ಬೀಜಿಂಗ್: ಸತತ 3ನೇ ದಿನವೂ ಚೀನದಲ್ಲಿ ದಾಖಲೆಯ ಕೊರೊನಾ ಪ್ರಕರಣಗಳು ದೃಢಪಟ್ಟಿವೆ. ಶನಿವಾರ 35 ಸಾವಿರ ಮಂದಿಗೆ ಸೋಂಕು ತಗುಲಿದೆ. ಇನ್ನು ದೊಡ್ಡಮಟ್ಟದಲ್ಲಿ ಲಾಕ್ಡೌನ್ನಂಥ ಪ್ರತಿಬಂಧಕ ಕ್ರಮಗಳನ್ನು ಕೈಗೊಂಡಿರುವ ಸರ್ಕಾರದ ವಿರುದ್ಧ ಜನರ ಆಕ್ರೋಶ ತೀವ್ರಗೊಂಡಿದೆ. ಹಲವೆಡೆ ಪ್ರತಿಭಟನೆಗಳು ನಡೆದಿದ್ದು, ಚೀನದಲ್ಲಿ ಅಪರೂಪವೆಂಬಂತೆ ಜನರು ಮತ್ತು ಪೊಲೀಸರ ನಡುವೆ ಘರ್ಷಣೆಯೂ ಏರ್ಪಟ್ಟಿದೆ. ಈ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಪ್ರಸಕ್ತ ತಿಂಗಳು ಚೀನದಲ್ಲಿ 6 ಮಂದಿ ಸೋಂಕಿಗೆ …
Read More »ಕಾರು ಹಳ್ಳಕ್ಕೆ ಬಿದ್ದು ಎ ಎಸ್ ಐ ಪುತ್ರ ಸಾವು
ದಾವಣಗೆರೆ: ಶಾಸಕ ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರಶೇಖರ್ ಸಾವು ಮಾಸುವ ಮುನ್ನವೇ ಅಂಥದ್ದೇ ಮತ್ತೊಂದು ಅಪಘಾತ ಪ್ರಕರಣ ಹೊನ್ನಾಳಿಯಲ್ಲಿ ನಡೆದಿದೆ. ನಿಯಂತ್ರಣ ತಪ್ಪಿ ಕಾರು ಹಳ್ಳಕ್ಕೆ ಬಿದ್ದು ಎ ಎಸ್ ಐ ಪುತ್ರ ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಮಾಸಡಿ ಗ್ರಾಮದಲ್ಲಿ ಸಂಭವಿಸಿದೆ. ಪ್ರಕಾಶ್ ಮೃತ ದುರ್ದೈವಿ. ಪ್ರಕಾಶ್, ಬೆಳಗಾವಿ ಜಿಲ್ಲೆಯ ಮಾಳಮಾರುತಿ ಪೊಲೀಸ್ ಠಾಣೆಯ ಎ ಎಸ್ ಐ ಪುತ್ರ ಎಂದು ತಿಳಿದುಬಂದಿದೆ.
Read More »
ಕುಕ್ಕರ್ ಬಾಂಬ್ ಪ್ರಕರಣ: ಸ್ಫೋಟಕ ಮಾಹಿತಿ ಬಯಲು
ಮಂಗಳೂರು : ಕುಕ್ಕರ್ ಬಾಂಬ್ ಸ್ಫೋಟದ ರೂವಾರಿ ಮಹಮ್ಮದ್ ಶಾರೀಕ್ ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿದ್ದಾನೆ. ಇದೀಗ ಪೊಲೀಸರ ತನಿಖೆಯಲ್ಲಿ ದಿನಕ್ಕೊಂದು ಸ್ಫೋಟಕ ವಿಷಯ ಬಯಲಾಗ್ತಿದೆ. ಮಂಗಳೂರಿಗೆ ಬಾಂಬ್ ಜೊತೆಗೆ ಬಂದಿದ್ದು ಕೇವಲ ಶಾರೀಕ್ ಮಾತ್ರ ಅಲ್ಲ. ಮತ್ತೊಬ್ಬ ವ್ಯಕ್ತಿ ಇದ್ದ ಅನ್ನುವ ಆತಂಕಕಾರಿ ಮಾಹಿತಿಯೂ ಬಯಲಾಗಿದೆ. ನವೆಂಬರ್ 19ರಂದು ಮಂಗಳೂರಿನ ನಾಗುರಿಯಲ್ಲಿ ನಡೆದ ಆಟೋ ಬಾಂಬ್ ಬ್ಲಾಸ್ಟ್ ಗೂ ಮುನ್ನ ಮೈಸೂರಿನಿಂದ ಮಂಗಳೂರಿಗೆ ಬಂದಿದ್ದ ಶಾರೀಕ್ ಜೊತೆಗೆ ಇನ್ನಿಬ್ಬರು ಇದ್ದರು …
Read More »ಇನ್ನೆರಡು ದಿನ ಭಾರೀ ಮಳೆ ಸಾಧ್ಯತೆ
ಬೆಂಗಳೂರು : ಕರ್ನಾಟಕದಲ್ಲಿ ಇನ್ನೆರಡು ದಿನ ಭಾರೀ ಮಳೆ ಮುಂದುವರೆಯುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ 2 ದಿನಗಳಿಂದ ತುಂತುರು ಮಳೆಯಾಗುತ್ತಿದ್ದು, ನವೆಂಬರ್ 28ರವರೆಗೆ ಮಳೆ ಮುಂದುವರೆಯಲಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು, ಕೊಡಗು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ಹಲವೆಡೆ ಮಳೆ ಹೆಚ್ಚಾಗಲಿದೆ. ಇಂದು (ಭಾನುವಾರ) ಕರ್ನಾಟಕದ 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಇನ್ನೆರಡು ದಿನ ಹಗುರದಿಂದ …
Read More »ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ: ಹುಬ್ಬಳ್ಳಿಯಲ್ಲಿ ವಾಹನ ತಪಾಸಣೆ
ಹುಬ್ಬಳ್ಳಿ : ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಿಂದ ಎಚ್ಚೆತ್ತ ಹುಬ್ಬಳ್ಳಿ ಪೊಲೀಸರು ಹೊರ ರಾಜ್ಯದ ಪಾಸಿಂಗ್ ಇರೋ ವಾಹನಗಳನ್ನ ತಪಾಸಣೆ ಮಾಡ್ತಿದ್ದಾರೆ. ಹೊರ ರಾಜ್ಯದ ಪಾಸಿಂಗ್ ಹೊಂದಿರೋ ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ. ಹುಬ್ಬಳ್ಳಿ ಪ್ರಮುಖ ವೃತ್ತಗಳಲ್ಲಿ ಪೊಲೀಸರಿಂದ ವಾಹನ ತಪಾಸಣೆ ಕಾರ್ಯ ನಡೆದಿದೆ. ಆಟೋಗಳನ್ನು ತಪಾಸಣೆ ಮಾಡ್ತಿರೋ ಪೊಲೀಸರು. ಆಟೋದಲ್ಲಿ ಅನುಮಾನಸ್ಪದ ವಸ್ತುಗಳು ಕಂಡು ಬಂದ್ರೆ ತಪಾಸಣೆ ಮಾಡ್ತಿರೋ ಪೊಲೀಸರು ಮಾಡುತ್ತಿದ್ದಾರೆ.
Read More »ಭಾರತ್ ಜೋಡೋ ಯಾತ್ರೆಯಲ್ಲಿ ಬರಿಗಾಲಲ್ಲಿ ನಡೆದ ಗ್ರಾಪಂ ಸದಸ್ಯ
.. ಹುಬ್ಬಳ್ಳಿ : ಭಾರತ್ ಜೋಡೋ ಯಾತ್ರೆಯಲ್ಲಿ ಚಪ್ಪಲಿ ಹಾಕದೆ 554 ಕಿಮೀ ಪಾದಯಾತ್ರೆ ಮಾಡಿ ಗ್ರಾಮ ಪಂಚಾಯಿತು ಸದಸ್ಯರೊಬ್ಬರು ಸಾಧನೆ ಮಾಡಿದ್ದಾರೆ. ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಸಂಶಿ ಗ್ರಾಮದ ಹನಮಂತಪ್ಪ ಲಕ್ಷ್ಮೇಶ್ವರ ಎಂಬುವವರೇ ಸಾಧನೆ ಮಾಡಿದವರು. ಇವರು ಭಾರತ ಜೋಡೋ ಯಾತ್ರೆಯಲ್ಲಿ ಚಪ್ಪಲಿ ಧರಿಸದೆ ಗುಂಡ್ಲುಪೇಟೆಯಿಂದ ಆಂಧ್ರಪ್ರದೇಶ, ತೆಲಂಗಾಣದವರೆಗೂ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಸುಮಾರು 554 ಕಿಮೀ ಚಪ್ಪಲಿ ಧರಿಸದೆ ಭಾರತ್ ಜೋಡೋ ಯಾತ್ರೆಯಲ್ಲಿ ಗಮನ ಸೆಳೆದಿದ್ದಾರೆ. ಈ …
Read More »ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಬಾಲಕಿ ಗರ್ಭವತಿ: ಪೋಕ್ಸೋ ಕೇಸ್ ದಾಖಲು
ಹುಬ್ಬಳ್ಳಿ : 14 ವರ್ಷದ ಬಾಲಕಿ ಜೊತೆ ದೈಹಿಕ ಸಂಪರ್ಕ ನಡೆಸಿ , ಅವಳು ಗರ್ಭಧರಿಸಲು ಕಾರಣನಾದ 20 ವರ್ಷದ ಯುವಕನ ವಿರುದ್ಧ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ . ಕಳೆದ ಹದಿನೈದು ದಿನಗಳಿಂದ ಬಾಲಕಿ ವಾಂತಿ ಮಾಡಿಕೊಳ್ಳುತ್ತಿದ್ದು , ಬಾಲಕಿಯ ತಾಯಿ ಚಿಕಿತ್ಸೆಗೆಂದು ಕಿಮ್ಸ್ಗೆ ಕರೆದುಕೊಂಡು ಹೋಗಿದ್ದರು . ಬಾಲಕಿಯನ್ನು ತಪಾಸಣೆ ಮಾಡಿದಾಗ ಗರ್ಭಿಣಿ ಎಂಬುದು ಗೊತ್ತಾಗಿದೆ. ಈ ಬಗ್ಗೆ ವಿಚಾರಣೆ ನಡೆಸಿದಾಗ ತನ್ನ ಅಣ್ಣನ ಮಗನೇ ಆಗಾಗ …
Read More »ಧಾರವಾಡದಲ್ಲಿ ಯುವಕನ ಮೇಲೆ ಹಾಡಹಗಲೇ ಮೂವರಿಂದ ಹಲ್ಲೆ
ಧಾರವಾಡ: ಮೂವರು ಯುವಕರು ಸೇರಿಕೊಂಡು ಮತ್ತೊಬ್ಬ ಯುವಕ ಮೇಲೆ ಹಲ್ಲೆ ನಡೆಸಿರುವ ಘಟನೆ ಧಾರವಾಡದ ಬಾಸೆಲ್ ಮಿಶನ್ ಹೆಬ್ರಿಕ್ ಮೆಮೋರಿಯಲ್ ಚರ್ಚ್ ಬಳಿ ಹಾಡಹಗಲೇ ನಡೆದಿದೆ. ಈ ಹಲ್ಲೆಗೆ ಕಾರಣ ಏನು ಎಂಬುದು ಗೊತ್ತಾಗಿಲ್ಲ. ಆದರೆ ಮೂವರು ಯುವಕರು ಸೇರಿಕೊಂಡು ಓರ್ವ ಯುವಕನನ್ನು ಮನಬಂದಂತೆ ಥಳಿಸಿದ್ದಾರೆ. ಆತ ಕೆಳಗಡೆ ಬಿದ್ದರೂ ಬಿಡದ ಆ ಮೂರೂ ಜನ ಯುವಕರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಇದನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ. …
Read More »ಅನಾರೋಗ್ಯದಿಂದ ಬೇಸತ್ತು ಹೆಡ್ಕಾನ್ಸ್ಟೇಬಲ್ ಆತ್ಮಹತ್ಯೆಗೆ ಶರಣು
ಗದಗ: ಅನಾರೋಗ್ಯದಿಂದ ಬೇಸತ್ತು ಹೆಡ್ಕಾನ್ಸ್ಟೇಬಲ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗನ ತೇಜಾ ನಗರದಲ್ಲಿ ನಡೆದಿದೆ. ಅನಿಲ್ ಸಜ್ಜನರ್(48) ಮೃತ ಹೆಡ್ಕಾನ್ಸ್ಟೇಬಲ್. ಅನಿಲ್ ಸಜ್ಜನರ್ ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ ಹೆಡ್ಕಾನ್ಸ್ಟೇಬಲ್ ಆಗಿದ್ದರು. ಅನಿಲ್ ಸಜ್ಜನರ್ 2 ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಇಂದು (ನ. 25) ಅನಿಲ್ ಸಜ್ಜನರ್ ಎಳನೀರು ತರುವಂತೆ ಪತ್ನಿಯನ್ನು ಹೊರಗೆ ಕಳುಹಿಸಿ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಗದಗ ಗ್ರಾಮೀಣ ಪೊಲೀಸ್ ಠಾಣಾ …
Read More »ಅಂತಾರಾಷ್ಟ್ರೀಯ ಬಾಸ್ಕೆಟ್ಬಾಲ್ ಆಟಗಾರ್ತಿ ಆತ್ಮಹತ್ಯೆಗೆ ಶರಣು
ನವದೆಹಲಿ: ಅಂತಾರಾಷ್ಟ್ರೀಯ ಬಾಸ್ಕೆಟ್ಬಾಲ್ ಆಟಗಾರ್ತಿ, ಮಧ್ಯಪ್ರದೇಶ ಮೂಲದ ಪ್ರಾರ್ಥನಾ ಸಾಳ್ವೆ ಡ್ಯಾಂಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಏಳು ತಿಂಗಳ ಹಿಂದೆ ಇಂದೋರ್ನಲ್ಲಿ ಪಾಗಲ್ ಪ್ರೇಮಿಯೊಬ್ಬ ಕಟ್ಟಡಕ್ಕೆ ಬೆಂಕಿ ಹಚ್ಚಿದ್ದ ದುರಂತದಲ್ಲಿ ಸಾಳ್ವೆ ಸಹೋದರ ದೇವೇಂದ್ರ ಸುಟ್ಟು ಕರಕಲಾಗಿದ್ದರು.ಇದರಿಂದ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಆಕೆ ಕೋಚ್ ರಾಕೇಶ್ ಹೇಳಿದ್ದಾರೆ. ಏಷ್ಯನ್ ಚಾಂಪಿಯನ್ಶಿಪ್ ಸೇರಿ ಹಲವು ಪಂದ್ಯದಲ್ಲಿ ಪ್ರಾರ್ಥನಾ ಭಾರತವನ್ನು ಪ್ರತಿನಿಧಿಸಿದ್ದರು.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





