Breaking News

BigTv News

ನಡು ರಸ್ತೆಯಲ್ಲೇ ರೌಡಿಶೀಟರ್ ಕೊಚ್ಚಿ ಕೊಲೆ!

ದೇವನಹಳ್ಳಿ: ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ರೌಡಿ ಶೀಟರ್ ಒಬ್ಬನನ್ನು ದುಷ್ಕರ್ಮಿಗಳು ನಡುರಸ್ತೆಯಲ್ಲೇ ಅಡ್ಡಗಟ್ಟಿ ತಲವಾರಿನಿಂದ ಕೊಚ್ಚಿ ಬರ್ಬರ ಕೊಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆಯಲ್ಲಿ ನಡೆದಿದೆ.ಕೊಲೆಯಾದ ವ್ಯಕ್ತಿಯನ್ನು ಖಲೀಮ್ ಖಾನ್ (35) ಎಂದು ಗುರುತಿಸಲಾಗಿದೆ. ಸೂಲಿಬೆಲೆಯಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದ ಈತ ಇಂದು ಬೆಳಿಗ್ಗೆ ತನ್ನ ಬೈಕ್‌ನಲ್ಲಿ ತೆರಳುತ್ತಿದ್ದಾಗ ದುಷ್ಕರ್ಮಿಗಳು ಹೊಂಚು ಹಾಕಿ ದಾಳಿ ನಡೆಸಿದ್ದಾರೆ. ಬೈಕ್ ಅಡ್ಡಗಟ್ಟಿದ ಆಸಾಮಿಗಳು ತಲವಾರ್ ಬಳಸಿ ಖಲೀಮ್ …

Read More »

ಬೆಳ್ಳಂಬೆಳಗ್ಗೆ ರೌಡಿಶೀಟರ್‌ ಬರ್ಬರ ಹತ್ಯೆ ; ತಲ್ವಾರ್‌ನಿಂದ ಕೊಚ್ಚಿ ಕೊಂದ ದುಷ್ಕರ್ಮಿಗಳು!

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸೂಲಿಬೆಲೆಯಲ್ಲಿ ಭಾನುವಾರ ಬೆಳ್ಳಂಬೆಳಗ್ಗೆ ರೌಡಿಶೀಟರ್ ಒಬ್ಬನನ್ನು ದುಷ್ಕರ್ಮಿಗಳು ನಡುರಸ್ತೆಯಲ್ಲೇ ತಲ್ವಾರ್‌ನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ನಡೆದಿದೆ. ಖಲೀಮ್ ಖಾನ್ (35) ಕೊಲೆಯಾದ ವ್ಯಕ್ತಿ. ಸೂಲಿಬೆಲೆಯಲ್ಲಿ ಹಣ್ಣಿನ ವ್ಯಾಪಾರ ನಡೆಸುತ್ತಿದ್ದ ಖಲೀಮ್ ಖಾನ್ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ತಲ್ವಾರ್‌ ಸೇರಿದಂತೆ ಮಾರಕಾಸ್ತ್ರಗಳನ್ನು ಬಳಸಿ ದೇಹದ ವಿವಿಧ ಭಾಗಗಳಿಗೆ ಸುಮಾರು 8ರಿಂದ 10 ಬಾರಿ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ …

Read More »

ಜೂಜು ಅಡ್ಡೆ ಮೇಲೆ ದಾಳಿ : 16 ಜನ ಪೊಲೀಸರ ವಶಕ್ಕೆ!

ಬೀದರ್ : ಎರಡು ಪ್ರತ್ಯೇಕ ಜೂಜಾಟದ ಅಡ್ಡೆ ಮೇಲೆ ದಾಳಿ ನಡೆಸಿದ ಗಾಂಧಿ ಗಂಜ್ ಠಾಣೆ ಪೊಲೀಸರು 16 ಜನರನ್ನು ವಶಕ್ಕೆ ಪಡೆದುಕೊಂಡಿದ್ಧಾರೆ. ಗಾಂಧಿಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ವಿಜಯಕುಮಾರ್ ಪಾಟೀಲ್ ಅವರ ಕಟ್ಟಡದ ಮೊದಲನೇ ಮಹಡಿಯಲ್ಲಿ 9 ರಿಂದ 10 ಜನರು ಜೂಜಾಟ ಆಡುತ್ತಿದ್ದಾರೆ ಎಂದು ದೊರೆತ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ 99,100 ರೂ. ನಗದು, 4 ಲಕ್ಷ ರೂ. ಮೌಲ್ಯದ …

Read More »

₹16.40 ಲಕ್ಷ ಮೌಲ್ಯದ ಡ್ರಗ್ಸ್‌ ವಶ: ಇಬ್ಬರ ಬಂಧನ

ಮಂಗಳೂರು: ಸಿಸಿಬಿ ಪೊಲೀಸರು ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಡ್ರಗ್ಸ್‌ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿ, 164 ಗ್ರಾಂ ಎಂಡಿಎಂಎ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಮಾದಕ ವಸ್ತುಗಳ ಮೌಲ್ಯ ಸುಮಾರು ₹16.40 ಲಕ್ಷ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರಾದ ಪ್ರಣಾಮ್ ಕೋಟ್ಯಾನ್ ಮತ್ತು ಧನರಾಜ್ ಪೂಜಾರಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಎಂಡಿಎಂಎ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಆರೋಪಿಗಳಿಂದ ಮಾದಕ ವಸ್ತು, ಮೊಬೈಲ್ ಫೋನ್‌, ಜಿಪ್-ಲಾಕ್ ಕವರ್‌ ಹಾಗೂ ಡಿಜಿಟಲ್ ತೂಕಮಾಪನ …

Read More »

ಸ್ನಾನದ ವಿಡಿಯೊ ಮಾಡಿ ಬೆದರಿಕೆ; ಮಹಿಳೆ ಆತ್ಮಹತ್ಯೆ

ಹುಬ್ಬಳ್ಳಿ: ಸ್ನಾನ ಮಾಡುತ್ತಿದ್ದಾಗ ಮಹಿಳೆಯೊಬ್ಬರ ಫೋಟೊ ತೆಗೆದು, ವಿಡಿಯೊ ಮಾಡಿಕೊಂಡು ಕಿರುಕುಳ ನೀಡಿದ್ದಲ್ಲದೆ, ಅವರಿಂದ ₹17 ಲಕ್ಷ ವಸೂಲಿ ಮಾಡಿದ್ದರಿಂದ, ನೊಂದು ಅವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಉಣಕಲ್‌ನಲ್ಲಿ ನಡೆದಿದೆ. ಈ ಬಗ್ಗೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಧಾ ಹನಸಿ (42) ಆತ್ಮಹತ್ಯೆ ಮಾಡಿಕೊಂಡವರು. ಸಿದ್ಧಾರೂಢ, ಅರುಣ, ಮೀನಾಕ್ಷಿ, ಮಲ್ಲಿಕಾರ್ಜುನ, ಈರಪ್ಪ, ಪ್ರಕಾಶ, ಬಸಲಿಂಗಪ್ಪ, ಶಿವಾನಂದ, ಗಿರಿಜಾ, ಮಲ್ಲಿಕಾರ್ಜುನ ವಿರುದ್ಧ ಸುಧಾ ಅವರ ಪತಿ ಮಂಜುನಾಥ …

Read More »

ತಡರಾತ್ರಿ ರೌಡಿಶೀಟರ್ ಅಟ್ಟಾಡಿಸಿ 20ಕ್ಕೂ ಹೆಚ್ಚು ಬಾರಿ ಇರಿದು ಬರ್ಬರ ಹತ್ಯೆ

ಬೆಂಗಳೂರು: ರೌಡಿಶೀಟರ್ ನನ್ನು ಅಟ್ಟಾಡಿಸಿ 20ಕ್ಕೂ ಹೆಚ್ಚು ಬಾರಿ ಇರಿದು ಬರ್ಬರವಾಗಿ ಹತ್ಯೆಗೈದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಸೂಲಿಬೆಲೆ ಗ್ರಾಮದ ಜನತಾ ಕಾಲೋನಿ ಬಳಿ ತಡರಾತ್ರಿ ನಡೆದಿದೆ.ಸೂಲಿಬೆಲೆಯ ಖಲೀಂಉಲ್ಲಾಖಾನ್(35) ಕೊಲೆಯಾದ ರೌಡಿಶೀಟರ್. ಆತ ರಾತ್ರಿ ಫೋನ್ ನಲ್ಲಿ ಮಾತನಾಡುತ್ತಿದ್ದ ವೇಳೆ ಅಪರಿಚಿತರ ಗುಂಪು ದಾಳಿ ಮಾಡಿದೆ. ಖಲೀಂನನ್ನು ಅಟ್ಟಾಡಿಸಿದ ದುಷ್ಕರ್ಮಿಗಳು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ದೇಹದ ಭಾಗಗಳಿಗೆ 20ಕ್ಕೂ ಹೆಚ್ಚು ಬಾರಿ ಚುಚ್ಚಿ ಕೊಲೆಗೈದ …

Read More »

ಇನ್‌ಸ್ಟಾಗ್ರಾಮ್ ಸ್ನೇಹದಿಂದ ಉಗ್ರರ ಜಾಲಕ್ಕೆ? ಮುಂಬೈ ಉದ್ಯಮಿ ಹತ್ಯೆ ಸಂಚು ಆರೋಪದಲ್ಲಿ ಇಬ್ಬರ ಬಂಧನ

ಕರ್ನಾಟಕದಲ್ಲಿ ಭಾರಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದರೆಂಬ ಆರೋಪದ ಮೇಲೆ ಇಬ್ಬರು ಶಂಕಿತರನ್ನು ಪೊಲೀಸರು ಬಂಧಿಸಿದ್ದಾರೆ. ದಾವಣಗೆರೆಯ ಜಮೀರ್ ಖಾನ್ ಮತ್ತು ತುಮಕೂರಿನ ಅಲ್ಲಾಭಕ್ಷಿ ಬಂಧಿತರು. ಸಾಮಾಜಿಕ ಜಾಲತಾಣಗಳ ಮೂಲಕ ವಿದೇಶದಲ್ಲಿದ್ದ ಉಗ್ರ ಸಂಪರ್ಕಗಳಿಗೆ ಇವರು ಸಂಪರ್ಕ ಹೊಂದಿದ್ದರು ಎನ್ನಲಾಗಿದೆ. ಪೊಲೀಸರ ಮಾಹಿತಿ ಪ್ರಕಾರ, ಇಬ್ಬರೂ ಪಾಕಿಸ್ತಾನ ಮೂಲದ ಶಂಕಿತ ಹ್ಯಾಂಡ್ಲರ್‌ಗಳ ಸಂಪರ್ಕಕ್ಕೆ ಬಂದಿದ್ದು, ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಉದ್ದೇಶದ ಸಂಚಿನಲ್ಲಿ ಭಾಗಿಯಾಗಿದ್ದರೆಂಬ ಆರೋಪ ಕೇಳಿಬಂದಿದೆ. ಮುಂಬೈನ ಉದ್ಯಮಿಯೊಬ್ಬರ ಮೇಲೆ …

Read More »

ಮದುವೆ ಆಗೋದಾಗಿ ನಂಬಿಸಿ ಯುವಕನಿಗೆ 35 ಲಕ್ಷ ರೂ ವಂಚಿಸಿದ ಯುವತಿ

ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ಯುವತಿಯೋರ್ವಳು ಯುವಕನಿಂದ 35 ಲಕ್ಷ ರೂ. ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಅನಿಲ್ ಎಂಬ ಯುವಕ ನೀಡಿದ ದೂರಿನ ಮೇರೆಗೆ ಆಗ್ನೇಯ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮ್ಯಾಟ್ರಿಮೋನಿ ವೆಬ್‌ಸೈಟ್ ಮೂಲಕ ಪರಿಚಯವಾದ ಲಕ್ಷ್ಮೀ ಎಂಬ ಯುವತಿ, ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ ಎಂದು ನಂಬಿಸಿ ಅನಿಲ್‌ನಿಂದ ಹಂತ ಹಂತವಾಗಿ 35 ಲಕ್ಷ ರೂ. ಹೂಡಿಕೆ …

Read More »

ಆನ್‌ಲೈನ್‌ ಗೇಮ್ ಆಡದಂತೆ ಬುದ್ದಿ ಹೇಳಿದ್ದಕ್ಕೆ ಅಕ್ಕ, ಅಪ್ಪನನ್ನು ಇರಿದು‌ ಕೊಂದ ಯುವಕ!

ಗಂಗಾವತಿ: ಆನ್‌ಲೈನ್ ಗೇಮ್ ಚಟದಿಂದ ಮನೆಯಲ್ಲಿ ನಡೆದ ಮಾತಿನ ಚಕಮಕಿ ದುರಂತಕ್ಕೆ ತಿರುಗಿ, ಯುವಕನೊಬ್ಬ ತನ್ನ ತಂದೆ ಹಾಗೂ ಅಕ್ಕನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೊಸ ಅಯೋಧ್ಯೆ ಗ್ರಾಮದಲ್ಲಿ ನಡೆದಿದೆ. ವೆಂಕಟನಾಯ್ಡು (45) ಮತ್ತು ಪ್ರಗತಿ (19) ಮೃತಪಟ್ಟಿದ್ದು, ತಾಯಿ ಸೌಜನ್ಯ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೊಬೈಲ್‌ನಲ್ಲಿ ಗೇಮ್ ಆಡದಂತೆ ಬುದ್ಧಿಮಾತು ಹೇಳಿದ್ದಕ್ಕೆ ಸಾಯಿ ವೆಂಕಟಮಣಿ (18) ಆಕ್ರೋಶಗೊಂಡು ಈ ಕೃತ್ಯ …

Read More »

ಪೊಲೀಸರ ಸೋಗಿನಲ್ಲಿ ಮಾಂಗಲ್ಯ ಸರ ಕಳ್ಳತನ

ಕನಕಪುರ: ಪೊಲೀಸರ ಸೋಗಿನಲ್ಲಿ ಮಹಿಳೆಯ 43 ಗ್ರಾಂ ಮಾಂಗಲ್ಯ ಸರ ಕಳ್ಳತನ ಮಾಡಿರುವ ಘಟನೆ ನಗರದ ಬಸ್ ನಿಲ್ದಾಣದ ಬಳಿ ನಡೆದಿದೆ. ಕಸಬಾ ಹೋಬಳಿ ಶ್ರೀನಿವಾಸನಹಳ್ಳಿ ಗ್ರಾಮದ ಮುನಿಸಿದ್ದೇಗೌಡ ಪತ್ನಿ ಗೌರಮ್ಮ ಎಂಬುವರು ಮಾಂಗಲ್ಯ ಸರ ಕಳೆದುಕೊಂಡಿದ್ದಾರೆ. ಬಳೆ ಚೆನ್ನವಲಸೆ ಗ್ರಾಮದಲ್ಲಿ ನಡೆಯುತ್ತಿದ್ದ ಊರ ಹಬ್ಬಕ್ಕೆ ಹೋಗಲೆಂದು ಬಸ್ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಕಳ್ಳತನ ಮಾಡಲಾಗಿದೆ. ಗೌರಮ್ಮ ಅವರು ತಮ್ಮ ಪರಿಚಯದ ಅರುಣ್ ಎಂಬುವರ ಬೈಕ್‌ನಲ್ಲಿ ಬಸ್ ನಿಲ್ದಾಣಕ್ಕೆ ಬಂದಿದ್ದಾರೆ. ಚಾಮುಂಡೇಶ್ವರಿ …

Read More »