ಬೆಂಗಳೂರು: ಬ್ಯಾಂಕ್ ಖಾತೆಯಿಂದ ಅನಧಿಕೃತವಾಗಿ ಹಣ ಹಿಂಪಡೆದಿರುವ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. 32 ವರ್ಷ ಪ್ರಾಯದ ದೂರುದಾರರು, ಫೆ.28ರಂದು ತನ್ನ ಮೊಬೈಲ್ ನ ಲ್ಲಿದ್ದ ಸಿಮ್ ಕಾರ್ಡ್ ನಿಷ್ಕ್ರಿಯ ಆಗಿರುವುದನ್ನು ಗಮನಿಸಿ ಏರ್ ಟೆಲ್ ಕಚೇರಿಗೆ ಹೋಗಿ ಅದೇ ಸಂಖ್ಯೆಯ ಸಿಮ್ ಪಡೆದು ಏರ್ ಟೆಲ್ ಕಚೇರಿಯಲ್ಲಿ ತಿಳಿಸಿದಂತೆ 4 ಗಂಟೆಯ ಬಳಿಕ ಆ ಸಿಮ್ ಅನ್ನು ಮೊಬೈಲ್ ಗೆ ಹಾಕಿ ಗೂಗಲ್ ಪೇ ಆಯಪ್ ಆಕ್ಟಿವೇಷನ್ ಮಾಡಲು ಪ್ರಯತ್ನಿಸಿದ್ದರು. ಅವರು ಪಂಪ್ ವೆಲ್ ನಲ್ಲಿರುವ ಯೂನಿಯನ್ ಬ್ಯಾಂಕ್ ಶಾಖೆಯಲ್ಲಿ ಖಾತೆ, ಹೊಂದಿದ್ದು ಮಾ.2ರಂದು ಮುಂಜಾನೆ 4 ಗಂಟೆಯಿಂದ ಹಂತ ಹಂತವಾಗಿ ಅವರ ಖಾತೆಯಿಂದ ಹಣ ಕಡಿತವಾಗಿರುವ ಬಗ್ಗೆ ಮೊಬೈಲ್ ಗೆ ಸಂದೇಶ ಬಂದಿತ್ತು. ಬ್ಯಾಂಕಿಗೆ ಹೋಗಿ ಪರಿಶೀಲಿಸಿದಾಗ ಅವರ ಖಾತೆಯಿಂದ ಹಂತ ಹಂತವಾಗಿ 1,98,200 ರೂ. ಬೇರೆ ಖಾತೆಗಳಿಗೆ ವರ್ಗವಾಗಿರುವುದು ತಿಳಿದುಬಂತು. ಬಳಿಕ ಪೊಲೀಸ್ ದೂರು ದಾಖಲಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

