Breaking News

BigTv News

ಬೈಕ್‌ಗೆ ಕಾರು ಡಿಕ್ಕಿ ಹೊಡೆದು ಬಳಿಕ ಡಿವೈಡರ್‌ಗೆ ಗುದ್ದಿ ಪಲ್ಟಿ: ಓರ್ವ ಸಾವು, ಮತ್ತೊಬ್ಬರ ಸ್ಥಿತಿ ಗಂಭೀರ

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಹಕ್ಕಿಪಿಕ್ಕಿ ಕಾಲೋನಿ ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ. ಮೃತರನ್ನು ಆಂಧ್ರಪ್ರದೇಶ ಮೂಲದ ಬಶೀರ್ (40) ಎಂದು ಗುರುತಿಸಲಾಗಿದೆ. ಅತಿ ವೇಗದಲ್ಲಿ ಸಂಚರಿಸುತ್ತಿದ್ದ ಕಾರು ಮೊದಲು ಬೈಕ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದು, ಬಳಿಕ ನಿಯಂತ್ರಣ ತಪ್ಪಿ ರಸ್ತೆ ಮಧ್ಯದ ಡಿವೈಡರ್‌ಗೆ ಅಪ್ಪಳಿಸಿ ಪಲ್ಟಿಯಾಗಿದೆ. ಅಪಘಾತದ ತೀವ್ರತೆ ಎಷ್ಟಿತ್ತೆಂದರೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಮತ್ತೋರ್ವ ವ್ಯಕ್ತಿಯ …

Read More »

ಫೋನ್ ಪೇ ಮೂಲಕ ಲಂಚ ಪಡೆದ ಅಧಿಕಾರಿ ಅರೆಸ್ಟ್

ಹಾವೇರಿ: ಫೋನ್ ಪೇ ಮೂಲಕ ಲಂಚ ಪಡೆದ ಆಹಾರ ನಿರೀಕ್ಷಕ(ಪ್ರಭಾರ)ರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಪಡಿತರ ಚೀಟಿ ಮಾಡಿಸಿಕೊಟ್ಟಿದ್ದಕ್ಕೆ 5000 ರೂ. ಲಂಚ ಪಡೆದ ಆರೋಪದ ಮೇಲೆ ಆಹಾರ ನಿರೀಕ್ಷಕ ವಿಜಯಕುಮಾರ ಗುಡಗೇರಿ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಹಿರೇಲಿಂಗದಹಳ್ಳಿಯ ಬೀರಪ್ಪ ಕಾಶಂಬಿ ಅವರಿಗೆ ವಿಜಯಕುಮಾರ ಪಡಿತರ ಚೀಟಿ ಮಾಡಿಕೊಟ್ಟಿದ್ದರು. ಇದಕ್ಕಾಗಿ ಅವರು ಫೋನ್ ಪೇ ಮೂಲಕ ಲಂಚ ಪಡೆದುಕೊಂಡಿದ್ದರು. ಈ ಬಗ್ಗೆ ದೂರು ಪಡೆದ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ …

Read More »

ಬ್ಯಾಂಕ್‌ ಖಾತೆಯಿಂದ ಹಣ ಲೂಟಿ: ದೂರು

ಬೆಂಗಳೂರು: ಬ್ಯಾಂಕ್ ಖಾತೆಯಿಂದ ಅನಧಿಕೃತವಾಗಿ ಹಣ ಹಿಂಪಡೆದಿರುವ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. 32 ವರ್ಷ ಪ್ರಾಯದ ದೂರುದಾರರು, ಫೆ.28ರಂದು ತನ್ನ ಮೊಬೈಲ್ ನ ಲ್ಲಿದ್ದ ಸಿಮ್ ಕಾರ್ಡ್ ನಿಷ್ಕ್ರಿಯ ಆಗಿರುವುದನ್ನು ಗಮನಿಸಿ ಏರ್ ಟೆಲ್ ಕಚೇರಿಗೆ ಹೋಗಿ ಅದೇ ಸಂಖ್ಯೆಯ ಸಿಮ್ ಪಡೆದು ಏರ್ ಟೆಲ್ ಕಚೇರಿಯಲ್ಲಿ ತಿಳಿಸಿದಂತೆ 4 ಗಂಟೆಯ ಬಳಿಕ ಆ ಸಿಮ್ ಅನ್ನು ಮೊಬೈಲ್ ಗೆ ಹಾಕಿ ಗೂಗಲ್ ಪೇ …

Read More »

ಸಿಲಿಂಡರ್ ಸ್ಫೋಟ ಎರಡಂತಸ್ತಿನ ಮನೆಗೆ ಹಾನಿ

ಸಂಡೂರು: ತಾಳೂರು ಗ್ರಾಮದಲ್ಲಿ ಎಲ್ಪಿಜಿ ಸಿಲಿಂಡರ್ ಸ್ಫೋಟಗೊಂಡು, ಸುಭಾನಿ ಎಂಬುವವರ ಎರಡಂತಿಸ್ತಿನ ಆರ್‌ಸಿಸಿ ಮನೆ ಜಖಂಗೊಂಡಿದೆ. ಗ್ಯಾಸ್ ಸೋರಿಕೆ ಆಗುತ್ತಿರುವುದನ್ನು ಕಂಡ ಸುಭಾನಿ ಅವರ ಪುತ್ರ ಆಸೀಫ್ ಮನೆಯಲ್ಲಿದ್ದವರನ್ನು ಹೊರಗೆ ತಂದಿದ್ದಾನೆ. ಆದರೂ, ಘಟನೆಯಲ್ಲಿ ಪಕ್ಕದ ಮನೆಯವರಾದ ಮಾಬುಸಾಬ್ (58), ಗೌರಮ್ಮ (36), ವೀರೇಶ್(30) ಗಾಯಗೊಂಡಿದ್ದಾರೆ. ಮತ್ತಿಬ್ಬರಿಗೆ ಸಣ್ಣ ಪ್ರಮಾಣದ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೆ ಮೇಲಿದ್ದ ನೀರಿನ ಟ್ಯಾಂಕ್ ಕೂಡ ಹಾನಿಯಾಗಿದೆ. ಸಂಸದ ಈ.ತುಕಾರಾಮ್, ತಹಸೀಲ್ದಾರ್ ಅನಿಲ್ …

Read More »

ಆಭರಣ ಕಳವು ಮಾಡಿದ್ದವನ ಬಂಧನ

ಬ್ಯಾಡಗಿ: ತಾಲೂಕಿನ ಕದರಮಂಡಲಗಿ ಗ್ರಾಮದ ಮನೆಯೊಂದರಲ್ಲಿ ಚಿನ್ನ, ಬೆಳ್ಳಿ ಆಭರಣ ಕಳವು ಮಾಡಿದ್ದ ಅಪ್ರಾಪ್ತನನ್ನು ಮಂಗಳವಾರ ಬಂಧಿಸಲಾಗಿದೆ. ಜ. 8ರಂದು ಕದರಮಂಡಲಗಿ ಗ್ರಾಮದ ಮನೆಯೊಂದರಲ್ಲಿ ಗಾಡ್ರೇಜು ಒಡೆದು ಅದರಲ್ಲಿದ್ದ 13 ಲಕ್ಷ ರೂ. ಮೌಲ್ಯದ ಬೆಳ್ಳಿ, ಬಂಗಾರ ಕಳ್ಳತನವಾಗಿತ್ತು. ಎಸ್ಪಿ ಯಶೋಧಾ ವಂಟಗೋಡಿ, ಹೆಚ್ಚುವರಿ ಅಧೀಕ್ಷಕ ಲಕ್ಷಣ ಶಿರಕೋಳ ಅವರ ಮಾರ್ಗದರ್ಶನದಲ್ಲಿ ಆರೋಪಿಯನ್ನು ಪತ್ತೆ ಮಾಡಿ ಬಂಧಿಸಲಾಗಿದೆ. ಡಿವೈಎಸ್‌ಪಿ ಗಿರಿಮಲ್ಲ ತಳಕಟ್ಟಿ, ಸಿಪಿಐ ಎಂ.ಬಿ. ಚಿಕ್ಕಣ್ಣನವರ, ಪಿಎಸ್‌ಐ ಭಾರತಿ ಕುರಿ, …

Read More »

ದಾವಣಗೆರೆ ಜಿಲ್ಲಾಧಿಕಾರಿ ನಿವಾಸಕ್ಕೆ ಬಾಂಬ್‌ ಬೆದರಿಕೆ

ಜಿಲ್ಲಾಧಿಕಾರಿ ಅವರ ಸರ್ಕಾರಿ ನಿವಾಸಕ್ಕೆ ಬುಧವಾರ ಬಾಂಬ್‌ ಬೆದರಿಕೆಯ ಕರೆ ಬಂದಿದ್ದು, ಪರಿಶೀಲನೆಯ ಬಳಿಕ ಹುಸಿ ಎಂಬುದು ಖಚಿತವಾಗಿದೆ. ಇಲ್ಲಿನ ನಿಜಲಿಂಗಪ್ಪ ಬಡಾವಣೆಯಲ್ಲಿರುವ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರ ನಿವಾಸದಲ್ಲಿ ಬಾಂಬ್‌ ಇಡಲಾಗಿದೆ ಎಂಬುದಾಗಿ ತುರ್ತು ಸಹಾಯವಾಣಿ 112ಗೆ ಮಧ್ಯಾಹ್ನ 2.40ಕ್ಕೆ ಕರೆ ಬಂದಿದೆ. ತಕ್ಷಣ ಅವರ ನಿವಾಸಕ್ಕೆ ಧಾವಿಸಿದ ಬಾಂಬ್ ಪತ್ತೆದಳ ಹಾಗೂ ಶ್ವಾನದಳದ ಸಿಬ್ಬಂದಿ ಒಂದು ಗಂಟೆಗೂ ಅಧಿಕ ಹೊತ್ತು ಪರಿಶೀಲನೆ ನಡೆಸಿದವು. ಬೆದರಿಕೆ ಕರೆ ಮಾಡಿದ …

Read More »

ಎಟಿಎಂ ಕಳ್ಳತನ; ಅಪರಾಧಿಗೆ ಮೂರು ವರ್ಷ ಜೈಲು

ಹುಮನಾಬಾದ್: ಎಟಿಎಂ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಸಾಬೀತವಾಗಿದ್ದರಿಂದ ಅಪರಾಧಿಗಳಿಗೆ ಶಿಕ್ಷೆ ಹಾಗೂ ದಂಡ ವಿಧಿಸಿ ಸ್ಥಳೀಯ ಜೆಎಂಎಫ್‌ಸಿ ನ್ಯಾಯಲಯ ನ್ಯಾಯಾಧೀಶರು ಆದೇಶಿಸಿದ್ದಾರೆ. ತಾಲ್ಲೂಕಿನ ಹಳ್ಳಿಖೇಡ್ ಬಿ. ಪಟ್ಟಣದ ಎಸ್‌ಬಿಐ ಎಟಿಎಂನಲ್ಲಿನ ಹಣ 2024 ಮೇ 2ರಂದು ಕಳ್ಳತನವಾಗಿತ್ತು.ಈ ಬಗ್ಗೆ ಹಳ್ಳಿಖೇಡ್ ಬಿ. ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಹುಮನಾಬಾದ್ ಸಿಪಿಐ ಗುರು ಪಾಟೀಲ ತನಿಖೆ ಕೈಗೊಂಡು ಹರಿಯಾಣ ರಾಜ್ಯದ ಶಾಹಿದ್ ತಂದೆ ಕಮಲಖಾನ್, ಅಲೀಂ ಅಕ್ಬರ್, ಇಲಿಯಾಸ್ …

Read More »

ಹಾವೇರಿ | ಶೋಕಿಗಾಗಿ ಮನೆಗಳಲ್ಲಿ ಕಳ್ಳತನ ಮಾಡ್ತಿದ್ದ ಅಪ್ರಾಪ್ತ ಬಾಲಕ ಅರೆಸ್ಟ್..!

ಹಾವೇರಿ : ಶೋಕಿಗಾಗಿ ಮನೆಗಳ ಕಳ್ಳತನ ಮಾಡ್ತಿದ್ದ ಅಪ್ರಾಪ್ತ ಬಾಲಕನನ್ನು ಹಾವೇರಿ ಜಿಲ್ಲೆ ಬ್ಯಾಡಗಿ ಪೊಲೀಸರು ಮಹತ್ವದ ಕಾರ್ಯಚರಣೆ ನಡೆಸಿ ಬಂಧಿಸಿದ್ದಾರೆ. ಪ್ರವೀಣ ಕರಿಯಪ್ಪ ಎಂಬಾತ ಆರೋಪಿಯಾಗಿದ್ದಾನೆ. ಆರೋಪಿಯು ಮನೆ ಬಾಗಿಲು ಮುರಿದು ಚಿನ್ನಾಭರಣ ದೋಚಿ ಎಸ್ಕೇಪ್‌ ಆಗಿದ್ದು, ಬರೋಬ್ಬರಿ 14 ಲಕ್ಷ ರೂ.ಬೆಲೆಯ ಚಿನ್ನಾಭರಣ ದೋಚಿದ್ದನು ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಶೇಷ ತಂಡ ರಚಿಸಿ ಕಾರ್ಯಚರಣೆ ಇಳಿದಿದ್ದರು. ತನಿಖೆಯಲ್ಲಿ ತಿಳಿದಂತೆ ನಿತ್ಯ ಶೋಕಿಗಾಗಿ ಅಪ್ರಾಪ್ತ ವಯಸ್ಸಿನ ಆರೋಪಿ …

Read More »

ಕುಂದಾಪುರ: 10 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಪಶ್ಚಿಮ ಬಂಗಾಳದಲ್ಲಿ ಬಂಧನ

ಕುಂದಾಪುರ: ವರದಕ್ಷಿಣೆ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 10 ವರ್ಷ ಗಳಿಂದ ಪೊಲೀಸರಿಗೆ ಸಿಗದೆ ತಲೆ ಮರೆಸಿಕೊಂಡಿದ್ದ ಸಿದ್ದಾಪುರ ಗ್ರಾಮದ ಅಕ್ಕುಂಜೆಯ ಶಶಿಕಾಂತ್‌ ಶೆಟ್ಟಿ (44) ಎಂಬ ವರನ್ನು ಕುಂದಾಪುರ ಗ್ರಾಮಾಂತರ ಪೊಲೀಸರು ಪಶ್ಚಿಮ ಬಂಗಾಳದಲ್ಲಿ ಬಂಧಿಸಿದ್ದಾರೆ. 2015ರ ಲ್ಲಿ ಇವರಿಗೆ ಇಲ್ಲಿನ ಯುವತಿ ಯೊಂದಿಗೆ ವಿವಾಹವಾಗಿದ್ದು, 6 ತಿಂಗಳ ಬಳಿಕ ವರದಕ್ಷಿಣೆ ವಿಚಾರ ದಲ್ಲಿ ಈ ಮದುವೆ ಮುರಿದು ಬಿದ್ದಿತ್ತು ಎನ್ನಲಾಗಿದೆ. ಈ ಸಂಬಂಧ ಪತ್ನಿ ನೀಡಿದ ದೂರಿನಂತೆ …

Read More »

ಉರುಳಿದ ಟ್ರಕ್ – ಗಾಯಗೊಂಡ ಚಾಲಕನ್ನು ಬಿಟ್ಟು ಕಲ್ಲಂಗಡಿಗೆ ಮುಗಿಬಿದ್ದ ಜನ!

ದೊಡ್ಡಬಳ್ಳಾಪುರ : ದೊಡ್ಡಬಳ್ಳಾಪುರದಲ್ಲಿ ಕ್ಯಾಂಟರ್ ವಾಹನ ಪಲ್ಟಿಯಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಅವಘಡ ನಡೆದಿದೆ. ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರದ ಕ್ಯಾಂಟರ್ ಚಾಲಕ ಪಾರಾಗಿದ್ದಾನೆ. ದೊಡ್ಡಬಳ್ಳಾಪುರದ ಮೇಷ್ಟ್ರು ಮನೆ ಸರ್ಕಲ್‌ ಬಳಿ ಘಟನೆ ನಡೆದಿದೆ. ವೇದಮೂರ್ತಿ (22) ಗಾಯಗೊಂಡ ಚಾಲಕ ಎಂದು ಗುರುತಿಸಲಾಗಿದೆ. ಚೆನೈನಿಂದ ದಾವಣಗೆರೆಗೆ ಕಲ್ಲಂಗಡಿ‌ ತುಂಬಿಕೊಂಡು ಹೋಗುತ್ತಿದ್ದ ಕ್ಯಾಂಟರ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಮೂರು ಡಿವೈಡರ್ ದಾಟಿ ಹಳ್ಳಕ್ಕೆ ಬಂದು ಕ್ಯಾಂಟರ್ ಬಿದ್ದಿದೆ. ಗಾಯಾಳು ಡ್ರೈವರ್ ಅನ್ನು ಸರಕಾರಿ …

Read More »