ರಾಯಚೂರು: ರಸ್ತೆಬದಿ ನಿಂತಿದ್ದ ಲಾರಿಗೆ ಹಿಂದಿನಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ನಿವೃತ್ತ ಉಪನ್ಯಾಸಕ ಸಾವನ್ನಪ್ಪಿದ್ದು, ಐವರು ಗಂಭೀರ ಗಾಯಗೊಂಡಿರುವ ಘಟನೆ ರಾಯಚೂರು ಗಡಿ ತೆಲಂಗಾಣದ ಗುಡೆಬಲ್ಲೂರು ಗ್ರಾಮದ ಬಳಿ ನಡೆದಿದೆ. ಟೈಯರ್ ರೋಡ್ನಲ್ಲಿ ಅಪಘಾತ ಸಂಭವಿಸಿದ್ದು, ರಾಯಚೂರಿನ ನಿವೃತ್ತ ಉಪನ್ಯಾಸಕ ಶೇಖರಪ್ಪ ಗೌಡ (70) ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಯಾದಗಿರಿಯಲ್ಲಿನ ಮನೆ ದೇವರು ಕಾಳಬೆಳಗುಂದಿ ಬನದೇಶ್ವರ ದೇವಾಲಯಕ್ಕೆ ತೆರಳಿದ್ದ ಕುಟುಂಬ ವಾಪಸ್ ರಾಯಚೂರಿಗೆ ಮರಳುವಾಗ ಅಪಘಾತ ನಡೆದಿದೆ. ಅಪಘಾತದಲ್ಲಿ ಶೇಖರಪ್ಪ …
Read More »13 ವರ್ಷದ ಬಾಲಕಿಯನ್ನು ಕಾರ್ನಲ್ಲಿ ಕಿಡ್ನ್ಯಾಪ್ ಮಾಡಿ ಗ್ಯಾಂಗ್ ರೇಪ್! ಬೆಚ್ಚಿ ಬಿದ್ದ ಪೊಲೀಸರು
ಬಿಹಾರದ ಭೋಜ್ಪುರ ಜಿಲ್ಲೆಯಲ್ಲಿ 13 ವರ್ಷದ 7ನೇ ತರಗತಿ ವಿದ್ಯಾರ್ಥಿನಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ ಆಘಾತಕಾರಿ ಘಟನೆ ನಡೆದಿದೆ. ಮಾರುಕಟ್ಟೆಯಿಂದ ಮನೆಗೆ ಮರಳಲು ಆಟೋಗಾಗಿ ಕಾಯುತ್ತಿದ್ದ ಬಾಲಕಿಯನ್ನು ನಾಲ್ವರು ಯುವಕರು ಎಸ್ಯುವಿಯಲ್ಲಿ ಕರೆದೊಯ್ದು ಕಾಡು ಪ್ರದೇಶದಲ್ಲಿ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಕೃತ್ಯದ ಬಳಿಕ ಪ್ರಜ್ಞೆ ತಪ್ಪಿದ್ದ ಬಾಲಕಿ ಮನೆ ತಲುಪಿ ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದು, ಅವರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಿ …
Read More »ದಾವಣಗೆರೆಯಲ್ಲಿ ಭೀಕರ ಅಗ್ನಿ ದುರಂತ; ಒಂದರ ಬೆನ್ನಲ್ಲೇ 18 ಸಿಲಿಂಡರ್ ಸ್ಫೋಟ, ಇಬ್ಬರಿಗೆ ಗಂಭೀರ ಗಾಯ!
ದಾವಣಗೆರೆ ತಾಲೂಕಿನ ಹೆಚ್. ಕಲ್ಪನಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಗೋದಾಮೊಂದರಲ್ಲಿ ಭಾನುವಾರ ಭಾರೀ ಅಗ್ನಿ ಅವಘಡ ಸಂಭವಿಸಿ, 18ಕ್ಕೂ ಹೆಚ್ಚು ಗ್ಯಾಸ್ ಸಿಲಿಂಡರ್ಗಳು ಸರಣಿ ಸ್ಫೋಟಗೊಂಡಿವೆ. ಸ್ಫೋಟದ ತೀವ್ರತೆಗೆ ಸಿಲಿಂಡರ್ಗಳು ನೂರಾರು ಅಡಿ ಎತ್ತರಕ್ಕೆ ಚಿಮ್ಮಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅವಘಡದಲ್ಲಿ ಅನಿಲ್ ಸೇರಿದಂತೆ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗೋದಾಮು ಜನವಸತಿ ಪ್ರದೇಶದಿಂದ ದೂರದ ಅಡಿಕೆ ತೋಟದಲ್ಲಿದ್ದ ಕಾರಣ ದೊಡ್ಡ ಪ್ರಮಾಣದ …
Read More »ಪಿಕಪ್ ವಾಹನ ಪಲ್ಟಿ- ಅಕ್ರಮ ಜಾನುವಾರು ಸಾಗಾಟ ಬಯಲು
ಸುಬ್ರಹ್ಮಣ್ಯದಲ್ಲಿ ಪಿಕಪ್ ವಾಹನ ಪಲ್ಟಿಯಾದ ಪರಿಣಾಮ ಅಕ್ರಮ ಜಾನುವಾರು ಸಾಗಣೆ ಪ್ರಕರಣ ಬೆಳಕಿಗೆ ಬಂದಿದೆ. ಅರಕಲಗೂಡು ನಿವಾಸಿಗಳಾದ ಚಂದ್ರಶೇಖರ್ ಮತ್ತು ಮೋಹನ್ ವಿರುದ್ಧ ಪ್ರಕರಣ ದಾಖಲಾಗಿದೆ. ಜೂನ್ 13ರ ರಾತ್ರಿ ಎರಡು ಹೋರಿಗಳನ್ನು ಪಿಕಪ್ ವಾಹನದಲ್ಲಿ ಸಾಗಿಸುತ್ತಿದ್ದ ವೇಳೆ ಕುಲ್ಕುಂದ ಸಮೀಪ ತಿರುವಿನಲ್ಲಿ ಚಾಲಕ ಹಠಾತ್ ಬ್ರೇಕ್ ಹಾಕಿದ ಪರಿಣಾಮ ವಾಹನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ವೇಳೆ ಹೋರಿಗಳ ಕಾಲುಗಳನ್ನು ಕಟ್ಟಿ ಸಾಗಿಸಲಾಗುತ್ತಿದ್ದ ವಿಚಾರ ಬಹಿರಂಗವಾಗಿದೆ. ಘಟನೆ ಸಂಬಂಧ …
Read More »ಕಾಂಗ್ರೆಸ್ ನಿಂದ ಸರ್ಕಾರಿ ಹುದ್ದೆ ಸೇಲು, ಕಾಸು ಕೊಟ್ರೆ ಡೀಲು – ವಿದ್ಯಾರ್ಥಿಗಳಿಗೆ ಆಮಿಷ ಒಡ್ಡಿದ್ದ ವಂಚಕ!
ಹುಬ್ಬಳ್ಳಿಯಲ್ಲಿ ಕೆಪಿಟಿಸಿಎಲ್ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಆಮಿಷ ಒಡ್ಡಿ ಅಭ್ಯರ್ಥಿಗಳಿಂದ ಹಣ ವಸೂಲಿ ಮಾಡಲು ಯತ್ನಿಸಿದ್ದ ಆರೋಪಿಯನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ. ಕಲಬುರಗಿ ಮೂಲದ ವೆಂಕಟೇಶ ರಾಠೋಡ ಬಂಧಿತ ಆರೋಪಿ. ‘ಇಟ್ಸ್ ಮೀ ಅಮರ್ ಅಪ್ಡೇಟ್ಸ್’ ಎಂಬ ಯೂಟ್ಯೂಬ್ ಚಾನೆಲ್ ಮೂಲಕ ಲೈನ್ಮನ್ ಹುದ್ದೆಗಳನ್ನು ಕೊಡಿಸುವುದಾಗಿ ಹೇಳಿ, ಅಭ್ಯರ್ಥಿಗಳು ತಕ್ಷಣ ಹಣ ಸಿದ್ಧಪಡಿಸಿಕೊಳ್ಳುವಂತೆ ವಿಡಿಯೋದಲ್ಲಿ ಕರೆ ನೀಡಿದ್ದ. ಕೆಲಸ ಆಗದಿದ್ದರೆ ಹಣ ವಾಪಸ್ ನೀಡುವುದಾಗಿ ಭರವಸೆ ನೀಡಿ ಜನರನ್ನು ನಂಬಿಸಲು …
Read More »ರೆಸಾರ್ಟ್ಗೆ ನುಗ್ಗಿ ಪ್ರೇಮಿಗಳನ್ನ ಬೆದರಿಸಿ ಬೈಕ್ ಕಿತ್ತುಕೊಂಡು ಬಂದ ನಾಲ್ವರ ಬಂಧನ!
ಮೈಸೂರು: ಹುಣಸೂರು ಸಮೀಪದ ರೆಸಾರ್ಟ್ನಲ್ಲಿ ಪ್ರೇಮಿಗಳ ಮೇಲೆ ಹಲ್ಲೆ ನಡೆಸಿ ಬೈಕ್ ಕಸಿದುಕೊಂಡು ಪರಾರಿಯಾಗಿದ್ದ ನಾಲ್ವರನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಹುಣಸೂರಿನ ವೀಲ್ ವಾಸಿಂ, ಶೋಯೆಬ್, ಅಜರ್ ಹಾಗೂ ಕೊಳವಿಗೆಯ ಶ್ರೀಕಾಂತ್ ಅಲಿಯಾಸ್ ಸಿರಿ ಬಂಧಿತ ಆರೋಪಿಗಳು. ಮೈಸೂರಿನ ಅಸ್ಲಂ ತನ್ನ ಪ್ರೇಯಸಿಯೊಂದಿಗೆ ರೆಸಾರ್ಟ್ಗೆ ಬಂದಿದ್ದ ವೇಳೆ ಆರೋಪಿಗಳು ಗಲಾಟೆ ನಡೆಸಿ ಹಲ್ಲೆ ಮಾಡಿ, ಕೊಲೆ ಬೆದರಿಕೆ ಹಾಕಿ ಬೈಕ್ ಕಿತ್ತುಕೊಂಡು ಪರಾರಿಯಾಗಿದ್ದರು. ಬಳಿಕ ಬೈಕ್ ಅನ್ನು ಶ್ರೀಕಾಂತ್ ಬಳಿ …
Read More »ಪೊಲೀಸರ ಎಡವಟ್ಟಿಗೆ 66 ರೌಡಿಗಳಿಗೆ ಜಾಕ್ಪಾಟ್! 66 ಮಂದಿ ರೌಡಿಪಟ್ಟಿಯಿಂದ ಔಟ್
ಬೆಂಗಳೂರು: ಪೊಲೀಸ್ ಇಲಾಖೆಯ ದಾಖಲೆ ನಿರ್ವಹಣೆಯಲ್ಲಿನ ಲೋಪ ಹಾಗೂ ಹೈಕೋರ್ಟ್ ಮಾರ್ಗಸೂಚಿಗಳ ಪಾಲನೆಯಲ್ಲಿ ವೈಫಲ್ಯ ಕಂಡುಬಂದ ಹಿನ್ನೆಲೆಯಲ್ಲಿ 66 ಮಂದಿ ರೌಡಿಶೀಟರ್ಗಳು ರೌಡಿಪಟ್ಟಿಯಿಂದ ಹೊರಬಂದಿರುವ ಪ್ರಕರಣ ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಪೊಲೀಸ್ ದೂರು ಪ್ರಾಧಿಕಾರದ ಪರಿಶೀಲನೆಯಲ್ಲಿ ಸೂಕ್ತ ದಾಖಲೆಗಳು ಮತ್ತು ಸಮರ್ಪಕ ಕಾರಣಗಳನ್ನು ಪೊಲೀಸರು ಒದಗಿಸದಿರುವುದು ಬೆಳಕಿಗೆ ಬಂದಿದ್ದು, ಈ ಹಿನ್ನೆಲೆಯಲ್ಲಿ 66 ಮಂದಿಯ ಹೆಸರನ್ನು ರೌಡಿಪಟ್ಟಿಯಿಂದ ಕೈಬಿಡುವಂತೆ ಆದೇಶಿಸಲಾಗಿದೆ. ಇವರಲ್ಲಿ ಕುಖ್ಯಾತ ರೌಡಿಶೀಟರ್ ಸೈಲೆಂಟ್ ಸುನಿಲ್ ಹಾಗೂ ಒಂಟೆ …
Read More »ಜಿಬಿಎ ಕಸದ ಲಾರಿಗೆ ಮತ್ತೊಂದು ಬಲಿ: ಬೆಂಗಳೂರಿನಲ್ಲಿ ಘೋರ ಘಟನೆ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಕಸದ ಲಾರಿಗೆ ಮತ್ತೋರ್ವ ವ್ಯಕ್ತಿ ಬಲಿಯಾಗಿದ್ದಾರೆ. ಬೈಕ್ ನಿಂದ ಬಿದ್ದಿದ್ದ ವ್ಯಕ್ರಿ ಮೇಲೆಯೇ ಕಸದ ಲಾರಿ ಹರಿದು ಹೋಗಿದ್ದು, ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.35 ವರ್ಷದ ವ್ಯಕ್ತಿ ಮೃತ ದುರ್ದೈವಿ. ಚಾಮರಾಜಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಬೈಕ್ ನಲ್ಲಿ ಹೋಗುತ್ತಿದ್ದ ವ್ಯಕ್ತಿ ಇದ್ದಕ್ಕಿದ್ದಂತೆ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ಇದೇ ವೇಳೆ ವೇಗವಾಗಿ ಬಂದ ಕಸದ ಲಾರಿ ವ್ಯಕ್ತಿಯ …
Read More »ಬೆಂಗಳೂರು ವಿಮಾನ ನಿಲ್ದಾಣದಲ್ಲಿ 13.14 ಕೋಟಿ ರೂ ಮೌಲ್ಯದ ಗಾಂಜಾ ವಶ; ಆರು ಜನರ ಬಂಧನ
ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು 13.14 ಕೋಟಿ ರೂ. ಮೌಲ್ಯದ 38.34 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಥಾಯ್ಲೆಂಡ್ನ ಬ್ಯಾಂಕಾಕ್ನಿಂದ ಬಂದಿದ್ದ ಆರು ಪ್ರಯಾಣಿಕರ ಲಗೇಜ್ಗಳಲ್ಲಿ ಈ ಮಾದಕ ವಸ್ತು ಪತ್ತೆಯಾಗಿದೆ. ತಪಾಸಣೆ ವೇಳೆ ಅನುಮಾನಾಸ್ಪದ ಬ್ಯಾಗ್ಗಳನ್ನು ಪರಿಶೀಲಿಸಿದ ಅಧಿಕಾರಿಗಳು ಗಾಂಜಾ ಪತ್ತೆಹಚ್ಚಿದ್ದು, ಆರು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ. ಇದೇ ವೇಳೆ, ‘ಮಿಸೆಸ್ ಕೇರಳ 2025’ ವಿಜೇತೆ …
Read More »ಚಿನ್ನಾಭರಣ ಕಳವು ಪ್ರಕರಣ ಭೇದಿಸಿದ ಪೊಲೀಸರು… ಇಬ್ಬರು ಆರೋಪಿಗಳ ಬಂಧನ
ಹೊನ್ನಾವರ ತಾಲೂಕಿನಲ್ಲಿ ನಡೆದ ಚಿನ್ನಾಭರಣ ಕಳ್ಳತನ ಪ್ರಕರಣವನ್ನು ಭೇದಿಸಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಮನೆಯೊಂದರಿಂದ 128 ಗ್ರಾಂ ಚಿನ್ನಾಭರಣ ಹಾಗೂ ನಗದು ಕಳವು ಮಾಡಲಾಗಿತ್ತು. ಪ್ರಮುಖ ಆರೋಪಿ ಧನುಷ್ ಶ್ರೀಧರ ಗೌಡ ಹಾಗೂ ಕಳವು ಮಾಡಿದ ಆಭರಣಗಳನ್ನು ಮಾರಾಟ ಮಾಡಲು ಸಹಕರಿಸಿದ್ದ ಗೌರೀಶ ಗಣಪತಿ ಗೌಡರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಗಳು ಅಡವಿಟ್ಟಿದ್ದ 127.5 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಇದರ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





