ಬೆಂಗಳೂರು . ಹೊಸಪೇಟೆಯಲ್ಲಿ ದರ್ಶನ್ ಅವರ ಮೇಲೆ ನಡೆದ ಘಟನೆ ಕುರಿತು ಸ್ಯಾಂಡಲ್ ವುಡ್ ಆಕ್ರೋಶ ವ್ಯಕ್ತಪಡಿಸುತ್ತಿದೆ. ಶಿವಣ್ಣ,ಜಗ್ಗೇಶ್ ಸುದೀಪ್ ನಂತಹ ನಟರು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಅಂತ ಒತ್ತಾಯಿಸುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಘಟನೆ ಕುರಿತು ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಕಿಚ್ಚ ಸುದೀಪ್ ಸಹ ಟ್ವೀಟ್ ಮಾಡುವ ಮುಖಾಂತರ ದರ್ಶನ್ ಪರ ನಿಂತಿದ್ದಾರೆ. ಕಿಚ್ಚ ಸುದೀಪ್ ಈ ರೀತಿ ಟ್ವೀಟ್ ಮಾಡಿದ್ದಾರೆ.
ನಮ್ಮ ನೆಲ, ಭಾಷೆ ಮತ್ತು ಸಂಸ್ಕೃತಿ ಎಲ್ಲವೂ ಪ್ರೀತಿ ಮತ್ತು ಗೌರವದಿಂದ ಕೂಡಿದೆ. ಪ್ರತಿಯೊಂದು ಸಮಸ್ಯೆಯೂ ಒಂದು ಪರಿಹಾರವನ್ನು ಹೊಂದಿದೆ ಮತ್ತು ಪ್ರತಿ ಪರಿಹಾರವನ್ನು ಕಂಡುಕೊಳ್ಳಲು ಹಲವಾರು ವಿಧಾನಗಳಿವೆ. ಪ್ರತಿಯೊಬ್ಬ ವ್ಯಕ್ತಿಯೂ ಘನತೆಯಿಂದ ವರ್ತಿಸಲು ಅರ್ಹರಾಗಿದ್ದಾರೆ ಮತ್ತು ಯಾವುದೇ ಸಮಸ್ಯೆಯನ್ನು ಶಾಂತ ರೀತಿಯಲ್ಲಿ ಪರಿಹರಿಸಬಹುದು.
ನಾನು ನೋಡಿದ ವೀಡಿಯೋ ತುಂಬಾ ಆಘಾತಕಾರಿಯಾಗಿತ್ತು. ಈ ಘಟನೆ ವೇಳೆ ಸಿನಿಮಾದ ನಾಯಕಿ ಹಾಗೂ ಚಿತ್ರ ತಂಡದವರು ಅಲ್ಲಿದ್ದರು. ಈ ರೀತಿ ಸಾರ್ವಜನಿಕವಾಗಿ ಅವಮಾನಿಸುವಂತಹ ಪ್ರತಿಕ್ರಿಯೆಗಳಿಂದ ನಾವು ಕನ್ನಡಿಗರೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ದರ್ಶನ್ ಹಾಗೂ ಪುನೀತ್ ಅಭಿಮಾನಿಗಳ ನಡುವೆ ಉತ್ತಮ ಭಾಂದವ್ಯ ಇಲ್ಲದಿರುವುದನ್ನು ಒಪ್ಪುತ್ತೇನೆ. ಆದರೆ ಇದು ಪುನೀತ್ ಅವರೇ ಮೆಚ್ಚಿ ಬೆಂಬಲಿಸುವ ಘಟನೆಯೇ? ಇದಕ್ಕೆ ಉತ್ತರ ಬಹುಶಃ ಅವರ ಪ್ರತಿಯೊಬ್ಬ ಪ್ರೀತಿಯ ಅಭಿಮಾನಿಗಳಿಗೆ ತಿಳಿದಿರುವ ವಿಷಯ ಎಂದು ಕಿಚ್ಚ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

