Breaking News

ಚಿನ್ನಾಭರಣಕ್ಕಾಗಿ ನೆರೆ ಮನೆಯ ವೃದ್ಧೆಯ ಕೊಂದು ಕೆರೆಗೆ ಶವ ಎಸೆದಿದ್ದ ಯುವಕ ಸೆರೆ

ಬೆಂಗಳೂರುದಲ್ಲಿ ಆನ್‌ಲೈನ್ ಬೆಟ್ಟಿಂಗ್‌ನಿಂದ ಮಾಡಿಕೊಂಡಿದ್ದ ಸಾಲ ತೀರಿಸಲು ನೆರೆಮನೆಯ 61 ವರ್ಷದ ಜಯಮ್ಮ ಅವರನ್ನು ಹತ್ಯೆಗೈದು, ಚಿನ್ನಾಭರಣ ದೋಚಿ ಮೃತದೇಹವನ್ನು ಸೂಟ್‌ಕೇಸ್‌ನಲ್ಲಿ ಹಾಕಿ ಕೆರೆಗೆ ಎಸೆದಿದ್ದ ಆರೋಪಿಯನ್ನು ಕುಂಬಳಗೋಡು ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಚಳ್ಳಘಟ್ಟ ನಿವಾಸಿ ಆರ್. ಗಗನ್ (21) ಎಂದು ಗುರುತಿಸಲಾಗಿದೆ. ಜುಲೈ 15ರಂದು ಜಯಮ್ಮ ತಮ್ಮ ಮಗಳಿಗೆ ಕರೆ ಮಾಡಲು ಗಗನ್ ಮನೆಗೆ ಬಂದ ವೇಳೆ, ಆರೋಪಿ ಕುತ್ತಿಗೆ ಹಿಸುಕಿ ಹತ್ಯೆಗೈದಿದ್ದಾನೆ. ಬಳಿಕ ಮೃತದೇಹವನ್ನು ಸೂಟ್‌ಕೇಸ್‌ನಲ್ಲಿ ಇರಿಸಿ ದ್ವಿಚಕ್ರ ವಾಹನದಲ್ಲಿ ರಾಮೋಹಳ್ಳಿ ತಿಮ್ಮಪ್ಪನ ಕೆರೆಗೆ ಎಸೆದಿದ್ದಾನೆ. ಅಲ್ಲದೆ, ಮೃತೆಯ ಚಿನ್ನಾಭರಣ ದೋಚಿ ಫೈನಾನ್ಸ್ ಸಂಸ್ಥೆಯಲ್ಲಿ ಅಡಮಾನ ಇರಿಸಿದ್ದನು. ಪ್ರಕರಣ ದಾಖಲಿಸಿಕೊಂಡ ಕೇವಲ 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿರುವ ಪೊಲೀಸರು, ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ಕುರಿತು ಕುಂಬಳಗೋಡು ಠಾಣೆ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.

Share News

About BigTv News

Check Also

68 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ, ಕೆಎಎಸ್ ಅಧಿಕಾರಿ ವಿರುದ್ಧ ಎಫ್‌ಐಆರ್!

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಆರ್‌ಟಿಸಿ ಖಾತೆ ಬದಲಾವಣೆ …

Leave a Reply

Your email address will not be published. Required fields are marked *