೇಹ ಪತ್ತೆಯಾಗಿದ್ದು, ಸ್ಥಳದಲ್ಲಿ ಗೂಡ್ಸ್ ಆಟೋ ಪಲ್ಟಿಯಾಗಿದ್ದ ಕಾರಣ ಆರಂಭದಲ್ಲಿ ಅಪಘಾತ ಪ್ರಕರಣವೆಂದು ದಾಖಲಾಗಿತ್ತು. ಆದರೆ, …

Read More »

ಮೈಸೂರು : ಬ್ಯಾಂಗಲ್ ಸ್ಟೋರ್ ನಲ್ಲಿ ಆಕಸ್ಮಿಕ ಬೆಂಕಿ!

ಮೈಸೂರು : ಬ್ಯಾಂಗಲ್ ಸ್ಟೋರ್ ನಲ್ಲಿ ಆಕಸ್ಮಿಕ ಬೆಂಕಿ ತಗುಲಿರುವ ಘಟನೆ ನಂಜನಗೂಡಿನ ಆರ್. ಪಿ ರೋಡ್ ನಲ್ಲಿ ನಡೆದಿದೆ.ರವಿ ಕುಮಾರ್ ಬ್ಯಾಂಗಲ್ ಸ್ಟೋರ್ ಸುಟ್ಟು ಭಸ್ಮವಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು.2 ಲಕ್ಷ ರೂಪಾಯಿ ಬೆಲೆ ಬಾಳುವ ವಸ್ತುಗಳು ಬೆಂಕಿಗಾಹುತಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

Read More »

ಚಿನ್ನಾಭರಣಕ್ಕಾಗಿ ನೆರೆ ಮನೆಯ ವೃದ್ಧೆಯ ಕೊಂದು ಕೆರೆಗೆ ಶವ ಎಸೆದಿದ್ದ ಯುವಕ ಸೆರೆ

ಬೆಂಗಳೂರುದಲ್ಲಿ ಆನ್‌ಲೈನ್ ಬೆಟ್ಟಿಂಗ್‌ನಿಂದ ಮಾಡಿಕೊಂಡಿದ್ದ ಸಾಲ ತೀರಿಸಲು ನೆರೆಮನೆಯ 61 ವರ್ಷದ ಜಯಮ್ಮ ಅವರನ್ನು ಹತ್ಯೆಗೈದು, ಚಿನ್ನಾಭರಣ ದೋಚಿ ಮೃತದೇಹವನ್ನು ಸೂಟ್‌ಕೇಸ್‌ನಲ್ಲಿ ಹಾಕಿ ಕೆರೆಗೆ ಎಸೆದಿದ್ದ ಆರೋಪಿಯನ್ನು ಕುಂಬಳಗೋಡು ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಚಳ್ಳಘಟ್ಟ ನಿವಾಸಿ ಆರ್. ಗಗನ್ (21) ಎಂದು ಗುರುತಿಸಲಾಗಿದೆ. ಜುಲೈ 15ರಂದು ಜಯಮ್ಮ ತಮ್ಮ ಮಗಳಿಗೆ ಕರೆ ಮಾಡಲು ಗಗನ್ ಮನೆಗೆ ಬಂದ ವೇಳೆ, ಆರೋಪಿ ಕುತ್ತಿಗೆ ಹಿಸುಕಿ ಹತ್ಯೆಗೈದಿದ್ದಾನೆ. ಬಳಿಕ ಮೃತದೇಹವನ್ನು ಸೂಟ್‌ಕೇಸ್‌ನಲ್ಲಿ …

Read More »

ವ್ಯಕ್ತಿಯ ಮರ್ಮಾಂಗ ಕತ್ತರಿಸಿ ಹತ್ಯೆಮಾಡಿ ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ಕೊಟ್ಟ ಆರೋಪಿ

ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ತುಂಬಲ–ಕೆಂಪಯ್ಯನಹುಂಡಿ ರಸ್ತೆಯಲ್ಲಿ ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಮರ್ಮಾಂಗ ಕತ್ತರಿಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಹತ್ಯೆಗೀಡಾದವರು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಉಗನಿಯಪಾಳ್ಯದ ಗೋವಿಂದ್ (30) ಎಂದು ಗುರುತಿಸಲಾಗಿದ್ದು, ಅದೇ ಗ್ರಾಮದ ಪ್ರಸನ್ನ ಹತ್ಯೆ ಮಾಡಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಹತ್ಯೆಯ ಬಳಿಕ ಆರೋಪಿ ತಾನೇ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿದ …

Read More »

ಬಂಟ್ವಾಳ : ಬ್ಯಾಂಕ್ ಕಳ್ಳತನ ಪ್ರಕರಣ -ಪ್ರಮುಖ ಆರೋಪಿಯ ಬಂಧನ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಫರಂಗಿಪೇಟೆಯ ಕೆನರಾ ಬ್ಯಾಂಕ್‌ನಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಮುಖ ಶಂಕಿತನನ್ನು ಬಂಧಿಸಿದ್ದಾರೆ. ಬಂಧಿತನನ್ನು ಪುದು ಗ್ರಾಮದ ಮಾರಿಪಳ್ಳದ ಸುಜೀರು ಬದಿಗುಡ್ಡೆ ನಿವಾಸಿ ಮುಹಮ್ಮದ್ ಶಾಖಿರ್ ಎಂದು ಗುರುತಿಸಲಾಗಿದೆ. ಪ್ರಕರಣದ ತನಿಖೆಯ ಭಾಗವಾಗಿ ಆರೋಪಿಯನ್ನು ಪೊಲೀಸರು ನ್ಯಾಯಾಂಗ ಪ್ರಕ್ರಿಯೆಯಂತೆ ವಿಚಾರಣೆಗೆ ಒಳಪಡಿಸಿದ್ದಾರೆ. ಕಳ್ಳತನದಲ್ಲಿ ಇತರರ ಪಾತ್ರ, ಕಳವಾದ ಹಣ ಅಥವಾ ವಸ್ತುಗಳ ಪತ್ತೆ ಹಾಗೂ ಘಟನೆಯಲ್ಲಿ ಬಳಸಿದ ವಾಹನ …

Read More »

ಬೆಂಗಳೂರಲ್ಲಿ`ಸಿಲಿಂಡರ್’ ಸ್ಪೋಟ : 10 ಮಂದಿಗೆ ಗಂಭೀರ ಗಾಯ.!

ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬೊಮ್ಮಸಂದ್ರದ ಪಿಜಿಯೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು 10ಕ್ಕೂ ಹೆಚ್ಚು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಳಗಿನ ಜಾವ ಅಡುಗೆ ಮನೆಯಲ್ಲಿ ಸಂಭವಿಸಿದ ಸ್ಫೋಟಕ್ಕೆ ಕಟ್ಟಡ ನಡುಗಿದೆ. ಗಾಯಾಳುಗಳನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದು, ಅಗ್ನಿಶಾಮಕ ದಳ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದೆ. ಸ್ಫೋಟದಿಂದ ಕಟ್ಟಡದ ಗೋಡೆಗಳು ಹಾಗೂ ಪೀಠೋಪಕರಣಗಳು ಹಾನಿಗೊಳಗಾಗಿವೆ. ಹೆಬ್ಬಗೋಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಗ್ಯಾಸ್ ಸೋರಿಕೆ ಅಥವಾ ತಾಂತ್ರಿಕ ದೋಷದಿಂದ ಸ್ಫೋಟ ಸಂಭವಿಸಿದೆಯೇ ಎಂಬ …

Read More »

ಹೆಣ್ಣು ಮಗುವೆಂಬ ಕಾರಣಕ್ಕೆ 13 ದಿನದ ಹಸುಗೂಸನ್ನು ಸಂಪ್‌ಗೆ ಎಸೆದು ಕೊಂ*ದ ಪಾಪಿ ತಂದೆ!

ಚಿಕ್ಕಬಳ್ಳಾಪುರ ನಗರದ ಶಾಂತಿನಗರದಲ್ಲಿ ಹೆಣ್ಣು ಮಗು ಜನಿಸಿದ್ದಕ್ಕೆ ಅಸಮಾಧಾನಗೊಂಡ ತಂದೆಯೇ 13 ದಿನದ ಹಸುಗೂಸನ್ನು ನೀರಿನ ಸಂಪ್‌ಗೆ ಎಸೆದು ಹತ್ಯೆ ಮಾಡಿರುವ ಅಮಾನವೀಯ ಘಟನೆ ನಡೆದಿದೆ. ತಾಯಿ ಮಲಗಿದ್ದ ವೇಳೆ ಮಗು ಎತ್ತಿಕೊಂಡು ಹೋಗಿ ಸಂಪ್‌ಗೆ ಎಸೆದ ಆರೋಪಿ ಇಮ್ರಾನ್, ಬಳಿಕ ಮಗುವಿಗಾಗಿ ಹುಡುಕುವ ನಾಟಕವಾಡಿದ್ದಾನೆ. ನೀರನ್ನು ಹೊರಹಾಕಿ ಪರಿಶೀಲಿಸಿದಾಗ ಮಗುವಿನ ಮೃತದೇಹ ಪತ್ತೆಯಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಚಿಕ್ಕಬಳ್ಳಾಪುರ ನಗರ ಪೊಲೀಸರು ಆರೋಪಿ ತಂದೆಯನ್ನು ವಶಕ್ಕೆ ಪಡೆದು ಮುಂದಿನ ತನಿಖೆ …

Read More »

ಸುಳ್ಯದಲ್ಲಿ ವಿವಾಹಿತ ಮಹಿಳೆ ಶಂಕಾಸ್ಪದ ಸಾವು ಪ್ರಕರಣ ; ಕಿರುಕುಳ ಆರೋಪ ಹೊತ್ತ ಅತ್ತೆ, ಮಾವ, ನಾದಿನಿ ಅರೆಸ್ಟ್

ಸುಳ್ಯದ ಸಂಪಾಜೆಯಲ್ಲಿ ಅಸಹಜವಾಗಿ ಮೃತಪಟ್ಟಿದ್ದ ಫಾತಿಮತ್ ನಿಶಾನಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ಪೊಲೀಸರು ಆಕೆಯ ಮಾವ, ಅತ್ತೆ ಹಾಗೂ ನಾದಿನಿಯನ್ನು ಬಂಧಿಸಿದ್ದಾರೆ. ಮೃತಳ ತಾಯಿ ನೀಡಿದ ದೂರಿನ ಮೇರೆಗೆ ಕ್ರಮ ಕೈಗೊಳ್ಳಲಾಗಿದೆ. ಮದುವೆಯಾದ ಬಳಿಕ ಫಾತಿಮಾಳಿಗೆ ಅತ್ತೆ-ಮಾವ ಮತ್ತು ನಾದಿನಿಯಿಂದ ನಿರಂತರ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲಾಗುತ್ತಿತ್ತು ಎಂದು ಆರೋಪಿಸಲಾಗಿದೆ. ಸಾವಿಗೆ ಮುನ್ನ ತಾಯಿಗೆ ಕರೆ ಮಾಡಿ ಕಿರುಕುಳದ ಬಗ್ಗೆ ತಿಳಿಸಿದ್ದಳು ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು …

Read More »

ಜಾತ್ರೆಗೆ ಹೋಗುವ ವಿಚಾರಕ್ಕೆ ಪತಿ ಜೊತೆ ಜಗಳ; ಅದೇ ಸಿಟ್ಟಿನಲ್ಲಿ ದೂಧಗಂಗಾ ನದಿಗೆ ಹಾರಿದ ಪತ್ನಿ!

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದಲ್ಲಿ ಜಾತ್ರೆಗೆ ಹೋಗುವ ವಿಚಾರವಾಗಿ ಪತಿಯೊಂದಿಗೆ ಜಗಳವಾಡಿದ ಬಳಿಕ 25 ವರ್ಷದ ಮಂಜುಳಾ ವಂಜೀರೆ ದೂದಗಂಗಾ ನದಿಗೆ ಹಾರಿರುವ ಘಟನೆ ನಡೆದಿದೆ. ಮನೆಯಿಂದ ಹೊರಟ ಮಂಜುಳಾ ನದಿಯ ಬಳಿ ತೆರಳಿದ್ದು, ಅಲ್ಲಿಯೇ ಅವರ ಚಪ್ಪಲಿ ಮತ್ತು ಬಟ್ಟೆಗಳು ಪತ್ತೆಯಾಗಿವೆ. ಮಾಹಿತಿ ತಿಳಿದು ಅಗ್ನಿಶಾಮಕ ದಳ ಹಾಗೂ ಎನ್‌ಡಿಆರ್‌ಎಫ್ ತಂಡಗಳು ಶೋಧ ಕಾರ್ಯ ಆರಂಭಿಸಿವೆ. ನೀರಿನ ಹರಿವು ಹೆಚ್ಚಿರುವುದರಿಂದ ಮಹಿಳೆ ಇನ್ನೂ ಪತ್ತೆಯಾಗಿಲ್ಲ. ಸದಲಗಾ …

Read More »

‘ಜೇಬಿನಲ್ಲಿ ಡ್ರಗ್​ ಇಟ್ಟು ಕೇಸ್​ ಹಾಕ್ಬಿಡ್ತೀನಿ ಹುಷಾರ್’​​; ಪ್ರತಿಭಟನಾಕಾರರಿಗೆ ಬೆದರಿಕೆ ಹಾಕಿದ ಮುಂಬೈ ಪೊಲೀಸ್ ಅಮಾನತು

ನೀಟ್ ಪರೀಕ್ಷೆ ಅಕ್ರಮ ವಿರೋಧಿಸಿ ಮುಂಬೈನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳಿಗೆ ಡ್ರಗ್ಸ್ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ ಪೊಲೀಸ್ ಅಧಿಕಾರಿಯ ವಿಡಿಯೋ ವೈರಲ್ ಆಗಿದೆ. ಈ ಘಟನೆ ಭಾರೀ ವಿವಾದಕ್ಕೆ ಕಾರಣವಾಗಿದೆ. ವಿಡಿಯೋ ವೈರಲ್ ಆದ ಬೆನ್ನಲ್ಲೇ ಸಂಬಂಧಿತ ಪೊಲೀಸ್ ಅಧಿಕಾರಿಯನ್ನು ಹುದ್ದೆಯಿಂದ ವಜಾಗೊಳಿಸಿದ್ದು, ಪ್ರಕರಣದ ಕುರಿತು ತನಿಖೆಗೆ ಆದೇಶಿಸಲಾಗಿದೆ. ವಿದ್ಯಾರ್ಥಿಗಳಿಗೆ ಜಾಮೀನು ಸಿಗದಂತೆ ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿರುವುದು ವಿಡಿಯೋದಲ್ಲಿ ಕೇಳಿಬಂದಿದೆ. ಈ ಘಟನೆಗೆ ಮುಂಬೈ ಕಾಂಗ್ರೆಸ್ …

Read More »