ಬೆಂಗಳೂರು ನಗರದ ಅಂತರರಾಷ್ಟ್ರೀಯ ಅಂಚೆ ಕಚೇರಿಗೆ ವಿದೇಶದಿಂದ ಬಂದ ಅನುಮಾನಾಸ್ಪದ ಪಾರ್ಸಲ್ಗಳ ಮೇಲೆ ಸಿಸಿಬಿ ಮಾದಕ ವಸ್ತು ನಿಗ್ರಹದಳ ಪೊಲೀಸರು ದಾಳಿ ನಡೆಸಿ, 2.32 ಕೋಟಿ ರೂ. ಮೌಲ್ಯದ 3 ಕೆಜಿ 312 ಗ್ರಾಂ ಹೈಡ್ರೋ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಕೆಂಪೇಗೌಡ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಅಂಚೆ ಕಚೇರಿಗೆ ನಿಷೇಧಿತ ಮಾದಕ ವಸ್ತುಗಳಿರುವ ಮೂರು ಬಾಕ್ಸ್ಗಳು ಬಂದಿರುವ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಅವುಗಳನ್ನು ಜಪ್ತಿ ಮಾಡಿದ್ದಾರೆ. ಪ್ರಕರಣ …
Read More »ಹುಡುಗಿ ವಿಚಾರಕ್ಕೆ ಕಿಡ್ನಾಪ್ – ಬಟ್ಟೆ ಬಿಚ್ಚಿ ಹಲ್ಲೆ ಮಾಡಿದ್ದ ಕಿರಾತಕರ ಬಂಧನ!
ಬೆಂಗಳೂರು: ಯುವತಿಯೊಬ್ಬಳ ವಿಚಾರವಾಗಿ ಉಂಟಾದ ಹಳೇ ವೈಷಮ್ಯ ಹಿನ್ನೆಲೆ ಯುವಕನನ್ನು ಮರ್ಸಿಡಿಸ್ ಬೆಂಜ್ ಕಾರಿನಲ್ಲಿ ಅಪಹರಿಸಿ ಅಮಾನವೀಯವಾಗಿ ಹಲ್ಲೆ ನಡೆಸಿದ ಘಟನೆ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣ ಸಂಬಂಧ ಅಫಾನ್, ಶಾಹಿದ್, ಅರ್ಫಾತ್, ಮೋಸಿನ್ ಮತ್ತು ಅಲಿ ಎಂಬ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಪ್ರಮುಖ ಆರೋಪಿಗಳಾದ ಅಬ್ನಾನ್ ಹಾಗೂ ಅಫ್ರೀದಿ ತಲೆಮರೆಸಿಕೊಂಡಿದ್ದಾರೆ. ಮೊಹಮ್ಮದ್ ರಫೀಕ್ ಹಲ್ಲೆಗೊಳಗಾದ ಯುವಕನಾಗಿದ್ದಾನೆ. ಪೊಲೀಸರ ಮಾಹಿತಿ ಪ್ರಕಾರ, ರಫೀಕ್ ಮತ್ತು ಯುವತಿ …
Read More »ನಗರದಲ್ಲಿ ಡ್ರಗ್ಸ್ ಮಾರಾಟ – ಕೇರಳ ಮೂಲದ ಪೆಡ್ಲರ್ಸ್ ಅರೆಸ್ಟ್!
ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಮಾದಕ ವಸ್ತುಗಳ ಜಾಲಕ್ಕೆ ಬ್ರೇಕ್ ಹಾಕಲು ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ನಗರದ ಜೀವನ್ ಭೀಮಾ ನಗರದಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಕೇರಳ ಮೂಲದ ಜುನೈದ್ ಮತ್ತು ಮೊಹಮ್ಮದ್ ನಬೀದ್ ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಬಂಧಿತರಿಂದ ಒಟ್ಟು 3.35 ಲಕ್ಷ ರೂಪಾಯಿ ಮೌಲ್ಯದ ಮಾದಕ ವಸ್ತುಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಕಾರನ್ನು ಜಪ್ತಿ ಮಾಡಲಾಗಿದೆ. ಇದರಲ್ಲಿ 65 ಸಾವಿರ ರೂ. ಮೌಲ್ಯದ 1 …
Read More »ಕ್ರಿಪ್ಟೋ ಕರೆನ್ಸಿಯಲ್ಲಿ ಲಾಭದ ಆಮಿಷ- 3.50 ಲಕ್ಷ ರೂ. ಮೋಸ
ಮಣಿಪಾಲ: ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದಲ್ಲಿ ಲಾಭ ತೆಗೆಸಿಕೊಡುವುದಾಗಿ ನಂಬಿಸಿ ಮಂಗಳೂರು ಮೂಲದ ವ್ಯಕ್ತಿಯೋರ್ವರಿಗೆ 3.50 ಲಕ್ಷ ರೂ. ಮೋಸ ಮಾಡಿದ ಘಟನೆಗೆ ಸಂಬಂಧಿಸಿ ಮಣಿಪಾಲದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳೂರು ಮೂಲದ ಗಣೇಶ್ ಪಿ.ಎಲ್.ಪ್ರಕರಣದಲ್ಲಿ ಮೋಸಕ್ಕೊಳಗಾದವರು. ಆರೋಪಿಗಳಾದ ಅರವಿಂದ ನಾಯಕ್ ಹಾಗೂ ಹರೀಶ್ ಎಂಬವರು ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದಲ್ಲಿ ಲಾಭ ತೆಗೆಯಿಸಿಕೊಡುವುದಾಗಿ ಗಣೇಶ್ ಅವರನ್ನು ಮಣಿಪಾಲದಲ್ಲಿ ಭೇಟಿಯಾಗಿ ನಂಬಿಸಿದ್ದರು. ಈ ಹಿನ್ನೆಲೆ 2025ರ ಮಾರ್ಚ್ 23ರಂದು …
Read More »ಪಶು ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ₹45 ಕೋಟಿ ಹಗರಣ: 6 ಮಂದಿ ಬಂಧನ
ಬೀದರ್ನ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ₹45 ಕೋಟಿ ನಕಲಿ ಬಿಲ್ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ವಿಶ್ರಾಂತ ಕುಲಪತಿ ಸೇರಿದಂತೆ ಆರು ಜನರನ್ನು ಬಂಧಿಸಿದ್ದಾರೆ. 2017-18ರ ಅವಧಿಯಲ್ಲಿ ನಕಲಿ ಬಿಲ್ ಸೃಷ್ಟಿಸಿ ಅಕ್ರಮ ಹಣ ವರ್ಗಾವಣೆ ನಡೆಸಿರುವ ಆರೋಪ ಕೇಳಿಬಂದಿದೆ. ಬಂಧಿತರಲ್ಲಿ ವಿಶ್ರಾಂತ ಕುಲಪತಿ ಎಚ್.ಡಿ. ನಾರಾಯಣಸ್ವಾಮಿ, ನಿವೃತ್ತ ಹಣಕಾಸು ನಿಯಂತ್ರಣಾಧಿಕಾರಿ ಕೆ.ಎಲ್. ಸುರೇಶ್, ಎಫ್ಡಿಎ ಮೃತ್ಯುಂಜಯ ಹಿರೇಮಠ ಹಾಗೂ ಖಾಸಗಿ …
Read More »ಬಕ್ರೀದ್ಗಾಗಿ ಗೋವುಗಳ ಕೂಡಿಹಾಕಿದ ಆರೋಪ: ಬಳ್ಳಾರಿ ಹಳೇ ಬೈಪಾಸ್ನಲ್ಲಿ ಪೊಲೀಸರ ದಾಳಿ; 50ಕ್ಕೂ ಹೆಚ್ಚು ಗೋವುಗಳ ರಕ್ಷಣೆ
ಬಳ್ಳಾರಿಯಲ್ಲಿ ಐವತ್ತಕ್ಕೂ ಹೆಚ್ಚು ಗೋವುಗಳನ್ನು ಒಂದೇ ಕೊಟ್ಟಿಗೆಯಲ್ಲಿ ಕೂಡಿ ಹಾಕಿದ್ದ ಘಟನೆ ಬೆಳಕಿಗೆ ಬಂದಿದೆ. ಹಳೇ ಬೈಪಾಸ್ನ ಗೋಲಬಡಿ ರಸ್ತೆಯಲ್ಲಿರುವ ಕೊಟ್ಟಿಗೆಯಲ್ಲಿ ಗೋವುಗಳನ್ನು ಇರಿಸಲಾಗಿತ್ತು. ಮಾಹಿತಿ ಪಡೆದ ಹಿಂದೂ ಸಂಘಟನೆ ಕಾರ್ಯಕರ್ತರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಗೋವುಗಳು ಪತ್ತೆಯಾಗಿದ್ದು, ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹಿಂದೂ ಸಂಘಟನೆಗಳ ಮಾಹಿತಿ ಮೇರೆಗೆ ಕೌಲಬಜಾರ್ ಪೊಲೀಸರು ಸ್ಥಳದ ಮೇಲೆ ದಾಳಿ ನಡೆಸಿ ಗೋವುಗಳನ್ನು ವಶಕ್ಕೆ ಪಡೆದಿದ್ದಾರೆ. ಬಕ್ರೀದ್ ಹಿನ್ನೆಲೆ …
Read More »ಭೀಕರ ರಸ್ತೆ ಅಪಘಾತ – ಆರು ತಿಂಗಳ ಹಸುಗೂಸಿನೊಡನೆ ದಂಪತಿ ಬಲಿ!
ಬೆಳಗಾವಿ : ಒಂದೇ ಕುಟುಂಬದ ಮೂವರು ರಸ್ತೆ ಅಪಘಾತದಲ್ಲಿ ಮೃತಪಟ್ಟ ಹೃದಯವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬೊಮ್ಮನಾಳ ಗ್ರಾಮದ ನಡೆದಿದೆ.ಮಹಾಂತೇಶ್, ಸಾಕ್ಷಿ ಹಾಗೂ ಅವರ ಮಗು ಮೃತ ದುರ್ದೈವಿಗಳು. ರಾಯಬಾಗ ರೈಲ್ವೆ ಸ್ಟೇಷನ್ ಸಮೀಪ ಬೈಕ್ ನಲ್ಲಿ ಸಾಗುತ್ತಿದ್ದಾಗ ಆಟೋಗೆ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿತ್ತು. ಅಪಘಾತದ ತೀವ್ರತೆಗೆ ಬೈಕ್ ಸವಾರ ಮಹಾಂತೇಶ್, ಅವರ ಪತ್ನಿ ಸಾಕ್ಷಿ ಹಾಗೂ 6 ತಿಂಗಳ ಮಗು ಸ್ಥಳದಲ್ಲೇ ಮೃತಪಟ್ಟಿದ್ದಾರೆ. …
Read More »ಭಜರಂಗದಳ ಕಾರ್ಯರ್ತನ ಮೇಲೆ ಹಲ್ಲೆ; ಆರೋಪ
ರಾಣೆಬೆನ್ನೂರಿನ ಖತೀಬಗಲ್ಲಿಯಲ್ಲಿ ಗೋ ಹತ್ಯೆ ನಡೆಯುತ್ತಿರುವ ಸ್ಥಳವನ್ನು ಪೊಲೀಸರಿಗೆ ತೋರಿಸಲು ತೆರಳಿದ್ದ ಭಜರಂಗದಳ ಕಾರ್ಯಕರ್ತರ ಮೇಲೆ ಅನ್ಯ ಕೋಮಿನ ಕೆಲವರು ಹಲ್ಲೆ ನಡೆಸಿದ ಘಟನೆ ಭಾನುವಾರ ಸಂಜೆ ನಡೆದಿದೆ. ಹಲ್ಲೆಯಲ್ಲಿ ರುದ್ರೇಶ ಬುಕ್ಕಶೆಟ್ಟಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ. ಈ ಕುರಿತು ಮಾತನಾಡಿದ ಭಜರಂಗದಳ ಮುಖಂಡರು, ನಗರದಲ್ಲಿ ಅಕ್ರಮ ಗೋ ಸಾಗಾಟ ಮತ್ತು ಗೋ ಹತ್ಯೆ ನಡೆಯುತ್ತಿರುವ …
Read More »ಅಕ್ರಮವಾಗಿ ಹುಕ್ಕಾ , ತಂಬಾಕು ಪದಾರ್ಥಗಳ ಮಾರಾಟ – ಪೊಲೀಸ್ ರೇಡ್!
ಆನೇಕಲ್ ಬಸ್ ನಿಲ್ದಾಣದ ಪಕ್ಕದಲ್ಲಿರುವ ಕೇರಳ ಮೂಲದ ‘ಹೈ ಲೈಟ್ ಸೂಪರ್ ಮಾರ್ಕೆಟ್’ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಆನೇಕಲ್ ಪೊಲೀಸರು, ಸುಮಾರು 40,000 ರೂಪಾಯಿ ಮೌಲ್ಯದ ನಿಷೇಧಿತ ತಂಬಾಕು ಮತ್ತು ಹುಕ್ಕಾ ಉತ್ಪನ್ನಗಳನ್ನು ಜಪ್ತಿ ಮಾಡಿದ್ದಾರೆ. ಮಳಿಗೆಯಲ್ಲಿ ಅಕ್ರಮವಾಗಿ ತಂಬಾಕು ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಇನ್ಸ್ಪೆಕ್ಟರ್ ಪ್ರಕಾಶ್ ಆರ್ ಮಾರ್ಗದರ್ಶನದಲ್ಲಿ ಪಿಎಸ್ಐ ಸಿದ್ದನಗೌಡರ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ. ದಾಳಿಯ ವೇಳೆ ವಿವಿಧ ಫ್ಲೇವರ್ಗಳ …
Read More »ಅತ್ಯಾಚಾರ, ಬ್ಲ್ಯಾಕ್ಮೇಲ್ ಆರೋಪ; ಭದ್ರಾವತಿ ಬಿಜೆಪಿ ಮುಖಂಡನ ಬಂಧನ
ಶಿವಮೊಗ್ಗ : ಭದ್ರಾವತಿಯಲ್ಲಿ ವಿವಾಹಿತ ಮಹಿಳೆ ಮೇಲೆ ಅತ್ಯಾಚಾರ ಮತ್ತು ಬ್ಲ್ಯಾಕ್ಮೇಲ್ ಮಾಡಿದ್ದ ಆರೋಪದಲ್ಲಿ ಬಿಜೆಪಿ ಮುಖಂಡ ಭರತ್ನನ್ನು ಭದ್ರಾವತಿ ಪೇಪರ್ ಟೌನ್ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಮನೆಯೊಂದರಲ್ಲಿ ಭರತ್ನನ್ನು ಬಂಧಿಸಿ ರವಿವಾರ ತಡರಾತ್ರಿ ಶಿವಮೊಗ್ಗಕ್ಕೆ ಕರೆತರಲಾಗಿದೆ. ಪಿಎಸ್ಸೈ ಕುಮಾರ್ ಹಾಗೂ ಪೊಲೀಸ್ ಸಿಬ್ಬಂದಿ ನಾಗರಾಜ್, ಬಸವರಾಜ್ ಅವರು ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





