Warning: Trying to access array offset on value of type bool in /home/eamphica/public_html/wp-content/themes/sahifa/framework/functions/theme-functions.php on line 626
Breaking News

Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73

ಇಂದುಸಂಜೆ ವಾಣಿಜ್ಯ ನಗರಿಯಲ್ಲಿ ಮೋದಿ ರಣಕಹಳೆ

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ ಲೋಕಸಭಾ ಚುನಾವಣಾ ಪ್ರಚಾರಕ್ಕೆ ವೇದಿಕೆ ಸಿದ್ದವಾಗಿದೆ. ನಗರದ ಗಬ್ಬೂರು ಬೈಪಸ್ ಹತ್ತಿರದ ಕೆ ಎಲ್ ಇ ಮೆಡಿಕಲ್ ಕಾಲೇಜು ಮೈದಾನದಲ್ಲಿ ಬೃಹತ್ ವೇದಿಕೆ ಸಿದ್ಧವಾಗಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿಯ ಮೊದಲ ಚುನಾವಣಾ ರ‍್ಯಾಲಿಗೆ ಕ್ಷಣಗಣನೆ ಪ್ರಾರಂಭವಾಗಿದೆ.
ಇಂದು ಸಂಜೆ 5 ಗಂಟೆಗೆ ನಡೆಯುವ ರ‍್ಯಾಲಿಗೂ ಮುನ್ನ ಗಬ್ಬೂರ ಕ್ರಾಸ್‌ನಲ್ಲಿರುವ ಟ್ರಕ್‌ ಟರ್ಮಿನಲ್‌ ಬಳಿ ಪ್ರಧಾನಿ ಮೋದಿ ಅವರು 1200 ಕೋಟಿ ರೂ. ವೆಚ್ಚದ ಐಐಟಿ ಮೊದಲ ಹಂತದ ಕಟ್ಟಡಕ್ಕೆ, 110 ಕೋಟಿ ರೂ. ವೆಚ್ಚದ ಐಐಐಟಿ ಕಾಲೇಜು ಕಟ್ಟಡಕ್ಕೆ ಶಂಕು ಸ್ಥಾಪನೆ, ಮನೆ ಮನೆಗೆ ಗ್ಯಾಸ್‌ ಪೈಪ್‌ಲೈನ್‌ ಸಂಪರ್ಕ ಯೋಜನೆಯಡಿ ನವನಗರದ 500 ಮನೆಗಳಿಗೆ ಕಲ್ಪಿಸಿದ ಗ್ಯಾಸ್‌ ಸಂಪರ್ಕ ವ್ಯವಸ್ಥೆ ಉದ್ಘಾಟಿಸಲಿದ್ದಾರೆ.
ಉದ್ಘಾಟನೆಯ ನಂತರ ನಡೆಯಲಿರುವ ರ್ಯಾಲಿ ಮೂಲಕ ಮತ್ತೊಮ್ಮೆ ಬಹುಮತದೊಂದಿಗೆ ದಿಲ್ಲಿ ಗದ್ದುಗೆ ಏರಲು ಸಿದ್ಧತೆ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಹುಬ್ಬಳ್ಳಿಯಿಂದಲೇ 2019ರ ಲೋಕಸಭೆ ಚುನಾವಣೆ ಪ್ರಚಾರಕ್ಕೆ ರಣಕಹಳೆ ಮೊಳಗಿಸಲಿದ್ದಾರೆ. ಇನ್ನೊಂದಡೆ ಚುನಾವಣೆಗೂ ಮುನ್ನ ರಾಜ್ಯಾದ್ಯಂತ ಮೋದಿ ಹವಾ ಸೃಷ್ಟಿಸಲು ರಾಜ್ಯ ಬಿಜೆಪಿ ಮುಂದಾಗಿದೆ. ಇವೆರಡಕ್ಕೂ ಉತ್ತರ ಕರ್ನಾಟಕದ ಹೆಬ್ಬಾಗಿಲು ಹುಬ್ಬಳ್ಳಿ ವೇದಿಕೆಯಾಗಲಿದೆ.
ನಗರವೆಲ್ಲ ಕೇಸರಿಮಯ- 2018ರ ಮೇ 6ರಂದು ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಹುಬ್ಬಳ್ಳಿಗೆ ಆಗಮಿಸಿದ್ದ ಪ್ರಧಾನಿ ಮೋದಿ 9 ತಿಂಗಳ ನಂತರ ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮಹಾನಗರ ಸಂಪೂರ್ಣ ಕೇಸರಿಮಯವಾಗಿದೆ. ಪ್ರಮುಖ ರಸ್ತೆಗಳ 20 ಕಡೆಯಲ್ಲಿ ಬೃಹತ್‌ ಸ್ವಾಗತ ಕಮಾನುಗಳನ್ನು ನಿರ್ಮಿಸಲಾಗಿದೆ ಹಾಗೂ 25 ಪ್ರಮುಖ ವೃತ್ತಗಳು ಬಿಜೆಪಿ ಧ್ವಜ, ಭಗವಾಧ್ವಜ ಹಾಗೂ ಮೋದಿ ಆಗಮನದ ಜಾಹೀರಾತು ಫ್ಲೆಕ್ಸ್‌ಗಳು ನಗರಾದ್ಯಂತ ರಾರಾಜಿಸುತ್ತವೆ.
ಚುನಾವಣಾ ಪ್ರಚಾರಕ್ಕೆ ಅಧಿಕೃತ ಚಾಲನೆ ಗಬ್ಬೂರ ಬೈಪಾಸ್‌ ಬಳಿಯ ಕೆಎಲ್‌ಇ ಸಂಸ್ಥೆಯ ಬಯಲು ಜಾಗದಲ್ಲಿ ಧಾರವಾಡ, ಹಾವೇರಿ ಹಾಗೂ ಉತ್ತರ ಕನ್ನಡ ಲೋಕಸಭಾ ಕ್ಷೇತ್ರಗಳ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುವ ಮೂಲಕ ಚುನಾವಣಾ ಪ್ರಚಾರಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ. 30 ಎಕರೆ ಬಯಲು ಜಾಗದಲ್ಲಿ ಸಮಾವೇಶ ನಡೆಯಲಿದ್ದು, 60-40 ಅಳತೆ ಬೃಹತ್‌ ಮುಖ್ಯ ವೇದಿಕೆ ಹಾಗೂ ರಾಜ್ಯ, ರಾಷ್ಟ್ರ ಮಟ್ಟದ ನಾಯಕರಿಗೆ ಎರಡು ಸಮಾನಾಂತರ ವೇದಿಕೆ ನಿರ್ಮಿಸಲಾಗಿದೆ. ಮೂರು ಲೋಕಸಭಾ ಕ್ಷೇತ್ರದ ನಾಲ್ಕು ಜಿಲ್ಲೆಗಳಿಂದ ಸುಮಾರು 3 ಲಕ್ಷ ಜನ ಸೇರುವ ನಿರೀಕ್ಷೆಯಿದ್ದು, 2 ಸಾವಿರ ವಿಶೇಷ ಆಸನ ಸೇರಿದಂತೆ 90 ಸಾವಿರ ಆಸನ ವ್ಯವಸ್ಥೆ ಮಾಡಲಾಗಿದೆ.
ರ್ಯಾಲಿಯಲ್ಲಿ ಗಣ್ಯರ ದಂಡು- ಮೋದಿ ರ‍್ಯಾಲಿಯಲ್ಲಿ ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ಅನಂತಕುಮಾರ ಹೆಗಡೆ, ರಮೇಶ ಜಿಗಜಿಣಗಿ, ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಗಣ್ಯರ ದಂಡೆ ಪಾಲ್ಗೊಳ್ಳಲಿದೆ.
ಲೋಕಸಭೆ ಚುನಾವಣೆ ಪ್ರಚಾರಕ್ಕೆ ಪ್ರಧಾನಿ ಮೋದಿ ಅವರ ಪ್ರಥಮ ರ‍್ಯಾಲಿಗೆ ಹುಬ್ಬಳ್ಳಿ ಸಜ್ಜುಗೊಂಡಿದ್ದು, ಮೂರು ಲೋಕಸಭಾ ಕ್ಷೇತ್ರಗಳ ನಾಲ್ಕು ಜಿಲ್ಲೆಗಳಿಂದ 3 ಲಕ್ಷಕ್ಕೂ ಹೆಚ್ಚು ಜನರು ಆಗಮಿಸಲಿದ್ದಾರೆ.
ಮೋದಿ ಕಾರ್ಯಕ್ರಮ ವಿವರ-5.40 ವಿಶೇಷ ವಿಮಾನದ ಮೂಲಕ ಹುಬ್ಬಳ್ಳಿ- ವಿಮಾನ ನಿಲ್ದಾಣಕ್ಕೆ ಆಗಮನ . 6.15ಕ್ಕೆ – ಸರ್ಕಾರಿ ವೇದಿಕೆಗೆ ಆಗಮನ (ಐಐಟಿ . ಕಿಮ್ಸ್ ಕಟ್ಟಡಗಳ ಉದ್ಘಾಟನೆ ). 6.30 ಕ್ಕೆ ಖಾಸಗಿ ವೇದಿಕೆ ಗೆ ಆಗಮನ. 6.35 ಸಾರ್ವಜನಿಕರನ್ನು ಉದ್ದೇಶಸಿ ಭಾಷಣ. 40-50 ನಿಮಿಷಗಳ ಕಾಲ ಭಾಷಣ ಸಾಧ್ಯತೆ. 7.40 ಕ್ಕೆ ವಿಮಾನ ನಿಲ್ದಾಣ ಕ್ಕೆ ಪ್ರಯಾಣ.8.10 ಕ್ಕೆ ದೆಹಲಿಯತ್ತ ಪ್ರಯಾಣ.

Share News

About Shaikh BIG TV NEWS, Hubballi

Check Also

ಹುಬ್ಬಳ್ಳಿಗೆ ನೂತನ ಕಮಿಷನರ್ ಎಂಟ್ರಿ! ಇಂದು ಮಧ್ಯಾಹ್ನ 2 ಗಂಟೆಯೊಳಗೆ ಭೂಷಣ್ ಬೋರ್ಸೆ ಆಗಮನ..

ನಿನ್ನೆ ಸುದ್ದಿ… ಇಂದು ಕಮಿಷನರ್ ಎಂಟ್ರಿ! ಅವಳಿ ನಗರದ ಖಾಕಿಗೆ ಭೂಷಣ್ ಬೋರ್ಸೆ ಸಾರಥ್ಯ.. ನಿನ್ನೆ ಬ್ರೇಕ್ ಮಾಡಿದ ಸುದ್ದಿ …

Leave a Reply

Your email address will not be published. Required fields are marked *