Breaking News

BigTv News

ಮಂಡ್ಯದಲ್ಲಿ ವರದಕ್ಷಿಣೆ ಕಿರುಕುಳ ಆರೋಪ : ಬಾವಿಯಲ್ಲಿ ಗೃಹಣಿಯ ಶವ ಪತ್ತೆ, ಪತಿಯ ಮನೆಯವರಿಂದ ಕೊಲೆ ಆರೋಪ

ಮಂಡ್ಯದಲ್ಲಿ ಅನುಮಾನಾಸ್ಪದವಾಗಿ ಗ್ರಹಿಣಿ ಸಾವನ್ನಪ್ಪಿದ್ದಾರೆ ವರದಕ್ಷಿಣೆಗಾಗಿ ಕೊಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದ್ದು ಮಂಡ್ಯ ತಾಲೂಕಿನ ಜವನಹಳ್ಳಿ ಗ್ರಾಮದಲ್ಲಿ ಈ ಒಂದು ಘಟನೆ ಸಂಭವಿಸಿದೆ. ಬನಂಗಾಡಿಯ ನಾಗವೇಣಿ (24) ಮೃತ ದುರ್ದೈವಿ ಎಂದು ತಿಳಿದುಬಂದಿದೆ. ಜವನ ಹಳ್ಳಿಯ ಬಾವಿಯಲ್ಲಿ ನಾಗವೇಣಿಯ ಶವಪತ್ತೆಯಾಗಿದೆ. ಆರು ವರ್ಷಗಳ ಹಿಂದೆ ಬ್ಯಾಟಗೆಗೌಡನ ಜೊತೆಗೆ ನಾಗವೇಣಿ ಮದುವೆ ಆಗಿತ್ತು. ದಂಪತಿಗೆ ಒಂದು ಗಂಡು ಹಾಗೂ ಒಂದು ಹೆಣ್ಣು ಮಗು ಇದೆ. ಮದುವೆ ವೇಳೆ 80 …

Read More »

ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿತ: ಎಂಜಿನಿಯರ್ ನಾಗರಾಜ್ ಅಮಾನತು

ಬೆಂಗಳೂರು: ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿತದ ಪ್ರಕರಣದಲ್ಲಿ ಆರೋಗ್ಯ ಇಲಾಖೆಯು ಕಾರ್ಯಪಾಲಕ ಎಂಜಿನಿಯರ್ ನಾಗರಾಜ್ ಎಂ.ಬಿ. ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ. ಏ.29ರಂದು ನಗರದಲ್ಲಿ ಸುರಿದ ಧಾರಾಕಾರ ಮಳೆಗೆ ಗೋಡೆ ಕುಸಿದು ಬಾಲಕಿ ಸೇರಿ ಏಳು ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಈ ಗೋಡೆಯನ್ನು ಆರೋಗ್ಯ ಇಲಾಖೆಯಿಂದ ನಿರ್ಮಿಸಲಾಗಿದೆ. ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಡಿ ಕಾರ್ಯನಿರ್ವಹಿಸುತ್ತಿರುವ ಬೌರಿಂಗ್ ಆಸ್ಪತ್ರೆಯಲ್ಲಿ 500 ಹಾಸಿಗೆಗಳ ಕಟ್ಟಡ ನಿರ್ಮಾಣ …

Read More »

ಧರ್ಮಸ್ಥಳ: ವ್ಯಕ್ತಿ ನಾಪತ್ತೆ; ದೂರು ದಾಖಲು

ಬೆಳ್ತಂಗಡಿ: ಧರ್ಮಸ್ಥಳಕ್ಕೆ ವಿವಾಹ ಕಾರ್ಯಕ್ರಮಗಾಗಿ ಬಂದಿದ್ದ ವ್ಯಕ್ತಿಯೊಬ್ಬರು ವಾಪಸ್ ಮನೆಗೆ ಹೋಗದೆ ನಾಪತ್ತೆಯಾದ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ನಿವಾಸಿ ಮಂಜುನಾಥ (47) ಅವರು ಮಗಳ ಮದುವೆಗೆಂದು ಮನೆಯವರ ಜತೆ ಧರ್ಮಸ್ಥಳಕ್ಕೆ ಬಂದಿದ್ದರು.ಅವರು ವಾಪಸು ಮನೆಗೆ ತೆರಳದೆ ಕಾಣೆಯಾಗಿರುತ್ತಾರೆ. ಈ ಬಗ್ಗೆ ದಿನೇಶ್ ಪಿ. ಎಂಬವರು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

Read More »

₹49.27 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ಹಾಸನ: ಹೊಳೆನರಸೀಪುರ ತಾಲ್ಲೂಕಿನ ಹನುಮನಹಳ್ಳಿಯಲ್ಲಿ ಮನೆಯ ಬೀಗ ತೆಗೆದು, ಬೀರುವಿನಲ್ಲಿದ್ದ ₹49.27 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ. ಗ್ರಾಮದ ಧನಲಕ್ಷ್ಮೀ ಅವರು ಏ. 30ರಂದು, ಹಾಸನದ ಚೈತನ್ಯ ಎನ್.ಡಿ.ಆರ್.ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರಿಂದ ಸಂಬಂಧಿಕರನ್ನು ನೋಡಲು ಮನೆಗೆ ಬೀಗ ಹಾಕಿ ತೆರಳಿದ್ದರು. ಕೀಯನ್ನು ಮನೆಯ ಕಿಟಕಿಯ ಸಜ್ಜೆಯ ಮೇಲಿಟ್ಟಿದ್ದರು. ಮಧ್ಯಾಹ್ನ ಮನೆಗೆ ಬಂದು ಮುಂಬಾಗಿಲಿನ ಕೀ ತೆಗೆದಿದ್ದು, ಒಳಗೆ ಹೋಗಿ ನೋಡಿದಾಗ ಹಾಲ್‌ ಹಾಗೂ ರೂಮಿನ ಕಿಟಕಿಗಳು ಮುಚ್ಚಿದ್ದವು. …

Read More »

*ಮನೆಗಳ್ಳರನ್ನು ಬಂಧಿಸಿದ ಬೆಳಗಾವಿ ಪೊಲೀಸರು*

ಬೆಳಗಾವಿ ನಗರದ ಅನಗೋಳದ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ತಿಲಕವಾಡಿ ಪೊಲೀಸರು ಬಂಧಿಸಿದ್ದಾರೆ. ಉಜ್ವಲಾ ರವಿ ಕಮ್ಮಾರ (40) ಹಾಗೂ ಶಿವಾ ಶಂಕರ ಅಪ್ಪಯನವರ, (30) ಆರೋಪಿಗಳಿಂದ ಒಟ್ಟು ಒಟ್ಟು 16,57,350 ರೂ ಮೌಲ್ಯದ 110.49 ಗ್ರಾಂ ಬಂಗಾರದ ಆಭರಣಗಳು ಜಪ್ತ ಮಾಡಿ ವಶಕ್ಕೆ ಪಡೆದುಕೊಳ್ಳಲಾಗಿದೆ. ತನಿಖಾ ತಂಡದಲ್ಲಿ ತಿಲಕವಾಡಿ ಪೊಲೀಸ್ ಇನ್ಸಪೆಕ್ಟರ್ ಪರಶುರಾಮ ಪೂಜೇರಿ, ಪಿಎಸ್‌ಐ ವಿಶ್ವನಾಥ ಘಂಟಾಮಠ (ಕಾ&ಸು), ಪ್ರಭಾಕರ ಡೊಳ್ಳಿ ಪಿಎಸ್‌ಐ (ಅ&ವಿ), ಸಿಬ್ಬಂದಿಗಳಾದ …

Read More »

ನಿಧಿ ಶೋಧ ಯತ್ನ: ಆರು ಮಂದಿ ಬಂಧನ

ದಾವಣಗೆರೆ: ತಾಲ್ಲೂಕಿನ ಕಾಡಜ್ಜಿ ಗ್ರಾಮದ ದೇಗುಲಗಳಲ್ಲಿ ನಿಧಿ ಶೋಧಿಸಲು ಯತ್ನಿಸಿದ ಆರೋಪದ ಮೇರೆಗೆ ಆರು ಜನರನ್ನು ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಕಾಡಜ್ಜಿ ಗ್ರಾಮದ ಬಸವರಾಜ (42), ಮಲೇಬೆನ್ನೂರಿನ ಪ್ರಕಾಶ ಆಚಾರಿ (48), ಮಂಜುನಾಥ (51), ಪ್ರಕಾಶ (42), ಹೊನ್ನಾವರ ತಾಲ್ಲೂಕಿನ ಇಡಗುಂಜಿ ಗ್ರಾಮದ ರಾಮನಾಥ ಪೈ (52), ಸಾಗರ ತಾಲ್ಲೂಕಿನ ಬ್ಯಾಕೋಡು ಗ್ರಾಮದ ಶ್ರೀಕಾಂತ ಭಟ್ (51) ಬಂಧಿತರು. ಆರೋಪಿಗಳು ಏ. 22ರಂದು ರಾತ್ರಿ ಕಾಡಜ್ಜಿ ಗ್ರಾಮದ ಚೌಡಮ್ಮ …

Read More »

ಆರೋಪಿ ಬಂಧನ, 13 ಬೈಕ್ ವಶ

ಬಳ್ಳಾರಿ : ನಗರದ ನಾನಾ ಕಡೆ ಬೈಕ್ ಕಳ್ಳತನ ಪ್ರಕರಣಕ್ಕೆ ಸಂಬಂಧ ಆರೋಪಿಯನ್ನು ಬಂಧಿಸಿ, 6.05 ಲಕ್ಷ ರೂ. ಮೌಲ್ಯದ 13 ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ.ಆಂಧ್ರದ ಮಾಚನೂರು ನಿವಾಸಿ ವಲಸೆ ರಾಜ ಬಂಧಿತ ಆರೋಪಿ. ಇಲ್ಲಿನ ಗಾಂಧಿನಗರ, ಬ್ರೂಸ್‌ಪೇಟೆ ಹಾಗೂ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಬೈಕ್ ಕಳವು ಮಾಡಿರುವುದಾಗಿ ಪೊಲೀಸರ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾನೆ.ಒಟ್ಟಾರೆ ನಾನಾ ಕಂಪನಿಯ 13 ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಕುರಿತು ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ …

Read More »

ದಂಡದ ಹೆಸರಿನಲ್ಲಿ ಹಣ ಬೇಡಿಕೆ ಆರೋಪ: ಇನ್​ಸ್ಪೆಕ್ಟರ್ ಮೈಚಳಿ ಬಿಡಿಸಿದ ಪ್ರಯಾಣಿಕ!

ಹೈದರಾಬಾದ್: ತೆಲಂಗಾಣದ ರಾಯಕೊಡೆಯಲ್ಲಿ ಟಿಕೆಟ್ ತಪಾಸಣೆ ವೇಳೆ ಪ್ರಯಾಣಿಕರು ಮತ್ತು ಟಿಕೆಟ್ ಇನ್ಸ್‌ಪೆಕ್ಟರ್ ನಡುವೆ ಘರ್ಷಣೆ ಉಂಟಾಗಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಹೈದರಾಬಾದ್ ನಿಂದ ನಾರಾಯಣಖೇಡ್ ಕಡೆಗೆ ತೆರಳುತ್ತಿದ್ದ ಆರ್‌ಟಿಸಿ ಬಸ್‌ನಲ್ಲಿ ಈ ಘಟನೆ ನಡೆದಿದೆ.ತುಂಬಿ ತುಳುಕುತ್ತಿದ್ದ ಬಸ್ ಅನ್ನು ರಾಯಕೊಡೆಯಲ್ಲಿ ಮಧ್ಯದಲ್ಲೇ ನಿಲ್ಲಿಸಿ ಟಿಕೆಟ್ ಸ್ಕ್ವಾಡ್ ತಪಾಸಣೆ ನಡೆಸಲಾಗುತ್ತಿತ್ತು. ಈ ವೇಳೆ ಒಬ್ಬ ಪ್ರಯಾಣಿಕನ ಬಳಿ ಟಿಕೆಟ್ ಇಲ್ಲದಿರುವುದು ಪತ್ತೆಯಾಗಿದೆ. ಆರೋಪದ ಪ್ರಕಾರ, ಟಿಕೆಟ್ ಇನ್ಸ್‌ಪೆಕ್ಟರ್ ಸಾಮಾನ್ಯವಾಗಿ ವಿಧಿಸುವ …

Read More »

ಮಲೆ ಮಹದೇಶ್ವರ ಬೆಟ್ಟದಲ್ಲಿ KSRTC ಬಸ್ ಪಲ್ಟಿ: 30ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದ ತಿರುವಿನಲ್ಲಿ ಕೆ.ರೆಸ್.ಆರ್.ಟಿ.ಸಿ ಬಸ್ ಪಲ್ಟಿಯಾಗಿ ಬಿದ್ದು, 30 ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಮಲೆ ಮಹದೇಶ್ವರ ಬೆಟ್ಟದ ತಾಳ ಬೆಟ್ಟದ ಪೊನ್ನಾಚಿ ತಿರುವಿನ ಬಳಿ ಚಾಲಕನ ನಿಯಂತ್ರಣ ತಪ್ಪಿದ ಬಸ್ ಪಲ್ಟಿಯಾಗಿ ಬಿದ್ದಿದೆ. ಘಟನೆಯಲ್ಲಿ 30ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಸ್ ಮಲೆ ಮಹದೇಶ್ವರ ಬೆಟ್ಟದಿಂದ ಕೊಳ್ಳೆಗಾಲಕ್ಕೆ ಬರುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ …

Read More »

ನಕಲಿ ನೋಟು ಚಲಾವಣೆಗೆ ಯತ್ನಿಸಿದ ಇಬ್ಬರ ಸೆರೆ

ಸಿರವಾರ: ತಾಲೂಕಿನ ಕಲ್ಲೂರು ಗ್ರಾಮದಲ್ಲಿ ನಕಲಿ ನೋಟುಗಳ ಚಲಾವಣೆಗೆ ಯತ್ನಿಸಿದ ಇಬ್ಬರನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ. ರಾಯಚೂರಿನ ಬಂದೇನವಾಜ್ ಬಡಾವಣೆ ನಿವಾಸಿಗಳಾದ ಮುರ್ತುಜಾ ಹಾಗೂ ಪಾಷಾ ಬಂಧಿತರು. ಕಲ್ಲೂರು ಗ್ರಾಮದ ಪೆಟ್ರೋಲ್ ಬಂಕ್‌ನಲ್ಲಿ ಗುರುವಾರ ಪೆಟ್ರೋಲ್ ಹಾಕಿಸಿಕೊಂಡು ನಕಲಿ ನೋಟು ಚಲಾವಣೆಗೆ ಮುಂದಾಗಿದ್ದರು.ಈ ಕುರಿತು ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಆರೋಪಿಗಳಿಂದ 4,100 ರೂ. ಮೌಲ್ಯದ ನಕಲಿ ನೋಟುಗಳು ಹಾಗೂ ಒಂದು ಬೈಕ್ ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ನ್ಯಾಯಾಂಗ …

Read More »