Breaking News

BigTv News

ಅಯೋಧ್ಯೆಯಲ್ಲಿ 14 ಲಕ್ಷ ದೀಪೋತ್ಸವಕ್ಕೆ ಪ್ರಧಾನಿ ಚಾಲನೆ

ಅಯೋಧ್ಯೆ (ಉತ್ತರ ಪ್ರದೇಶ): ಅಯೋಧ್ಯೆಯಲ್ಲಿ 14 ಲಕ್ಷ ದೀಪೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದರು. ಅಯೋಧ್ಯೆಯ ಹೊಸ ಘಾಟ್, ಸರಯೂ ನದಿಯಲ್ಲಿ ಪ್ರಧಾನಿ ಮೋದಿ ದೀಪ ಹಚ್ಚುವ ಮೂಲಕ ದೀಪೋತ್ಸವವನ್ನು ಉದ್ಘಾಟನೆ ಮಾಡಿದರು. ಅಯೋಧ್ಯೆಯ ಸರಯೂ ನದಿಯ ದಡದದುದ್ದಕ್ಕೂ ಮಣ್ಣಿನ ದೀಪಗಳು ಜಗಮಗಿಸಿದವು. ದೀಪಾವಳಿಯ ಮುನ್ನಾದಿನವೇ ಅಯೋಧ್ಯೆಯ ರಾಮಜನ್ಮಭೂಮಿ ದಿವ್ಯ ಬೆಳಕಿನಲ್ಲಿ ಹೊಳೆಯಿತು.

Read More »

ಮಠದಲ್ಲಿ ಆತ್ಮಹತ್ಯೆಗೆ ಶರಣಾದ ಸ್ವಮೀಜಿ , ಕಾರಣ ನಿಗೂಢ

ರಾಮನಗರ : ಶ್ರೀ ಕಂಚುಗಲ್ ಬಂಡೇ ಮಠದ ಬಸವಲಿಂಗ ಸ್ವಾಮೀಜಿ (45 ವರ್ಷ) ಮಠದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನಲ್ಲಿರುವ ಬಂಡೇಮಠದಲ್ಲಿ ಈ ಘಟನೆ ನಡೆದಿದ್ದು ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.ಘಟನೆ ಕುರಿತು ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಆನಂದ್ ಮಾಮನಿ ಅವರದ್ದು ಸರ್ಕಾರಿ ಗೌರವದ ಮೂಲಕ ಅಂತ್ಯಕ್ರಿಯೆ ಮಾಡಲಾಗುವುದು : ಬಸವರಾಜ್ ಬೊಮ್ಮಾಯಿ

ಹುಬ್ಬಳ್ಳಿ : ಆತ್ಮೀಯ ಸ್ನೇಹಿತ ಆನಂದ್ ಮಾಮನಿ ಅಂತ್ಯಕ್ರಿಯೆಗೆ ಹೋಗ್ತೀದಿನಿ. ಸಚಿವರು ನಾವೆಲ್ಲ ಅಂತ್ಯಕ್ರಿಯೆಯಲ್ಲಿ ಭಾಗೀಯಾಗ್ತೀವಿ. ಸರ್ಕಾರಿ ಗೌರವದ ಮೂಲಕ ಅಂತ್ಯಕ್ರಿಯೆ. ಆನಂದ್ ಮಾಮನಿ ಅತ್ಯಂತ ಕ್ರಿಯಾಶೀಲ ನಾಯಕರಾಗಿದ್ದರು. ಸಣ್ಣ ವಯಸ್ಸಿನಲ್ಲಿ ಅವರು ನಿಧನವಾಗಿದ್ದು ಬಹಳ ದುಃಖದ ಸಂಗತಿ‌ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆನಂದ್ ಮಾಮನಿ ಮೂರು ಬಾರಿ ಶಾಸಕರಾಗಿದ್ರು ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ದುಡದಿದ್ರು.ಆನಂದ್ ಮಾಮನಿ ರೈತರಿಗೆ ಅನೇಕ ಸಹಾಯ …

Read More »

ಮಹದಾಯಿ ಕಳಸಾ ಬಂಡೂರಿ ಯೋಜನೆ ಸ್ವರೂಪ ಬದಲಾವಣೆ ಸಾಧಕ ಬಾಧಕ ವ್ಯತಿರಿಕ್ತ ಪರಿಣಾಮ

ಹುಬ್ಬಳ್ಳಿ :ಮಹದಾಯಿ ಹಾಗೂ ಕಳಸಾ ಬಂಡೂರಿ ಹೋರಾಟ ಕಳೆದ ಸುಮಾರು ಆರು ದಶಕಗಳ ಹೋರಾಟ ಈಗ ಇದರ ಸ್ರರೂಪ ಬದಲಾವಣೆ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದ್ದು ಈ ಯೋಜನೆ ಸ್ವರೂಪ ಬದಲಾವಣೆ ಸಾಧಕ ಬಾಧಕ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬ ಒಮ್ಮಿತಾಭಿಪ್ರಾಯಕ್ಕೆ ಮಹದಾಯಿ ರೈತಪರ ಹೋರಾಟ ಸಮಿತಿ ತೀರ್ಮಾನ ತೆಗೆದುಕೊಳ್ಳಲಾಯಿತು. ಅನೇಕ ರೀತಿಯ ಹೋರಾಟ ಈ ಯೋಜನೆ ಜಾರಿಗಾಗಿ ನಡೆಸಲಾಯಿತು ‌ಇದಕ್ಕೆ ಅನೇಕ ವಿಘ್ನಗಳು ಬಂದವು ಆದ್ದರಿಂದ ಈಗ ಅತ್ಯಂತ …

Read More »

ದೀಪಾವಳಿ ಹಬ್ಬಕ್ಕೆ ಹೊರಟ ಜನ ಸ್ಮಶಾನ ಸೇರಿದರು

ಮಧ್ಯಪ್ರದೇಶ:  ರೇವಾ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, 14 ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಸ್ ಹಾಗೂ ಲಾರಿ ನಡುವೆ ಡಿಕ್ಕಿಯಾಗಿದ್ದು 14 ಮಂದಿ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ೪೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಹೈದರಾಬಾದ್‌ನಿಂದ ಗೋರಖ್‌ಪುರಕ್ಕೆ ಬಸ್ ತೆರಳುತ್ತಿತ್ತು. ಪ್ರಯಾಣಿಕರು ದೀಪಾವಳಿ ಆಚರಿಸಲು ತಮ್ಮ ಊರುಗಳಿಗೆ ತೆರಳುತ್ತಿದ್ದರು. ಅಪಘಾತ ಆದ ರಸ್ತೆಯಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಆರಂಭಿಸಿದ್ದಾರೆ. ಜಖಂಗೊಂಡ ಬಸ್‌ನೊಳಗೆ …

Read More »

ಕೆ.ಆರ್. ಪುರ ಇನ್‌ಸ್ಪೆಕ್ಟರ್ ಎಚ್‌.ಎಲ್. ನಂದೀಶ್ ಅಮಾನತು

ಬೆಂಗಳೂರು: ವಹಿವಾಟು ಸಮಯ ಮೀರಿ ತಡರಾತ್ರಿಯವರೆಗೂ ತೆರೆದಿದ್ದ ಬಾರ್ ಆಯಂಡ್ ರೆಸ್ಟೋರೆಂಟ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳದೇ ಕರ್ತವ್ಯಲೋಪ ಎಸಗಿದ್ದ ಆರೋಪದಡಿ ಕೆ.ಆರ್. ಪುರ ಇನ್‌ಸ್ಪೆಕ್ಟರ್ ಎಚ್‌.ಎಲ್. ನಂದೀಶ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.ಪುರ ಇನ್‌ಸ್ಪೆಕ್ಟರ್ ಎಚ್‌.ಎಲ್. ನಂದೀಶ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಟಾನಿಕ್ ಬಾರ್‌ ತಡರಾತ್ರಿ 2 ಗಂಟೆಯವರೆಗೂ ತೆರೆದಿತ್ತು. ಈ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಸಿಸಿಬಿ ಪೊಲೀಸರು, ದಾಳಿ ಮಾಡಿ ಮಾಲೀಕರ ವಿರುದ್ಧ ಪ್ರಕರಣ …

Read More »

ಮುಂದಿನ ಮೂರು ತಿಂಗಳು ಭಾರತ ಸೇರಿದಂತೆ ಇಡೀ ಜಗತ್ತಿಗೆ ಭಾರೀ ಕಂಟಕಹಾ

ಹಾಸನ : ಮುಂದಿನ ಮೂರು ತಿಂಗಳು ಭಾರತ ಸೇರಿದಂತೆ ಇಡೀ ಜಗತ್ತಿಗೆ ಭಾರೀ ಕಂಟಕ ಕಾದಿದೆ ಎಂದು ಕೋಡಿ ಮಠದ ಸ್ವಾಮೀಜಿ ಮತ್ತೆ ಭವಿಷ್ಯ ನುಡಿದಿದ್ದಾರೆ. ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಹಾರನಳ್ಳಿಯಲ್ಲಿರುವ ಕೋಡಿ ಮಠದಲ್ಲಿ ಮಾತನಾಡಿದ ಅವರು, ಕಾರ್ತಿಕ, ಮಾರ್ಗಶಿರದಿಂದ ತೊಡಗಿ ಜನವರಿ ಪ್ರಥಮ ಭಾಗದವರೆಗೆ ಭಾರಿ ಲೋಕ ಕಂಟಕವಿದೆ. ಅದು ಭೂ ಕಂಟಕದ ರೂಪದಲ್ಲಿರಬಹುದು, ಪ್ರಾದೇಶಿಕವಾಗಿಯೂ ಸಂಘರ್ಷವಿರಬಹುದು, ಪ್ರಾಕೃತಿಕಾಗಿಯೂ ಇರಬಹುದು, ರಾಜ ಬೀದಿಯೂ ಇರಬಹುದು ಎಂದು ಹೇಳಿದರು. …

Read More »

ಚಿತ್ರದುರ್ಗದ ನೂತನ ಜಿಲ್ಲಾಧಿಕಾರಿಯಾಗಿ ದಿವ್ಯ ಪ್ರಭು ಜಿ.ಆರ್.ಜೆ ಅಧಿಕಾರ‌ ಸ್ವೀಕಾರಚಿತ

ಚಿತ್ರದುರ್ಗ: ನಗರದ ನೂತನ ಜಿಲ್ಲಾಧಿಕಾರಿಯಾಗಿ ದಿವ್ಯ ಪ್ರಭು ಜಿ.ಆರ್.ಜೆ. ಶನಿವಾರದಂದು ಅಧಿಕಾರ ವಹಿಸಿಕೊಂಡರು. ಜಿಲ್ಲಾಧಿಕಾರಿಯಾಗಿದ್ದ ಕವಿತಾ ಎಸ್. ಮನ್ನಿಕೇರಿ ಅವರನ್ನು ಸರ್ಕಾರ ವರ್ಗಾವಣೆಗೊಳಿಸಿದ್ದು, ದಿವ್ಯ ಪ್ರಭು ಅವರನ್ನು ಜಿಲ್ಲಾಧಿಕಾರಿಯಾಗಿ ನೇಮಕಗೊಳಿಸಿರುವುದರಿಂದ, ದಿವ್ಯ ಪ್ರಭು ಅವರು ಶನಿವಾರ ಅಧಿಕಾರ ವಹಿಸಿಕೊಂಡರು. ನೂತನ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರಿಗೆ ನಿರ್ಗಮಿತ ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ಅವರು ಹೂಗುಚ್ಛ ನೀಡಿ ಸ್ವಾಗತಿಸಿದರು. 2014 ರ ಬ್ಯಾಚ್‍ನ ಐಎಎಸ್ ಅಧಿಕಾರಿಯಾಗಿರುವ ದಿವ್ಯ ಪ್ರಭು ಅವರು …

Read More »

ಪುನೀತ ಪರ್ವ ಕಾರ್ಯಕ್ರಮದಲ್ಲಿ ಹೃದಯಾಘಾತದಿಂದ ವ್ಯಕ್ತಿ ಸಾವು

ಬೆಂಗಳೂರು : ಪುನೀತ್  ಅಭಿಮಾನಿ ಹೃದಯಾಘಾತದಿಂದ  ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನಲ್ಲಿ  ಅದ್ಧೂರಿಯಾಗಿ ನಡೆದ ಪುನೀತ ಪರ್ವ ಕಾರ್ಯಕ್ರಮವನ್ನು ಟಿವಿಯಲ್ಲಿ ನೋಡುವಾಗಲೇ ಅಭಿಮಾನಿ ಹೃದಯಾಘಾತಕ್ಕೊಳಗಾಗಿದ್ದಾರೆ. ನಿನ್ನೆ ಮನೆಯಲ್ಲಿ ಪುನೀತ ಪರ್ವ ಕಾರ್ಯಕ್ರಮ  ನೋಡುವಾಗಲೇ ಹೃದಯಾಘಾತದಿಂದ ಸಾವು ಸಂಭವಿಸಿದೆ. ಪುನೀತ್ ಪರ್ವ ಕಾರ್ಯಕ್ರಮ ನೋಡುವಾಗ ಎಂಥ ಮನುಷ್ಯ ಸತ್ತು ಹೋದ್ರು ಎಂದು ಅಭಿಮಾನಿ ಕಣ್ಣೀರಿಟ್ಟಿದ್ದರು. ಮಲ್ಲೇಶ್ವರಂನ ಲಿಂಕ್ ರೋಡ್ ನಲ್ಲಿ ಇರುವ ಪುನೀತ್ ಅಭಿಮಾನಿಯನ್ನು ಹೃದಯಾಘಾತವಾದ ತಕ್ಷಣವೇ ಕೆ.ಸಿ.ಜನರಲ್ ಆಸ್ಪತ್ರೆಗೆ …

Read More »

ರಾಗಾ ಜೊತೆ ಹೆಜ್ಜೆ ಹಾಕಿದ ಸ್ಯಾಂಡಲ್ ವುಡ್ ನಟಿ

ರಾಯಚೂರು: ಸ್ಯಾಂಡಲ್ ವುಡ್ ಮತ್ತು ರಾಜಕಾರಣದಿಂದ ದೂರ ಸರಿದಿದ್ದ ಮೋಹಕ ತಾರೆ ರಮ್ಯಾ ಮತ್ತೆ ಸುದ್ದಿ ಮಾಡುತ್ತಿದ್ದಾರೆ. ಇತ್ತೀಚಿಗೆ ಸಿನಿಮಾ ಕಾರ್ಯಕ್ರಮವೊಂದರಲ್ಲಿ ಹಾಜರ್ ಆಗಿದ್ದ ರಮ್ಯಾ, ಇದೀಗ ರಾಜಕೀಯದಲ್ಲೂ ಶೈನ್ ಆಗುತ್ತಿದ್ದಾರೆ. ನಟಿ ರಮ್ಯಾ ಕಾಂಗ್ರೆಸ್ ಪಕ್ಷದಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಎಂಬ ಊಹಾಪೋಹಗಳ ಮಧ್ಯೆ ಭಾರತ್ ಜೋಡೋ ಯಾತ್ರೆಯಲ್ಲಿ ಪ್ರತ್ಯಕ್ಷರಾಗಿದ್ದಾರೆ. ರಾಯಚೂರಿನಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ರಮ್ಯಾ ಹೆಜ್ಜೆ ಹಾಕಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ …

Read More »