ಸಿದ್ದಾಪುರದ ನಿವಾಸಿ ಅಬ್ದುಲ್ ಹುಸೇನ್ ಅವರು ಮಾವನ ಪುತ್ರಿಯನ್ನು ಪ್ರೀತಿಸುತ್ತಿದ್ದರು. ಪುತ್ರಿ ಮದುವೆ ಮಾಡಿಕೊಡುವಂತೆ ಮಾವನ ಬಳಿ ಹುಸೇನ್ ಮನವಿ ಮಾಡಿದ್ದರು. ಅದಕ್ಕೆ ಮಾವ ಒಪ್ಪಿರಲಿಲ್ಲ. ಈ ಮಧ್ಯೆ ಆರು ತಿಂಗಳ ಹಿಂದೆ ಕುಟುಂಬ ಸಮೇತರಾಗಿ ಮಾವ ಅಂದ್ರಹಳ್ಳಿಗೆ ಸ್ಥಳಾಂತರಗೊಂಡಿದ್ದರು. ಗೋದಾಮು ಬಾಡಿಗೆ ಪಡೆದು ಗುಜರಿ ವ್ಯಾಪಾರ ಮಾಡುತ್ತಿದ್ದರು. ಇತ್ತೀಚೆಗೆ ಆ ಗೋದಾಮಿಗೆ ಬೆಂಕಿ ಬಿದ್ದು ನಷ್ಟವಾಗಿತ್ತು. ಅದಾದ ಮೇಲೆ ಯುವಕ, ಮಾವನ ಜತೆಗೆ ಸೇರಿಕೊಂಡು ಗುಜರಿ ವ್ಯಾಪಾರ ಆರಂಭಿಸಿದ್ದರು. ಈ ನಡುವೆ ಪುತ್ರಿಯನ್ನು ಮದುವೆ ಮಾಡಿಕೊಡುವಂತೆ ಯುವಕ ಮತ್ತೊಮ್ಮೆ ಕೇಳಿಕೊಂಡಿದ್ದರು. ಆಗಲೂ ಮಾವ ಒಪ್ಪಿರಲಿಲ್ಲ ಎಂದು ಮೂಲಗಳು ತಿಳಿಸಿವೆ.ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ: ಗೋದಾಮಿನಲ್ಲಿ ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂದು ಪರಿಶೀಲಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

