Breaking News

ಎಂ. ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಧಾರವಾಡ ದಿಂದ ಮದ್ರಾಸ್ ಆಯ್ ಜಾಗೃತಿ ಕಾರ್ಯಕ್ರಮ.

ಧಾರವಾಡ: ಎಲ್ಲೆಡೆಯೂ ಹವಾಮಾನ ವೈಪರೀತ್ಯದಿಂದ ತೀವ್ರತೆ ಗೊಂಡ ಮದ್ರಾಸ್ ಆಯ್ (ಕಣ್ಣು ಬೇನೆ) ಯ ಬಗ್ಗೆ ಜಾಗೃತಿ ಅತಿ ಮುಖ್ಯ ಎಂದು ಇಂದು ಧಾರವಾಡದ ವನಿತಾ ಸೇವಾ ಸಮಾಜ ಸಂಸ್ಥೆಯ ಮಹಿಳಾ ಕಾಲೇಜ್ ನಲ್ಲಿ ಜರುಗಿದ ಮದ್ರಾಸ್ ಆಯ್ ಜಾಗೃತಿ ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ರಾಮನಗೌಡ ದೊಡಮನಿ ಅಭಿಪ್ರಾಯ ಪಟ್ಟರು ಎಂ. ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಧಾರವಾಡ ವತಿಯಿಂದ ಹಮ್ಮಿಕೊಂಡಿದ್ದ ಮದ್ರಾಸ್ ಆಯ್ ಜಾಗೃತಿ ಕಾರ್ಯಕ್ರಮದಲ್ಲಿ ನೇತ್ರ ವೈದ್ಯರಾದ ಡಾ. ದಿವ್ಯಾ ಎನ್. ಪಿ ಅವರು ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಮದ್ರಾಸ್ ಆಯ್ ವಾತಾವರಣದ ವೈಪರೀತ್ಯದಿಂದ ಬ್ಯಾಕ್ಟೀರಿಯಾ ಹಾಗೂ ವೈರಸ್ ನಿಂದ ಹರಡುತ್ತಿರುವ ಸಾಂಕ್ರಾಮಿಕ ತೊಂದರೆಯಾಗಿದ್ದು ಕಲುಷಿತವಾದ ಕೈ ಹಾಗೂ ವಸ್ತುಗಳಿಂದ ವೇಗವಾಗಿ ಹರಡುತ್ತಿದೆ.

ಈ ಕಣ್ಣಿನ ತೊಂದರೆಯಿಂದ ಬಳಲುತ್ತಿರುವವರಿಗೆ ಕಣ್ಣು ಕೆಂಪಗಾಗುವದು, ಕಣ್ಣುಗಳಲ್ಲಿ ಉರಿ ಹಾಗೂ ಕಣ್ಣಿನ ರೆಪ್ಪೆಗಳು ದಪ್ಪವಾಗುವದು, ಕಣ್ಣುಗಳು ಪಿಚ್ಚು ಗಟ್ಟುವಂತಹ ಲಕ್ಷಣಗಳು ಕಂಡು ಬರುತ್ತವೆ. ಪ್ರಮುಖವಾಗಿ ಮಕ್ಕಳಲ್ಲಿ, ವೃದ್ಧರಲ್ಲಿ ಹಾಗೂ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಈ ಸೋಂಕು ಬೇಗ ಹರಡುತ್ತದೆ ಆದ್ದರಿಂದ ಪ್ರತಿಯೊಬ್ಬರೂ ವಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು ಇನ್ನು ಆಗಲೇ ಮದ್ರಾಸ್ ಆಯ್ ತೊಂದರೆಗೆ ಒಳಗಾಗಿದ್ದಾರೆ ಕೈಗಳನ್ನು ಸ್ವಚ್ಛ್ ವಾಗಿ ತೊಳೆದುಕೊಳ್ಳುವದು,ಕಣ್ಣುಗಳಿಗೆ ಕನ್ನಡಕವನ್ನು ಹಾಕಿಕೊಳ್ಳುವದು, ಕೈಗಳಿಂದ ಪದೇ ಪದೇ ಕಣ್ಣುಗಳನ್ನು ಮುಟ್ಟದಿರುವದು, ಕೈಗಳನ್ನು ಸೆನಿಟೈಸರ್ ನಿಂದ ತೊಳೆದುಕೊಳ್ಳುವದು ಮುಖ್ಯ. ಮತ್ತು ಮದ್ರಾಸ್ ಆಯ್ ತೊಂದರೆಗೊಳಪಟ್ಟ ವ್ಯಕ್ತಿಯು ಬಳಸುವ ವಸ್ತುಗಳು, ಕೈ ವಸ್ತ್ರ, ಟವಲ್, ಮೇಕಪ್ ವಸ್ತುಗಳು ಅಥವಾ ಇನ್ನಿತರ ವಸ್ತುಗಳನ್ನು ಬೇರೆಯವರು ಬಳಸಬಾರದು ಇಂದರಿಂದ ಸೋಂಕು ಆದಷ್ಟು ಬೇರೆಯವರಿಗೆ ಹರಡದಂತೆ ತಡೆಗಟ್ಟಬಹುದು ಹಾಗೂ ಕಣ್ಣುಗಳನ್ನು ಶುದ್ಧವಾದ ನೀರಿನಲ್ಲಿ ತೊಳೆದುಕೊಳ್ಳಬೇಕು ಎಂದು ತಿಳಿಸಿದರು.

ಇನ್ನು ಮದ್ರಾಸ್ ಆಯ್ ಲಕ್ಷಣಗಳು ಕಂಡು ಬಂದ ಕೂಡಲೇ ಹತ್ತಿರದ ನೇತ್ರ ವೈದ್ಯರಲ್ಲಿ ಚಿಕಿತ್ಸೆ ಪಡೆದು ಅವರ ಸಲಹೆಗಳನ್ನು ಪಾಲಿಸಲು ಹೇಳಿದರು . ಮದ್ರಾಸ್ ಆಯ್ ಹರಡದಂತೆ ತಡೆಗಟ್ಟಲು ಇದರ ಬಗ್ಗೆ ತಿಳುವಳಿಕೆ ಹಾಗೂ ಜಾಗೃತಿ ಅತಿ ಮುಖ್ಯ ಎಂದು ಅವರಿಂದು ಅಭಿಪ್ರಾಯ ಪಟ್ಟರು ಕಾರ್ಯಕ್ರಮದಲ್ಲಿ ನೇತ್ರ ಇನ್ನಿತರ ತೊಂದರೆಗಳ ಬಗ್ಗೆಯೂ ವಿದ್ಯಾರ್ಥಿನಿಯಾರಿಗಿ ತಿಳಿಸಿ ನೇತ್ರ ಧಾನದ ಬಗ್ಗೆ ಎಲ್ಲರಿಗು ತಿಳಿವಳಿಕೆ ಮುಖ್ಯ ಎಲ್ಲರು ನೇತ್ರ ದಾನ ಮಾಡುವದರ ಜೊತೆಗೆ ನೇತ್ರ ದಾನದ ಬಗ್ಗೆ ತಮ್ಮ ಬಂಧು ಮಿತ್ರರಲ್ಲಿ ಜಾಗೃತಿ ಮೂಡಿಸುವದು ಅತಿ ಮುಖ್ಯವಾಗಿದೆ ಎಂದು ಹೇಳಿದರು ಇದರಿಂದ ನಾವುಗಳು ಅಂಧತ್ವ ದಿಂದ ಬಳಲುತ್ತಿರುವವರ ಬಧುಕಿಗೆ ಬೆಳಕಾಗಬಹುದು ಎಂದು ಅವರಿಲ್ಲಿ ಎಲ್ಲರಿಗೆ ತಿಳುವಳಿಕೆ ನೀಡಿದರು. ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ರಾಮನಗೌಡ ದೊಡಮನಿ, ಹಾಗೂ ಸಂಸ್ಥೆಯ ವಿದ್ಯಾರ್ಥಿನಿಯರು ಮತ್ತು ಸಿಬ್ಬಂದಿ ವರ್ಗ ಎಂ. ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ಹರೀಶ ಮುಂಜಿ, ಶಿಲ್ಪಾ, ಅನು ಹಾಗೂ ಸಿಬ್ಬಂದಿವರ್ಗ ಇದ್ದರು

Share News

About BigTv News

Check Also

ಬೆತ್ತಲೆ ಕಾಮುಕನ ಅಟ್ಟಹಾಸ..! ಲೇಡೀಸ್ ಪಿಜಿಗಳೇ ಟಾರ್ಗೆಟ್..?

ಧಾರವಾಡದಲ್ಲಿ ಬೆತ್ತಲೆ ಕಾಮುಕನ ಅಟ್ಟಹಾಸ..! ಲೇಡೀಸ್ ಪಿಜಿಗಳೇ ಟಾರ್ಗೆಟ್…? 3 ತಿಂಗಳಿಂದ ಯುವತಿಯರಿಗೆ ಕಿರುಕುಳ ಆರೋಪ — ಸಿಸಿಟಿವಿಯಲ್ಲಿ ಬೆತ್ತಲೆ …

Leave a Reply

Your email address will not be published. Required fields are marked *