Breaking News

ಧಾರವಾಡದಲ್ಲಿ ಯುವಕನ ಮೇಲೆ ಹಾಡಹಗಲೇ ಮೂವರಿಂದ ಹಲ್ಲೆ

ಧಾರವಾಡ: ಮೂವರು ಯುವಕರು ಸೇರಿಕೊಂಡು ಮತ್ತೊಬ್ಬ ಯುವಕ ಮೇಲೆ ಹಲ್ಲೆ ನಡೆಸಿರುವ ಘಟನೆ ಧಾರವಾಡದ ಬಾಸೆಲ್ ಮಿಶನ್ ಹೆಬ್ರಿಕ್ ಮೆಮೋರಿಯಲ್ ಚರ್ಚ್ ಬಳಿ ಹಾಡಹಗಲೇ ನಡೆದಿದೆ.

ಈ ಹಲ್ಲೆಗೆ ಕಾರಣ ಏನು ಎಂಬುದು ಗೊತ್ತಾಗಿಲ್ಲ. ಆದರೆ ಮೂವರು ಯುವಕರು ಸೇರಿಕೊಂಡು ಓರ್ವ ಯುವಕನನ್ನು ಮನಬಂದಂತೆ ಥಳಿಸಿದ್ದಾರೆ. ಆತ ಕೆಳಗಡೆ ಬಿದ್ದರೂ ಬಿಡದ ಆ ಮೂರೂ ಜನ ಯುವಕರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ.

ಇದನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಅವರು ಹಲ್ಲೆ ಮಾಡುತ್ತಿದ್ದ ದೃಶ್ಯವನ್ನು ನೋಡುತ್ತ ನಿಂತಿದ್ದವರನ್ನೂ ಬೆದರಿಸಿದ ಆ ಮೂರೂ ಜನ ಯುವಕರು ನಂತರ ಅಲ್ಲಿಂದ ಪರಾರಿಯಾಗಿದ್ದಾರೆ. ಸ್ಥಳಕ್ಕೆ ವಿದ್ಯಾಗಿರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಹಲ್ಲೆ ಮಾಡಿದವರ ಪತ್ತೆಗೆ ಜಾಲ

Share News

About BigTv News

Check Also

68 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ, ಕೆಎಎಸ್ ಅಧಿಕಾರಿ ವಿರುದ್ಧ ಎಫ್‌ಐಆರ್!

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಆರ್‌ಟಿಸಿ ಖಾತೆ ಬದಲಾವಣೆ …

Leave a Reply

Your email address will not be published. Required fields are marked *