ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡದಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗುತ್ತಿರುವುದು, ಎಲ್ ಆ್ಯಂಡ್ ಟಿ ಕಂಪನಿಯ ಭೇಜವಾಬ್ದಾರಿತನದಿಂದ ಮಾಜಿಮುಖ್ಯಮಂತ್ರಿ ಜಗದೀಶ್ ಶೇಟ್ಟರ್ ತಿಳಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಎಲ್ ಆ್ಯಂಡ್ ಟಿ ಕ್ರೆಡಿಬಲಿಟಿ ಇರುವ ಕಂಪನಿ ಅಂತಾ ಕುಡಿಯು ನೀರಿನ ನಿರ್ವಹಣೆ ಜವಾಬ್ದಾರಿ ಕೊಟ್ಟಿದ್ದೆವು. ಹೆಸರಿಗೆ ತಕ್ಕಂತೆ ಅವರು ನಡೆದುಕೊಂಡಿಲ್ಲ. ಜನರಿಗೆ ಅನಾನುಕೂಲತೆ ಆಗುತ್ತಿದೆ, ನಾಲೆಜ್ ಇಲ್ಲದ ಕಾರಣ ಅವಾಂತರ ಸೃಷ್ಟಿಸಿದ್ದಾರೆ. ಸಮಸ್ಯೆ ಬಗ್ಗೆ ಸದನದಲ್ಲಿ ಮಾತನಾಡಿದ್ದೆ. ಜಲಮಂಡಳಿಯಲ್ಲಿ …
Read More »ಆಯೋದ್ಯದಲ್ಲಿ ರಾಮ ಮಂದಿರ ಕಟ್ಟಲು ನಮ್ಮ ವಿರೋಧವಿಲ್ಲ, ಅದನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು
ಹುಬ್ಬಳ್ಳಿ: ಆಯೋದ್ಯದಲ್ಲಿ ರಾಮ ಮಂದಿರ ಕಟ್ಟಲು ನಮ್ಮ ವಿರೋಧವಿಲ್ಲ. ಅದನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಇನ್ನೊಂದು ಧರ್ಮದ ವಿರುದ್ಧ ಎತ್ತಿಕಟ್ಟಲು ಅದನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು ಎಂಬುದೆ ನಮ್ಮ ವಿರೋಧವಾಗಿದೆ. ಪ್ರತಿ ಹಳ್ಳಿಯಲ್ಲಿ ರಾಮ ಹಾಗೂ ಆಂಜನೇಯ ಮಂದಿರಗಳಿವೆ. ನಾವು ಅವನ್ನು ಕಟ್ಟಿಲ್ಲವೇ ಆದರೆ ರಾಜಕೀರಣ ಮಾಡಬಾರದು ಎಂದರು. ಕೋಮುವಾದ ಮಾಡುವ ಯಾವುದೇ ಪಕ್ಷಗಳು ಜನರನ್ನು ಆಳಲು …
Read More »ಆರ್ಥಿಕ ಪರಿಸ್ಥಿತಿ ಸುಧಾರಣೆ ತರಲು, ವಾಯು ಮಾಲಿನ್ಯ ತಪಾಸಣೆ ಕೇಂದ್ರ ಆರಂಭಿಸಿದ NWKRTC
ಹುಬ್ಬಳ್ಳಿ: ಆದುನಿಕತೆ ಬೆಳದಂತೆ, ಆರ್ಥಿಕ ಪರಿಸ್ಥಿತಿ ಸುಧಾರಣೆ ತರಲು, ಸಂಕಷ್ಟ ಎದುರಿಸುತ್ತಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ, ವಾಯು ಮಾಲಿನ್ಯ ತಪಾಸಣೆ ಕೇಂದ್ರ ಆರಂಭಿಸಿದೆ. ಇದುವರೆಗೆ ಸಂಸ್ಥೆಯ ವಾಹನಗಳಿಗೆ ಸೀಮಿತವಾಗಿದ್ದ ವಾಯು ಮಾಲಿನ್ಯ ತಪಾಸಣೆ ಕೇಂದ್ರದಲ್ಲಿ ಖಾಸಗಿ ವಾಹನಗಳ ತಪಾಸಣಾ ಕಾರ್ಯ ನಡೆಯಲಿದೆ. ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸಾರಿಗೆ ಸಂಸ್ಥೆಯಲ್ಲಿ ಖಾಸಗಿ ವಾಹನಗಳ ಪಿಯುಸಿ ಟೆಸ್ಟ್ ಸೆಂಟರ್ ತೆರೆಯುತ್ತಿರುವುದು ರಾಜ್ಯದಲ್ಲೇ ಮೊದಲು. ಬೆಳಗಾವಿ ಶಿರಸಿ ಬಾಗಲಕೋಟೆ, ಚಿಕ್ಕೋಡಿ, ಹಾವೇರಿ, ಗದಗ, …
Read More »ಬಣವಿ ಸೇರಿದಂತೆ ದವಸಧಾನ್ಯಗಳಿಗೆ ಬೆಂಕಿ, ರೈತ ಕಂಗಾಲು
ಧಾರವಾಡ: ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮದ ಬಳಿ ಇರುವ ಹೊಲದಲ್ಲಿ ಆಕಸ್ಮಿಕ ಬೆಂಕಿ ತಗುಲಿ ಎರಡು ಬಣಿವೆಗಳು ಸಂಪೂರ್ಣ ಸುಟ್ಟು ಕರಕಲಾದ ಘಟನೆ ನಡೆದಿದೆ. ಭೀಮಪ್ಪ ಸಿದ್ದನ್ನವರ ಇವರಿಗೆ ಸೇರಿದ ಹೊಟ್ಟಿನ ಬಣಿವೆಯಾಗಿದ್ದು, ಅದರಲ್ಲಿ ದಿನನಿತ್ಯ ತಿನ್ನುವ ಆಹಾರದ ಕಾಳು ಕಡಿಗಳನ್ನು ಶೇಖರಸಿಟ್ಟಿದ್ದರು. ಮನೆಯಲ್ಲಿ ಇಟ್ಟರೆ ಹುಳ ಆಗುತ್ತದೆ ಎಂದು ತಮ್ಮ ಬಣಿವೆಯಲ್ಲಿ ಇಟ್ಟಿದ್ದರು ಎಂದು ಹೇಳಲಾಗಿದೆ. ಇನ್ನೂ ಹತ್ತಿದ ತಕ್ಷಣ ಕುಂದಗೋಳ ಅಗ್ನಿಶಾಮಕ ಆಗಮಿಸಿ, ಬೆಂಕಿಯನ್ನು ನಂದಿಸಿದರು. ಅಂದಾಜು …
Read More »ಒಳಗೊಳ್ಳುವಿಕೆಯಿಂದ ಭಾರತ ವಿಶ್ವಗುರು ಆಗಲು ಸಾಧ್ಯ ; ಪ್ರೊ.ಸದಾನಂದ ಸುಗಂಧಿ
ಧಾರವಾಡ:–ಬಹುಸಂಸ್ಕೃತಿಯ ಬಹುಜನರಿಂದ ತುಂಬಿಕೊಂಡಿರುವ ಭಾರತ ದೇಶವು ಸರ್ವರೂ ಒಳಗೊಳ್ಳುವಂಥಹ ಕಲ್ಯಾಣ ಕೆಲಸಗಳನ್ನು ಹಮ್ಮಿಕೊಳ್ಳುವುದು ಅಗತ್ಯವಾಗಿದೆ. ಹೀಗೆ ಸರ್ವರ ಒಳಗೊಳ್ಳುವಿಕೆಯಿಂದ ಮಾತ್ರ ಇಂದಿನ ಕಾಲದಲ್ಲಿಯೂ ಸಹ ಭಾರತ ವಿಶ್ವಗುರು ಆಗಲು ಸಾಧ್ಯವಿದೆ ಎಂದು ಕವಿವಿ ಮಾನವಶಾಸ್ತ್ರ ವಿಭಾಗದ ಪ್ರೊ.ಸದಾನಂದ ಸುಗಂಧಿಯವರು ಅಭಿಪ್ರಾಯಪಟ್ಟರು. ಅವರು ಧಾರವಾಡದ ಗಣಕರಂಗ ಸಂಸ್ಥೆಯು ಕರ್ನಾಟಕ ವಿದ್ಯಾವರ್ಧಕ ಸಂಘದ ರಾಹದೇ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ೨೦೫ನೇಯ ಕೋರೆಗಾಂವ ವಿಜಯೋತ್ಸವ ಮತ್ತು ಕೋರೆಗಾಂವ ವಿಜಯಸ್ತಂಭ ಲೇಖನ ಸ್ಪರ್ಧಾವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮದ …
Read More »ಚುನಾವಣೆ ಸಂದರ್ಭದಲ್ಲಿ ಕ್ಷೇತ್ರದ ಬಗ್ಗೆ ಚಿಂತನೆ ಮಾಡುವ ಬಿಜೆಪಿ
ಹುಬ್ಬಳ್ಳಿ: ಹುಬ್ಬಳ್ಳಿಯ ಪೂರ್ವ ವಿಧಾನಸಭಾ ಕ್ಷೇತ್ರದ ಕುಂದು ಕೊರತೆಗಳ ಬಗ್ಗೆ ಬಿಜೆಪಿ ಪಕ್ಷದ ಕಾರ್ಯ ಕರ್ತರು ಕಾಂಗ್ರೆಸ್ ಪಕ್ಷದ ಹಾಲಿ ಶಾಸಕ ಪ್ರಸಾದ್ ಅಬ್ಬಯ್ಯ ವಿರುದ್ದ ಆರೋಪ ಮಾಡಿದರು. ಕಳೆದ ೧೦ ವರ್ಷಗಳಿಂದ ಶಾಸಕರಿದ್ದರೂ ಕ್ಷೇತ್ರ ಯಾವುದೇ ಅಭಿವೃದ್ಧಿ ಯಾಗಿಲ್ಲ. ತಮಗೆ ಬೇಕಾದ ವಾರ್ಡಗಳಲ್ಲಿ ಮಾತ್ರ ಕೆಲಸ ಮಾಡಿದ್ದಾರೆ. ಅದನ್ನು ಹೊರತುಪಡಿಸಿ ಬಿಜೆಪಿ ಮತಗಳು ಇರುವ ಕಡೆ ಶಾಸಕರು ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಡಾ.ಬಾಬು ಜಗಜೀವನ್ ರಾಮ್ ಜಿಲ್ಲಾ …
Read More »ರೈಲ್ವೆ ಮೈದಾನಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭೇಟಿ, ಪರಿಶೀಲನೆ
ಹುಬ್ಬಳ್ಳಿ: ಜನವರಿ 12 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು 26ನೇ ರಾಷ್ಟ್ರೀಯ ಯುವಜನೋತ್ಸವ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಹಿನ್ನೆಲೆ ಇಂದು ಹುಬ್ಬಳ್ಳಿಯ ರೈಲ್ವೆ ಮೈದಾನಕ್ಕೆ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿ, ಈಗಾಗಲೇ ಪ್ರಧಾನಮಂತ್ರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ತಯಾರಿ ಮಾಡಿಕೊಳ್ಳಲಾಗುತ್ತಿದ್ದು, ಪ್ರಹ್ಲಾದ್ ಜೋಶಿಯವರ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಅದರಂತೆ ಅಗತ್ಯ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು. ಪ್ರಧಾನಿಯವರು ಕಾರ್ಯಕ್ರಮಕ್ಕೆ ಆಗಮಿಸುವ …
Read More »ನದಿಯಲ್ಲಿ ಈಜಲು ಹೋದವರು ನೀರುಪಾಲು
ಹಾವೇರಿ: ಹಾವೇರಿ ಜಿಲ್ಲೆ ರಾಣೆಬೆನ್ನೂರ ತಾಲೂಕಿನ ಮುದೇನೂರ ಗ್ರಾಮದ ತುಂಗಭದ್ರಾ ನದಿಯ ಪಂಪಹೌಸ್ ಬಳಿಯ ನದಿಯಲ್ಲಿ ಈಜಲು ತೆರಳಿದ್ದ ಮೂವರು ಯುವಕರು ನದಿಯಲ್ಲಿ ಮುಳುಗಿ ಸಾವಿಗಿಡಾಗಿದ್ದಾರೆ.ಹೊಸವರ್ಷದ ನಿಮಿತ್ತ ಪಾರ್ಟಿ ಮಾಡಲು ಹೊಗಿದ್ದ ಈ ಯುವಕರು ಈಜು ಬಾರದೆ ನದಿ ಪಾಲಾಗಿದ್ದಾರೆ. ಈ ಮೂವರ ಗುರುತು ಪತ್ತೆಹಚ್ಚಿದ್ದು .ನವೀನ್ ಕುರಗುಂದ 20 ವರ್ಷ, ವಿಕಾಸ ಪಾಟೀಲ್ 20 ವರ್ಷ, ಹಾಗು ನೆಪಾಳದ ಮೂಲದ ಪ್ರೇಮ್ ಬೋರಾ 25 ವರ್ಷದ ಯುವಕ ಇನ್ನು …
Read More »ಅನಿಲ ಸೋರಿಕೆಯಿಂದ ಮಹಿಳೆ ಸೇರಿದಂತೆ ಮಗುವಿಗೆ ಗಂಭೀರ ಗಾಯ
ಹುಬ್ಬಳ್ಳಿ: ದೇವರ ದರ್ಶನಕ್ಕೆ ಹೋಗಿದ್ದ ಭಕ್ತರಿಗೆ ಬೆಂಕಿಯ ಅವಘಡದಿಂದ ಆಸ್ಪತ್ರೆ ಪಾಲಾದ ಘಟನೆ ಇಂದು ಬೆಳ್ಳಿಗ್ಗೆ ವಾಣಿಜ್ಯ ನಗರೀ ಹುಬ್ಬಳ್ಳಿಯಲ್ಲಿ ಜರುಗಿದೆ. ನಗರದ ವೀರಪೂರ ಓಣಿಯಲ್ಲಿನ ಗಣಪತಿ ದೇವಸ್ಥಾನದ ಕೊಠಡಿಯಲ್ಲಿ ಅನಿಲ ಸೋರಿಕೆಯಾಗಿದೆ. ಕೊಠಡಿಯ ಬಾಗಿಲು ತೆಗೆದ ಕೂಡಲೇ ದೇವರ ಮುಂದೆ ಇದ್ದ ದೀಪದ ಬೆಂಕಿ ಅನಿಲ ಸ್ಪರ್ಶವಾಗಿ ದೊಡ್ಡ ಮಟ್ಟದಲ್ಲಿ ಬೆಂಕಿ ಆವರಿಸಿದೆ.ಅಲ್ಲೇ ಇದ್ದ ಕೆಲ ಭಕ್ತರಿಗೆ ಹತ್ತಿದ್ದು, ಅದರಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಓರ್ವ ಮಗುವಿಗೆ ಬೆಂಕಿ …
Read More »ಸಿದ್ದೇಶ್ವರ ಸ್ವಾಮೀಜಿ ಇನ್ನಿಲ್ಲ.
ವಿಜಯಪುರ:- ವಯೋಸಹಜ ಹಾಗೂ ಅನಾರೋಗ್ಯದ ಹಿನ್ನೆಲೆಯಲ್ಲಿ ಇಂದು ನಡೆದಾಡುವ ದೇವರು ಸಿದ್ದೇಶ್ವರ ಸ್ವಾಮೀಜಿ ಅವರು ಲಿಂಗೈಕ್ಯರಾಗಿದ್ದಾರೆ. ಕಳೆದ ಒಂದು ವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಸಂಜೆ ೬ ಗಂಟೆ ೫ ನಿಮಿಷಕ್ಕೆ ಶ್ರೀಗಳು ವಿಜಯಪುರದ ಜ್ಞಾನ ಯೋಗಾಶ್ರಮದಲ್ಲಿ ವಿಧಿವಶರಾದರು. 82ರ ಇಳಿ ವಯಸ್ಸಿನ ಅವರು ಪ್ರವಚನ, ಬೋದನೆ, ಮಾಡುವ ಮೂಲಕ ದೈವ ಮಾನವ ಎಂದು ಕೀರ್ತಿ ಪಡೆದಿದ್ದರು. ನಾಳೆ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರೆವೆರಿಸಲಾಗುವುದು. ಹಾಗೂ ಅಪಾರ ಜ್ಞಾನಿ, …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





