Breaking News

BigTv News

ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಹೊಳೆಗೆ ಬಿದ್ದ ಲಾರಿ

ಪುತ್ತೂರು: ಕೆಮಿಕಲ್ ಸಾಗಾಟದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಬದಿಯ ಹೊಳೆಗೆ ಬಿದ್ದ ಘಟನೆ ನಿನ್ನೆ ನೆಲ್ಯಾಡಿಯ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಬಜತ್ತೂರು ಗ್ರಾಮದ ನೀರಕಟ್ಟೆಯಲ್ಲಿ ನಡೆದಿದೆ. ಘಟನೆಯಿಂದಾಗಿ ಲಾರಿ ಚಾಲಕ ಹಾಗೂ ಸಹಾಯಕ ಸಣ್ಣಪುಟ್ಟ ಗಾಯಗೊಂಡು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ನೆಲ್ಯಾಡಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ರಾಜ್ಯದಲ್ಲಿ ಅತಿವೃಷ್ಟಿಯಿಂದಾಗಿ 500 ಕೋಟಿ ರೂ. ಬಿಡುಗಡೆ : ಸಿಎಂ

ಉಡುಪಿ : ರಾಜ್ಯಾದ್ಯಂತ ಭಾರೀ ಮಳೆಯಿಂದಾಗಿ ನೆರೆ ಪರಿಸ್ಥಿತಿ ಉಂಟಾಗಿದ್ದು, ರಾಜ್ಯದಲ್ಲಿ ಅತಿವೃಷ್ಟಿಯಿಂದಾಗಿ ಆಗಿರುವ ತಾತ್ಕಾಲಿಕ ಪರಿಹಾರವಾಗಿ ತಕ್ಷಣ 500 ಕೋಟಿ ರೂ. ಬಿಡುಗಡೆ ಮಾಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ಉಡುಪಿಯಲ್ಲಿ ಕರಾವಳಿ ಜಿಲ್ಲೆಗಳ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಮಳೆಹಾನಿ ಪರಿಶೀಲನಾ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ರಾಜ್ಯದಲ್ಲಿ ಈ ತಿಂಗಳಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಮಳೆಯಾಗಿದೆ. ಪರಿಣಾಮ ಸಾಕಷ್ಟು ಮೂಲ ಸೌಕರ್ಯಗಳಿಗೆ ಹಾನಿಯಾಗಿದ್ದು, ಇದನ್ನು ಸರಿಪಡಿಸಲು …

Read More »

ಸೋನಿಯಾ ಗಾಂಧಿಗೆ ಇಡಿ ನೋಟಿಸ್ : ಜು. 21ರಂದು ಪ್ರತಿಭಟನೆ

ಲಂಡನ್‌ : ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಜಾರಿ ನಿರ್ದೇಶನಾಲಯದ (ಇಡಿ) ಮುಂದೆ ಹಾಜರಾಗುವ ದಿನವಾದ ಜುಲೈ 21ರಂದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆಸಲು  ನಡೆದ ಸಭೆಯಲ್ಲಿ ಕಾಂಗ್ರೆಸ್ ಮುಖಂಡರು ನಿರ್ಧರಿಸಿದ್ದಾರೆ. ಗುರುವಾರ ಪಕ್ಷದಿಂದ ಮತ್ತೊಂದು ಮಹತ್ವದ ಸಭೆಯನ್ನು ಕರೆಯಲಾಗಿದ್ದು, ಅಲ್ಲಿ ಎಲ್ಲಾ ಪ್ರಧಾನ ಕಾರ್ಯದರ್ಶಿಗಳು, ರಾಜ್ಯ ಉಸ್ತುವಾರಿಗಳು ಮತ್ತು ಪಿಸಿಸಿ ಮುಖ್ಯಸ್ಥರು ‘ಭಾರತ್ ಜೋಡೋ ಯಾತ್ರೆ’ …

Read More »

ಡಿಕೆಶಿ ದೆಹಲಿಯತ್ತ ಪಯಣ

ಬೆಂಗಳೂರು : ಎಐಸಿಸಿಯು ದೆಹಲಿಯಲ್ಲಿ ಗುರುವಾರ ಆಯೋಜಿಸಿರುವ ಭಾರತ್‌ ಜೋಡೋ ಯಾತ್ರೆಯ ಪೂರ್ವಸಿದ್ಧತಾ ಸಭೆಯಲ್ಲಿ ಪಾಲ್ಗೊಳ್ಳಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ಮಾಜಿ ಸಚಿವ ಕೆ.ಜೆ. ಜಾರ್ಜ್ ಬುಧವಾರ ದೆಹಲಿಗೆ ತೆರಳಿದರು. ಭಾರತ್‌ ಜೋಡೋ ಯಾತ್ರೆಯ ಕುರಿತು ಚರ್ಚಿಸಲು ಎಲ್ಲಾ ರಾಜ್ಯಗಳ ಪ್ರದೇಶ ಕಾಂಗ್ರೆಸ್‌ ಸಮಿತಿ ರಾಜ್ಯಾಧ್ಯಕ್ಷರೊಂದಿಗೆ ಹೈಕಮಾಂಡ್‌ ಗುರುವಾರ ಸಭೆ ಆಯೋಜಿಸಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ಯಾವ ದಿನಾಂಕದಂದು ಭಾರತ್‌ ಜೋಡೋ ಯಾತ್ರೆ ನಡೆಯಲಿದೆ ಹಾಗೂ …

Read More »

ಟ್ವಿಟ್ಟರ್ ನಲ್ಲಿ ಪವರ್ ಸ್ಟಾರ್ ಗೆ ಅವಮಾನ : ರೊಚ್ಚಿಗೆದ್ದ ಅಭಿಮಾನಿಗಳು

ಬೆಂಗಳೂರು: ಕನ್ನಡಿಗರ ಆರಾಧ್ಯದೈವ ಡಾ. ಪುನೀತ್ ರಾಜಕುಮಾರ್ ಅವರು ನಮ್ಮನ್ನು ಅಗಲಿ 9 ತಿಂಗಳಾಯಿತು, ಇದೇ ಸಂದರ್ಭದಲ್ಲಿ ಟ್ವಿಟ್ಟರ್ ಈಗ ಅವರ ಖಾತೆಗೆ ಇದ್ದಂತಹ ಬ್ಲೂ ಟಿಕ್ ನ್ನು ತೆಗೆದುಹಾಕುವುದರ ಮೂಲಕ ಕನ್ನಡಿಗರ ಕಣ್ಮಣಿ ನಮ್ಮ ಪ್ರೀತಿಯ ಅಪ್ಪುಗೆ ಅವಮಾನ ಮಾಡಿದೆ. ಪುನೀತ್ ರಾಜ್ ಕುಮಾರ್ ಅವರು ಅಕ್ಟೋಬರ್ 29 ರಂದು ಹೃದಯಾಘಾತದಿಂದ ನಿಧನರಾಗಿದ್ದು, ಕನ್ನಡಿಗರು ಎಂದಿಗೂ ಅರಗಿಸಿಕೊಳ್ಳಲಾಗದ ಸುದ್ದಿಯಾಗಿತ್ತು, ಅವರ ನೆನಪಿನಲ್ಲಿ ಕನ್ನಡಿಗರೂ ಇಂದಿಗೂ ಕೊರಗುತ್ತಿದ್ದಾರೆ,ಅವರ ನೆನಪನ್ನು ಚಿರವಾಗಿಸುವ …

Read More »

ಪರಿಹಾರಕ್ಕಾಗಿ ನಾಳೆ ಎನ್ನುವ ಪ್ರಶ್ನೆಯೇ ಇಲ್ಲ: ಹಾಲಪ್ಪ ಆಚಾರ

ಹುಬ್ಬಳ್ಳಿ: ಜಿಲ್ಲಾ ಖಜಾನೆಯಲ್ಲಿ ಹಾಗೂ ರಾಜ್ಯ ಸರ್ಕಾರದಲ್ಲಿ ಯಾವುದೇ ರೀತಿ ಹಣದ ತೊಂದರೆ ಇಲ್ಲ. ಪರಿಹಾರಕ್ಕಾಗಿ ನಾಳೆ ಎನ್ನುವ ಪ್ರಶ್ನೆಯೇ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ ಹೇಳಿದರು. ಜಿಲ್ಲೆಯ ಪ್ರವಾಸ ಕೈಗೊಂಡಿರುವ ವೇಳೆಯಲ್ಲಿ ಯಲಿವಾಳ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಸರ್ಕಾರ ನಿರ್ದೇಶನ ನೀಡದಂತೆ ಭಾಗಶಃ ಮನೆ ಕಳೆದುಕೊಂಡವರಿಗೆ ಐದು ಲಕ್ಷ ಪರಿಹಾರ, 50% ನಿಂದ 75% ಹಾನಿಯಾಗಿದ್ದವರಿಗೆ 3 ಲಕ್ಷ ಹಾಗೂ ಮನೆಯಲ್ಲಿ …

Read More »

ತಂದೆಯ ಜನ್ಮದಿನವೇ ಮಗನ ಆತ್ಮಹತ್ಯೆ

ಬೆಳಗಾವಿ: ತಂದೆಯ ಜನ್ಮದಿನದಂದೇ 17 ವರ್ಷದ ಮಗನೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಖಾನಾಪೂರದ ಹಲಕರ್ಣಿ ಗ್ರಾಮದಲ್ಲಿ ನಡೆದಿದೆ‌. ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಹಲಕರ್ಣಿ ಗ್ರಾಮದ ಪ್ರಥಮೇಶ ರಾಜು ಕೋಳಿ (17) ಮೃತ ದುರ್ದೈವಿ. ಇವರ ತಂದೆ ರಾಜು ಕೋಳಿ ಮೊಬೈಲ್ ಕೊಡಿಸಲಿಲ್ಲವೆಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ‌. ತಂದೆಗೆ ಮೊಬೈಲ್ ಕೊಡಿಸುವಂತೆ ಖಾನಾಪೂರ ಪಟ್ಟಣದ ಮರಾಠಾ ಮಂಡಳ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಪ್ರಥಮೇಶ ಎರಡು ದಿನಗಳಿಂದ ಹಠ …

Read More »

ಟಾಲಿವುಡ್​​ ನಟ ರಾಣಾ ದಗ್ಗುಬಾಟಿ ಕೋರ್ಟ್​ಗೆ ಹಾಜರು

ಹೈದರಾಬಾದ್​ (ತೆಲಂಗಾಣ): ಭೂಮಿ ಗುತ್ತಿಗೆ ವಿವಾದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಟಾಲಿವುಡ್​​ ನಟ ರಾಣಾ ದಗ್ಗುಬಾಟಿ ಇಂದು ಸಿಟಿ ಸಿವಿಲ್ ಕೋರ್ಟ್​ಗೆ ಹಾಜರಾಗಿದ್ದಾರೆ. 2014ರಲ್ಲಿ ಫಿಲಂ ನಗರದಲ್ಲಿನ ಜಾಗವನ್ನು ಕಂಪನಿಯೊಂದು ಲೀಸ್​ಗೆ ಪಡೆದಿತ್ತು. ಆದರೆ, ಆ ಕಂಪನಿಯ ಮಾಲೀಕರ ಮಗ ರಾಣಾ ಹೆಸರಿಗೆ ಜಮೀನು ನೋಂದಣಿ ಮಾಡಿಸಿದ್ದಾರೆ ಎಂದು ಆರೋಪಿಸಿ ಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿತ್ತು. ಇದೇ ಪ್ರಕರಣದ ಕುರಿತಂತೆ ಈ ಹಿಂದೆ ಸಿಟಿ ಸಿವಿಲ್ ಕೋರ್ಟ್ ರಾಣಾ ಅವರಿಗೆ ನೋಟಿಸ್ ಜಾರಿ …

Read More »

ಚಿತ್ರನಟ ಶಿವರಂಜನ್ ಬೋಳಣ್ಣವರ ಮೇಲೆ ಗುಂಡಿನ ದಾಳಿ

ಬೈಲಹೊಂಗಲ: ಚಿತ್ರನಟ ಶಿವರಂಜನ್ ಬೋಳಣ್ಣವರ ಅವರ ಮೇಲೆ ವ್ಯಕ್ತಿಯೊಬ್ಬ ಗುಂಡಿನ ದಾಳಿ ಮಾಡಿದ್ದಾನೆ. ಅದೃಷ್ಪವಶಾತ್ ಕೂದಲೆಳೆ ಅಂತರದಲ್ಲೇ ಪಾರಾಗಿದ್ದಾರೆ. ಬೈಕ್ ಮೇಲೆ ಬಂದ ಆರೋಪಿ ಮೂರು ಅವರ ಮನೆ ಎದುರು ಗುಂಡಿನ ದಾಳಿ ನಡೆದಿದೆ. ಆರೋಪಿ ಪರಾರಿಯಾಗಿದ್ದು, ಪತ್ತೆಗೆ ಜಾಲ ಬೀಸಲಾಗಿದೆ. ಎಂದು ತಿಳಿದು ಬಂದಿದೆ. ಅಮೃತಸಿಂಧು, ರಾಜಾರಾಣಿ ಸೇರಿದಂತೆ ಕೆಲವು ಚಲನಚಿತ್ರಗಳಲ್ಲಿಅ ಶಿವರಂಜನ್ ನಾಯಕ ನಟರಾಗಿದ್ದಾರೆ.

Read More »

PSI ಅಕ್ರಮ ಕುರಿತು ಬಿಗ್ ಟ್ವಿಸ್ಟ್ ನೀಡಿದ ಯತ್ನಾಳ್

ಬೆಂಗಳೂರು: PSI ಅಕ್ರಮದಲ್ಲಿ ಮಾಜಿ ಸಿಎಂ ಪುತ್ರನೇ 150 ಲಕ್ಷಕ್ಕೂ ಹೆಚ್ಚು ಹಣ ಮಾಡಿರೋದಾಗಿ ಸುದ್ದಿಯಿದೆ. ಅಲ್ಲದೇ ಈ ಪ್ರಕರಣದಲ್ಲಿ ದೊಡ್ಡ ದೊಡ್ಡವರೆಲ್ಲಾ ಇದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ .ಹಗರಣದಲ್ಲಿ ಪೌಲ್ ಒಬ್ಬರೇ ಅಲ್ಲ. ಪೌಲ್ ಜೊತೆ ಹಲವರು ಪಾಲು ಪಡೆದುಕೊಂಡಿದ್ದಾರೆಂದು. ಈ ಪ್ರಕರಣದ ವಿಚಾರಣೆ ಮಾಡುತ್ತಿರುವ ಜರ್ಡ್ಜ್ ಸ್ಟ್ರಾಂಗ್ ಇದ್ದಾರೆ. ಅದಕ್ಕೆ ಇಷ್ಟು ಮಾಹಿತಿ ಹೊರಬಂದಿದೆ. ಇಲ್ಲದೇ ಹೋಗಿದ್ದರೆ ಪ್ರಕರಣವೇ ಮುಚ್ಚಿ ಹೋಗುತ್ತಿತ್ತೆಂದು …

Read More »