Breaking News

ಕಟ್ಟಡದ ಮೇಲಿದ್ದ ನೀರಿನ ಟಾಕಿ ಬಿದ್ದು 2 ಜನ ಸಾವು….

ಬೆಂಗಳೂರು :ನಾಲ್ಕು ಅಂತಸ್ತಿನ ಕಟ್ಟಡದ ಮೇಲಿದ್ದ ನೀರಿನ ಟ್ಯಾಂಕ್​ ಕುಸಿದು ಬಿದ್ದು ಫಾಸ್ಟ್ ಫುಡ್ ಅಂಗಡಿ ಮಾಲೀಕ ಹಾಗೂ ಗ್ರಾಹಕ ಸಾವನ್ನಪ್ಪಿರುವ ಘಟನೆ ತಡರಾತ್ರಿ ರಾಜಧಾನಿಯ ಶಿವಾಜಿನಗರ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದರೆ, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮೃತರಲ್ಲಿ ಒಬ್ಬ ಅರುಳ್ (40) ಹಾಗೂ ಮತ್ತೊಬ್ಬನ ಗುರುತು ಇನ್ನೂ ಪತ್ತೆಯಾಗಿಲ್ಲ. ನಾಲ್ಕು ಅಂತಸ್ತಿನ ಕಟ್ಟಡದ ಮೇಲೆ ವಾಟರ್ ಟ್ಯಾಂಕ್ (ಸಿಂಟ್ಯಾಕ್ಸ್) ಇತ್ತು. ಅದೇ ಕಟ್ಟಡದ ಕೆಳಗಡೆ ತಳ್ಳುವ ಗಾಡಿಯಲ್ಲಿ ಫಾಸ್ಟ್ ಫುಡ್ ಅಂಗಡಿ ಇತ್ತು. ನೀರು ತುಂಬಿದ್ದ ಟ್ಯಾಂಕಿನಿಂದ ಕಟ್ಟಡದ ಗೋಡೆ ದುರ್ಬಲಗೊಂಡಿದೆ. ಆದ್ದರಿಂದ ಟ್ಯಾಂಕ್ ಜೊತೆಗೆ ಗೋಡೆಯೂ ನೆಲಕ್ಕೆ ಕುಸಿದು ಬಿದ್ದಿವೆ. ಪರಿಣಾಮ ಅಂಗಡಿ ಮಾಲೀಕ ಹಾಗೂ ಒಬ್ಬ ಗ್ರಾಹಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತಿಬ್ಬರು ಗ್ರಾಹಕರು ಗಂಭೀರವಾಗಿ ಗಾಯಗೊಂಡಿದ್ದು, ನಗರದ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಶಿವಾಜಿನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share News

About BigTv News

Check Also

ಮರಳು ಮಾಫಿಯಾದಲ್ಲಿ ಲೋಕಾಯುಕ್ತರ ದಾಳಿ ಬಳಿಕ… ಕಾಲು ಕೆತ್ತು ಓಡಿ ಹೋದ ಹುಬ್ಬಳ್ಳಿ ‘ಆನೆ ಒಂಟೆ ’!

ಮರಳು ಮಾಫಿಯಾಗೆ ಲೋಕಾಯುಕ್ತ ಶಾಕ್! ಲಂಚದ ಜಾಲದಲ್ಲಿ ಸಿಕ್ಕಿದ್ದು ಕೆಳಹಂತದವರೇನಾ, ಇನ್ನೂ ದೊಡ್ಡವರ ಸರದಿ ಬಾಕಿಯಿದೆಯಾ..? ಹುಬ್ಬಳ್ಳಿ: ಮರಳು ದಂಧೆಯ …

Leave a Reply

Your email address will not be published. Required fields are marked *