Breaking News

ಮುಂಬೈ: ಆರೋಪಿಗಳ ಲಾಕ್‌ಅಪ್‌ ಆತ್ಮಹತ್ಯೆ ತಡೆಗೆ ವಸ್ತ್ರ ಸಂಹಿತೆ!

ಪೊಲೀಸ್ ಲಾಕ್-ಅಪ್‌ಗಳಲ್ಲಿ ಆರೋಪಿಗಳು ಆತ್ಮಹತ್ಯೆಗೆ ಪ್ರಯತ್ನಿಸುವ ಘಟನೆಗಳನ್ನು ತಡೆಗಟ್ಟಲು ಮುಂಬೈ ಪೊಲೀಸರು ಆರೋಪಿಗಳಿಗೆ ಹೊಸ ಮತ್ತು ಕಡ್ಡಾಯ ವಸ್ತ್ರ ಸಂಹಿತೆಯನ್ನು ಜಾರಿಗೆ ತಂದಿದ್ದಾರೆ. ಉದ್ದನೆಯ ತೋಳುಗಳುಳ್ಳ ಅಂಗಿ ಅಥವಾ ಪ್ಯಾಂಟ್ ಕಾಲುಗಳನ್ನು ಬಳಸಿ ನೇಣು ಕುಣಿಕೆಗಳನ್ನು ತಯಾರಿಸುವುದನ್ನು ತಪ್ಪಿಸುವ ನಿಟ್ಟಿನಲ್ಲಿ, ಕೆಂಪು ಬಣ್ಣದ ಅರ್ಧ ತೋಳಿನ ಟಿ-ಶರ್ಟ್ ಮತ್ತು ಕಪ್ಪು ಚಡ್ಡಿಯನ್ನು ಪೊಲೀಸ್‌ ಕಸ್ಟಡಿಯಲ್ಲಿರುವ ಆರೋಪಿಗಳಿಗೆ ನೀಡಲಾಗುತ್ತಿದೆ. ಇದಲ್ಲದೆ ಮೂಲಸೌಕರ್ಯದಲ್ಲೂ ಮಾರ್ಪಾಡು ಮಾಡುತ್ತಿದ್ದು, ಲಾಕ್-ಅಪ್ ಒಳಗಿನ ಶೌಚಾಲಯದ ಬಾಗಿಲುಗಳಲ್ಲೂ ಬದಲಾವಣೆ ಮಾಡಲಾಗುತ್ತಿದೆ. 2020ರಿಂದ 23ರ ಅವಧಿಯಲ್ಲಿ ರಾಜ್ಯದಲ್ಲಿ 54 ಮಂದಿ ಪೊಲೀಸ್ ವಶದಲ್ಲೇ ಮೃತಪಟ್ಟಿದ್ದು, ಈ ಪೈಕಿ ಬಹುತೇಕರದ್ದು ಆತ್ಮಹತ್ಯೆ ಎಂದು ವರದಿಗಳು ಹೇಳಿವೆ.

Share News

About BigTv News

Check Also

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಬಾಂಬ್ ಬೆದರಿಕೆ: ಪರಿಶೀಲನೆ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕಚೇರಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಸೋಮವಾರ ಪೊಲೀಸರು ಪರಿಶೀಲನೆ ನಡೆಸಿದರು. …

Leave a Reply

Your email address will not be published. Required fields are marked *