Breaking News

ಟ್ಯಾಟೊ-313 ಗ್ಯಾಂಗ್‌ನ ಇಬ್ಬರು ಕಳ್ಳರ ಬಂಧನ, ಚಿನ್ನಾಭರಣ ವಶ

ಉಡುಪಿ: ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಅಂತರರಾಜ್ಯ “ಟ್ಯಾಟೊ-313” ಗ್ಯಾಂಗ್‌ನ ಇಬ್ಬರು ಆರೋಪಿಗಳನ್ನು ಮಣಿಪಾಲ ಪೊಲೀಸರು ಬಂಧಿಸಿ ₹7.90 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಬಂಧಿತರು ಬೆಂಗಳೂರಿನ ದರ್ಶನ್ ಆರ್. (21) ಹಾಗೂ ದಾವಣಗೆರೆಯ ಚಂದ್ರು (26). ಫೆಬ್ರವರಿಯಲ್ಲಿ ಕುಂಜಿಬೆಟ್ಟಿನ ಮನೆಯಲ್ಲಿ ನಡೆದ ₹7 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಪ್ರಕರಣದಲ್ಲಿ ಇವರ ಪಾತ್ರ ಬೆಳಕಿಗೆ ಬಂದಿದೆ. ಗಸ್ತಿನ ವೇಳೆ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು, ಶಿವಮೊಗ್ಗದ ಲಾಡ್ಜ್‌ನಿಂದ ಕಳುವಾದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ರೈಲ್ವೆ ನಿಲ್ದಾಣಗಳ ಸಮೀಪದ ಮನೆಗಳನ್ನು ಗುರಿಯಾಗಿಸಿ ಕಳ್ಳತನ ಮಾಡುತ್ತಿದ್ದ ಬಗ್ಗೆ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಇನ್ನಿಬ್ಬರು ಆರೋಪಿಗಳಿಗಾಗಿ ಶೋಧ ಮುಂದುವರಿದಿದೆ.

Share News

About BigTv News

Check Also

ಉಡುಪಿ: ಎಂಬ್ರಾಯ್ಡರಿ ಅಂಗಡಿಗೆ ನುಗ್ಗಿ ಮಾಲಕನ ಮೇಲೆ ಆಸಿಡ್ ದಾಳಿ!

ಉಡುಪಿ: ಬಾಡಿಗೆ ಮನೆಯ ಠೇವಣಿ ಹಣ ಮರಳಿ ನೀಡದ ವಿಚಾರಕ್ಕೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಎಂಬ್ರಾಯ್ಡರಿ ಅಂಗಡಿ ಮಾಲಕನ ಮೇಲೆ …

Leave a Reply

Your email address will not be published. Required fields are marked *