Breaking News

ಮಹದಾಯಿ ಕಳಸಾ ಬಂಡೂರಿ ಯೋಜನೆ ಸ್ವರೂಪ ಬದಲಾವಣೆ ಸಾಧಕ ಬಾಧಕ ವ್ಯತಿರಿಕ್ತ ಪರಿಣಾಮ

ಹುಬ್ಬಳ್ಳಿ :ಮಹದಾಯಿ ಹಾಗೂ ಕಳಸಾ ಬಂಡೂರಿ ಹೋರಾಟ ಕಳೆದ ಸುಮಾರು ಆರು ದಶಕಗಳ ಹೋರಾಟ ಈಗ ಇದರ ಸ್ರರೂಪ ಬದಲಾವಣೆ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದ್ದು ಈ ಯೋಜನೆ ಸ್ವರೂಪ ಬದಲಾವಣೆ ಸಾಧಕ ಬಾಧಕ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬ ಒಮ್ಮಿತಾಭಿಪ್ರಾಯಕ್ಕೆ ಮಹದಾಯಿ ರೈತಪರ ಹೋರಾಟ ಸಮಿತಿ ತೀರ್ಮಾನ ತೆಗೆದುಕೊಳ್ಳಲಾಯಿತು. ಅನೇಕ ರೀತಿಯ ಹೋರಾಟ ಈ ಯೋಜನೆ ಜಾರಿಗಾಗಿ ನಡೆಸಲಾಯಿತು ‌ಇದಕ್ಕೆ ಅನೇಕ ವಿಘ್ನಗಳು ಬಂದವು ಆದ್ದರಿಂದ ಈಗ ಅತ್ಯಂತ ನಿರ್ಣಾಯಕ ಕಾಲಘಟ್ಟದಲ್ಲಿ ಇದ್ದೇವೆ ಎಂಬ ಸಂದರ್ಭದಲ್ಲಿ ಇದರ ಕುರಿತು ನಗರದ ವಾಣಿಜೋಧ್ಯಮಿ ಸಂಸ್ಥೆಯಲ್ಲಿ ಹಲವಾರು ರೈತರು, ವಕೀಲರು, ನ್ಯಾಯಾಧೀಶರು , ಬುದ್ಧಿಜೀವಿಗಳು ತಮ್ಮ ಅಭಿಪ್ರಾಯ ತಿಳಿಸಿದರು.
ಯೋಜನೆ ಮೂಲ ಸ್ವರೂಪವನ್ನೇ ಬದಲಾವಣೆ ಮಾಡುತ್ತಿದೆಯಾ ರಾಜ್ಯ ಸರ್ಕಾರದ ನಿಲುವು ಏನು ಇದಕ್ಕೆ ಕೇಂದ್ರ ಸರ್ಕಾರದ ಸಲಹೆ ಏನು ಎಂಬ ಅನೇಕ ಚರ್ಚೆ ನಡೆಸಲಾಯಿತು.

ಈಗ ಇದ್ದ ನೀರನ್ನ ಬಳಸಿಕೊಳ್ಳಲು ಜಾಕ್ ವೆಲ್ ಮುಖಾಂತರ ಜೋಡೆಣೆ ಮಾಡಿಕೊಳ್ಳುವ ಜೊತೆಗೆ ಮಹದಾಯಿ ಯೋಜನೆಯ ಸಂಪೂರ್ಣ ಡಿಪಿಆರ್ ಅನ್ನೇ ಬದಲಾವಣೆಗೆ ಸರ್ಕಾರ ಮುಂದಾದ ಕುರಿತು ವಿರೋಧ ವ್ಯಕ್ತವಾಯಿತು.
ಕಳಸಾ ಬಂಡೂರಿ ನಾಲಾ ಯೋಜನೆಯ ಕಾಮಗಾರಿ ವಿಚಾರದಲ್ಲಿ ಸ್ವರೂಪ ಬದಲಾವಣೆ ಮಾಡಲಾಗಿದೆ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಾಮಗಾರಿಯ ಮೂಲ ಸ್ವರೂಪವನ್ನೇ ಬದಲಾವಣೆ ಮಾಡಿದ ರಾಜ್ಯ ಸರ್ಕಾರದ ವಿರುದ್ಧ ಹುಬ್ಬಳ್ಳಿಯಲ್ಲಿ ಆಕ್ರೋಶ ವ್ಯಕ್ತಪಡಿಸಿ ಮಾತನಾಡಿ, ಇಡೀ ಯೋಜನೆ ಅವೈಜ್ಞಾನಿಕತೆಯತ್ತ ಸಾಗುತ್ತದೆ ಎಂದು ಮಾಜಿ ಶಾಸಕ ಎನ್ .ಎಚ್. ಕೋನರಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು. ಇದೇ ವೇಳೆ ಮಹದಾಯಿ ಯೋಜನೆ ಗೊಂದಲ ಕುರಿತು ಭಾವುಕರಾದ ಕೋನರಡ್ಡಿ
ಕಣ್ಞಿರು ಸಹ ಹಾಕಿದರು.

28 ಮೀಟರ್ ಎತ್ತರದ ಆಣೆಕಟ್ಟಿನ ಬದಲಾಗಿ 11 ಅಡಿ ಅಣೆಕಟ್ಟು ನಿರ್ಮಾಣಕ್ಕೆ ಸರ್ಕಾರ ಮುಂದಾಗಿದ್ದು ಮೂಲ‌ ಸ್ವರೂಪದಲ್ಲಿ 28 ಮೀ ಅಣೆಕಟ್ಟು ನಿರ್ಮಾಣದ‌ ಕುರಿತು ಇರುವ ಅಂಶದಲ್ಲಿ ಬದಲಾವಣೆಯಾಗಿದ್ದು, ಹೊಸ ಡಿಪಿಆರ್ ಮೂಲಕ ಮೂಲ ಸ್ವರೂಪವನ್ನೇ ಬದಲಾಯಿಸಿರೋ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಈ ಬದಲಾವಣೆಯ ಬಗ್ಗೆ ಯಾವುದೇ ಚರ್ಚೆ ನಡೆಸದೇ ಸ್ವರೂಪ ಬದಲಾವಣೆ ಮಾಡ್ತಿದಾರೆ ಎಂದು ಆರೋಪಿಸಲಾಗಿದ್ದು ಈ ಬಗ್ಗೆ ಸರ್ಕಾರವೇ ಉತ್ತರ ನೀಡುವ ಕಾರ್ಯವನ್ನು ಮಾಡಬೇಕಿದೆ ಎಂಬುದು ಸ್ಪಷ್ಟವಾದ ನಿಲುವು ಮಹದಾಯಿ ಹೋರಾಟಗಾರ ಒತ್ತಾಯವಾಗಿದೆ‌.
ಮಹದಾಯಿ ವಿಚಾರದಲ್ಲಿ ಧ್ವಂದ್ವ ನೀತಿ ಅನುಸರಿಸುತ್ತಿದೆಯಾ ರಾಜ್ಯ ಸರ್ಕಾರ ಎಂಬುವಂತ ಅನುಮಾನ ಒಂದು ಕಡೆಯಾದರೇ ಮತ್ತೊಂದು ಕಡೆಯಲ್ಲಿ ಮಹಾರಾಷ್ಟ್ರ ಹಾಗೂ ಗೋವಾ ಸರ್ಕಾರದ ಒತ್ತಡಕ್ಕೆ ಮಣೆಯಿತಾ ಬೊಮ್ಮಾಯಿ ಸರ್ಕಾರ ಎಂಬುವಂತ ಮಾತು ಕೇಳಿ ಬರುತ್ತಿದೆ.
ಯಾವುದೇ ಕಾರಣಕ್ಕೂ ಮೊದಲ ಇದ್ದ ಡಿಪಿಆರ್ ದಂತೆ ಕಾಮಗಾರಿ ನಡೆಯಬೇಕು ಎಂಬುದು ಉತ್ತರ ಕರ್ನಾಟಕ ಭಾಗದ ರೈತರ ಒತ್ತಾಶೆ ಆಗಿದೆ. ಎಲ್ಲೋ ಒಂದು ಕಡೆ ಯಾರೋ ಹಿತಾಸಕ್ತಿಗೆ ಈ ರೀತಿಯಾದ ಯೋಜನೆ ಬದಲಾವಣೆಗೆ ಮುಂದಾಗಿದೆ ಎಂಬ
ಸರ್ಕಾರದ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದ್ದು, ಸಾಧಕ ಬಾಧಕಗಳನ್ನ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಸರ್ಕಾರಕ್ಕೆ ಒಮ್ಮತ್ತಾಭಿಪ್ರಾಯವಾಯಿತು.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *