Breaking News

ದರೋಡೆಗೆ ಬಂದ ಕಳ್ಳರನ್ನೇ ಕೂಡಿಹಾಕಿದ ಜನರು!

ನವದೆಹಲಿ: ರಾತ್ರಿಯಾಗುತ್ತಿದ್ದಂತೆ ಕಳ್ಳರು ಅಲರ್ಟ್ ಆಗಿ ಬಿಡುತ್ತಾರೆ. ಎಷ್ಟೇ ಬಂದೋಬಸ್ತ್ ಇದ್ದರೂ ಕಳ್ಳರಿಂದ ಅಂಗಡಿ, ಮನೆಗಳನ್ನು ಕಾಪಾಡಿಕೊಳ್ಳುವುದೇ ನಗರಗಳ ಜನರಿಗೆ ದೊಡ್ಡ ತಲೆನೋವು. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಕಳ್ಳರು ದರೋಡೆ ಮಾಡಲೆಂದು ಅಂಗಡಿಯೊಳಗೆ ನುಗ್ಗುತ್ತಾರೆ. ಆದರೆ, ಅಂಗಡಿಯ ಹೊರಗಿದ್ದ ಜನರು ಆ ಶಾಪ್​ನ ಶಟರ್ ಎಳೆದು ಆ ಕಳ್ಳರನ್ನು ಕೂಡಿಹಾಕುತ್ತಾರೆ. ಇದರಿಂದ ಒಳಗಿರುವ ಕಳ್ಳರು ಗಾಬರಿಯಾಗಿ ಕಿರುಚಾಡುತ್ತಾ ಶಟರ್ ಬಾಗಿಲು ಬಡಿಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೊರಗಿದ್ದ ಜನರ ಜಾಣತನಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *