Breaking News

BigTv News

ಡಿ. 23ರಂದು ಏಕವ್ಯಕ್ತಿ ಹಾಸ್ಯ ರಂಗ ಪ್ರಯೋಗ ರಾಶಿಚಕ್ರ ಪ್ರದರ್ಶನ

ಧಾರವಾಡ: ನಗರದ ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಮತ್ತು ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ ಲೋಕಲ್ ಸೆಂಟರ ಧಾರವಾಡ ಇವರ ಸಹಕಾರದೊಂದಿಗೆ ಇದೇ ದಿ.23 ಸಂಜೆ 6.15 ಕ್ಕೆ ಧಾರವಾಡದ ಸೃಜನಾ ರಂಗಮಂದಿರದಲ್ಲಿ ಹಾಸ್ಯ ರಂಗ ಕಲಾವಿದ ಯಶವಂತ ಸರದೇಶಪಾಂಡೆ ಅವರ ಏಕವ್ಯಕ್ತಿ ಹಾಸ್ಯ ರಂಗ ಪ್ರಯೋಗ ರಾಶಿಚಕ್ರ ಪ್ರದರ್ಶನಗೊಳ್ಳಲಿದೆ ಮತ್ತು ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಯಶವಂತ ಸರದೇಶಪಾಂಡೆ ಅವರಿಗೆ …

Read More »

ಸುವರ್ಣಸೌಧದಲ್ಲಿ ಚಳಿಗಾಲ ಅಧಿವೇಶನ ಪ್ರತಿಭಟನೆ : ಗಾಳಿ ರಭಸಕ್ಕೆ ಶಾಮಿಯಾನ ಬಿದ್ದು ಅವಘಡ

ಬೆಳಗಾವಿ:  ಸುವರ್ಣಸೌಧದಲ್ಲಿ ಚಳಿಗಾಲ ಅಧಿವೇಶನ ಆರಂಭಗೊಂಡಿದೆ. ಈ ನಡುವೆಯೇ ಹೊರಗಡೆ ಹಲವು ಹೋರಾಟಗಳ ಸರಣಿಯೇ ಆರಂಭಗೊಂಡಿದೆ. ಈ ರೀತಿ ಪ್ರತಿಭಟನೆ ಮಾಡುವವರಿಗಾಗಿಯೇ ಒಂದು ಶಾಮಿಯಾನ ಹಾಕಲಾಗಿತ್ತು. ಆದರೆ ಅದು ಗಾಳಿ ರಭಸಕ್ಕೆ ಕುಸಿದು ಬಿದ್ದು ಅವಾಂತರವೇ ಸಂಭವಿಸಿದೆ. ಆದರೆ ಯಾವುದೇ ಅಪಾಯ ಸಂಭವಿಸಿಲ್ಲ.ಕೊಂಡಸಕೊಪ್ಪ ಎಂಬಲ್ಲಿ ಪ್ರತಿಭಟನೆಗಾಗಿ ಶಾಮಿಯಾನ ಹಾಕಲಾಗಿದ್ದು, ಅಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಗ್ರಾಮ ಪಂಚಾಯತ್‌ ನೌಕರರ ಸಂಘದಿಂದ ಪ್ರತಿಭಟನೆ ನಡೆಯುತ್ತಿತ್ತು

Read More »

ಕಾಂಗ್ರೆಸ್ ಪಕ್ಷಕ್ಕೆ ಮತ್ತೊಬ್ಬ ಶಾಸಕಿ ಗುಡ್ ಬೈ

ಸವಾಲಾಗಿ ಕಾಡ್ತಿದೆ. ಮುಂದಿನ ವರ್ಷ ಮೇಘಾಲಯದಲ್ಲಿ ಚುನಾವಣೆ ಇರುವಾಗ್ಲೇ ಮಾಜಿ ಸಚಿವೆ , ಕಾಂಗ್ರೆಸ್ ನಾಯಕಿ ಡಾ. ಅಂಪಾರೀನ್ ಲಿಂಗ್ಡೋಹ್ ಪಕ್ಷ ತೊರೆದಿದ್ದಾರೆ. ಮತ್ತೊಬ್ಬ ಶಾಸಕರೊಂದಿಗೆ, ಲಿಂಗ್ಡೋಹ್ ಆಡಳಿತಾರೂಢ ಎನ್‌ಪಿಪಿ (ನ್ಯಾಷನಲ್ ಪೀಪಲ್ಸ್ ಪಾರ್ಟಿ)ಗೆ ಸೇರಲು ಸಿದ್ಧರಾಗಿದ್ದಾರೆ. ಎನ್‌ಪಿಪಿ ಬಿಜೆಪಿಯ ಮಿತ್ರಪಕ್ಷವಾಗಿದೆ. ತಮ್ಮ ರಾಜೀನಾಮೆ ಪತ್ರವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಅವರು ಪತ್ರದ ಪ್ರತಿಯನ್ನು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ …

Read More »

ಲೋಕಾಯುಕ್ತಕ್ಕೆ ಒಂದೇ ದಿನದಲ್ಲಿ 15 ಡಿವೈಎಸ್​ಪಿಗಳನ್ನು ನೇಮಕ

ಬೆಂಗಳೂರು: ಇತ್ತೀಚೆಗಷ್ಟೇ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ರದ್ದಾದ ಬೆನ್ನಲ್ಲೇ ಎಸಿಬಿಗೆ ಮಂಜೂರಾಗಿದ್ದ ಅಧಿಕಾರಿ/ಸಿಬ್ಬಂದಿ ಹುದ್ದೆಗಳನ್ನು ಬಳಸಿಕೊಂಡು ಹೊಸದಾಗಿ 9 ಉಪ ವಿಭಾಗ ಮತ್ತು 4 ಸಂಚಾರ ಠಾಣೆಗಳನ್ನು ಸೃಜಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಆ ಪೈಕಿ ಎಸಿಬಿ ಮಂಜೂರಾಗಿದ್ದ 10 ಎಸ್‌ಪಿ, 35 ಡಿವೈಎಸ್​ಪಿ, 76 ಇನ್‌ಸ್ಪೆಕ್ಟರ್ ಸೇರಿದಂತೆ 445 ಹುದ್ದೆಗಳ ಪೈಕಿ ಲೋಕಾಯುಕ್ತ ಸಂಸ್ಥೆಗೆ 224 ಹುದ್ದೆಗಳನ್ನು ವರ್ಗಾಯಿಸಿ, ಉಳಿದ 221 ಹುದ್ದೆಗಳನ್ನು ಪೊಲೀಸ್ ಇಲಾಖೆ ತನ್ನ ವಶದಲ್ಲಿ …

Read More »

ಫಿಫಾ ವಿಶ್ವಕಪ್​ ಫೈನಲ್​ ವಿಜಯೋತ್ಸವ : ಪೊಲೀಸರ ಮೇಲೆ ಹಲ್ಲೆ

ಕೊಚ್ಚಿ, ಕೇರಳ: ನಿನ್ನೆ ನಡೆದ ಫಿಫಾ ವಿಶ್ವಕಪ್​ ಫೈನಲ್​ ಪಂದ್ಯ ರೋಚಕತೆಯಿಂದ ಕೂಡಿತ್ತು. ಈ ವೇಳೆ ಫ್ರಾನ್ಸ್​ ತಂಡವನ್ನು ಸೋಲಿಸಿ ಅರ್ಜೆಂಟೀನಾ ತಂಡ ಗೆಲುವು ಸಾಧಿಸಿತ್ತು. ಇದರ ವಿಜಯೋತ್ಸವವನ್ನು ಯುವಕರು ನಗರದಲ್ಲಿ ಸಂಭ್ರಮಿಸುತ್ತಿದ್ದರು. ಆದ್ರೆ ಈ ವೇಳೆ ಕೆಲ ಯುವಕರ ಗುಂಪು, ಪೊಲೀಸರ ಮೇಲೆ ಹಲ್ಲೆ ಮಾಡಿ ಅಟ್ಟಹಾಸ ಮೆರೆದಿದ್ದಾರೆ. ಹೌದು, ಇಲ್ಲಿನ ಯುವಕರ ಗುಂಪೊಂದು ಕಾಲೂರು ಮೆಟ್ರೋ ನಿಲ್ದಾಣದ ಬಳಿ ಸಿವಿಲ್ ಪೊಲೀಸ್ ಅಧಿಕಾರಿ ಮತ್ತು ಕಾನ್ಸ್​ಟೇಬಲ್​ನನ್ನು ಹಿಡಿದು …

Read More »

ಇಒ ಧರ್ಮರೆಡ್ಡಿ ಪುತ್ರ ಚಂದ್ರಮೌಳಿ ರೆಡ್ಡಿ ಆರೋಗ್ಯ ಸ್ಥಿತಿ
ಗಂಭೀರ

ಚೆನ್ನೈ(ತಮಿಳುನಾಡು) : ಸೋಮವಾರ ಹೃದಯಾಘಾತದಿಂದ ತಿರುಮಲ ತಿರುಪತಿ ದೇವಸ್ಥಾನದ ಇಒ ಧರ್ಮರೆಡ್ಡಿ ಅವರ ಪುತ್ರ ಚಂದ್ರಮೌಳಿ ರೆಡ್ಡಿ ಅವರ ಆರೋಗ್ಯ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ಚೆನ್ನೈನ ಕಾವೇರಿ ಆಸ್ಪತ್ರೆಯ ಸಹ ಸಂಸ್ಥಾಪಕ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಅರವಿಂದನ್ ಸೆಲ್ವರಾಜ್ ಹೇಳಿದ್ದಾರೆ. ಹಠಾತ್ ಹೃದಯ ಸ್ತಂಭನದಿಂದ ಚೆನ್ನೈನ ಕಾವೇರಿ ಆಸ್ಪತ್ರೆಗೆ ಡಿ.18 ರಂದು ಚಂದ್ರಮೌಳಿ ರೆಡ್ಡಿ ಅವರನ್ನು ಕರೆತರಲಾಯಿಗಿತ್ತು. ತಕ್ಷಣವೇ ಅವರಿಗೆ ಕಾರ್ಡಿಯೋ ಪಲ್ಮನರಿ ರೆಸಸಿಟೇಶನ್ (CPR) ಮಾಡಲಾಯಿತು ಮತ್ತು …

Read More »

ಡಿಕೆಶಿ ಮಾಲೀಕತ್ವದ ಶಿಕ್ಷಣ ಸಂಸ್ಥೆಗಳ ಮೇಲೆ ಸಿಬಿಐ ದಾಳಿ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮಾಲೀಕತ್ವದ ಶಿಕ್ಷಣ ಸಂಸ್ಥೆಗಳ ಮೇಲೆ ಸಿಬಿಐ ದಾಳಿ ನಡೆಸಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ನ್ಯಾಶನಲ್‌ ಎಜುಕೇಶನ್‌ ಫೌಂಡೇಶನ್‌ ಮೇಲೆ ದಾಳಿ ನಡೆದಿದೆ ಅಂತ ತಿಳಿದು ಬಂದಿದೆ. ಸದ್ಯ ಡಿಕೆ ಶಿವಕುಮಾರ್‌ ಅವರು ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಭಾಗಹಿಸಿದ್ದಾರೆ. ಅಧಿಕಾರಿಗಳು ಪ್ರಮುಖ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ ಎನ್ನುವುದು ತಿಳಿದು ಬಂದಿದೆ. ಈ ಹಿಂದೆ ಕೂಡ ಡಿ ಕೆ ಶಿವಕುಮಾರ್‌ ಅವರ ಮನೆ ಮೇಲೆ …

Read More »

ಸರಕಾರಿ ಬಸ್ ಡಿಕ್ಕಿ  : 3 ವಿದ್ಯಾರ್ಥಿಗಳು ಸಾವು

ಬಳ್ಳಾರಿ : ಕಷ್ಟಗಳ ನಡುವೆ ಓದಿ ಮುಂದೆ ಬರಬೇಕು ಎಂದು ಆಸೆ ಹೊತ್ತಿದ್ದ ಮೂವರು ಹಾಸ್ಟೇಲ್ ವಿದ್ಯಾರ್ಥಿಗಳು ಸರಕಾರಿ ಬಸ್ ಡಿಕ್ಕಿ  ಹೊಡೆದು ಮೃತಪಟ್ಟ ಘಟನೆ ಬಳ್ಳಾರಿಯಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ. ಎಮ್ಮಿಗನೂರಿನ ಕನಕರಾಜು(19), ಮುರುಡಿ ಗ್ರಾಮದ ಶಂಕರ(18), ಸಂಡೂರು ತಾಲೂಕಿನ ನಾಗೇನಹಳ್ಳಿಯ ಹೊನ್ನೂರ(22) ಮೃತಪಟ್ಟ ವಿದ್ಯಾರ್ಥಿಗಳು.ಹಾಸ್ಟೇಲ್ ನಲ್ಲಿ ಓದುತ್ತಿದ್ದ ಎಸ್ಟಿ/ಎಸ್ಟಿ ವಿದ್ಯಾರ್ಥಿಗಳು ಮನೆಯಲ್ಲಿ ಕಷ್ಟ ಎಂಬ ಕಾರಣಕ್ಕೆ ಪಾರ್ಟ್ ಟೈಂ ಕೆಲಸ ಮಾಡಿಕೊಂಡು ವಿದ್ಯಾಭ್ಯಾಸ ಮುಂದುವರಿಸಿದ್ದರು. ಕ್ಯಾಟರಿಂಗ್ ಕೆಲಸ …

Read More »

ಮಹಾರಾಷ್ಟ್ರದಿಂದ ಬೆಳಗಾವಿಗೆ ಬರುತ್ತಿದ್ದ ಕಾರ್ಯಕರ್ತರನ್ನು ತಡೆದ ಖಾಕಿಪಡೆ

ಬೆಳಗಾವಿ: ಮಹಾರಾಷ್ಟ್ರದಿಂದ ನಗರಕ್ಕೆ ಬರುತ್ತಿದ್ದ ವಿವಿಧ ಪಕ್ಷಗಳ ಕಾರ್ಯಕರ್ತರನ್ನು ನಿಪ್ಪಾಣಿ ತಾಲ್ಲೂಕಿನ ಕೊಗನೊಳ್ಳಿ ಚೆಕ್ ಪೋಸ್ಟ್ ಬಳಿ ಜಿಲ್ಲಾ ಪೊಲೀಸರು  ತಡೆದಿದ್ದಾರೆ. ವಿಧಾನಮಂಡಲ ಚಳಿಗಾಲದ ಅಧಿವೇಶನಕ್ಕೆ ಪರ್ಯಾಯವಾಗಿ ಬೆಳಗಾವಿಯಲ್ಲಿ ಎಂಇಎಸ್ ಆಯೋಜಿಸಲು ಮುಂದಾಗಿದ್ದ ಮಹಾಮೇಳಾವದಲ್ಲಿ ಭಾಗವಹಿಸಲು ಕಾರ್ಯಕರ್ತರು ಬರುತ್ತಿದ್ದರು. ಆದರೆ, ಜಿಲ್ಲಾಡಳಿತ ಮಹಾಮೇಳಾವ್ ನಡೆಸಲು ಅನುಮತಿ ನಿರಾಕರಿಸಿದೆ. ಪೊಲೀಸರ ಎಚ್ಚರಿಕೆ ಹಿನ್ನೆಲೆಯಲ್ಲಿ ಎಂಇಎಸ್ ಕಾರ್ಯಕರ್ತರು ತಾವೇ ವೇದಿಕೆ ತೆರವುಗೊಳಿಸಿದ್ದಾರೆ‌.ಜಿಲ್ಲೆಯ ಗಡಿಯಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.

Read More »

17 ಮಂದಿ ಡಿವೈಎಸ್ಪಿ ವರ್ಗಾವಣೆ ಗೊಳಿಸುವಂತೆ ಗೃಹ ಇಲಾಖೆ ಆದೇಶ

ಬೆಂಗಳೂರು: ರಾಜ್ಯ ಪೊಲೀಸ್‌ ಇಲಾಖೆಯಲ್ಲಿ ಅಧಿಕಾರಿಗಳ ವರ್ಗಾವಣೆ ಮುಂದುವರಿದಿದ್ದು,  17 ಮಂದಿ ಡಿವೈಎಸ್ಪಿ (ಸಿವಿಎಲ್‌) ಗಳನ್ನು ವರ್ಗಾವಣೆ ಗೊಳಿಸಿ ಗೃಹ ಇಲಾಖೆ ಆದೇಶಿಸಿದೆ. ವಿಶೇಷವೆಂದರೆ 17 ಮಂದಿ ಪೈಕಿ ಇಬ್ಬರನ್ನು ಹೊರತುಪಡಿಸಿ 15 ಮಂದಿಯನ್ನು ಕರ್ನಾಟಕ ಲೋಕಾ ಯುಕ್ತಕ್ಕೆ ವರ್ಗಾವಣೆ ಮಾಡಲಾಗಿದೆ. ಎ.ಆರ್‌.ಭರತ್‌ ರೆಡ್ಡಿ, ಬಿ. ಉಮಾಶಂಕರ್‌, ಮಂಜುನಾಥ ಕೆ.ಗಂಗಲ್‌, ಎಂ.ಎಸ್‌.ಸುರೇಶ್‌ ರೆಡ್ಡಿ, ವಿಜಯ್‌ ಬಿರಾದಾರ್‌, ಸಿ.ಎಸ್‌.ಮಲ್ಲಿಕಾರ್ಜುನ, ಹನುಮಂತರಾಯ ಶ್ರೀಮಂತರಾಯ, ಕೆ.ಟಿ.ಮಾಥು ಥಾಮಸ್‌, ಉಮೇಶ್‌ ಈಶ್ವರ ನಾಯಕ್‌, ಕೆ.ಸಿ.ಪ್ರಕಾಶ್‌, ಎಚ್‌.ಟಿ. …

Read More »