ಹಾಸನ : ಮುಂದಿನ ಮೂರು ತಿಂಗಳು ಭಾರತ ಸೇರಿದಂತೆ ಇಡೀ ಜಗತ್ತಿಗೆ ಭಾರೀ ಕಂಟಕ ಕಾದಿದೆ ಎಂದು ಕೋಡಿ ಮಠದ ಸ್ವಾಮೀಜಿ ಮತ್ತೆ ಭವಿಷ್ಯ ನುಡಿದಿದ್ದಾರೆ.
ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಹಾರನಳ್ಳಿಯಲ್ಲಿರುವ ಕೋಡಿ ಮಠದಲ್ಲಿ ಮಾತನಾಡಿದ ಅವರು, ಕಾರ್ತಿಕ, ಮಾರ್ಗಶಿರದಿಂದ ತೊಡಗಿ ಜನವರಿ ಪ್ರಥಮ ಭಾಗದವರೆಗೆ ಭಾರಿ ಲೋಕ ಕಂಟಕವಿದೆ.
ಅದು ಭೂ ಕಂಟಕದ ರೂಪದಲ್ಲಿರಬಹುದು, ಪ್ರಾದೇಶಿಕವಾಗಿಯೂ ಸಂಘರ್ಷವಿರಬಹುದು, ಪ್ರಾಕೃತಿಕಾಗಿಯೂ ಇರಬಹುದು, ರಾಜ ಬೀದಿಯೂ ಇರಬಹುದು ಎಂದು ಹೇಳಿದರು.
ಆದರೆ ರಾಜ ಬೀದಿಯ ವಿವರಣೆ ನೀಡಲಿಲ್ಲ. ಜಾಗತಿಕವಾಗಿ ಬಾಂಬ್ ಗಳು , ಭೂಕಂಪ, ಯದ್ಧ ಭೀತಿ ಇದೆ. ಇದು ಕೇವಲ ಜಗತ್ತಿಗೆ ಸಂಬಂಧಿಸಿದ್ದಲ್ಲ, ದೇಶಿಯಾಗಿ ಕೆಲವೊಂದು ಕಂಟಕಗಳಿವೆ ಎಂದು ಹೇಳಿದ್ದಾರೆ.ಜನ ಜನಗಳ ಮೇಲೆ ನಿಯಂತ್ರಣ ಕಳೆದುಕೊಂಡು ಹುಚ್ಚರಾಗುತ್ತಾರೆ. ಹೆಚ್ಚಿನವರಿಗೆ ದೈಹಿಕ ಅಶಕ್ತಿ ಕಾಡಲಿದೆ ಎಂದು ಹೇಳಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

