ಆನೇಕಲ್ ಬಸ್ ನಿಲ್ದಾಣದ ಪಕ್ಕದಲ್ಲಿರುವ ಕೇರಳ ಮೂಲದ ‘ಹೈ ಲೈಟ್ ಸೂಪರ್ ಮಾರ್ಕೆಟ್’ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಆನೇಕಲ್ ಪೊಲೀಸರು, ಸುಮಾರು 40,000 ರೂಪಾಯಿ ಮೌಲ್ಯದ ನಿಷೇಧಿತ ತಂಬಾಕು ಮತ್ತು ಹುಕ್ಕಾ ಉತ್ಪನ್ನಗಳನ್ನು ಜಪ್ತಿ ಮಾಡಿದ್ದಾರೆ. ಮಳಿಗೆಯಲ್ಲಿ ಅಕ್ರಮವಾಗಿ ತಂಬಾಕು ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಇನ್ಸ್‌ಪೆಕ್ಟರ್ ಪ್ರಕಾಶ್ ಆರ್ ಮಾರ್ಗದರ್ಶನದಲ್ಲಿ ಪಿಎಸ್‌ಐ ಸಿದ್ದನಗೌಡರ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ. ದಾಳಿಯ ವೇಳೆ ವಿವಿಧ ಫ್ಲೇವರ್‌ಗಳ ಸಿಗರೇಟ್ ಪ್ಯಾಕ್‌ಗಳು ಸೇರಿದಂತೆ ಒಟ್ಟು 171 ತಂಬಾಕು ಪದಾರ್ಥಗಳು, 22 ಹುಕ್ಕಾ ಜಾಡಿಗಳು ಹಾಗೂ 7 ಪೊಲೋ ಚಾರ್ಕೋಲ್ ಬಾಕ್ಸ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಕ್ರಮ ದಂಧೆಯಲ್ಲಿ ತೊಡಗಿದ್ದ ರಹೀಶ್ ಪಿ (A1), ಸೆಜು (A2), ಯೋಗೀಶ್ (A3) ಹಾಗೂ ಕಿಶೋರ್ ಕುಮಾರ್ (A4) ಎಂಬ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳ ವಿರುದ್ಧ ತಂಬಾಕು ಮತ್ತು ಹುಕ್ಕಾ ನಿಯಂತ್ರಣ ಕಾಯ್ದೆ ಹಾಗೂ COTPA-2003 ಸೆಕ್ಷನ್ 24ರ ಅಡಿಯಲ್ಲಿ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಮುಂದಿನ ತನಿಖೆ ಕೈಗೊಳ್ಳಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

