ಪೊಲೀಸ್ ಲಾಕ್-ಅಪ್ಗಳಲ್ಲಿ ಆರೋಪಿಗಳು ಆತ್ಮಹತ್ಯೆಗೆ ಪ್ರಯತ್ನಿಸುವ ಘಟನೆಗಳನ್ನು ತಡೆಗಟ್ಟಲು ಮುಂಬೈ ಪೊಲೀಸರು ಆರೋಪಿಗಳಿಗೆ ಹೊಸ ಮತ್ತು ಕಡ್ಡಾಯ ವಸ್ತ್ರ ಸಂಹಿತೆಯನ್ನು ಜಾರಿಗೆ ತಂದಿದ್ದಾರೆ. ಉದ್ದನೆಯ ತೋಳುಗಳುಳ್ಳ ಅಂಗಿ ಅಥವಾ ಪ್ಯಾಂಟ್ ಕಾಲುಗಳನ್ನು ಬಳಸಿ ನೇಣು ಕುಣಿಕೆಗಳನ್ನು ತಯಾರಿಸುವುದನ್ನು ತಪ್ಪಿಸುವ ನಿಟ್ಟಿನಲ್ಲಿ, ಕೆಂಪು ಬಣ್ಣದ ಅರ್ಧ ತೋಳಿನ ಟಿ-ಶರ್ಟ್ ಮತ್ತು ಕಪ್ಪು ಚಡ್ಡಿಯನ್ನು ಪೊಲೀಸ್ ಕಸ್ಟಡಿಯಲ್ಲಿರುವ ಆರೋಪಿಗಳಿಗೆ ನೀಡಲಾಗುತ್ತಿದೆ. ಇದಲ್ಲದೆ ಮೂಲಸೌಕರ್ಯದಲ್ಲೂ ಮಾರ್ಪಾಡು ಮಾಡುತ್ತಿದ್ದು, ಲಾಕ್-ಅಪ್ ಒಳಗಿನ ಶೌಚಾಲಯದ ಬಾಗಿಲುಗಳಲ್ಲೂ ಬದಲಾವಣೆ …
Read More »ಜಮೀರ್ ಅಹ್ಮದ್ ದರ್ಗಾವಾಲೆ ಕೊಲೆ ಪ್ರಕರಣ – ನೆಲಮಂಗಲದಲ್ಲಿ ಐವರು ಸುಪಾರಿ ಹಂತಕರ ಬಂಧನ
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ಜಮೀರ್ ಅಹ್ಮದ್ ದರ್ಗಾವಾಲೆ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಅಡಗಿದ್ದ ಪ್ರಮುಖ ಆರೋಪಿ ಮಂಜುನಾಥ್ ಕಾಜಗಾರ ಸೇರಿದಂತೆ ಐವರನ್ನು ಮುಂಡಗೋಡು ಪೊಲೀಸರು ಬಂಧಿಸಿದ್ದಾರೆ. ತಾಲ್ಲೂಕಿನ ಸಾಲಗಾಂವ ಗ್ರಾಮದ ಮಂಜುನಾಥ ಕಾಜಗಾರ(35), ಕೊಪ್ಪ ಇಂದಿರಾನಗರದ ಶ್ರೀಕಾಂತ ಕಿರಣ್ಣನವರ(22), ಧಾರವಾಡದ ಕೊಂಡವಾಡ ಓಣಿಯ ಮಂಜುನಾಥ ಬೆಳಗಾಂವ(20), ಧಾರವಾಡ ತಾಲ್ಲೂಕು ಹೆಬ್ಬಳ್ಳಿಯ ಅಭಿಷೇಕ ಬಡಶೆಟ್ಟಿ(22), ಧಾರವಾಡ ಮದರಮಡ್ಡಿಯ …
Read More »ಹಾಸನದ ಪಶುವೈದ್ಯಕೀಯ ಕಾಲೇಜಿನಲ್ಲಿ ರ್ಯಾಗಿಂಗ್ ಆರೋಪ, 7 ವಿದ್ಯಾರ್ಥಿಗಳು ಅಮಾನತು
ಹಾಸನ : ನಗರದಲ್ಲಿರುವ ಸರ್ಕಾರಿ ಪಶುವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ನಿಲಯದಲ್ಲಿ ಹಿರಿಯ ವಿದ್ಯಾರ್ಥಿಗಳು ಕಿರಿಯರ ಮೇಲೆ ದೌರ್ಜನ್ಯ ಎಸಗಿದ್ದು , ಅಮಾನವೀಯವಾಗಿ ನಡೆಸಿಕೊಂಡು ರ್ಯಾಗಿಂಗ್ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಹಾಸ್ಟೆಲ್ ಆವರಣದಲ್ಲಿ ತಡರಾತ್ರಿ ಈ ಘಟನೆ ಸಂಭವಿಸಿದೆ. ಪಶುವೈದ್ಯಕೀಯ ಕಾಲೇಜಿನ ಮೊದಲ ವರ್ಷದ ವಿದ್ಯಾರ್ಥಿಗಳಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ನೀಡಲಾಗಿದೆ ಎಂದು ಹೇಳಲಾಗಿದೆ. ಈ ವಿಷಯವು ಕಾಲೇಜು ಆಡಳಿತ ಮಂಡಳಿಯ ಗಮನಕ್ಕೆ ಬರುತ್ತಿದ್ದಂತೆಯೇ, ಪ್ರಾಥಮಿಕ ತನಿಖೆ …
Read More »ಕಬ್ಬನ್ ಪಾರ್ಕ್ ನಲ್ಲಿ ವ್ಯಕ್ತಿ ಆತ್ಮಹತ್ಯೆ ಕೇಸ್, ದೊಡ್ಡ ಜಾಲ ಭೇದಿಸಿದ ಪೊಲೀಸರು
ಬೆಂಗಳೂರು : ನಗರದ ಹೃದಯಭಾಗದ ಕಬ್ಬನ್ ಪಾರ್ಕ್ ಸಮೀಪ ಸಂಭವಿಸಿದ ವ್ಯಕ್ತಿಯೊಬ್ಬನ ನಿಗೂಢ ಸಾವು ರಾಜಧಾನಿಯಲ್ಲಿ ತಲ್ಲಣ ಮೂಡಿಸಿತ್ತು. ಆರಂಭದಲ್ಲಿ ಇದನ್ನು ಸಾಮಾನ್ಯ ಆತ್ಮಹತ್ಯೆ ಎಂದು ಭಾವಿಸಲಾಗಿತ್ತಾದರೂ, ಪೊಲೀಸರು ನಡೆಸಿದ ಆಳವಾದ ತನಿಖೆ ಆಘಾತಕಾರಿ ಸಂಗತಿಗಳನ್ನು ಹೊರಹಾಕಿದೆ. ಮೃತಪಟ್ಟ ವ್ಯಕ್ತಿಯ ಸಾವಿನ ಹಿಂದೆ ದೊಡ್ಡ ಜಾಲವೊಂದು ಕಾರ್ಯನಿರ್ವಹಿಸಿರುವುದು ಈಗ ದೃಢಪಟ್ಟಿದೆ. ರಾಜಸ್ಥಾನ ಮೂಲದ ತಂಡವೊಂದು ಈ ಪ್ರಕರಣದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದ್ದು, ಅವರು ವ್ಯವಸ್ಥಿತವಾಗಿ ಜನರನ್ನು ಗುರಿಯಾಗಿಸಿಕೊಂಡು ಹಣಕ್ಕಾಗಿ ಪೀಡಿಸುತ್ತಿದ್ದರು …
Read More »ಮಚ್ಚಿನಿಂದ ಬೀದಿ ನಾಯಿಯ ಕೊಚ್ಚಿದ ಎಳನೀರು ವ್ಯಾಪಾರಿ!
ಬೆಂಗಳೂರು: ಬೀದಿ ನಾಯಿ ಮೇಲೆ ಎಳನೀರು ವ್ಯಾಪಾರಿಯೊಬ್ಬ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಕೆ.ಆರ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಸಂಬಂಧ ಭಾರತಿನಗರ ನಿವಾಸಿ ವಿಕಾಸ್ ಎಂಬುವರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಏ.25 ರ ಬೆಳಗ್ಗೆ 8.30ಕ್ಕೆ ಈ ಘಟನೆ ನಡೆದಿದ್ದು ಶ್ವಾನದ ಮೇಲೆ ಹಲ್ಲೆ ನಡೆಸುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಿರಿಯ ನಾಗರಿಕರೊಬ್ಬರು ಬೀದಿ ನಾಯಿಯನ್ನು …
Read More »ಬೆಂಗಳೂರು | ₹1 ಕೋಟಿಯ ಚಿನ್ನಾಭರಣ ಕಳವು: ಆರೋಪಿಗಾಗಿ ಹುಡುಕಾಟ
ಅಮೆರಿಕದಿಂದ ಸಹೋದರಿ ಮಗನ ಮದುವೆಗೆ ಬಂದಿದ್ದ ವೈದ್ಯೆಯೊಬ್ಬರ ₹1 ಕೋಟಿ ಮೌಲ್ಯದ 725 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಲಾಗಿದೆ.ವೈದ್ಯೆ ಸಿರುವೆಲ್ಲ ಶ್ರೀದೇವಿ ಎಂಬುವರು ನೀಡಿದ ದೂರಿನ ಮೇರೆಗೆ ಅಪರಿಚಿತ ವ್ಯಕ್ತಿಯ ವಿರುದ್ಧ ಆವಲಹಳ್ಳಿ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ. ಅಮೆರಿಕದಲ್ಲಿ ವಾಸವಿರುವ ದೂರುದಾರೆ ಏಪ್ರಿಲ್ 18ರಂದು ನಗರಕ್ಕೆ ಬಂದು, ಬಳ್ಳಾರಿ ರಸ್ತೆಯ ಗಂಗಾನಗರದಲ್ಲಿರುವ ಸಹೋದರರ ಮನೆಯಲ್ಲಿ ತಂಗಿದ್ದರು. ಏಪ್ರಿಲ್ 22ರಂದು ಹಳೇ ಮದ್ರಾಸ್ ರಸ್ತೆಯ ಎಸ್ಡಿಪಿ ಕಲ್ಯಾಣ …
Read More »ಚಿನ್ನಾಭರಣ ಕದ್ದವನ ಬಂಧನ
ಬಾಗೇಪಲ್ಲಿ: ತಾಲೂಕಿನ ಮೊಟುಕುಪಲ್ಲಿ ಗ್ರಾಮದಲ್ಲಿ 10 ದಿನಗಳ ಹಿಂದೆ ಕಳವಾಗಿದ್ದ 230 ಗ್ರಾಂ ಚಿನ್ನಾಭರಣವನ್ನು ಬಾಗೇಪಲ್ಲಿ ಪೊಲೀಸರು ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಿದ್ದಾರೆ. ಮೊಟುಕುಪಲ್ಲಿ ಗ್ರಾಮದ ಗಂಧರ್ವರೆಡ್ಡಿ ಆರೋಪಿ. ತಾಲೂಕಿನ ಕಸಬಾ ಹೋಬಳಿಯ ಮೊಟುಕುಪಲ್ಲಿ ಗ್ರಾಮದ ಶಿವಕುಮಾರ್ ಮನೆಯಲ್ಲಿ ಏ.15 ರಂದು ಕಳ್ಳತನ ನಡೆದಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಬಾಗೇಪಲ್ಲಿಯ ಸರ್ಕಲ್ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ ಗಂಧರ್ವರೆಡ್ಡಿಯನ್ನು ಬಂಧಿಸಿ 230 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ದೂರು …
Read More »ಬೆಂಗಳೂರಲ್ಲಿ ಆಸ್ತಿ ವಿವಾದ ಹಿನ್ನೆಲೆ, ಕುಟುಂಬ ಸಮೇತ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನ!
ಬೆಂಗಳೂರಲ್ಲಿ ಆಸ್ತಿ ವಿವಾದ ಹಿನ್ನಲೆಯಲ್ಲಿ ಕುಟುಂಬ ಸಮೇತ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿರುವ ಘಟನೆ ವರದಿಯಾಗಿದೆ. ಸ್ವಲ್ಪ ಎಚ್ಚರ ತಪ್ಪಿದ್ರೂ ಕುಟುಂಬ ಸಮೇತ ಮನೆ ಸುಡಲು ಯತ್ನಿಸಲಾಗಿದೆ. ಬೆಂಗಳೂರಿನ ಜಯನಗರದ ಭೈರಸಂದ್ರದಲ್ಲಿ ಸೋದರಿಯಿಂದ ಕೃತ್ಯ ನಡೆದಿದೆ. ಮನೆಯ ಕಿಟಕಿ ಬಾಗಿಲು ಮುರಿದು ಒಳಗೆ ನುಗ್ಗುಲು ಪ್ರಯತ್ನಿಸಲಾಗಿದೆ. ಅಲ್ಲದೇ ಮಚ್ಚು ದೊಣ್ಣೆಗಳಿಂದ ಹಲ್ಲೆ ನಡೆಸಿ ಜೀವಂತ ಸುಡುವುದಾಗಿ ಧಮ್ಕಿ ಹಾಕಲಾಗಿದೆ. ಮನೆಗೆ ಅಳವಡಿಸಿದ್ದ ಸಿಸಿ ಕ್ಯಾಮರಾ ಒಡೆದು ಹಾಕಿ ದಬ್ಬಾಳಿಕೆ …
Read More »ಅಂತರರಾಜ್ಯ ಕಳ್ಳನ ಬಂಧನ
ಉಡುಪಿ: ಬೈಂದೂರಿನ ಪಡುವರಿ ಗ್ರಾಮದ ಗುರುಕಿರಣ್ ಪಟ್ವಾಲ್ ಎಂಬುವವರ ಮನೆಯೊಳಗೆ ನುಗ್ಗಿ ನಗದು, ಚಿನ್ನಾಭರಣ ಕಳವು ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಅಂತರರಾಜ್ಯ ಕಳ್ಳನನ್ನು ಬಂಧಿಸಿದ್ದಾರೆ.ಕಾಪು ಮಲ್ಲಾರುವಿನ ಉಮೇಶ್ ಬಳೆಗಾರ ಬಂಧಿತ ಆರೋಪಿ. ಆರೋಪಿಯಿಂದ ಸುಮಾರು ₹2.81 ಲಕ್ಷ ಮೌಲ್ಯದ ಒಟ್ಟು 22 ಗ್ರಾಂ ಚಿನ್ನದ ಗಟ್ಟಿಯನ್ನು ವಶಪಡಿಸಿಕೊಳ್ಳಲಾಗಿದೆ. ಉಮೇಶ್ ಬಳೆಗಾರನ ವಿರುದ್ದ ತಮಿಳುನಾಡು, ಕೇರಳ ಹಾಗೂ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳ ಪೊಲೀಸ್ ಠಾಣೆಗಳಲ್ಲಿ ಒಟ್ಟು 36 ಪ್ರಕರಣಗಳು …
Read More »ಸಂಬಳ ನೀಡಿಲ್ಲ ಎಂದು ಚಿನ್ನಸ್ವಾಮಿ ಸ್ಟೇಡಿಯಂನ 240 ಸಿಸಿಟಿವಿ ಕೇಬಲ್ ಕಟ್ ಮಾಡಿದ ಇಬ್ಬರು ಉದ್ಯೋಗಿಗಳು
ಬೆಂಗಳೂರು: ಕಂಪನಿ ಸಂಬಳ ನೀಡಿಲ್ಲ ಎಂದು ಕೋಪಗೊಂಡ ಇಬ್ಬರು ಉದ್ಯೋಗಿಗಳು ಬೆಂಅಗ್ಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ನ ಸಿಸಿಟಿವಿ ಕೇಬಲ್ ಕಟ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಸಿಸಿಟಿವಿ ಕೇಬಲ್ ಕಟ್ ಆಗಿರುವುದನ್ನು ಕಂಡು ಪರಿಶೀಲಿಸಿದ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ತನಿಖೆ ನಡೆಸಿದಾಗ ಇಬ್ಬರ ಕರಾಮತ್ತು ಬೆಳಕಿಗೆ ಬಂದಿದೆ. ಚಿನ್ನಸ್ವಾಮಿ ಸ್ಟೇಡಿಯಂಗೆ ಸಿಸಿಟಿವಿ ಅಳವಡಿಕೆಗೆ ಐವಿಎಸ್ ಡಿಜಿಟಲ್ ಸಲ್ಯೂಷನ್ ಕಂಪನಿಗೆ ಸಬ್ ಕಾಂಟ್ರಾಕ್ಟ್ ನೀಡಲಾಗಿತ್ತು. ಇದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





