ಬಾಗಲಕೋಟೆ: ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಸೈಬರ್ ವಂಚಕರು ಹಿರಿಯ ಸರ್ಕಾರಿ ನೌಕರರೊಬ್ಬರಿಗೆ ಭಯ ಹುಟ್ಟಿಸಿ ₹83.82 ಲಕ್ಷ ಹಣ ದೋಚಿರುವ ಘಟನೆ ಬಾಗಲಕೋಟೆಯಲ್ಲಿ ಬೆಳಕಿಗೆ ಬಂದಿದೆ. ಯುಕೆಪಿ ಪುನರ್ವಸತಿ ಕಚೇರಿಯ ಹಿರಿಯ ಬೆರಳಚ್ಚುಗಾರ ಎಚ್.ವಿ. ಸುರೇಶ್ ರಾವ್ (59) ಅವರಿಗೆ TRAI ಹಾಗೂ ಮುಂಬೈ ಕ್ರೈಂ ಬ್ರಾಂಚ್ ಅಧಿಕಾರಿಗಳ ಹೆಸರಿನಲ್ಲಿ ಕರೆ ಮಾಡಿದ ವಂಚಕರು, ದೇಶವಿರೋಧಿ ಚಟುವಟಿಕೆ ಹಾಗೂ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಸಿಲುಕಿಸಿದ್ದಾಗಿ ನಂಬಿಸಿ ಬೆದರಿಕೆ ಹಾಕಿದ್ದಾರೆ. ವಿಡಿಯೋ ಕಾಲ್‌ನಲ್ಲಿ ನಕಲಿ ಪೊಲೀಸ್, ವಕೀಲ ಹಾಗೂ ನ್ಯಾಯಾಧೀಶರ ವೇಷದಲ್ಲಿ ವಿಚಾರಣೆ ನಡೆಸಿದ ಖದೀಮರು, ಪ್ರಕರಣದಿಂದ ಹೆಸರು ಕ್ಲಿಯರ್ ಮಾಡಲು ಹಣ ವರ್ಗಾಯಿಸುವಂತೆ ಒತ್ತಾಯಿಸಿದ್ದಾರೆ. ಇದನ್ನು ನಂಬಿದ ಸುರೇಶ್ ರಾವ್ ಅವರು ವಿವಿಧ ಖಾತೆಗಳಿಗೆ ಒಟ್ಟು ₹83.82 ಲಕ್ಷ ವರ್ಗಾಯಿಸಿದ್ದು, ಬಳಿಕ ಮೋಸ ಹೋಗಿರುವುದು ಗೊತ್ತಾಗಿ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

