Breaking News

BigTv News

ಬಳ್ಳಾರಿ ಗಡಿಯಲ್ಲಿ ಲಾರಿ-ಟ್ಯಾಂಕರ್ ಮಧ್ಯ ಭೀಕರ ಅಪಘಾತ : ಚಾಲಕ ಸಜೀವ ದಹನ!

ಬಳ್ಳಾರಿ ಗಡಿ ಭಾಗದಲ್ಲಿ ಲಾರಿ ಮತ್ತು ಟ್ಯಾಂಕರ್ ನಡುವೆ ಭೀಕರವಾದ ಅಪಘಾತ ಸಂಭವಿಸಿದ್ದು, ಬೆಂಕಿಯಿಂದ ಎರಡು ವಾಹನಗಳು ಹೊತ್ತಿ ಉರಿದಿವೆ. ಘಟನೆಯಲ್ಲಿ ಓರ್ವ ಚಾಲಕ ಸಜೀವ ದಹನಗೊಂಡಿದ್ದಾನೆ. ಅನಂತಪುರ ಜಿಲ್ಲೆಯ ಡಿ ಹಿರೇಹಾಳ ಮಂಡಲದಲ್ಲಿ ಈ ಒಂದು ಘಟನೆ ಸಂಭವಿಸಿದೆ.ಜಾಜರಕಲ್ ಟೋಲ್ ಪ್ಲಾಜಾ ಬಳಿ ಈ ಒಂದು ಭೀಕರ ಅಪಘಾತ ಸಂಭವಿಸಿದೆ. ಪಂಚರಾಗಿ ಟ್ಯಾಂಕರ್ ರಸ್ತೆ ಬದಿ ನಿಂತಿತ್ತು. ಈ ವೇಳೆ ರಾಂಪುರಂ ಕಡೆಯಿಂದ ಲಾರಿ ವೇಗವಾಗಿ ಬಂದಿದೆ. ಲಾರಿ …

Read More »

ಅಪ್ರಾಪ್ತನಿಗೆ ಸಿಗರೇಟ್ ಕಲಿಸಿ, ಫೋಟೋ‌ ತೆಗೆದು ಬ್ಲಾಕ್ ಮೇಲ್ – 120 ಗ್ರಾಂ ಚಿನ್ನ ವಸೂಲಿ!

ಕೊಪ್ಪಳ: ಅಪ್ರಾಪ್ತ ಬಾಲಕನಿಗೆ ಸಿಗರೇಟ್ ಅಭ್ಯಾಸ ಮಾಡಿಸಿ, ಬಳಿಕ ವಿಡಿಯೋ ತೋರಿಸಿ ಬ್ಲಾಕ್‌ಮೇಲ್ ಮಾಡಿ 120 ಗ್ರಾಂ ಚಿನ್ನಾಭರಣ ದೋಚಿದ್ದ ಇಬ್ಬರು ಆರೋಪಿಗಳನ್ನು ಕುಷ್ಟಗಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಬಸವರಾಜ್ ಅಂಗಡಿ ಹಾಗೂ ನವೀನ್, ಬಾಲಕ ಸಿಗರೇಟ್ ಸೇದುತ್ತಿದ್ದ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿದು, ಪೋಷಕರಿಗೆ ತೋರಿಸುವುದಾಗಿ ಬೆದರಿಸಿ ಹಣಕ್ಕಾಗಿ ಪೀಡಿಸುತ್ತಿದ್ದರು. ಭಯಗೊಂಡ ಬಾಲಕ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಹಂತ ಹಂತವಾಗಿ ಕದ್ದು ಆರೋಪಿಗಳಿಗೆ ನೀಡಿದ್ದಾನೆ. ಮನೆಯಲ್ಲಿ ಚಿನ್ನ ನಾಪತ್ತೆಯಾದ ಹಿನ್ನೆಲೆಯಲ್ಲಿ ಪೋಷಕರು …

Read More »

ಬೆಂಗಳೂರಿನ ಉದ್ಯಮಿ ಮನೆಯಲ್ಲಿ 25 ಲಕ್ಷ ಕಳ್ಳತನ: ಪರಾರಿಯಾಗಿದ್ದ ದಂಪತಿ ಅರೆಸ್ಟ್!

ಬೆಂಗಳೂರು: ಉದ್ಯಮಿ ಮನೆಯಲ್ಲೇ ಕೆಲಸ ಮಾಡುತ್ತಿದ್ದ ದಂಪತಿ ₹25 ಲಕ್ಷ ನಗದು ಕಳವು ಮಾಡಿದ ಆರೋಪದಲ್ಲಿ ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರು ನೇಪಾಳ ಮೂಲದ ಪವನ್ ಬಿಸ್ತಾ ಮತ್ತು ಸೀತಾ ಬಿಸ್ತಾ. ಉದ್ಯಮಿ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಇವರು, ಹಣ ಇಟ್ಟಿದ್ದ ಸ್ಥಳ ಹಾಗೂ ಕೀಲಿಯ ಮಾಹಿತಿ ತಿಳಿದುಕೊಂಡು, ಮನೆಯವರ ಗೈರುಹಾಜರಿಯಲ್ಲಿ ಕಬೋರ್ಡ್‌ನಿಂದ ₹25 ಲಕ್ಷ ನಗದು ಕಳವು ಮಾಡಿ ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡ ಅಮೃತಹಳ್ಳಿ ಪೊಲೀಸರು ಆರೋಪಿಗಳನ್ನು ಬೆಂಗಳೂರು …

Read More »

ತೀರ್ಥಹಳ್ಳಿ: ಕಾರಿನಲ್ಲಿ ದನ ಕಳ್ಳತನಕ್ಕೆ ಯತ್ನ: ಡ್ಯಾಶ್‌ಕ್ಯಾಮ್‌ನಲ್ಲಿ ಕಳ್ಳರ ಕೃತ್ಯ ಸೆರೆ

ತೀರ್ಥಹಳ್ಳಿ: ಗಡಿಕಲ್ ಪ್ರದೇಶದಲ್ಲಿ ತಡರಾತ್ರಿ ದನ ಕಳ್ಳತನಕ್ಕೆ ಯತ್ನಿಸಿದ ಘಟನೆ ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ. ಕಳ್ಳರು ದನವನ್ನು ಕಾರಿನೊಳಗೆ ತುಂಬಲು ಯತ್ನಿಸುತ್ತಿದ್ದ ವೇಳೆ ಎದುರಿನಿಂದ ವಾಹನ ಬರುತ್ತಿರುವುದನ್ನು ಕಂಡು, ದನವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಾಲೂಕಿನಲ್ಲಿ ಜಾನುವಾರು ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕಳ್ಳರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.

Read More »

ಬೆಳಗಾವಿ ರೌಡಿಗಳಿಗೆ ಬಿಸಿ ಮುಟ್ಟಿಸಿದ ಪೊಲೀಸರ – ಬೆಳ್ಳಂಬೆಳಗ್ಗೆ ಮನೆ ಮೇಲೆ ರೇಡ್!

ಗೋಕಾಕ್: ರೌಡಿಶೀಟರ್‌ಗಳ ವಿರುದ್ಧ ಬೆಳಗಾವಿ ಜಿಲ್ಲೆಯ ಗೋಕಾಕ್ ಪೊಲೀಸರು ಬುಧವಾರ ಮುಂಜಾನೆ ದಿಢೀರ್ ಕಾರ್ಯಾಚರಣೆ ನಡೆಸಿ 10ಕ್ಕೂ ಹೆಚ್ಚು ಮನೆಗಳ ಮೇಲೆ ದಾಳಿ ಮಾಡಿದ್ದಾರೆ. ಡಿವೈಎಸ್ಪಿ ನೇತೃತ್ವದ ವಿಶೇಷ ತಂಡಗಳು ರೌಡಿಶೀಟರ್‌ಗಳ ಮನೆಗಳನ್ನು ಪರಿಶೀಲಿಸಿ, ಅವರ ಚಟುವಟಿಕೆಗಳ ಬಗ್ಗೆ ವಿಚಾರಣೆ ನಡೆಸಿವೆ. ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಜಾಮೀನಿನ ಮೇಲೆ ಹೊರಗಿರುವವರ ಮೇಲೆ ನಿಗಾ ಇಡುವ ಉದ್ದೇಶದಿಂದ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ಅಪರಾಧ …

Read More »

ರಾಯಚೂರು: ಕುಡಿದ ಮತ್ತಿನಲ್ಲಿ ಯರ್ರಾಬಿರ್ರಿ ಕಾರು ಚಲಾಯಿಸಿ ಡಿವೈಡರ್ ಡಿಕ್ಕಿ; ‘ಕಣ್ಣು ಮಂಜಾಗಿ’ ಹತ್ತಿಸಿದ ಎಂದ ಭೂಪ!

ರಾಯಚೂರು: ಮದ್ಯಪಾನ ಮಾಡಿ ಅತಿವೇಗವಾಗಿ ಕಾರು ಚಲಾಯಿಸಿದ್ದ ವ್ಯಕ್ತಿಯೊಬ್ಬ ಡಿವೈಡರ್‌ಗೆ ಡಿಕ್ಕಿ ಹೊಡೆದು ಅವಾಂತರ ಸೃಷ್ಟಿಸಿದ ಘಟನೆ ನಗರದಲ್ಲಿ ನಡೆದಿದೆ. ಜಿಲ್ಲಾ ಪಂಚಾಯತ್ ಕಚೇರಿ ಎದುರು ನಿಯಂತ್ರಣ ತಪ್ಪಿದ ಕಾರು ಡಿವೈಡರ್ ಮೇಲೇರಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ಕಾರಿನ ಮುಂಭಾಗ ಜಖಂಗೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಬಂದ ಟ್ರಾಫಿಕ್ ಪೊಲೀಸರು ವಿಚಾರಿಸಿದಾಗ ಚಾಲಕ ಶ್ರೀನಿವಾಸ ಗೌಡ, “ಕಣ್ಣು ಮಂಜಾಗಿ ಕಾರು ಡಿವೈಡರ್ ಮೇಲೆ ಹತ್ತಿಸಿದೆ” ಎಂದು …

Read More »

ನಿವೃತ್ತ ಯೋಧನಿಗೆ ಅಪಮಾನ – ನಡುರಸ್ತೆಯಲ್ಲಿ ಪೊಲೀಸರಿಂದ ಕಿರುಕುಳ ಆರೋಪ!

ಗುರುಗ್ರಾಮ: ನಿವೃತ್ತ ಸೇನಾ ಮೇಜರ್ ಹಮೇಂದ್ರ ಸಿಂಗ್ ಹಾಗೂ ಅವರ ಕುಟುಂಬಕ್ಕೆ ಸಂಚಾರಿ ಪೊಲೀಸರು ತಡರಾತ್ರಿ ಸುಮಾರು ಒಂದೂವರೆ ಗಂಟೆ ಕಾಲ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಜೂನ್ 7ರಂದು ಪತ್ನಿ ಮತ್ತು ಇಬ್ಬರು ಪುತ್ರಿಯರೊಂದಿಗೆ ಪ್ರಯಾಣಿಸುತ್ತಿದ್ದ ವೇಳೆ ಡ್ರಂಕ್ ಅಂಡ್ ಡ್ರೈವ್ ತಪಾಸಣೆಗೆ ಪೊಲೀಸರು ಕಾರು ತಡೆದಿದ್ದಾರೆ. ಪರೀಕ್ಷೆಯಲ್ಲಿ ಆಲ್ಕೋಹಾಲ್ ಪ್ರಮಾಣ 13 mg/100 ml ಮಾತ್ರ ಕಂಡುಬಂದಿದ್ದು, ಇದು ಕಾನೂನುಬದ್ಧ ಮಿತಿಯೊಳಗೇ ಇತ್ತು. ಯಾವುದೇ ನಿಯಮ ಉಲ್ಲಂಘನೆ …

Read More »

ಟ್ಯಾಟೊ-313 ಗ್ಯಾಂಗ್‌ನ ಇಬ್ಬರು ಕಳ್ಳರ ಬಂಧನ, ಚಿನ್ನಾಭರಣ ವಶ

ಉಡುಪಿ: ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಅಂತರರಾಜ್ಯ “ಟ್ಯಾಟೊ-313” ಗ್ಯಾಂಗ್‌ನ ಇಬ್ಬರು ಆರೋಪಿಗಳನ್ನು ಮಣಿಪಾಲ ಪೊಲೀಸರು ಬಂಧಿಸಿ ₹7.90 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಬಂಧಿತರು ಬೆಂಗಳೂರಿನ ದರ್ಶನ್ ಆರ್. (21) ಹಾಗೂ ದಾವಣಗೆರೆಯ ಚಂದ್ರು (26). ಫೆಬ್ರವರಿಯಲ್ಲಿ ಕುಂಜಿಬೆಟ್ಟಿನ ಮನೆಯಲ್ಲಿ ನಡೆದ ₹7 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಪ್ರಕರಣದಲ್ಲಿ ಇವರ ಪಾತ್ರ ಬೆಳಕಿಗೆ ಬಂದಿದೆ. ಗಸ್ತಿನ ವೇಳೆ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು, ಶಿವಮೊಗ್ಗದ ಲಾಡ್ಜ್‌ನಿಂದ …

Read More »

ಮುಂಬೈ ಕ್ರೈಂ ಬ್ರಾಂಚ್ ಹೆಸರಿನಲ್ಲಿ ಬಾಗಲಕೋಟೆ ಸರ್ಕಾರಿ ನೌಕರನಿಗೆ ಧಮ್ಕಿ!

ಬಾಗಲಕೋಟೆ: ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಸೈಬರ್ ವಂಚಕರು ಹಿರಿಯ ಸರ್ಕಾರಿ ನೌಕರರೊಬ್ಬರಿಗೆ ಭಯ ಹುಟ್ಟಿಸಿ ₹83.82 ಲಕ್ಷ ಹಣ ದೋಚಿರುವ ಘಟನೆ ಬಾಗಲಕೋಟೆಯಲ್ಲಿ ಬೆಳಕಿಗೆ ಬಂದಿದೆ. ಯುಕೆಪಿ ಪುನರ್ವಸತಿ ಕಚೇರಿಯ ಹಿರಿಯ ಬೆರಳಚ್ಚುಗಾರ ಎಚ್.ವಿ. ಸುರೇಶ್ ರಾವ್ (59) ಅವರಿಗೆ TRAI ಹಾಗೂ ಮುಂಬೈ ಕ್ರೈಂ ಬ್ರಾಂಚ್ ಅಧಿಕಾರಿಗಳ ಹೆಸರಿನಲ್ಲಿ ಕರೆ ಮಾಡಿದ ವಂಚಕರು, ದೇಶವಿರೋಧಿ ಚಟುವಟಿಕೆ ಹಾಗೂ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಸಿಲುಕಿಸಿದ್ದಾಗಿ ನಂಬಿಸಿ ಬೆದರಿಕೆ ಹಾಕಿದ್ದಾರೆ. ವಿಡಿಯೋ …

Read More »

ಮಹಿಳೆಯ ಸಾಮೂಹಿಕ ಅತ್ಯಾಚಾರ ಆರೋಪ : 10 ಮಂದಿ ಪೊಲೀಸರ ವಶಕ್ಕೆ!

ಚನ್ನಗಿರಿ : ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಹಾಗೂ ಫೋಟೋ-ವಿಡಿಯೋಗಳನ್ನು ಚಿತ್ರೀಕರಿಸಿ ವೈರಲ್‌ ಮಾಡಿರುವ ಆರೋಪದಡಿ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ 10 ಮಂದಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಈ ಘಟನೆ ಸಂಬಂಧ 10 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಚನ್ನಗಿರಿ ತಾಲೂಕಿನ ಯಲೋದಹಳ್ಳಿ ಗ್ರಾಮದ ಚಟಾಕಿ ನಾಗರಾಜ, ಇಸ್ತ್ರೀ ನಾಗರಾಜ, ಮಧು, ಅರ್ಜುನ, ಬಸವಂತ, ಕುಂದೂರ ಮಾರುತಿ, ಹೆಗ್ಗ ಮಾರುತಿ, ಮನು, ಜೋಗಿ ಸುನೀಲ …

Read More »