ಹುಬ್ಬಳ್ಳಿ: ವಿಧಾನಸಭಾ ಚುನಾವಣೆಗೆ ಈಗಾಗಲೇ ದಿನಾಂಕ ಘೋಷಣೆಯಾಗಿರುವ ಬೆನ್ನಲ್ಲೇ ಜಿಲ್ಲೆಯ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ಹಾಗೂ ಜಿಲ್ಲಾಡಳಿತದಿಂದ ಸಾಕಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಗೂಂಡಾ ಕಾಯಿದೆ ಅಡಿಯಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸದಸ್ಯ ಚೇತನ ಹಿರೇಕೆರೂರನ್ನು ಗೋಕುಲ ರೋಡ್ ಪೊಲೀಸರು ಬಂಧಿಸಿ ಬೆಳಗಾವಿ ಜೈಲಿಗೆ ಕಳುಹಿಸಿದ್ದಾರೆ. ಈಗಾಗಲೇ ಜಿಲ್ಲೆಯಿಂದ ಸುಮಾರು ಹತ್ತು ಜನರನ್ನು ಗಡಿಪಾರು ಮಾಡಿದ್ದು, ಚುನಾವಣೆ ವೇಳೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ …
Read More »ಶ್ರೀ ಸಾಯಿ ಮಹಿಳಾ ಸೇವಾ ಸಂಘ ರಾಜನಗರ ಗುಲಗಂಜಿಕೊಪ್ಪ ವಾರ್ಷಿಕೋತ್ಸವ
ಧಾರವಾಡ: ಶ್ರೀ ಸಾಯಿ ಮಹಿಳಾ ಸೇವಾ ಸಂಘ ರಾಜನಗರ ಗುಲಗಂಜಿಕೊಪ್ಪ ವಾರ್ಷಿಕೋತ್ಸವ ಭಾರತ ಹೈಸ್ಕೂಲ್ ನ ಸಭಾ ಭವನದಲ್ಲಿ ಜರುಗಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಾಜಿ ರೇಷ್ಮೆ ಮಾರಟ ಮಂಡಳಿ ಅಧ್ಯಕ್ಷೆ ಶ್ರೀಮತಿ ಸವಿತಾ ಅಮರಶೆಟ್ಟಿ ಅಗಮಿಸಿ ಕಾರ್ಯ ಕ್ರಮ ಉದ್ಘಾಟಿಸಿ, ನಮ್ಮ ಸಂಘದ ಕಾರ್ಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ ಹೆಣ್ಣು ಮಕ್ಕಳು ಇನ್ನೂ ಮುಂದೆ ಎಲ್ಲರಂಗದಲ್ಲಿಯೂ ಬರಬೇಕಿದೆ ಎಂದು ಹೇಳಿದರು. ನಮ್ಮ ಸಂಘದ ಎಲ್ಲಾ ಕಾರ್ಯಕ್ಕು …
Read More »ಖಂಡಿತಾ ಶೆಟ್ಟರ್ ಗೆದ್ದು ಬರ್ತಾರೆ- ಮಾಜಿ ಸಚಿವ ಆರ್.ವಿ. ದೇಶಪಾಂಡೆ
ಹುಬ್ಬಳ್ಳಿ: ಬೆಳಗಾದ್ರೆ ಬಿಜೆಪಿ ಲಿಂಗಾಯತ ಪರ ಅನ್ನುತ್ತೆ. ಆದ್ರೆ ಯಡಿಯೂರಪ್ಪ ಪರಿಸ್ಥಿತಿ ಏನು ಮಾಡಿಟ್ಟರು? ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ರು. ಶೆಟ್ಟರ್, ಲಕ್ಷ್ಮಣ ಸವದಿ ಕಥೆ ಏನು ಮಾಡಿಟ್ಟರು?. ಜಗದೀಶ್ ಶೆಟ್ಟರ್ ಗೆ ಟಿಕೇಟ್ ಇಲ್ಲ ಅನ್ನಲು ಕಾರಣ ಏನು. ಲಿಂಗಾಯತರನದನ ಪ್ರಯೋಜನ ತಗೊಳ್ಳಲು ಹೊರಟಿಲ್ಲ. ಯಾವ ಸ್ವಾರ್ಥವೂ ನಮಗಿಲ್ಲ. ಅಲ್ಲಿ ಅನ್ಯಾಯ ಆಗಿದ್ದಕ್ಕೆ ಶೆಟ್ಟರ್ ಇಲ್ಲಿಗೆ ಬಂದಿದ್ದಾರೆ. ಖಂಡಿತಾ ಶೆಟ್ಟರ್ ಗೆದ್ದು ಬರ್ತಾರೆ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಚಿವ ಆರ್.ವಿ. …
Read More »ಲಿಂಗಾಯತ ಸಮಾಜದ ಮೇಲೆ ಬಿಜೆಪಿ ದ್ವೇಷ ಸಾಧನೆ ಮಾಡ್ತಿದೆ-ಎಂ.ಬಿ.ಪಾಟೀಲ
ಹುಬ್ಬಳ್ಳಿ: ಶೆಟ್ಟರ್ ಗೆ ಟಿಕೇಟ್ ನಿರಾಕರಿಸಿರೋದಕ್ಕೆ ಸಕಾರಣವಿಲ್ಲ. 75 ವರ್ಷ ವಯಸ್ಸಾದವರಿಗೂ ಬಿಜೆಪಿ ಟಿಕೇಟ್ ಕೊಟ್ಟಿದೆ. ಜನ ಸಂಘದಿಂದ ಅವರ ರಾಜಕಾರಣ ಆರಂಭಗೊಂಡಿತ್ತು. ಟಿಕೇಟ್ ನಿರಾಕರಿಸಿರೋದು ಸಮುದಾಯಕ್ಕೆ ಅಪಮಾನ. ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಕಾಂಗ್ರೆಸ್ ಗೆ ಬಂದಿದ್ದಾರೆ. ಇದೊಂದು ಷಡ್ಯಂತ್ರ. ಯಡಿಯೂರಪ್ಪ ಅವರನ್ನು ಉಪಯೋಗಿಸಿಕೊಂಡು ನಡು ನೀರಲ್ಲಿ ಕೈಬಿಟ್ಟರು. ಲಕ್ಷ್ಮಣ ಸವದಿ ನಂತರ ಶೆಟ್ಟರ್ ಗೆ ಅನ್ಯಾಯ ಮಾಡಲಾಗಿದೆ. ಇದೊಂದು ದೊಡ್ಡ ಅಪಮಾನ ಮಾಡಲಾಗಿದೆ. ಲಿಂಗಾಯತ ಸಮಾಜದ ಮೇಲೆ ಬಿಜೆಪಿ …
Read More »ಬಿಜೆಪಿ ಧಾರವಾಡ ಜಿಲ್ಲಾ ಯವಮೋರ್ಚಾ ಉಪಾಧ್ಯಕ್ಷ ಪ್ರವೀಣ ಕಮ್ಮಾರ ಹತ್ಯೆ
ಧಾರವಾಡ: ಬಿಜೆಪಿ ಧಾರವಾಡ ಜಿಲ್ಲಾ ಯವಮೋರ್ಚಾ ಉಪಾಧ್ಯಕ್ಷ ಪ್ರವೀಣ ಕಮ್ಮಾರ ಎಂಬುವವರನ್ನು ನಿನ್ನೆ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಧಾರವಾಡ ತಾಲೂಕಿನ ಕೋಟೂರು ಗ್ರಾಮದಲ್ಲಿ ನಡೆದಿದೆ. ನಿನ್ನೆ ರಾತ್ರಿ ವೈಯಕ್ತಿಕ ಕಾರಣಕ್ಕಾಗಿ ಯುವಕರ ಮಧ್ಯೆ ಜಗಳ ಸಂಭವಿಸಿದ್ದು, ಈ ಜಗಳ ಪ್ರವೀಣ ಅವರ ಕೊಲೆಯಲ್ಲಿ ಅಂತ್ಯವಾಗಿದೆ. ಜಗಳದಲ್ಲಿ ದುಷ್ಕರ್ಮಿಗಳು ಪ್ರವೀಣ ಅವರ ಹೊಟ್ಟೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಚಿಕಿತ್ಸೆಗಾಗಿ ಪ್ರವೀಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದ ಪ್ರವೀಣ …
Read More »ಟಿಕೇಟ್ ಪ್ರಶ್ನೆಯಲ್ಲ, ನನ್ನ ಮರ್ಯಾದೆ ಪ್ರಶ್ನೆ ಎಂದು ಶೆಟ್ಟರ್ ಕಿಡಿ
ಹುಬ್ಬಳ್ಳಿ: ಹೈಕಮಾಂಡ್ ಗೆ ಕಳಿಸಿದ ಪಟ್ಟಿಯಲ್ಲಿ ನನ್ನದು ಒಂದೇ ಹೆಸರಿತ್ತು. ಆದ್ರೆ ಮೊದಲ ಪಟ್ಟಿಯಲ್ಲಿ ನನ್ನ ಹೆಸರು ಬರಲಿಲ್ಲ. ಧರ್ಮೇಂದ್ರ ಪ್ರಧಾನ್ ಫೋನ್ ಮಾಡಿ ಟಿಕೇಟ್ ಕೊಡಲ್ಲ ಅಂತಾರೆ. ಅದನ್ನು ಸ್ವೀಕರಿಸಬೇಕು. ಒಂದು ಫಾರ್ಮೆಟ್ ಕಳಿಸ್ತೇವೆ. ಅದಕ್ಕೆ ಸಹಿ ಹಾಕಿ ಕಳಿಸಿ ಅಂದರು. ಸಣ್ಣು ಹುಡುಗರಂತೆ ಚೈಲ್ಡಿಷ್ ಆಗಿ ಹೇಳಿ ನನಗೆ ಅಪಮಾನ ಮಾಡಿದ್ರು. ಒಬಿಡಿಯಂಟ್ ಇದಾರೆ, ಸುಮ್ಮನೇ ಒಪ್ಪಿಕೊಳ್ತಾರೆ ಅಂತ ಲೆಕ್ಕ ಹಾಕಿದರು. ಟಿಕೇಟ್ ಪ್ರಶ್ನೆಯಲ್ಲ, ನನ್ನ ಮರ್ಯಾದೆ …
Read More »ಬಿ.ಎಲ್.ಸಂತೋಷ್ ವಿರುದ್ಧ ಹರಿಹಾಯ್ದ ಶೆಟ್ಟರ್
ಹುಬ್ಬಳ್ಳಿ: ಬಿಜೆಪಿಯಲ್ಲಿ ವ್ಯಕ್ತಿ ಮುಖ್ಯ ಅಲ್ಲ, ಪಕ್ಷ ಮುಖ್ಯ ಅಂತಾರೆ. ಆದ್ರೆ ಇಲ್ಲ ಒಬ್ಬನೇ ವ್ಯಕ್ತಿ ಮುಖ್ಯವಾಗಿದ್ದಾನೆ. ಬಿಜೆಪಿ ಕಛೇರಿಯನ್ನು ಕಪಿಮುಷ್ಟಿಯಲ್ಲಿಟ್ಟು ಕೊಂಡಿದ್ದಾನೆ. ಸುರಾನಾ ಈಗ ಎಂ.ಎಲ್.ಸಿ. ಯಡಿಯೂರಪ್ಪ ಸಿಎಂ ಆದ ಮೇಲೆ ಆತನನ್ನ ಕಛೇರಿಯೊಳಗೆ ಬಿಟ್ಟುಕೊಂಡಿದ್ದಾನೆ. ಪ್ರತಿ ಜಿಲ್ಲೆಯಲ್ಲಿಯೂ ಗುಂಪುಗಾರಿಕೆ ಮಾಡಿದ್ದಾನೆ. ರಾಮದಾಸ್ ಸಂತೋಷ್ ಆಪ್ತನಲ್ಲ. ಹಾಗಾಗಿ ಆತನಿಗೆ ಟಿಕೇಟ್ ಸಿಗಲಿಲ್ಲ. ಶ್ರೀವತ್ಸ ಅನ್ನೋರಿಗೆ ಟಿಕೇಟ್ ಕೊಟ್ಟರು. ಅವರು ಗೆದ್ದು ಬರ್ತಾರಾ..? ಬೇರೆ ಕ್ಷೇತ್ರಗಳಲ್ಲಿಯೂ ಇದೇ ರೀತಿ ಮಾಡಿದ್ದಾರೆ …
Read More »ಬಿಜೆಪಿಯ ಟಿಕೆಟ್ ಕೈ ತಪ್ಪಲು ಕಾರಣ ಬಿ.ಎಲ್. ಸಂತೋಷ್- ಜಗದೀಶ್ ಶೆಟ್ಟರ್
ಹುಬ್ಬಳ್ಳಿ: ನನಗೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ ಟಿಕೆಟ್ ಕೈ ತಪ್ಪಲು ಕಾರಣ ಬಿ.ಎಲ್. ಸಂತೋಷ್ ಅವರೇ ಕಾರಣ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ನೇರವಾಗಿ ಆರೋಪಿಸಿದ್ದಾರೆ. ನನ್ನ ವಿರುದ್ದ ಬಿಎಲ್ ಸಂತೋಷ್ ಅವರು ಹೈಕಮಾಂಡ್ ಬಳಿ ಅಪಪ್ರಚಾರ ನಡೆಸಿತು. ಅವರ ಟೀಂ ಕೂಡ ನನ್ನ ವಿರುದ್ಧ ಅಪಪ್ರಚಾರ ಮಾಡಿದರು. ನನ್ನ ವಿರುದ್ಧ ತಂತ್ರಗಾರಿಕೆ ಮಾಡಿದರು. ಅವರಿಂದಲೇ ನನಗೆ ಟಿಕೆಟ್ ತಪ್ಪಿತ್ತು ಎಂದು ಅವರು ಹೇಳಿದ್ದಾರೆ. ನಳಿನ್ ಕಟೀಲ …
Read More »ಮೋದಿಯವರ ಕಾರ್ಯವೈಖರಿಯನ್ನು ಕೊಂಡಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ
ಹುಬ್ಬಳ್ಳಿ: ಬಿಜೆಪಿಯನ್ನು ಭದ್ರಗೋಳಿಸಲು ಆಯೋಜಿಸಲಾಗಿದ್ದ ಸಂವಾದ ಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕಾರ್ಯವೈಖರಿಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕೊಂಡಾಡಿದ್ದಾರೆ. ಮೋದಿಯವರ ನೇತ್ರತ್ವದಲ್ಲಿ ದೇಶ ಒಂದು ದೀರ್ಘ ನೆಗೆತ ಕಂಡಿದೆ. ಕಾಂಗ್ರೆಸ್ ಎಪ್ಪತ್ತು ವರ್ಷದಲ್ಲಿ ಸಮಾಜವನ್ನು ಒಡೆದಿದೆ. ಸಮಾಜ ಒಡೆಯುತ್ತಾ ಒಡೆಯುತ್ತಾ ತಾವೇ ಒಡೆದು ಹೋಗಿದ್ದಾರೆ. ತಮಿಳುನಾಡು, ಆಂಧ್ರ, ತೆಲಂಗಾಣದಲ್ಲಿ ಒಡೆದು ಹೋಗಿದ್ದಾರೆ. ಕಾಂಗ್ರೆಸ್ನವರು ಕರ್ನಾಟಕದಲ್ಲೂ ವಿಭಜನೆಯಾಗಿದ್ದಾರೆ ಎಂದರು. ಪ್ರಧಾನಿಗಳು ಎಲ್ಲರನ್ನೂ ಒಗ್ಗಟ್ಟಾಗಿ, ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ. ಭಾರತದ ರಾಜಕೀಯದ …
Read More »ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ರಣತಂತ್ರ ರೂಪಿಸಿದ ಭಗವಂತ್ ಮಾನ್
ಹುಬ್ಬಳ್ಳಿ: ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಕಣಕ್ಕೆ ಇಳಿದಿದ್ದರು. ಬೆಳಗ್ಗೆ ನಗರಕ್ಕೆ ಆಗಮಿಸಿದ್ದ ಭಗವಂತ್ ಮಾನ್ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ರಣತಂತ್ರ ರೂಪಿಸಿದರು. ಬಳಿಕ ಸಾಯಂಕಾಲ ಟೆಂಪಲ್ ರನ್ ನಡೆಸಿದರು. ದೇಶಪಾಂಡೆ ನಗರದಲ್ಲಿರುವ ಗುರಯದ್ವಾರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಸಿದ್ದಾರೂಢ ಮಠಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಹಳೇ ಹುಬ್ಬಳ್ಳಿಯ ಪತೇಶಾವಲಿ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





