ಮಂಗಳೂರು: ನಗರದ ಪೊಲೀಸ್ ಕಮಿಷನರೆಟ್ ನ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಮಾದಕ ವಸ್ತು ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ 4 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಯೆಯ್ಯಾಡಿ ಕ್ರಾಸ್ ಬಳಿಯಿಂದ ನಿನಾದ್ ಕೋಟ್ಯಾನ್, ಎಂಬಾತನನ್ನು ಕದ್ರಿ ಠಾಣೆ ಪೊಲೀಸರು, ಅಂಬೇಡ್ಕರ್ ವೃತ್ತದ ಬಳಿ ಕುಲಶೇಖರ ನಿವಾಸಿ ಪ್ರತೀಕ್ ಅಲಿಯಾಸ್ ಪ್ರತೀಕ್ ಕೊಟ್ಟಾರಿ (30) ಎಂಬಾತನನ್ನು ಬಂದರು ಠಾಣೆ ಪೊಲೀಸರು, ಸೋಮೇಶ್ವರ ಗ್ರಾಮದ ಪಿಲಾರ್ ಗ್ರೌಂಡ್ ಬಳಿ ಕಲಂದರ್ ಶಾಫಿ(33) ಎಂಬಾತನನ್ನು ಉಳ್ಳಾಲ ಪೊಲೀಸರು, ಶಿವ ನಗರದ ಮುಳಿಹಿತ್ಲು ಸಾರ್ವಜನಿಕ ಸ್ಥಳದಲ್ಲಿ ಮುಳಿಹಿತ್ಲು ನಿವಾಸಿ ಪವನ್ ಜೆರಾಲ್ಡ್ (29) ಎಂಬಾತನನ್ನು ಪಾಂಡೇಶ್ವರ ಠಾಣೆ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

