Breaking News

ಸಾಂಬಾರ್‌ ಕೇಳುವ ನೆಪದಲ್ಲಿ ವೃದ್ಧೆಯ ಮೂಗುಬೊಟ್ಟು ಸಹಿತ ಒಡವೆ ಕಸಿದು ಪರಾರಿ

ಕನಕಪುರ: ಸಾಂಬಾರ್‌ ಕೇಳುವ ನೆಪದಲ್ಲಿ ವೃದ್ಧೆ ಕಿವಿಯೋಲೆ ಮತ್ತು ಮೂಗು ಬೊಟ್ಟು, ಒಂದು ಸರ, ಎರಡು ಉಂಗುರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ. ತಾಲೂಕಿನ ಕೋಡಿಹಳ್ಳಿ ಹೋಬಳಿಯ ಆಲಗಡಕಲು ಗ್ರಾಮದ ಪುಟ್ಟಮ್ಮ ಚಿನ್ನದ ಒಡವೆ ಕಳೆದುಕೊಂಡ ವೃದ್ಧೆ. ಅದೇ ಗ್ರಾಮದ ಕುಮಾರ್‌ಎಂಬ ವ್ಯಕ್ತಿ ಚಿನ್ನದ ಒಡವೆ ಕಿತ್ತುಕೊಂಡು ಪರಾರಿಯಾಗಿದ್ದಾನೆ.ಆರೋಪಿ ಕುಮಾರ್‌ಪ್ರತಿದಿನ ಸಾಂಬಾರ್‌ ಕೊಡು ಎಂದು ಚೊಂಬು ಹಿಡಿದುಕೊಂಡು ಪುಟ್ಟಮ್ಮ ಅವರ ಮನೆ ಬಳಿ ಬರುತ್ತಿದ್ದ. ಜ.14ರಂದು ವೃದ್ಧೆ ಪುಟ್ಟಮ್ಮ ಮನೆಯಲ್ಲಿ ಒಬ್ಬಳೇ ಇದ್ದಾಗ ಮಧ್ಯಾಹ್ನ 1 ಗಂಟೆ ಸಮಯದಲ್ಲಿ ಸಾಂಬಾರ್‌ ಕೊಡು ಅಜ್ಜಿ ಎಂದು ಮನೆಯೊಳಗೆ ಬಂದು ಆಕೆಯ ಕುತ್ತಿಗೆಗೆ ಕೈ ಹಾಕಿ ಹಿಡಿದು ಉಸಿರುಗಟ್ಟಿಸಿ 2 ಕಿವಿಯೋಲೆ, 2 ಮಾಟಿ, ಮೂಗುಬೊಟ್ಟು, ಚಿನ್ನದ ಸರ, 2 ಉಂಗುರ ಕಿತ್ತುಕೊಂಡು ಪರಾರಿಯಾಗಿದ್ದಾನೆ.

Share News

About BigTv News

Check Also

ಹೆಂಡತಿಯನ್ನೇ ಅಟ್ಟಾಡಿಸಿಕೊಂಡು ಆಸಿಡ್ ಎರಚಿ, ಮಚ್ಚಿನಿಂದ ಹಲ್ಲೆ ಮಾಡಿದ ಗಂಡ..!

ಬೆಂಗಳೂರು: ಜೆ.ಪಿ.ನಗರ 3ನೇ ಹಂತದ ನಾರಾಯಣ ಕ್ಲೀನಿಕ್ ಬಳಿ ಪತ್ನಿ ಮಧುಮಿತ ಮೇಲೆ ಪತಿ ವೆಂಕಟೇಶ್ ಆಸಿಡ್ ಎರಚಿ, ಮಚ್ಚಿನಿಂದ …

Leave a Reply

Your email address will not be published. Required fields are marked *