Breaking News

ಡಿ. 23ರಂದು ಏಕವ್ಯಕ್ತಿ ಹಾಸ್ಯ ರಂಗ ಪ್ರಯೋಗ ರಾಶಿಚಕ್ರ ಪ್ರದರ್ಶನ

ಧಾರವಾಡ: ನಗರದ ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಮತ್ತು ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ ಲೋಕಲ್ ಸೆಂಟರ ಧಾರವಾಡ ಇವರ ಸಹಕಾರದೊಂದಿಗೆ ಇದೇ ದಿ.23 ಸಂಜೆ 6.15 ಕ್ಕೆ ಧಾರವಾಡದ ಸೃಜನಾ ರಂಗಮಂದಿರದಲ್ಲಿ ಹಾಸ್ಯ ರಂಗ ಕಲಾವಿದ ಯಶವಂತ ಸರದೇಶಪಾಂಡೆ ಅವರ ಏಕವ್ಯಕ್ತಿ ಹಾಸ್ಯ ರಂಗ ಪ್ರಯೋಗ ರಾಶಿಚಕ್ರ ಪ್ರದರ್ಶನಗೊಳ್ಳಲಿದೆ ಮತ್ತು ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಯಶವಂತ ಸರದೇಶಪಾಂಡೆ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದಕ್ಕಾಗಿ ನಮ್ಮ ತಂಡದಿಂದ ಅಭಿನಂದನಾ ಸಮಾರಂಭ ಸಹ ಆಯೋಜಿಸಲಾಗಿದೆ ಎಂದು ಸುನೀಲ ಬಾಗೇವಾಡಿ ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಶಿಚಕ್ರದ .ಇಡೀ ರಂಗ ಪ್ರಯೋಗದಲ್ಲಿ ಒಂದೇ ಪಾತ್ರ. ಹೆಚ್ಚಿನ ಆಂಗಿಕ ಅಭಿಯವೇನು ಇಲ್ಲ. ಆದರೂ ಪ್ರೇಕ್ಷಕನಿಗೆ ಸಮಯ ಕಳೆದದ್ದು ಗೊತ್ತಾಗುವುದೇ ಇಲ್ಲ. ಸಾಕಷ್ಟು ಬಾರಿ ನೋಡಿದರೂ ಸಹ ಮತ್ತೆ ಮತ್ತೆ ನೋಡಬೇಕೆನಿಸುವದು ರಾಶಿಚಕ್ರದ ಹೆಗ್ಗಳಿಕೆ. ಕರ್ನಾಟಕದಲ್ಲಷ್ಟೆ ಅಲ್ಲದೇ ದೇಶ-ವಿದೇಶಗಳಲ್ಲೂ ಈ ಏಕವ್ಯಕ್ತಿ ಹಾಸ್ಯ ರಂಗ ಪ್ರಯೋಗ ಜನಪ್ರೀಯವಾಗಿದೆ. ಜೋತಿಷ್ಯ ಶಾಸ್ತ್ರ ದ ಕೆಲವು ಸೂಕ್ಷ್ಮತೆಗಳನ್ನು ಆಯ್ಧು, ಹನ್ನೆರಡು ರಾಶಿಗಳ ಕುರಿತು ರಂಜನೀಯವಾಗಿ ನಟ ಯಶವಂತ ಸರದೇಶಪಾಂಡೆಯವರು ಹೇಳುತ್ತಾರೆ. ರಾಶಿಚಕ್ರ ಎಂದರೆ ಕೇವಲ ಜೋತಿಷ್ಯಕ್ಕೆ ಸಂಬಂಧಿಸಿದ್ದೆಂದು ಭಾವಿಸಬಹುದು. ಆದರೆ ರಾಶಿಚಕ್ರವನ್ನು ನೋಡಿದಾಗ ಈ ಮಾತು ಸುಳ್ಳೆನಿಸುತ್ತದೆ. ಇದೊಂದು ನಗುವಿಗೆ ಸಂಬಂಧಿಸಿದ ವಿಷಯಗಿದೆ. ಹಾಗಾಗಿ ಎಲ್ಲ ವಯೋಮಿತಿಯವರು ನೋಡಬಹುದು ಎಂದರು.

ಮೂಲ ಮರಾಠಿ ಭಾಷೆಯ ಶರದ ಉಪಾದ್ಯರವರ ಈ ರಂಗ ಪ್ರಯೋಗವನ್ನು ವಿವೇಕ ಕಾತರಕಿ ಅವರು ಕನ್ನಡಕ್ಕೆ ತಂದಿದ್ದಾರೆ. ಇದನ್ನು ಯಶಸ್ವಿಯಾಗಿ ರಂಗದ ಮೇಲೆ ನಟ-ನಿರ್ದೆಶಕ ಯಶವಂತ ಸರದೇಶಪಾಂಡೆಯವರು ತರಲಿದ್ದಾರೆ. ಸಂಸಾರ ಸಮೇತ ಈ ರಂಗ ಪ್ರಯೋಗವನ್ನು ನೋಡುವುದೇ ಒಂದು ಹಬ್ಬ ಎಂದರು.

ಅಭಿನಂದನಾ ಸಮಾರಂಭದಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ, ಕಲ್ಲಿದ್ದಲು ಮತ್ತು ಗಣಿ ಸಚಿವರಾದ ಪ್ರಲ್ಹಾದ ಜೋಶಿ ಅಭಿನಂದನೆ ಪ್ರಧಾನ ಮಾಡಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಇಂಧನ ಸಚಿವರಾದ ವ್ಹಿ. ಸುನೀಲ್ ಕುಮಾರ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ . ಮುಖ್ಯ ಅತಿಥಿಗಳಾಗಿ ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕರಾದ ಅರವಿಂದ ಚಂದ್ರಕಾಂತ ಬೆಲ್ಲದ, ಬಿಜೆಪಿ ಪ್ರಧಾನಕಾರ್ಯದರ್ಶಿಗಳು ಮತ್ತು ಸಮಾಜಸೇವಕಾರದ ಮಹೇಶ ಟೆಂಗಿನಕಾಯಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ ಬೆಕ್ಕೇರಿ ಆಗಮಿಸುವರು. ಅಧ್ಯಕ್ಷತೆಯನ್ನು ಕರ್ನಾಟಕ ವಿಧಾನ ಪರಿಷತ್ತಿನ ಶಾಸಕರಾದ ಎಸ್.ವ್ಹಿ.ಸಂಕನೂರು ವಹಿಸಲಿದ್ದಾರೆ ಎಂದರು.

ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಕೆ.ಬಿ.ಗುಡಸಿ, ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಪಿ.ಎಲ್ ಪಾಟೀಲ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಟಿ.ಎಮ್ ಬಾಸ್ಕರ, ಕಲಾ ಸ್ಪಂದನದ ಅಧ್ಯಕ್ಷರು,ಸ್ವರ್ಣಗ್ರುಪ ಆಫ್ ಕಂಪನಿಯ ನಿರ್ದೇಶಕರಾದ ಡಾ.ಚಿ.ಎಸ್.ವ್ಹಿ.ಎಸ್ ಪ್ರಸಾದ, ಇಂಜಿನಿಯರ್ ಸಂಘದ ಅಧ್ಯಕ್ಷರಾದ ಸುನಿಲ ಬಾಗೇವಾಡಿ, ಪ್ರತಿಷ್ಠಾನದ ಕಾರ್ಯದರ್ಶಿ, ಸಾಹಿತಿಗಳಾದ ಮಾರ್ತಾಂಡಪ್ಪ ಕತ್ತಿ ಗೌರವ ಉಪಸ್ಥಿತಿ ಇರುವರುತ್ತಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸುನೀಲ ಬಾಗೇವಾಡಿ, ನಾಗರಾಜ ಪಾಟೀಲ, ಪ್ರೇಮಾನಂದ ಶಿಂಧೆ, ಸುರೇಶ ಬೆಟಗೇರಿ, ಅರುಣ ಶೀಲವಂತ,. ವಿಜೆಂದ್ರ ಗೌಡ ಪಾಟೀಲ್ ಉಪಸ್ಥಿತರಿದ್ದರು..

Share News

About BigTv News

Check Also

ಚಿಕ್ಕಬಳ್ಳಾಪುರ : ಮಾತನಾಡೋಕೆ ಅಂತ ಬಂದು ಹಿರಿಯ ವಕೀಲನ ಕತ್ತು ಸೀಳಿ ಕೊಲೆಗೆ ಯತ್ನ : ಆರೋಪಿ ಎಸ್ಕೇಪ್!

ಚಿಕ್ಕಬಳ್ಳಾಪುರ: ಗೌರಿಬಿದನೂರಿನಲ್ಲಿ ಹಿರಿಯ ವಕೀಲ ಹಾಗೂ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಣ್ಣಕಿ ವೆಂಕಟರಮಣಪ್ಪ ಅವರ ಕತ್ತು ಕೊಯ್ದು ಕೊಲೆಗೆ …

Leave a Reply

Your email address will not be published. Required fields are marked *