ಮಹಾರಾಷ್ಟ್ರದ ಠಾಣೆ ಜಿಲ್ಲೆಯ ಉಲ್ಲಾಸನಗರ ಪ್ರದೇಶದಲ್ಲಿ ನಡೆದ ಭೀಕರ ಗುಂಡಿನ ದಾಳಿಯಲ್ಲಿ ಇಬ್ಬರು ಸಹೋದರರು ಸಾವನ್ನಪ್ಪಿ, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ರಾತ್ರಿ ಸುಮಾರು 8.30ರ ವೇಳೆಗೆ ಕೈಲಾಶ್ ಕಾಲೋನಿಯಲ್ಲಿ ಈ ದಾಳಿ ನಡೆದಿದ್ದು, ದುಷ್ಕರ್ಮಿಗಳು ಸುಮಾರು 15 ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದಾಳಿಯಲ್ಲಿ ಇಬ್ಬರು ಸಹೋದರರು ಸ್ಥಳದಲ್ಲೇ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡ ಮತ್ತೊಬ್ಬರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತದೇಹಗಳನ್ನು ಮರಣೋತ್ತರ …
Read More »ಆಸ್ತಿ ವಿಚಾರಕ್ಕೆ ದಲಿತ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ : ಆರೋಪಿಗಳ ವಿರುದ್ದ ದೂರು ದಾಖಲು
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ನಿಪನಾಳ ಗ್ರಾಮದಲ್ಲಿ ಆಸ್ತಿ ವಿಚಾರವಾಗಿ ದಲಿತ ಕುಟುಂಬದ ಸದಸ್ಯರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಸತ್ತೇಪ್ಪ ಲಕ್ಷ್ಮಣ ಬಿಲಕಾರ ಅವರಿಗೆ ಸೇರಿದ ಜಮೀನಿನಲ್ಲಿ ಭರಮಪ್ಪ ಹನಮಂತ ಹರಿಜನ ಹಾಗೂ ಲಕ್ಷೀಬಾಯಿ ಹರಿಜನ ಅರಿಶಿನ ಬೀಜ ಬಿತ್ತನೆ ಮಾಡುತ್ತಿದ್ದ ವೇಳೆ ಆರೋಪಿಗಳು ಸ್ಥಳಕ್ಕೆ ಬಂದು ಜಗಳ ಆರಂಭಿಸಿದ್ದಾರೆ ಎನ್ನಲಾಗಿದೆ. ಜಮೀನು ಬಿಟ್ಟು ಹೋಗುವಂತೆ ಬೆದರಿಕೆ ಹಾಕಿದ ಆರೋಪಿಗಳು, ಮಚ್ಚು, ಬಡಿಗೆ ಹಾಗೂ …
Read More »ರಾಜ್ಯದಲ್ಲಿ ಹೀನಾಯ ಘಟನೆ – ಎಣ್ಣೆ ಏಟಿನಲ್ಲಿ ಮಗಳ ಮೇಲೇ ಅತ್ಯಾಚಾರ ನಡೆಸಿದ ತಂದೆ!
ಉತ್ತರ ಕನ್ನಡ : ರಾಜ್ಯದಲ್ಲಿ ತಲೆತಗ್ಗಿಸುವಂತಹ ಹೀನ ಕೃತ್ಯವೊಂದು ಉತ್ತರ ಕನ್ನಡ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕುಡಿದ ಮತ್ತಿನಲ್ಲಿ ಹೆತ್ತ ತಂದೆಯೇ ತನ್ನ ಸ್ವಂತ ಮಗಳ ಮೇಲೆ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ನಡೆದಿದ್ದು, ಜಿಲ್ಲೆಯ ಜನತೆಯನ್ನು ಬೆಚ್ಚಿಬೀಳಿಸಿದೆ. ಆರೋಪಿ ತಂದೆಯು ಪ್ರತಿನಿತ್ಯ ಮದ್ಯಸೇವನೆ ಮಾಡಿ ಮನೆಗೆ ಬಂದು ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ. ಘಟನೆಯ ದಿನ ಮನೆಯಲ್ಲಿ ಯಾರೂ ಇಲ್ಲದ ಸಮಯ ಸಾಧಿಸಿದ ಈ ಕಾಮುಕ ತಂದೆ, ಹೆತ್ತ ಮಗಳ …
Read More »ಕಾಸರಗೋಡಿನಲ್ಲಿ ಬಯಲಾಯ್ತು ಮೆಗಾ ಕಾರ್ ಮಾಫಿಯಾ! ಖಾಸಗಿ ವಾಹನ ಬಾಡಿಗೆ ಹೆಸರಲ್ಲಿ 80 ಕಾರುಗಳನ್ನೆ ಮಾರಾಟ ಮಾಡಿದ ಖದೀಮ!
ಮಾಸಿಕ ಬಾಡಿಗೆಯ ಆಮಿಷವೊಡ್ಡಿ ಕಾರುಗಳನ್ನು ಪಡೆದು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಅಂತರ್-ಜಿಲ್ಲಾ ವಾಹನ ಕಳ್ಳತನ ಜಾಲದ ಕಿಂಗ್ಪಿನ್ನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ. ಕಾಞಂಗಾಡ್ ಮೂಲದ ಶಂಸುದ್ದೀನ್ ಮೊಹಮ್ಮದ್ ಬಂಧಿತ ಆರೋಪಿಯಾಗಿದ್ದು, ಕಳೆದ ಎರಡು ವರ್ಷಗಳಲ್ಲಿ ಕಾಸರಗೋಡಿನಿಂದಲೇ ಸುಮಾರು 80 ಐಷಾರಾಮಿ ಕಾರುಗಳನ್ನು ವಂಚನೆಯ ಮೂಲಕ ಪಡೆದು ಮಾರಾಟ ಮಾಡಿರುವುದಾಗಿ ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ. ಮಹಿಳೆಯೊಬ್ಬರಿಗೆ ಸೇರಿದ ಥಾರ್, ಎರಡು ಬಲೆನೊ ಹಾಗೂ ಒಂದು ಸ್ವಿಫ್ಟ್ ಕಾರು ನಾಪತ್ತೆಯಾದ ಪ್ರಕರಣದ ತನಿಖೆಯಲ್ಲಿ …
Read More »ಹೊಸಪೇಟೆ : ಹಿರಿಯೂರು ಫ್ಲೈಓವರ್ ಬಳಿ ಆಂಬುಲೆನ್ಸ್-ಲಾರಿ ನಡುವೆ ಭೀಕರ ಅಪಘಾತ
ಹೊಸಪೇಟೆಯಿಂದ ಬೆಂಗಳೂರಿಗೆ ರೋಗಿಯನ್ನು ಸಾಗಿಸುತ್ತಿದ್ದ ಆಂಬುಲೆನ್ಸ್, ಲಾರಿಗೆ ಢಿಕ್ಕಿ ಹೊಡೆದಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿಯ ಫ್ಲೈಓವರ್ ಔಟರಿಂಗ್ ಬಳಿ ಶುಕ್ರವಾರ ಮುಂಜಾನೆ ನಡೆದಿದೆ. ಅಪಘಾತದ ತೀವ್ರತೆಗೆ ಆಂಬುಲೆನ್ಸ್ ನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದರೂ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಆಂಬುಲೆನ್ಸ್ ನಲ್ಲಿ ಸಾಗಿಸಲಾಗುತ್ತಿದ್ದ ರೋಗಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ …
Read More »ಕುಂದಗೋಳ | ಮುಸುಕುಧಾರಿಗಳಿಂದ ಬಾಲಕನಿಗೆ ಚುಚ್ಚುಮದ್ದು: ಆತಂಕ
ಕುಂದಗೋಳ: ತಾಲ್ಲೂಕಿನ ತರ್ಲಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಲಗುಡ್ಡ ಗ್ರಾಮದಲ್ಲಿ ಬಾಲಕನೊಬ್ಬನಿಗೆ ಅಪರಿಚಿತ ಮುಸುಕಧಾರಿ ವ್ಯಕ್ತಿಗಳು ಚುಚ್ಚುಮದ್ದು ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ‘ಗುರುವಾರ ಮಧ್ಯಾಹ್ನ ಮನೆ ಬಳಿ ಬಂದ ಇಬ್ಬರು ಅಪರಿಚಿತರು ನಮ್ಮ ಮಗನಿಗೆ ಚುಚ್ಚುಮದ್ದು ನೀಡಿದ್ದಾರೆ’ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಹೊಲಗೆಲಸಕ್ಕೆ ತೆರಳಿದ್ದ ಪೋಷಕರು ಮನೆಗೆ ಮರಳಿದ ಕೂಡಲೇ, ಘಟನೆ ಕುರಿತು ಬಾಲಕ ವಿಷಯ ತಿಳಿಸಿದ್ದಾನೆ. ಇದರಿಂದ ಆತಂಕಗೊಂಡ ಪೋಷಕರು, ತಕ್ಷಣವೇ ಆತನನ್ನು …
Read More »ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಹಿರಿಯ ವೈದ್ಯ ಡಾ.ಡಿ ಎಲ್ ಭಟ್ಕಳ
ಅಂಕೋಲಾ :ಕೆ ಎಲ್ ಇ ಸಮೂಹ ಸಂಸ್ಥೆಯ ಕಾರ್ಯದರ್ಶಿ ಹಿರಿಯ ವೈದ್ಯರಾಗಿದ್ದ ಡಾ.ಡಿ ಎಲ್ ಭಟ್ಕಳ (79) ಅವರು ಬೆಳಗಾವಿಯ ತಮ್ಮ ಮನೆಯಲ್ಲಿ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂಕೋಲಾ ಕೆ.ಎಲ್.ಇ ಸಮೂಹ ಸಂಸ್ಥೆಯ ಆಡಳಿತಾಧಿಕಾರಿಯಾಗಿ ಪ್ರಭಾಕರ ಕೋರೆ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಇಬರು ನಿರಂತರ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದ್ದರು.ಇವರು ಕೆಲ ದಿನಗಳ ಹಿಂದಷ್ಟೇ ಬೆಳಗಾವಿಗೆ ಸ್ಥಳಾಂತರಗೊಂಡಿದ್ದರು. ಬೆಳಿಗ್ಗೆ ಮನೆಯ ಬಾಲ್ಕನಿಯಲ್ಲಿ ಇವರು ತಲೆಗೆ ಗುಂಡು ಹಾರಿಸಿಕೊಂಡಿದ್ದಾರೆ. ಗುಂಡಿನ ಸದ್ದು …
Read More »ಓಡಿಹೋಗುತ್ತಾಳೆಂದು ಹೆಂಡತಿಯನ್ನು ಕಟ್ಟಿಹಾಕಿದ ಗಂಡ!
ಬಿಹಾರದ ಮೋತಿಹಾರಿಯಲ್ಲಿ ದಂಪತಿಯ ನಡುವಿನ ಕೌಟುಂಬಿಕ ಕಲಹವು ತಾರಕಕ್ಕೇರಿದ್ದು, ಪತಿ ತನ್ನ ಹೆಂಡತಿಯನ್ನು ಹಗ್ಗದಿಂದ ಕಟ್ಟಿ ಹಾಕಿದ್ದಾನೆ. ಪೊಲೀಸರು ಮತ್ತು ಆ ಮಹಿಳೆಯ ತಂದೆ ಸ್ಥಳಕ್ಕೆ ಬಂದಾಗ, ಇಡೀ ಗ್ರಾಮವನ್ನೇ ದಿಗ್ಭ್ರಮೆಗೊಳಿಸುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿತು. ಹೆಂಡತಿಯೊಂದಿಗಿನ ಭಿನ್ನಾಭಿಪ್ರಾಯದಿಂದ ವ್ಯಕ್ತಿ ತನ್ನ ಹೆಂಡತಿಯನ್ನು ಕಂಬಕ್ಕೆ ಕಟ್ಟಿಹಾಕಿದ್ದಾನೆ. “ಅವಳು ಓಡಿಹೋಗುತ್ತಲೇ ಇರುತ್ತಾಳೆ. ಆದ್ದರಿಂದ ನಾನು ಅವಳನ್ನು ಕಟ್ಟಿ ಹಾಕಿದೆ” ಎಂದು ಆತ ಹೇಳಿದ್ದಾನೆ. ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.
Read More »ತಡರಾತ್ರಿ ಆಸ್ಪತ್ರೆಯಲ್ಲೇ ವೈದ್ಯನ ಮೇಲೆ ಹಲ್ಲೆ
ಬೀದರ್ ನ ಬ್ರಿಮ್ಸ್ ಆಸ್ಪತ್ರೆಯಲ್ಲಿ ವೈದ್ಯನ ಮೇಲೆ ಹಲ್ಲೆ ನಡೆಸಲಾಗಿದೆ. ಕ್ಷುಲ್ಲಕ ಕಾರಣಕ್ಕೆ ನಾಲ್ಕೈದು ಜನರು ಡಾ. ತುಕಾರಾಂ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಚಿಕಿತ್ಸೆ ವಿಚಾರವಾಗಿ ವಾಗ್ವಾದ ನಡೆದು ಕಿಡಿಗೇಡಿಗಳು ಹಲ್ಲೆ ಮಾಡಿದ್ದಾರೆ. ಚಿಕಿತ್ಸೆಗಾಗಿ ತಡರಾತ್ರಿ ಆಸ್ಪತ್ರೆಗೆ ಬಂದಿದ್ದ ಯುವಕರಿಂದ ಹಲ್ಲೆ ನಡೆದಿದೆ. ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯನ್ನು ಯುವಕರು ಕರೆತಂದಿದ್ದರು. ಚಿಕಿತ್ಸೆ ವಿಚಾರವಾಗಿ ವೈದ್ಯ ಮತ್ತು ಯುವಕರ ನಡುವೆ ಗಲಾಟೆಯಾಗಿ ಹಲ್ಲೆ ಮಾಡಲಾಗಿದೆ. ಬ್ರಿಮ್ಸ್ ಆಸ್ಪತ್ರೆಯಲ್ಲಿ ವೈದ್ಯ ತುಕಾರಾಂ …
Read More »ಕ್ಷುಲ್ಲಕ ವಿಚಾರಕ್ಕೆ ಗಲಾಟೆ: ಮಹಿಳೆ ಕೊಲೆ
ತುಮಕೂರು: ನಗರದ ವೀರಸಾಗರದಲ್ಲಿ ಬುಧವಾರ ರಾತ್ರಿ ಕ್ಷುಲ್ಲಕ ವಿಚಾರಕ್ಕೆ ಶುರುವಾದ ಗಲಾಟೆ ಮಹಿಳೆ ಕೊಲೆಯಲ್ಲಿ ಅಂತ್ಯವಾಗಿದೆ. ವೀರಸಾಗರದ ಫರ್ಹಾನಾ ಖಾನಂ (45) ಕೊಲೆಯಾದವರು. ಜಾಫರ್ ಮತ್ತು ಫರ್ಹಾನಾ ಖಾನಂ ಕುಟುಂಬಗಳ ಮಧ್ಯೆ 5 ದಿನಗಳ ಹಿಂದೆ ಮಕ್ಕಳ ವಿಚಾರದಲ್ಲಿ ಸಣ್ಣ ಗಲಾಟೆಯಾಗಿತ್ತು. ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದ ಜಾಫರ್ ತನ್ನ ಸಂಬಂಧಿ ಬಾಬು ಖಾನ್ ಜತೆ ಬುಧವಾರ ರಾತ್ರಿ ವೀರಸಾಗರದ ಮುಖ್ಯರಸ್ತೆಯಲ್ಲಿ ಸೇರಿ ಫರ್ಹಾನಾ ಮಗ ಹಯಾತ್ ಮೇಲೆ ಹಲ್ಲೆ ನಡೆಸುತ್ತಿದ್ದರು. …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





