Breaking News

17 ಮಂದಿ ಡಿವೈಎಸ್ಪಿ ವರ್ಗಾವಣೆ ಗೊಳಿಸುವಂತೆ ಗೃಹ ಇಲಾಖೆ ಆದೇಶ


ಬೆಂಗಳೂರು: ರಾಜ್ಯ ಪೊಲೀಸ್‌ ಇಲಾಖೆಯಲ್ಲಿ ಅಧಿಕಾರಿಗಳ ವರ್ಗಾವಣೆ ಮುಂದುವರಿದಿದ್ದು,  17 ಮಂದಿ ಡಿವೈಎಸ್ಪಿ (ಸಿವಿಎಲ್‌) ಗಳನ್ನು ವರ್ಗಾವಣೆ ಗೊಳಿಸಿ ಗೃಹ ಇಲಾಖೆ ಆದೇಶಿಸಿದೆ.

ವಿಶೇಷವೆಂದರೆ 17 ಮಂದಿ ಪೈಕಿ ಇಬ್ಬರನ್ನು ಹೊರತುಪಡಿಸಿ 15 ಮಂದಿಯನ್ನು ಕರ್ನಾಟಕ ಲೋಕಾ ಯುಕ್ತಕ್ಕೆ ವರ್ಗಾವಣೆ ಮಾಡಲಾಗಿದೆ. ಎ.ಆರ್‌.ಭರತ್‌ ರೆಡ್ಡಿ, ಬಿ. ಉಮಾಶಂಕರ್‌, ಮಂಜುನಾಥ ಕೆ.ಗಂಗಲ್‌, ಎಂ.ಎಸ್‌.ಸುರೇಶ್‌ ರೆಡ್ಡಿ, ವಿಜಯ್‌ ಬಿರಾದಾರ್‌, ಸಿ.ಎಸ್‌.ಮಲ್ಲಿಕಾರ್ಜುನ, ಹನುಮಂತರಾಯ ಶ್ರೀಮಂತರಾಯ, ಕೆ.ಟಿ.ಮಾಥು ಥಾಮಸ್‌, ಉಮೇಶ್‌ ಈಶ್ವರ ನಾಯಕ್‌, ಕೆ.ಸಿ.ಪ್ರಕಾಶ್‌, ಎಚ್‌.ಟಿ. ಸುನಿಲ್‌ ಕುಮಾರ್‌, ವಿ.ಸೂರ್ಯ ನಾರಾಯಣ ರಾವ್‌, ಬಿ.ಗಿರೀಶ್‌, ಪಿ.ವೀರೇಂದ್ರ ಕುಮಾರ್‌, ಎಸ್‌.ಸುಧೀರ್‌ ಅವರನ್ನು ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾಯಿಸಲಾಗಿದೆ.

ಇನ್ನುಳಿದ ಮಲ್ಲೇಶ್‌ ದೊಡ್ಡ ಮನಿ(ದಾವಣಗೆರೆ ನಗರ ಉಪ ವಿಭಾಗ) ಬಿ.ಎಸ್‌.ಅಬ್ದುಲ್‌ ಖಾದರ್‌(ನಗರ ಸಂಚಾರ ಮತ್ತು ರಸ್ತೆ ಸುರಕ್ಷ ಕೋಶ, ಬೆಂಗಳೂರು) ಇಲ್ಲಿಗೆ ವರ್ಗಾವಣೆ ಮಾಡಿ ಆದೇಶಿಸಲಾಗಿದೆ.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *