Breaking News

BigTv News

ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಹಿರಿಯ ವೈದ್ಯ ಡಾ.ಡಿ ಎಲ್ ಭಟ್ಕಳ

ಅಂಕೋಲಾ :ಕೆ ಎಲ್ ಇ ಸಮೂಹ ಸಂಸ್ಥೆಯ ಕಾರ್ಯದರ್ಶಿ ಹಿರಿಯ ವೈದ್ಯರಾಗಿದ್ದ ಡಾ.ಡಿ ಎಲ್ ಭಟ್ಕಳ (79) ಅವರು ಬೆಳಗಾವಿಯ ತಮ್ಮ ಮನೆಯಲ್ಲಿ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂಕೋಲಾ ಕೆ.ಎಲ್.ಇ ಸಮೂಹ ಸಂಸ್ಥೆಯ ಆಡಳಿತಾಧಿಕಾರಿಯಾಗಿ ಪ್ರಭಾಕರ ಕೋರೆ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಇಬರು ನಿರಂತರ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದ್ದರು.ಇವರು ಕೆಲ ದಿನಗಳ ಹಿಂದಷ್ಟೇ ಬೆಳಗಾವಿಗೆ ಸ್ಥಳಾಂತರಗೊಂಡಿದ್ದರು. ಬೆಳಿಗ್ಗೆ ಮನೆಯ ಬಾಲ್ಕನಿಯಲ್ಲಿ ಇವರು ತಲೆಗೆ ಗುಂಡು ಹಾರಿಸಿಕೊಂಡಿದ್ದಾರೆ. ಗುಂಡಿನ ಸದ್ದು …

Read More »

ಓಡಿಹೋಗುತ್ತಾಳೆಂದು ಹೆಂಡತಿಯನ್ನು ಕಟ್ಟಿಹಾಕಿದ ಗಂಡ!

ಬಿಹಾರದ ಮೋತಿಹಾರಿಯಲ್ಲಿ ದಂಪತಿಯ ನಡುವಿನ ಕೌಟುಂಬಿಕ ಕಲಹವು ತಾರಕಕ್ಕೇರಿದ್ದು, ಪತಿ ತನ್ನ ಹೆಂಡತಿಯನ್ನು ಹಗ್ಗದಿಂದ ಕಟ್ಟಿ ಹಾಕಿದ್ದಾನೆ. ಪೊಲೀಸರು ಮತ್ತು ಆ ಮಹಿಳೆಯ ತಂದೆ ಸ್ಥಳಕ್ಕೆ ಬಂದಾಗ, ಇಡೀ ಗ್ರಾಮವನ್ನೇ ದಿಗ್ಭ್ರಮೆಗೊಳಿಸುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿತು. ಹೆಂಡತಿಯೊಂದಿಗಿನ ಭಿನ್ನಾಭಿಪ್ರಾಯದಿಂದ ವ್ಯಕ್ತಿ ತನ್ನ ಹೆಂಡತಿಯನ್ನು ಕಂಬಕ್ಕೆ ಕಟ್ಟಿಹಾಕಿದ್ದಾನೆ. “ಅವಳು ಓಡಿಹೋಗುತ್ತಲೇ ಇರುತ್ತಾಳೆ. ಆದ್ದರಿಂದ ನಾನು ಅವಳನ್ನು ಕಟ್ಟಿ ಹಾಕಿದೆ” ಎಂದು ಆತ ಹೇಳಿದ್ದಾನೆ. ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.

Read More »

ತಡರಾತ್ರಿ ಆಸ್ಪತ್ರೆಯಲ್ಲೇ ವೈದ್ಯನ ಮೇಲೆ ಹಲ್ಲೆ

ಬೀದರ್ ನ ಬ್ರಿಮ್ಸ್ ಆಸ್ಪತ್ರೆಯಲ್ಲಿ ವೈದ್ಯನ ಮೇಲೆ ಹಲ್ಲೆ ನಡೆಸಲಾಗಿದೆ. ಕ್ಷುಲ್ಲಕ ಕಾರಣಕ್ಕೆ ನಾಲ್ಕೈದು ಜನರು ಡಾ. ತುಕಾರಾಂ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಚಿಕಿತ್ಸೆ ವಿಚಾರವಾಗಿ ವಾಗ್ವಾದ ನಡೆದು ಕಿಡಿಗೇಡಿಗಳು ಹಲ್ಲೆ ಮಾಡಿದ್ದಾರೆ. ಚಿಕಿತ್ಸೆಗಾಗಿ ತಡರಾತ್ರಿ ಆಸ್ಪತ್ರೆಗೆ ಬಂದಿದ್ದ ಯುವಕರಿಂದ ಹಲ್ಲೆ ನಡೆದಿದೆ. ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯನ್ನು ಯುವಕರು ಕರೆತಂದಿದ್ದರು. ಚಿಕಿತ್ಸೆ ವಿಚಾರವಾಗಿ ವೈದ್ಯ ಮತ್ತು ಯುವಕರ ನಡುವೆ ಗಲಾಟೆಯಾಗಿ ಹಲ್ಲೆ ಮಾಡಲಾಗಿದೆ. ಬ್ರಿಮ್ಸ್ ಆಸ್ಪತ್ರೆಯಲ್ಲಿ ವೈದ್ಯ ತುಕಾರಾಂ …

Read More »

ಕ್ಷುಲ್ಲಕ ವಿಚಾರಕ್ಕೆ ಗಲಾಟೆ: ಮಹಿಳೆ ಕೊಲೆ

ತುಮಕೂರು: ನಗರದ ವೀರಸಾಗರದಲ್ಲಿ ಬುಧವಾರ ರಾತ್ರಿ ಕ್ಷುಲ್ಲಕ ವಿಚಾರಕ್ಕೆ ಶುರುವಾದ ಗಲಾಟೆ ಮಹಿಳೆ ಕೊಲೆಯಲ್ಲಿ ಅಂತ್ಯವಾಗಿದೆ. ವೀರಸಾಗರದ ಫರ್ಹಾನಾ ಖಾನಂ (45) ಕೊಲೆಯಾದವರು. ಜಾಫರ್‌ ಮತ್ತು ಫರ್ಹಾನಾ ಖಾನಂ ಕುಟುಂಬಗಳ ಮಧ್ಯೆ 5 ದಿನಗಳ ಹಿಂದೆ ಮಕ್ಕಳ ವಿಚಾರದಲ್ಲಿ ಸಣ್ಣ ಗಲಾಟೆಯಾಗಿತ್ತು. ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದ ಜಾಫರ್‌ ತನ್ನ ಸಂಬಂಧಿ ಬಾಬು ಖಾನ್‌ ಜತೆ ಬುಧವಾರ ರಾತ್ರಿ ವೀರಸಾಗರದ ಮುಖ್ಯರಸ್ತೆಯಲ್ಲಿ ಸೇರಿ ಫರ್ಹಾನಾ ಮಗ ಹಯಾತ್‌ ಮೇಲೆ ಹಲ್ಲೆ ನಡೆಸುತ್ತಿದ್ದರು. …

Read More »

ಗೌಜಲ ಹಕ್ಕಿ ಮಾರಾಟಕ್ಕೆ ಯತ್ನ: ಆರೋಪಿ ಬಂಧನ

ಕೊಳ್ಳೇಗಾಲ: ತಾಲ್ಲೂಕಿನ ದಾಸನಪುರ ಗ್ರಾಮದ ಮುಖ್ಯ ರಸ್ತೆಯಲ್ಲಿ ಅಕ್ರಮವಾಗಿ ಗೌಜಲ ಹಕ್ಕಿಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಅರಣ್ಯ ಸಂಚಾರಿ ದಳದ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನ ಮಾದೇಶ ಬಂಧಿತ ಆರೋಪಿ. ಈತ ಪಂಜರಗಳಲ್ಲಿ ಗೌಜಲ ಹಕ್ಕಿಯನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಅರಣ್ಯ ಸಂಚಾರಿ ದಳದ ಪೊಲೀಸರು ದಾಳಿ ನಡೆಸಿ ಹಕ್ಕಿಗಳ ಸಮೇತ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ 12 ಗೌಜಲ ಹಕ್ಕಿ, …

Read More »

ಬಳ್ಳಾರಿಯಲ್ಲಿ ಲಾಡ್ಜ್ ಮಾತ್ರವಲ್ಲ ಮನೆಗಳಲ್ಲೂ ವೇಶ್ಯಾವಾಟಿಕೆ: 8 ಮಹಿಳೆಯರ ರಕ್ಷಣೆ

ವಿವಿಧ ಏರಿಯಾಗಳಲ್ಲಿ ನಡೆದಿದ್ದ ವೇಶ್ಯಾವಾಟಿಕೆ ದಂಧೆಗೆ ಕಡಿವಾಣ ಹಾಕಲು ಪೊಲೀಸರು ಸತ ಕಾರ್ಯಾಚರಣೆ ನಡೆಸಿದ್ದಾರೆ. ಗಾಂಧಿನಗರ, ಎಪಿಎಂಸಿ ಮತ್ತು ಬ್ರೂಸ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ನಾಲ್ಕು ಮನೆಗಳಲ್ಲಿ ಅಕ್ರಮವಾಗಿ ವೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಮೂರು ಠಾಣೆಗಳ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಏಕಕಾಲದಲ್ಲಿ ದಿಢೀರ್ ದಾಳಿ ಮಾಡಿದ್ದಾರೆ. ಈ ವೇಳೆ ದಂಧೆಯಲ್ಲಿ ತೊಡಗಿದ್ದ 6 ಆರೋಪಿಗಳನ್ನು ಬಂಧಿಸಿದ್ದಾರೆ. ದಾಳಿ ವೇಳೆ 8 …

Read More »

ಉಡುಪಿ: ಆನ್‌ಲೈನ್ ಟ್ರೇಡಿಂಗ್ ಹೆಸರಲ್ಲಿ ಭಾರಿ ವಂಚನೆ; ₹1.85 ಲಕ್ಷ ಕಳೆದುಕೊಂಡ ಯುವಕ

ಉಡುಪಿ: ಫೇಸ್‌ಬುಕ್‌ನಲ್ಲಿ ಕಂಡ ನಕಲಿ ಹೂಡಿಕೆ ಜಾಹೀರಾತು ನಂಬಿದ ಉಡುಪಿಯ ಯುವಕನೊಬ್ಬ ₹1.85 ಲಕ್ಷ ಕಳೆದುಕೊಂಡು ಸೈಬರ್ ವಂಚನೆಗೆ ಒಳಗಾಗಿದ್ದಾನೆ. ‘IIFL Capital Services’ ಹೆಸರಿನ ಜಾಹೀರಾತಿನ ಲಿಂಕ್ ಕ್ಲಿಕ್ ಮಾಡಿದ ಬಳಿಕ ಶಿವಶಂಕರ ಎಂಬ ಯುವಕ ವಾಟ್ಸಾಪ್‌ ಗ್ರೂಪ್‌ಗೆ ಸೇರಿದ್ದಾನೆ. ಬಳಿಕ ಆರೋಪಿಗಳು ‘DMAPLUS’ ಆ್ಯಪ್ ಇನ್‌ಸ್ಟಾಲ್ ಮಾಡಿಸಿ ಟ್ರೇಡಿಂಗ್ ಹೆಸರಿನಲ್ಲಿ ಹಂತ ಹಂತವಾಗಿ ಹಣ ಹೂಡಿಕೆ ಮಾಡಿಸಿಕೊಂಡಿದ್ದಾರೆ. ಲಾಭವೂ ಸಿಗದೆ, ಹೂಡಿಕೆ ಮಾಡಿದ ಹಣವೂ ವಾಪಸ್ ಬರದ …

Read More »

ಪಾರ್ಟಿ ವೇಳೆ ಯುವತಿಯ ಅತ್ಯಾಚಾರಕ್ಕೆ ಯತ್ನ: ಪ್ರಕರಣ ದಾಖಲು

ಬೆಂಗಳೂರು: ಪಾರ್ಟಿ ವೇಳೆ 20 ವರ್ಷದ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದಡಿ ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೋಟೆಲ್‌ ಮಾರಾಟ ವಿಚಾರವಾಗಿ ನಡೆದ ಪಾರ್ಟಿ ವೇಳೆ ಆರೋಪಿಯಾದ ಹೈನಾಸ್ ಯುವತಿಯ ಮೇಲೆ ದೌರ್ಜನ್ಯಕ್ಕೆ ಯತ್ನಿಸಿದ್ದಾನೆ ಎನ್ನಲಾಗಿದೆ. ಸ್ನೇಹಿತರು ಸ್ಥಳಕ್ಕೆ ಬಂದಿದ್ದರಿಂದ ಯುವತಿ ಪಾರಾಗಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದಕ್ಕೆ ಕೆರಳಿದ ಆರೋಪಿ ಮದ್ಯದ ಬಾಟಲಿಯಿಂದ ಕೊಲೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಮಡಿವಾಳ ಪೊಲೀಸರು ಆರೋಪಿಗೆ …

Read More »

“ರಕ್ತದಲ್ಲಿ ನೆನೆಸಿ, ಪ್ರಾಣಿಗಳ ಮಾಂಸ ಸುರಿದ”; ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ, ಮತಾಂತರಕ್ಕೆ ಯತ್ನ!

ನವದೆಹಲಿ: ಬಾಟ್ಲಾ ಹೌಸ್ ಪ್ರದೇಶದಲ್ಲಿ 23 ವರ್ಷದ ದಲಿತ ಮಹಿಳೆಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಿ, ಚಿತ್ರಹಿಂಸೆ ನೀಡಿ, ಬಲವಂತವಾಗಿ ಮತಾಂತರಕ್ಕೆ ಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. 2021ರಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾದ ಸಾಹಿಲ್ ಅka ಫಹೀಮ್ ಮದುವೆಯ ಭರವಸೆ ನೀಡಿ ಮಹಿಳೆಯನ್ನು ಬಾಟ್ಲಾ ಹೌಸ್‌ಗೆ ಕರೆಸಿಕೊಂಡಿದ್ದಾನೆ ಎನ್ನಲಾಗಿದೆ. ಬಳಿಕ ಆಕೆಯ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ. ಮಹಿಳೆಯ ದೂರಿನ ಮೇರೆಗೆ …

Read More »

ಆನ್‌ಲೈನ್‌ ಬೆಟ್ಟಿಂಗ್‌ಗೆ ಬಲಿಯಾದ ಯುವಕ

ಕನಕಪುರ- ಆನ್‌ಲೈನ್‌ ಬೆಟ್ಟಿಂಗ್‌ಗೆ ಯುವಕನೊಬ್ಬ ಬಲಿಯಾಗಿದ್ದಾನೆ. ಬಸವೇಶ್ವರ ನಗರದ ನಿವಾಸಿ ವಿನಯ್‌ (25)ಆತಹತ್ಯೆಗೆ ಶರಣಾದವರು. ದಿನಬಳಕೆ ವಸ್ತುಗಳನ್ನು ಮಾರುವ ಏಜೆನ್ಸಿ ನಡೆಸುತ್ತಿದ್ದ ವಿನಯ್‌ ಆನ್‌ಲೈನ್‌ ಬೆಟ್ಟಿಂಗ್‌ ಗೀಳಿಗೆ ಒಳಗಾಗಿ ಸಾಲ ಮಾಡಿಕೊಂಡಿದ್ದನು. ಸಾಲದ ಬಡ್ಡಿ ಏರತೊಡಗಿದ್ದು, ಸಾಲ ತೀರಿಸಲು ಪರದಾಡುತ್ತಿದ್ದ ವಿನಯ್‌ ಹಣ ಹೊಂದಿಸಲಾಗದೇ ಮನೆಯಲ್ಲಿ ನೇಣು ಬಿಗಿದುಕೊಂಡು ಆತಹತ್ಯೆ ಮಾಡಿಕೊಂಡಿದ್ದಾನೆ. ಸುದ್ದಿ ತಿಳಿದು ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕನಕಪುರದಲ್ಲಿ ಆನ್‌ಲೈನ್‌ ಬೆಟ್ಟಿಂಗ್‌ಗೆ …

Read More »