ಬೆಂಗಳೂರು: ಯುವತಿಯೊಬ್ಬಳ ವಿಚಾರವಾಗಿ ಉಂಟಾದ ಹಳೇ ವೈಷಮ್ಯ ಹಿನ್ನೆಲೆ ಯುವಕನನ್ನು ಮರ್ಸಿಡಿಸ್ ಬೆಂಜ್ ಕಾರಿನಲ್ಲಿ ಅಪಹರಿಸಿ ಅಮಾನವೀಯವಾಗಿ ಹಲ್ಲೆ ನಡೆಸಿದ ಘಟನೆ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣ ಸಂಬಂಧ ಅಫಾನ್, ಶಾಹಿದ್, ಅರ್ಫಾತ್, ಮೋಸಿನ್ ಮತ್ತು ಅಲಿ ಎಂಬ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಪ್ರಮುಖ ಆರೋಪಿಗಳಾದ ಅಬ್ನಾನ್ ಹಾಗೂ ಅಫ್ರೀದಿ ತಲೆಮರೆಸಿಕೊಂಡಿದ್ದಾರೆ. ಮೊಹಮ್ಮದ್ ರಫೀಕ್ ಹಲ್ಲೆಗೊಳಗಾದ ಯುವಕನಾಗಿದ್ದಾನೆ. ಪೊಲೀಸರ ಮಾಹಿತಿ ಪ್ರಕಾರ, ರಫೀಕ್ ಮತ್ತು ಯುವತಿ ನಡುವೆ ಒಂದು ವರ್ಷದ ಹಿಂದೆಯೇ ಬ್ರೇಕ್‌ಅಪ್ ಆಗಿತ್ತು. ಬಳಿಕ ಯುವತಿ ಅಬ್ನಾನ್ ಜೊತೆ ಮದುವೆಗೆ ನಿಶ್ಚಯವಾಗಿದ್ದಳು. ಈ ನಡುವೆ ರಫೀಕ್ ಮತ್ತೆ ಯುವತಿಯನ್ನು ಸಂಪರ್ಕಿಸಲು ಯತ್ನಿಸಿದ್ದರಿಂದ ಕೋಪಗೊಂಡ ಅಬ್ನಾನ್ ತನ್ನ ಸ್ನೇಹಿತರೊಂದಿಗೆ ಸೇರಿ ರಫೀಕ್‌ನನ್ನು ದೇವನಹಳ್ಳಿ ಬಳಿ ಅಪಹರಿಸಿ ಬಾಗಲೂರಿನ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಸಂತ್ರಸ್ತ ರಫೀಕ್ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಆರೋಪಿಗಳ ಬಂಧನ ನಡೆದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

