ಹುಬ್ಬಳ್ಳಿ: ರಾಜ್ಯದ ಜನರನ್ನ ರಕ್ಷಣೆ ಮಾಡೋಕೆ ಆಗಲ್ಲ ಅಂದ್ರೆ.ಇವರ ಕೈಯಲ್ಲಿ ರಕ್ಷಣೆ ಮಾಡೋಕೆ ಆಗೋಲ್ಲ. ಪಿಎಫ್ ಐ,ಎಸ್ ಡಿಎಫ್ ಐ ವಿರುದ್ದ ಸಾಕ್ಷಿ ಇದ್ರೆ ಬ್ಯಾನ್ ಮಾಡಲಿ. ಯಾವ ಸಂಘಟನೆಯಾದ್ರು ಪ್ರಚೋದನೆ ಮಾಡಿದ್ರೆ ಬ್ಯಾನ್ ಮಾಡಲಿ. ಎಸ್ ಡಿಪಿಐ,ಪಿಎಫ್ ಐ ಅವರನ್ನ ಸಾಕ್ತಿರೋದೆ ಬಿಜೆಪಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಧರ್ಮದ ಮುಖ್ಯಮಂತ್ರಿ ಅಲ್ಲ. ಪ್ರವೀಣ್ ಮನೆಗೆ ಹೋಗಿದ್ದು ಸರಿ,ಎಲ್ಲರ ಮನೆಗೂ ಹೋಗಬೇಕಿತ್ತು. ನಾವು ಸೆಕ್ಟೇರಿಯನ್ ಸಿಎಂ ಅಂರ ಕರೆಯಬೇಕಾಗುತ್ತೆ.
ಕೊಲೆಗೆ ಪರಿಹಾರ ನೀಡ್ತಿರಲಿಲ್ಲ. ಇವರೇ ಅದನ್ನ ಶುರು ಮಾಡಿದ್ದು, ಅದು ಬೇಕಾದವರಿಗೆ ಮಾತ್ರ ಕೊಡ್ತಿದ್ದಾರೆ .ಜನತ ತೆರಿಗೆ ಹಣ ತಾರತಮ್ಯ ಮಾಡಬಾರದು.
ರಾಜಧರ್ಮ ಅಂದ್ರೆ ಏನು..? ಎಲ್ಲರನ್ನ ಸಮಾನತೆಯಿಂದ ಕಾಣೋದೆ ರಾಜಧರ್ಮ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





