Breaking News

ಅನಾರೋಗ್ಯದಿಂದ ಬೇಸತ್ತು ಹೆಡ್​ಕಾನ್ಸ್​ಟೇಬಲ್  ​ಆತ್ಮಹತ್ಯೆಗೆ ಶರಣು


ಗದಗ: ಅನಾರೋಗ್ಯದಿಂದ ಬೇಸತ್ತು ಹೆಡ್​ಕಾನ್ಸ್​ಟೇಬಲ್  ​ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗನ ತೇಜಾ ನಗರದಲ್ಲಿ ನಡೆದಿದೆ.

ಅನಿಲ್ ಸಜ್ಜನರ್(48) ಮೃತ ಹೆಡ್​ಕಾನ್ಸ್​ಟೇಬಲ್​. ಅನಿಲ್​ ಸಜ್ಜನರ್ ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ ಹೆಡ್​ಕಾನ್ಸ್​ಟೇಬಲ್​ ಆಗಿದ್ದರು. ಅನಿಲ್​ ಸಜ್ಜನರ್ 2 ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಇಂದು (ನ. 25) ಅನಿಲ್​ ಸಜ್ಜನರ್ ಎಳನೀರು ತರುವಂತೆ ಪತ್ನಿಯನ್ನು ಹೊರಗೆ ಕಳುಹಿಸಿ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಗದಗ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share News

About BigTv News

Check Also

ಮದುವೆಯಾಗಿ ಮಕ್ಕಳಿದ್ರೂ ಅಕ್ರಮ ಸಂಬಂಧ: ರೈಲಿಗೆ ತಲೆಕೊಟ್ಟು ವಿವಾಹಿತೆಯೊಂದಿಗೆ ಯುವಕ ಆತ್ಮಹತ್ಯೆ

ಮಂಡ್ಯದ ವಿಸಿ ಫಾರಂ ರಸ್ತೆಯ ರೈಲ್ವೆ ಹಳಿಯಲ್ಲಿ ರೈಲಿಗೆ ತಲೆಕೊಟ್ಟು ವಿವಾಹಿತೆ ಸಹನಾ (25) ಮತ್ತು ರಾಹುಲ್ (23) ಆತ್ಮಹತ್ಯೆಗೆ …

Leave a Reply

Your email address will not be published. Required fields are marked *