ಪಾಕಿಸ್ತಾನದ ಕುಖ್ಯಾತ ಗೂಂಡಾ ಶಹಜಾದ್ ಭಟ್ಟಿ ಜೊತೆ ಸಂಪರ್ಕ ಹೊಂದಿದ್ದ ಶಂಕೆಯ ಮೇರೆಗೆ, ನವದೆಹಲಿಯ ವಿಶೇಷ ಪಡೆ ಹಾಗೂ ಠಾಣೆ ಎಟಿಎಸ್ ಜಂಟಿ ಕಾರ್ಯಾಚರಣೆ ನಡೆಸಿ ಮುಂಬ್ರಾದ 26 ವರ್ಷದ ತೌಕೀರ್ ರಿಜ್ವಾನ್ ಅಹಮದ್ ಶೇಖ್ನನ್ನು ವಶಕ್ಕೆ ಪಡೆದಿವೆ. ಆತನ ಬ್ಯಾಂಕ್ ಖಾತೆಗೆ ಪಾಕಿಸ್ತಾನದಿಂದ ಹಣ ಜಮೆಯಾಗಿರುವ ಮಾಹಿತಿ ತನಿಖೆಯಲ್ಲಿ ಪತ್ತೆಯಾಗಿದ್ದು, ಹಣದ ಮೂಲ ಮತ್ತು ಉದ್ದೇಶದ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಆದರೆ ತೌಕೀರ್ ನಿರಪರಾಧಿ ಎಂದು ಆತನ …
Read More »ಬೈಕ್ ಅಡ್ಡಗಟ್ಟಿ ಹಲ್ಲೆ
ಹುಬ್ಬಳ್ಳಿ: ಹಳೇ ದ್ವೇಷದಿಂದ ನಾಲ್ಕೈದು ಜನರು ಸೇರಿ ಯುವಕನೊಬ್ಬನನ್ನು ರಸ್ತೆಯಲ್ಲಿ ಅಡ್ಡಗಟ್ಟಿ ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಘಟನೆ ಇಲ್ಲಿಯ ಉಣಕಲ್ ವೃತ್ತದ ಬ್ರಹ್ಮಲಿಂಗೇಶ್ವರ ಹೋಟೆಲ್ ಹತ್ತಿರ ನಡೆದಿದೆ. ಸಾಯಿ ಪ್ರಸಾದ ಹಲ್ಲೆಗೊಳಗಾಗಿದ್ದಾನೆ. ಶಶಾಂಕ ಹಾಗೂ ಗಗನ ಸೇರಿ ಹಲವರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಹಿಂದೆ ವರೂರಿನಲ್ಲಿ ಜಗಳ ನಡೆದಿತ್ತು. ಇದೇ ವಿಚಾರಕ್ಕೆ ಮೇ 27ರಂದು ಸಾಯಿಪ್ರಸಾದ ಹೋಗುವಾಗ ಅವನ ಬೈಕ್ ಅಡ್ಡಗಟ್ಟಿ ಹಲ್ಲೆ …
Read More »ಮಾದಕ ವಸ್ತು ಸೇವೆನೆ: 4 ಮಂದಿಯ ಬಂಧನ
ಮಂಗಳೂರು: ನಗರದ ಪೊಲೀಸ್ ಕಮಿಷನರೆಟ್ ನ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಮಾದಕ ವಸ್ತು ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ 4 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಯೆಯ್ಯಾಡಿ ಕ್ರಾಸ್ ಬಳಿಯಿಂದ ನಿನಾದ್ ಕೋಟ್ಯಾನ್, ಎಂಬಾತನನ್ನು ಕದ್ರಿ ಠಾಣೆ ಪೊಲೀಸರು, ಅಂಬೇಡ್ಕರ್ ವೃತ್ತದ ಬಳಿ ಕುಲಶೇಖರ ನಿವಾಸಿ ಪ್ರತೀಕ್ ಅಲಿಯಾಸ್ ಪ್ರತೀಕ್ ಕೊಟ್ಟಾರಿ (30) ಎಂಬಾತನನ್ನು ಬಂದರು ಠಾಣೆ ಪೊಲೀಸರು, ಸೋಮೇಶ್ವರ ಗ್ರಾಮದ ಪಿಲಾರ್ ಗ್ರೌಂಡ್ ಬಳಿ ಕಲಂದರ್ ಶಾಫಿ(33) ಎಂಬಾತನನ್ನು ಉಳ್ಳಾಲ ಪೊಲೀಸರು, …
Read More »ಮನೆಯೇ ಗನ್ ಕಾರ್ಖಾನೆ, ಪುಸ್ತಕದಂಗಡಿ ಹೆಸರಲ್ಲಿ ಪಿಸ್ತೂಲ್ ದಂಧೆ! : ಬೆಳಗಾವಿಯಲ್ಲೊಂದು ಭಯಾನಕ ದಂಧೆ ಬಯಲು!
ಬೆಳಗಾವಿ ಪೊಲೀಸರು ಕರ್ನಾಟಕ-ಮಹಾರಾಷ್ಟ್ರ ಗಡಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಕ್ರಮ ನಾಡಬಂದೂಕು ತಯಾರಿಕೆ ಮತ್ತು ಮಾರಾಟ ಜಾಲವನ್ನು ಪತ್ತೆಹಚ್ಚಿದ್ದು, ಪ್ರಮುಖ ಆರೋಪಿಯ ಸೇರಿ 13 ಮಂದಿಯನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 9 ನಾಡಬಂದೂಕುಗಳು ಹಾಗೂ ಭಾರಿ ಪ್ರಮಾಣದ ಸ್ಫೋಟಕ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಖಾನಾಪುರ ತಾಲೂಕಿನ ಕಟಗಲಿ ಗ್ರಾಮದ ಮಾರುತಿ ಸುತಾರ್ ತನ್ನ ಮನೆಯಲ್ಲಿ ರಹಸ್ಯವಾಗಿ ಬಂದೂಕು ತಯಾರಿಸುತ್ತಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ. 2024ರ ಕೊಲೆ ಪ್ರಕರಣದ ತನಿಖೆ ವೇಳೆ ಈ ಜಾಲದ ಸುಳಿವು ಸಿಕ್ಕಿದ್ದು, …
Read More »ಕಲೋಟ್ಟು ಸೇತುವೆ ಕೆಳಗಡೆ ಹಸುವಿನ ಅವಶೇಷ ಪತ್ತೆ
ಶಿರ್ವ: ಕಲೋಟ್ಟು ಸೇತುವೆ ಕೆಳಗಡೆ ಹರಿಯುವ ಪಾಪನಾಶಿನಿ ಹೊಳೆಯಲ್ಲಿ ಹಸುವೊಂದನ್ನು ಕಡಿದು, ಅದರ ಅವಶೇಷಗಳನ್ನು ಎಸೆದು ವಿಕೃತಿ ಮೆರೆದಿರುವುದು ಸೋಮವಾರ ಬೆಳಕಿಗೆ ಬಂದಿದೆ. ಕಲೋಟ್ಟು ಸೇತುವೆಯ ಕೆಳಗಿನ ಪಾಪನಾಶಿನಿ ಹೊಳೆಯ ನೀರಿನಲ್ಲಿ ಜಾನುವಾರಿನ ತಲೆಬುರುಡೆ ಹಾಗೂ ಕಾಲುಗಳು ಬಿದ್ದಿರುವ ಬಗ್ಗೆ ಶಿರ್ವ ಪೊಲೀಸರಿಗೆ ವಾಹಿತಿ ಲಭಿಸಿತ್ತು. ಪೊಲೀಸರ ತಂಡ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದಾಗ ಕೃತ್ಯ ದೃಢಪಟ್ಟಿದೆ. ನೀರಿನಲ್ಲಿದ್ದ ಅವಶೇಷಗಳನ್ನು ಪರಿಶೀಲಿಸಿದಾಗ, ಸೇತುವೆಯ ದಕ್ಷಿಣ ಭಾಗದ ನೀರಿನಲ್ಲಿ ಚರ್ಮವಿಲ್ಲದ, ಹಲ್ಲುಗಳು ಮತ್ತು …
Read More »ಮಂಗಳೂರು: ಆಗಾಗ ಮನೆ ಬಿಟ್ಟು ಹೋಗ್ತಿದ್ದ ವ್ಯಕ್ತಿಯನ್ನು ಕಳ್ಳ ಅಂತಾ ಆರೋಪಿಸಿ ಥಳಿಸಿ ಹತ್ಯೆ!
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗುರುವಾಯನ ಕೆರೆಯಲ್ಲಿ ಕಳ್ಳತನದ ಶಂಕೆ ಮೇರೆಗೆ ವ್ಯಕ್ತಿಯೊಬ್ಬನನ್ನು ಹಗ್ಗದಿಂದ ಕಟ್ಟಿ ಥಳಿಸಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಬಂಟ್ವಾಳ ತಾಲೂಕಿನ ಪೆರ್ನೆ ಗ್ರಾಮದ ನಿವಾಸಿ ಯತೀಶ್ ಗೌಡ (32) ಮೃತ ಯುವಕನಾಗಿದ್ದು, ಕಳೆದ ಎರಡು ತಿಂಗಳಿಂದ ಮನೆ ಬಿಟ್ಟು ಹೋಗಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಸ್ಥಳೀಯ ಕೆಲವರು ಯತೀಶ್ ಅವರನ್ನು ಕಳ್ಳನೆಂದು ಶಂಕಿಸಿ ಹಗ್ಗದಿಂದ ಕಟ್ಟಿ ಭೀಕರವಾಗಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ತೀವ್ರ …
Read More »ಕಪ್ ಖುಷಿ ಕೈಮೀರಿತು: ಕರ್ನೂಲ್ನಲ್ಲಿ ಸಂಭ್ರಮಾಚರಣೆ ನಡುವೆ ಕಲ್ಲು ತೂರಾಟ
ಐಪಿಎಲ್ 2026ರ ಫೈನಲ್ನಲ್ಲಿ ಆರ್ಸಿಬಿ ಚಾಂಪಿಯನ್ ಆಗುತ್ತಿದ್ದಂತೆಯೇ ಆಂಧ್ರಪ್ರದೇಶದ ಕರ್ನೂಲ್ನಲ್ಲಿ ಅಭಿಮಾನಿಗಳು ಭರ್ಜರಿ ಸಂಭ್ರಮಾಚರಣೆ ನಡೆಸಿದರು. ಮಧ್ಯರಾತ್ರಿ ರಸ್ತೆಗಿಳಿದ ನೂರಾರು ಅಭಿಮಾನಿಗಳು ಘೋಷಣೆ ಕೂಗಿ ಮೆರವಣಿಗೆ ನಡೆಸಿದ ಪರಿಣಾಮ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಸಂಭ್ರಮಾಚರಣೆ ವೇಳೆ ಪರಿಸ್ಥಿತಿ ಹದಗೆಟ್ಟು, ಕೆಲವು ದುಷ್ಕರ್ಮಿಗಳು ರಸ್ತೆಬದಿಯಲ್ಲಿ ನಿಂತಿದ್ದ ಖಾಸಗಿ ಬಸ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗಿದೆ. ಈ ದಾಳಿಯಿಂದ ಬಸ್ನ ಹಲವು ಕಿಟಕಿಗಳ ಗಾಜುಗಳು ಪುಡಿಯಾಗಿದ್ದು, ಪ್ರಯಾಣಿಕರು ಆತಂಕಕ್ಕೊಳಗಾದರು. ಮಾಹಿತಿ …
Read More »ಚಿನ್ನಾಭರಣ ಕಳವಿಗೆ ಸ್ಕೆಚ್ – ಸಿಕ್ಕಬಿದ್ದ ನಾದಿನಿಯಿಂದ ಅತ್ತಿಗೆ ಹತ್ಯೆ!
ಚಿಕ್ಕಬಳ್ಳಾಪುರದಲ್ಲಿ ಖಾಸಗಿ ವಿಡಿಯೋಗಳ ವಿಚಾರವಾಗಿ ಬ್ಲ್ಯಾಕ್ಮೇಲ್ಗೆ ಒಳಗಾಗಿದ್ದ ಮಹಿಳೆಯೊಬ್ಬಳು ಸಹೋದರ ಸಂಬಂಧಿಯ ಜೊತೆ ಸೇರಿ ತನ್ನ ಅತ್ತಿಗೆ ಪುಷ್ಪಲತಾಳನ್ನು ಹತ್ಯೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿ ಭವ್ಯಾ ಹಾಗೂ ಲೋಹಿತ್ ಅಲಿಯಾಸ್ ಲುಲ್ಲು ವಿರುದ್ಧ ಪ್ರಕರಣ ದಾಖಲಾಗಿದೆ. ಲೋಹಿತ್, ಭವ್ಯಾಳ ಖಾಸಗಿ ವಿಡಿಯೋ ಮತ್ತು ಫೋಟೋಗಳನ್ನು ಬಳಸಿಕೊಂಡು ಹಣಕ್ಕಾಗಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಎನ್ನಲಾಗಿದೆ. ಈಗಾಗಲೇ ಲಕ್ಷಾಂತರ ರೂಪಾಯಿ ನೀಡಿದ್ದರೂ ಕಿರುಕುಳ ಮುಂದುವರಿದ ಹಿನ್ನೆಲೆಯಲ್ಲಿ, ಅತ್ತಿಗೆಯ ಚಿನ್ನಾಭರಣ ಕಳವು ಮಾಡಲು …
Read More »ಪತ್ನಿಯ ಮೇಲೆ ಅನುಮಾನ: ಮಚ್ಚಿನಿಂದ ಕೊಲೆ ಮಾಡಿದ ಪತಿ
ರಾಮನಗರ ತಾಲೂಕಿನ ದಾಸರಹಳ್ಳಿ ಗ್ರಾಮದಲ್ಲಿ ಪತ್ನಿಯ ಮೇಲಿನ ಅನುಮಾನದಿಂದ ವ್ಯಕ್ತಿಯೊಬ್ಬ ತನ್ನ ಪತ್ನಿ ನಾಗಮ್ಮ (42) ಅವರನ್ನು ಮಚ್ಚಿನಿಂದ ಹತ್ಯೆ ಮಾಡಿದ ಘಟನೆ ನಡೆದಿದೆ. ಆರೋಪಿ ಕಣಿ ಮಾದಯ್ಯ (50) ಬಳಿಕ ಸ್ವತಃ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಮಾದಯ್ಯ ಪತ್ನಿಯ ಚರಿತ್ರೆ ಬಗ್ಗೆ ಅನುಮಾನ ಪಡುತ್ತಿದ್ದ ಹಿನ್ನೆಲೆಯಲ್ಲಿ ದಂಪತಿ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು. ಇದೇ ವಿಚಾರವಾಗಿ ನಾಗಮ್ಮ ಈ ಹಿಂದೆ ಮಹಿಳಾ ಠಾಣೆಯಲ್ಲೂ ದೂರು …
Read More »ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ: ಮೂವರು ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಪ್ರಮುಖ ಮೂವರು ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ದೆಹಲಿ ನ್ಯಾಯಾಲಯ ಸೋಮವಾರ ಆದೇಶ ನೀಡಿದೆ. ಸಿಬಿಐ ಅರ್ಜಿಯ ಮೇರೆಗೆ ವಿಶೇಷ ನ್ಯಾಯಮೂರ್ತಿ ಅಜಯ್ ಗುಪ್ತಾ ಈ ಆದೇಶ ನೀಡಿದ್ದಾರೆ. ಆರೋಪಿಗಳಾದ ಮನೀಷ್ ಸಂಜಯ್ ಹವಾಲ್ದಾರ್, ಡಾ. ಮನೋಜ್ ಶಿರೂರೆ ಹಾಗೂ ತೇಜಸ್ ಹರ್ಷದ್ಕುಮಾರ್ ಶಾ ಅವರು ಪ್ರಶ್ನೆ ಪತ್ರಿಕೆಯನ್ನು ಅಕ್ರಮವಾಗಿ ಹಣಕ್ಕಾಗಿ ಹಂಚಿಕೆ ಮಾಡಿದ್ದರೆಂದು ಸಿಬಿಐ ಆರೋಪಿಸಿದೆ. ಪ್ರಕರಣದಲ್ಲಿ ಇದುವರೆಗೆ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





