ಹುಬ್ಬಳ್ಳಿ: ರೂಪಾಂತರಿ ಒಮಿಕ್ರಾನ್ ಹಾಗು ಡೆಲ್ಟಾ ಹೆಚ್ಚಳ ಹಿನ್ನೆಲೆಯಲ್ಲಿ ಮಾಲ್ ಹಾಗು ಚಿತ್ರಮಂದಿರದಲ್ಲಿ ಸಾರ್ವಜನಿಕರಿಗೆ ಶೇ50ರಷ್ಟು ಅನುಮತಿ ನೀಡುವ ಪ್ರಸ್ತಾವನೆಯನ್ನು ತಜ್ಞರ ಸಮಿತಿ ಮುಂದಿಟ್ಟು ಪರಿಶೀಲನೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ತಜ್ಞರ ಸಲಹೆಗಳನ್ನು ಪಡೆದು ನಿರ್ಧಾರ ಕೈಗೊಳ್ಳಲಾಗುವುದು. ಬೆಂಗಳೂರು ವೈದ್ಯರಿಗೆ ಒಮಿಕ್ರಾನ್ ಸೋಂಕು ಹಿನ್ನೆಲೆಯಲ್ಲಿ ಅವರ ಪ್ರಾಥಮಿಕ ಹಾಗು ದ್ವಿತೀಯ ಸಂಪರ್ಕ ಪತ್ತೆ ಮಾಡಿದ್ದೇವೆ ಎಂದು ತಿಳಿಸಿದರು. ಸಂಪುಟ ವಿಸ್ತರಣೆ ಬಗ್ಗೆ ಪ್ರತಿಕ್ರಿಯಿಸುತ್ತಾ, ಮೊದಲು ನಮ್ಮ ಆದ್ಯತೆ ಪರಿಷತ್ ಚುನಾವಣೆ. ನಂತರ ಅಧಿವೇಶನ. ಆಮೇಲೆ ವರಿಷ್ಠರ ಸಲಹೆ ಪಡೆದು ನಿರ್ಧಾರ ಮಾಡಲಾಗುವುದು ಎಂದರು.
ಜೆಡಿಎಸ್ ಜತೆ ಮೈತ್ರಿ ಬಗ್ಗೆ ಮಾತನಾಡುತ್ತಾ, ಜೆಡಿಎಸ್ ನಿಲುವಿನ ಬಗ್ಗೆ ದೇವೇಗೌಡರು ಹೇಳಬೇಕಾಗುತ್ತದೆ ಎಂದು ತಿಳಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

