ಅನಂತ್ ನಾಗ್…..ಕನ್ನಡ ಚಿತ್ರರಂಗದ ಮೇರು ನಟ. ಅದ್ಭುತ ಅಭಿನಯದ ಮೂಲಕ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಕಟ್ಟಿಕೊಂಡ ತಾರೆ. ಪ್ರತಿಭಾನ್ವಿತ ನಟ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 50 ವರ್ಷಗಳನ್ನು ಪೂರೈಸಿದ್ದಾರೆ. ಈ ಹಿನ್ನೆಲೆ ಸಿನಿ ತಾರೆಯರೂ ಸೇರಿದಂತೆ ಅಭಿಮಾನಿಗಳು ನಟನಿಗೆ ಅಭಿನಂದನೆ ತಿಳಿಸಿದ್ದಾರೆ. ಎವರ್ ಗ್ರೀನ್ ಹೀರೋ ಅನಂತ್ ನಾಗ್280ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ…1973ರಲ್ಲಿ ತೆರೆಕಂಡ ‘ಸಂಕಲ್ಪ’ ಅನಂತ್ ನಾಗ್ ಬಣ್ಣ ಹಚ್ಚಿದ ಚೊಚ್ಚಲ ಚಿತ್ರ. 1973ರಲ್ಲಿ ಸ್ಯಾಂಡಲ್ವುಡ್ಗೆ …
Read More »ಟಾಟಾ ಎಸ್ ವಾಹನ ಪಲ್ಟಿ….
ಚಾಮರಾಜನಗರ:ಗಾರೆ ಕೆಲಸಗಾರರು ತೆರಳುತ್ತಿದ್ದ ಟಾಟಾ ಏಸ್ ವಾಹನ ಪಲ್ಟಿಯಾಗಿ ಒಬ್ಬ ಮೃತಪಟ್ಟು 8 ಮಂದಿ ಗಾಯಗೊಂಡ ಘಟನೆ ಚಾಮರಾಜನಗರ ತಾಲೂಕಿನ ಉಗೇನದಹುಂಡಿ ಬಳಿ ನಡೆದಿದೆ. ಮೂಡಲ ಅಗ್ರಹಾರ ಗ್ರಾಮದ ಕೆಂಪರಾಜು (27) ಅಪಘಾತದಲ್ಲಿ ಮೃತಪಟ್ಟಿದ್ದುರಾಚಪ್ಪ, ಮಹೇಶ, ದರ್ಶನ್, ಮಂಟೇಲಿಂಗ, ಮಹದೇವಸ್ವಾಮಿ, ನಾಗರಾಜು, ಮಹದೇವ ಪ್ರಸಾದ್, ಕುಮಾರ್ ಎಂಬವರು ಗಾಯಗೊಂಡಿದ್ದಾರೆ. ಮನೆಯೊಂದಕ್ಕೆ ತಾರಸಿ ಕೆಲಸ ಮಾಡಲು ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದ್ದು, ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಚಾಮರಾಜನಗರ ಗ್ರಾಮಾಂತರ ಠಾಣಾ …
Read More »ವಿಶ್ವೇಶ್ವರಯ್ಯ ಕಬ್ಬಿನ ಮತ್ತು ಉಕ್ಕಿನ ಕರ್ಖಾನೆ ಆಗಸ್ಟ್10 ರಿಂದ ಮತ್ತೆ ಆರಂಭ..
ಶಿವಮೊಗ್ಗ: ಕಳೆದ 5 ತಿಂಗಳ ಕಾಲ ಸ್ಥಗಿತವಾಗಿದ್ದ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ (ವಿಐಎಸ್ಎಲ್) ಕಾರ್ಖಾನೆ ಆಗಸ್ಟ್ 10 ರಿಂದ ಮತ್ತೆ ಕಾರ್ಯಾರಂಭಿಸಲಿದೆ. ಕೇಂದ್ರ ಸರ್ಕಾರ ನೀತಿ ಆಯೋಗದ ಶಿಫಾರಸಿನಂತೆ ಸೇಲ್ನ ಮೂರು ಕಾರ್ಖಾನೆಗಳಾದ ಭದ್ರಾವತಿಯ ವಿಐಎಸ್ಎಲ್, ತಮಿಳುನಾಡಿನ ಸೇಲಂ ಕಾರ್ಖಾನೆ ಹಾಗೂ ದುರ್ಗಾಪುರನ ಕಾರ್ಖಾನೆಯನ್ನು ಮುಚ್ಚಲು ಸೂಚಿಸುತ್ತು. ಕಳೆದ ಫೆಬ್ರವರಿಯಲ್ಲಿ ಕಾರ್ಖಾನೆಗಳು ಉತ್ಪಾದನೆ ನಿಲ್ಲಿಸಿದ್ದವು. ಸದ್ಯ ಕೇಂದ್ರ ಸರ್ಕಾರ ಕಾರ್ಖಾನೆಯನ್ನು ಪುನಾರಂಭ ಮಾಡಲು ಸೂಚಿಸಿದೆ. ಈ ಕುರಿತು …
Read More »ಲೋಕಸಭೆಯಲ್ಲಿ 20-24ಸ್ಥಾನದಲ್ಲಿ ಗೆಲ್ಲುವ ಭರವಸೆ…
ನವದೆಹಲಿ/ಬೆಂಗಳೂರು: ಐದು ಗ್ಯಾರಂಟಿಗಳ ಜಾರಿ ಮೂಲಕ ಕರ್ನಾಟಕ ಮಾದರಿ ಅಭಿವೃದ್ಧಿ ಲೋಕಸಭಾ ಚುನಾವಣೆಯಲ್ಲಿ ಪ್ರತಿಫಲಿಸಲಿದ್ದು, ಕಾಂಗ್ರೆಸ್ 20-24 ಸ್ಥಾನಗಳಲ್ಲಿ ಜಯಗಳಿಸುವ ಭರವಸೆ ವ್ಯಕ್ತವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. 2024ರ ಲೋಕಸಭೆ ಚುನಾವಣೆಗೆ ಕಾರ್ಯತಂತ್ರ ರೂಪಿಸುವ ಕುರಿತು ಎಐಸಿಸಿ ಕಚೇರಿಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರೊಂದಿಗೆ ಹೈಕಮಾಂಡ್ ಬುಧವಾರ ಮಹತ್ವದ ಸಭೆ ನಡೆಯಿತು. ಈ ಸಭೆ ಬಳಿಕ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ನಮ್ಮ ವರಿಷ್ಠರಾದ …
Read More »ಕಟ್ಟಡದ ಮೇಲಿದ್ದ ನೀರಿನ ಟಾಕಿ ಬಿದ್ದು 2 ಜನ ಸಾವು….
ಬೆಂಗಳೂರು :ನಾಲ್ಕು ಅಂತಸ್ತಿನ ಕಟ್ಟಡದ ಮೇಲಿದ್ದ ನೀರಿನ ಟ್ಯಾಂಕ್ ಕುಸಿದು ಬಿದ್ದು ಫಾಸ್ಟ್ ಫುಡ್ ಅಂಗಡಿ ಮಾಲೀಕ ಹಾಗೂ ಗ್ರಾಹಕ ಸಾವನ್ನಪ್ಪಿರುವ ಘಟನೆ ತಡರಾತ್ರಿ ರಾಜಧಾನಿಯ ಶಿವಾಜಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದರೆ, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೃತರಲ್ಲಿ ಒಬ್ಬ ಅರುಳ್ (40) ಹಾಗೂ ಮತ್ತೊಬ್ಬನ ಗುರುತು ಇನ್ನೂ ಪತ್ತೆಯಾಗಿಲ್ಲ. ನಾಲ್ಕು ಅಂತಸ್ತಿನ ಕಟ್ಟಡದ ಮೇಲೆ ವಾಟರ್ ಟ್ಯಾಂಕ್ (ಸಿಂಟ್ಯಾಕ್ಸ್) ಇತ್ತು. ಅದೇ …
Read More »ವಿಕಲಚೇತನರ ಸಿಟಿಂಗ್ ಥ್ರೋಬಾಲ್ ಪಂದ್ಯ ಭಾರತದ ಮಹಿಳಾ ,ಪುರುಷರ ತಂಡ ಗೆಲುವು.
ಹಾವೇರಿ :ಮಲೇಶಿಯಾದ ಕ್ವಾಲಾಲಂಪುರದಲ್ಲಿ ಜುಲೈ 29 ಮತ್ತು 30 ರಂದು ನಡೆದ ವಿಕಲಚೇತನರ ಸಿಟ್ಟಿಂಗ್ ಥ್ರೋಬಾಲ್ ಪಂದ್ಯಾವಳಿಯಲ್ಲಿ ಭಾರತ ಮಹಿಳಾ ಮತ್ತು ಪುರುಷ ತಂಡಗಳು ಗೆಲ್ಲುವ ಮೂಲಕ ಚಿನ್ನದ ಪದಕ ಬೇಟೆಯಾಡಿದ್ದಾರೆ. ಈ ಇಬ್ಬರು ಆಟಗಾರರು ಹಾವೇರಿ ಜಿಲ್ಲೆಯವರಾಗಿದ್ದು, ಮಹಿಳಾ ತಂಡವನ್ನು ಹಿರೇಕೆರೂರು ತಾಲೂಕಿನ ಬನ್ನಿಹಟ್ಟಿ ತಾಂಡಾದ ಮಂಜುಳಾ ಲಮಾಣಿ ಹಾಗು ಪುರುಷ ತಂಡವನ್ನು ರಾಣೆಬೆನ್ನೂರು ತಾಲೂಕಿನ ಕಾಕೋಳ ಗ್ರಾಮದ ಹರೀಶ್ ಶಿವಣ್ಣನವರ್ ಮುನ್ನಡಿಸಿದ್ದರು. ಮುಂಬರುವ ಪ್ಯಾರಾ ಏಷ್ಯನ್ ಗೇಮ್ಸ್ …
Read More »ಕಾಫಿ ತೋಟದಲ್ಲಿ ಕಾಡಾನೆ ಹಿಂಡು.
ಚಿಕ್ಕಮಗಳೂರು:ರಾಜ್ಯದ ಪ್ರವಾಸಿಗರ ಸ್ವರ್ಗವೆಂದೇ ಹೇಳಲಾಗುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಸ ಬಂದು ಹೋಗಲಷ್ಟೇ ಸ್ವರ್ಗವೆನಿಸುತ್ತದೆ. ಆದರೆ, ಇಲ್ಲಿ ನೆಲೆಗೊಂಡು ಜೀವನ ಮಾಡುವವರಿಗೆ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗತೊಡಗಿದೆ. ಮೂಡಿಗೆರೆಯ ಒಂದೇ ಕಾಫಿ ಎಸ್ಟೇಟ್ನಲ್ಲಿ 16 ಕಾಡಾನೆಗಳು ಒಂದು ವಾರದಿಂದ ಬೀಡು ಬಿಟ್ಟಿದ್ದು, ಎಲಿಫ್ಯಾಂಟ್ ಟಾಸ್ಕ್ ಫೋರ್ಸ್ನ ಆನೆ ಓಡಿಸುವ ಪ್ರಯತ್ನ ಸಂಪೂರ್ಣ ವ್ಯರ್ಥವಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆಗಳು ಹಾಗೂ ಮಾನವನ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಕಾಡಾನೆಗಳು ಪದೇ ಪದೆ ದಾಳಿ …
Read More »ಎಂ. ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಧಾರವಾಡ ದಿಂದ ಮದ್ರಾಸ್ ಆಯ್ ಜಾಗೃತಿ ಕಾರ್ಯಕ್ರಮ.
ಧಾರವಾಡ: ಎಲ್ಲೆಡೆಯೂ ಹವಾಮಾನ ವೈಪರೀತ್ಯದಿಂದ ತೀವ್ರತೆ ಗೊಂಡ ಮದ್ರಾಸ್ ಆಯ್ (ಕಣ್ಣು ಬೇನೆ) ಯ ಬಗ್ಗೆ ಜಾಗೃತಿ ಅತಿ ಮುಖ್ಯ ಎಂದು ಇಂದು ಧಾರವಾಡದ ವನಿತಾ ಸೇವಾ ಸಮಾಜ ಸಂಸ್ಥೆಯ ಮಹಿಳಾ ಕಾಲೇಜ್ ನಲ್ಲಿ ಜರುಗಿದ ಮದ್ರಾಸ್ ಆಯ್ ಜಾಗೃತಿ ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ರಾಮನಗೌಡ ದೊಡಮನಿ ಅಭಿಪ್ರಾಯ ಪಟ್ಟರು ಎಂ. ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಧಾರವಾಡ ವತಿಯಿಂದ ಹಮ್ಮಿಕೊಂಡಿದ್ದ ಮದ್ರಾಸ್ ಆಯ್ ಜಾಗೃತಿ ಕಾರ್ಯಕ್ರಮದಲ್ಲಿ ನೇತ್ರ ವೈದ್ಯರಾದ …
Read More »ಮೈದುಂಬಿ ಹರಿಯುತ್ತಿರುವ ಎತ್ತಿಪೋತಾ ಜಲಪಾತ…
ಕಲಬುರಗಿ:ಬಿಸಿಲಿನ ತಾಪಕ್ಕೆ ಹೆಸರುವಾಸಿಯಾದ ಕಲಬುರಗಿ ಜಿಲ್ಲೆ ಈಗ ಅಕ್ಷರಶಃ ಮಲೆನಾಡಿನ ವಾತಾವರಣದಂತೆ ಭಾಸವಾಗುತ್ತಿದೆ. ಕಳೆದೊಂದು ವಾರದಿಂದ ಅಬ್ಬರದ ಮಳೆಯಾಗಿದೆ. ಜೊತೆಗೆ ಮಹಾರಾಷ್ಟ್ರ, ತೆಲಂಗಾಣದಲ್ಲಿ ಸುರಿದಿದ್ದ ಭಾರಿ ಮಳೆ ಹಿನ್ನೆಲೆ ಜಿಲ್ಲೆಯಲ್ಲಿ ತಂಪಿನ ವಾತಾವರಣ ಕಂಡುಬರುತ್ತಿದೆ. ಚಿಂಚೋಳಿ ತಾಲೂಕಿನ ಎತ್ತಿಪೋತಾ ಜಲಪಾತ ಮೈದುಂಬಿ ಹರಿಯುತ್ತಿದೆ. ಜಲಪಾತದ ರಮಣೀಯ ದೃಶ್ಯವನ್ನು ಕಣ್ತುಂಬಿಕೊಳ್ಳಲು ನೂರಾರು ಪ್ರವಾಸಿಗರು ಇಲ್ಲಿಗೆ ಬರುತ್ತಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಬೆರಳೆಣಿಕೆಯಷ್ಟು ಚಿಕ್ಕಪುಟ್ಟ ಜಲಪಾತಗಳು ಇವೆ. ಬೆಸಿಗೆಯಲ್ಲಿ ಇವು ಸೊರಗಿ ಹೋಗುತ್ತವೆ. …
Read More »ಮೂವರು ಡ್ರಗ್ ಪೆಡ್ಲರ್ ಬಂಧನ….
ಮಂಗಳೂರು: ‘ಡ್ರಗ್ಸ್ ಫ್ರಿ ಮಂಗಳೂರು’ ಮಾಡುವ ನಿಟ್ಟಿನಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿರುವ ಮಂಗಳೂರು ಸಿಸಿಬಿ ಪೊಲೀಸರು ಮಾದಕ ವಸ್ತು ಎಂಡಿಎಂಎ (MDMA) ಮಾರಾಟ ಮಾಡುತ್ತಿದ್ದ ಮೂವರು ಡ್ರಗ್ ಪೆಡ್ಲರ್ಗಳನ್ನು ಬಂಧಿಸಿದ್ದಾರೆ. ಬಂಟ್ವಾಳ ತಾಲೂಕಿನ ಸಜಿಪ ಮುನ್ನೂರು ಗ್ರಾಮದ ನಂದಾವರ ಬಸ್ತಿಗುಡ್ಡೆಯ ಮೊಹಮ್ಮದ್ ಹಫೀಝ್ (35), ಸಜಿಪ ಮುನ್ನೂರು ಗ್ರಾಮದ ನಂದಾವರದ ಅಮೀರ್ (34) ಹಾಗೂ ಸಜಿಪ ಮುನ್ನೂರು ಗ್ರಾಮದ ಪಾಣೆಮಂಗಳೂರು ದಾಸರಗುಡ್ಡೆಯ ಜಾಕೀರ್ ಹುಸೇನ್ (28) ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳು ಬೆಂಗಳೂರಿನಿಂದ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





