ಮಾಸಿಕ ಬಾಡಿಗೆಯ ಆಮಿಷವೊಡ್ಡಿ ಕಾರುಗಳನ್ನು ಪಡೆದು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಅಂತರ್-ಜಿಲ್ಲಾ ವಾಹನ ಕಳ್ಳತನ ಜಾಲದ ಕಿಂಗ್‌ಪಿನ್‌ನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ. ಕಾಞಂಗಾಡ್ ಮೂಲದ ಶಂಸುದ್ದೀನ್ ಮೊಹಮ್ಮದ್ ಬಂಧಿತ ಆರೋಪಿಯಾಗಿದ್ದು, ಕಳೆದ ಎರಡು ವರ್ಷಗಳಲ್ಲಿ ಕಾಸರಗೋಡಿನಿಂದಲೇ ಸುಮಾರು 80 ಐಷಾರಾಮಿ ಕಾರುಗಳನ್ನು ವಂಚನೆಯ ಮೂಲಕ ಪಡೆದು ಮಾರಾಟ ಮಾಡಿರುವುದಾಗಿ ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ. ಮಹಿಳೆಯೊಬ್ಬರಿಗೆ ಸೇರಿದ ಥಾರ್, ಎರಡು ಬಲೆನೊ ಹಾಗೂ ಒಂದು ಸ್ವಿಫ್ಟ್ ಕಾರು ನಾಪತ್ತೆಯಾದ ಪ್ರಕರಣದ ತನಿಖೆಯಲ್ಲಿ ಈ ದಂಧೆ ಬೆಳಕಿಗೆ ಬಂದಿದೆ. ಆರೋಪಿಗಳು ಮಾಲೀಕರಿಗೆ ತಿಂಗಳಿಗೆ ₹60 ಸಾವಿರವರೆಗೆ ಬಾಡಿಗೆ ನೀಡುವುದಾಗಿ ನಂಬಿಸಿ ವಾಹನಗಳನ್ನು ಪಡೆದು, ಬಳಿಕ GPS ಸಂಪರ್ಕ ಕಡಿತಗೊಳಿಸಿ ನಕಲಿ ದಾಖಲೆಗಳ ಮೂಲಕ ಬೇರೆ ರಾಜ್ಯಗಳಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಕಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಉಳಿದ ವಾಹನಗಳ ಪತ್ತೆಗೆ ತನಿಖೆ ಮುಂದುವರಿದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

