Breaking News

BigTv News

ಆಂಧ್ರ ಪಟಾಕಿ ಘಟಕ ಸ್ಫೋಟ: ಸಾವಿನ ಸಂಖ್ಯೆ 21ಕ್ಕೆ ಏರಿಕೆ

ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯ ಪಟಾಕಿ ತಯಾರಿಕಾ ಘಟಕದಲ್ಲಿ ಶನಿವಾರ ಸಂಭವಿಸಿದ್ದ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 21ಕ್ಕೆ ಏರಿಕೆಯಾಗಿದೆ. ಸಮ್ರಾಲಕೋಟ ಮಂಡಲದ ವೆಟ್ಲಪಾಲೆಂನಲ್ಲಿ ಶನಿವಾರ ಒಂಬತ್ತು ಮಹಿಳೆಯರು ಸೇರಿ 20 ಮಂದಿ ಮೃತಪಟ್ಟಿದ್ದರು. ಗಂಭೀರ ಸ್ಥಿತಿಗೆ ತಲುಪಿದ್ದ ಒಂಬತ್ತು ಮಂದಿಯಲ್ಲಿ ಮತ್ತೊಬ್ಬರು ಕಾಕಿನಾಡ ಆಸ್ಪತ್ರೆಯಲ್ಲಿ ಶನಿವಾರ ರಾತ್ರಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಮೃತರಲ್ಲಿ ಸೂರ್ಯಶ್ರೀ ಫೈರ್‌ ವರ್ಕ್ಸ್‌ ಘಟಕದ ಮಾಲೀಕ ಅಡಬಾಲ ಶ್ರೀನಿವಾಸ್ ಕೂಡ ಸೇರಿದ್ದಾರೆ. ಮೃತರ ಗುರುತು …

Read More »

ಒಂದೇ ರಾತ್ರೀಲಿ 11 ರೈತರ ಬೋರ್​ವೆಲ್​ ಕೇಬಲ್​ ಕಳವು

ಕುದೂರು: ಹೋಬಳಿಯ ಬೆಟ್ಟಹಳ್ಳಿಪಾಳ್ಯದಲ್ಲಿ ಒಂದೇ ರಾತ್ರಿಯಲ್ಲಿ 11 ರೈತರ ಬೋರ್​ವೆಲ್​ನ ಕೇಬಲ್​ ವೈರ್​ಗಳು ಕಳ್ಳತನವಾಗಿದ್ದು, ಕುದೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಟ್ಟಹಳ್ಳಿ ಪಾಳ್ಯದ ಮರಿಸ್ವಾಮಿ, ಮಂಜುನಾಥ್​, ರಾಮಾಂಜನೇಯ, ಶ್ರೀನಿವಾಸ್​, ರವಿಕುಮಾರ್​, ರಾಮಣ್ಣ, ಸುನಂದಮ್ಮ, ರಾಜಣ್ಣ, ರಂಗಪ್ಪ, ಧನಂಜಯ, ಮಂಜುನಾಥ, ಚನ್ನಗಿರಿಯಪ್ಪರ ಅವರ ಜಮೀನಿನಲ್ಲಿ ಕೇಬಲ್​ ಕಳ್ಳತನವಾಗಿದ್ದು, ಈ ಪೈಕಿ ರೈತ ಮಂಜುನಾಥ ದೂರು ದಾಖಲಿಸಿದ್ದಾರೆ. ರಾತ್ರಿ ಸಮಯದಲ್ಲಿ ಜಮೀನುಗಳಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿಯೇ ಕಳ್ಳರು ಕೇಬಲ್​ ವೈರನ್ನು ಕದ್ದಿದ್ದಾರೆ …

Read More »

ಚಿನ್ನ ಪಡೆದು ಪರಾರಿಯಾಗಿದ್ದ ಆರೋಪಿ ಸೆರೆ

ಬೆಂಗಳೂರು: ಕೆಲಸ ಮಾಡುತ್ತಿದ್ದ ಚಿನ್ನಾಭರಣ ಮಳಿಗೆ ಮಾಲೀಕರಿಗೆ ವಂಚಿಸಿದ ವ್ಯಕ್ತಿಯನ್ನು ಭಾರತಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನದ ಧರ್ಮವೀರ್ ಸಿಂಗ್ ಬಂಧಿತ ಆರೋಪಿ. ಈತನಿಂದ ₹33.50 ಲಕ್ಷ ಮೌಲ್ಯದ 230 ಗ್ರಾಂ ತೂಕದ ಆರು ಚಿನ್ನದ ಸರಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಪಿಎಚ್‌ ಜುಮಾ ಮಸೀದಿ ರಸ್ತೆಯಲ್ಲಿರುವ ಆಭರಣ ಅಂಗಡಿ ಮಾಲೀಕರು ಸೆಪ್ಟೆಂಬರ್ 23ರಂದು ಈ ಬಗ್ಗೆ ದೂರು ನೀಡಿದ್ದರು. ಆಭರಣ ಅಂಗಡಿಗೆ ಮಾಲೀಕರು ಮತ್ತೊಂದು ಆಭರಣ ಅಂಗಡಿಯಿಂದ ಚಿನ್ನಾಭರಣ ತರಲು …

Read More »

ತಾಯಿ ಕೊಲೆ; ಮಗನಿಗೆ ಜೀವಾವಧಿ ಶಿಕ್ಷೆ

ಚಿತ್ರದುರ್ಗ: ಮದ್ಯ ಸೇವನೆಗೆ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ತಾಯಿಯನ್ನೇ ಕೊಲೆ ಮಾಡಿದ್ದ ಮಗನಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಶನಿವಾರ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.ಮೊಳಕಾಲ್ಮೂರು ತಾಲ್ಲೂಕಿನ ಕೊಪ್ಪ ಗ್ರಾಮದ ನಿವಾಸಿ ಸಿ. ಶಿವಾರೆಡ್ಡಿ ಶಿಕ್ಷೆಗೆ ಗುರಿಯಾದ ಆರೋಪಿ. ಈತ ತನ್ನ ತಾಯಿ ಅಂಜಿನಮ್ಮ ಹತ್ಯೆ ಮಾಡಿದ್ದನು. ಶಿವಾರೆಡ್ಡಿ ತೀವ್ರ ಮದ್ಯಪಾನದ ಚಟಕ್ಕೆ ಒಳಗಾಗಿದ್ದು, ಇದೇ ವಿಚಾರಕ್ಕೆ ತಾಯಿಯ ಜತೆ ಜಗಳವಾಡುತ್ತಿದ್ದನು. 2023ರ ನವೆಂಬರ್‌ 25ರ …

Read More »

ನಂಬರ ಪ್ಲೇಟ್ ಇಲ್ಲದ ಬೈಕ್‌ಗಳಿಗೆ ದಂಡ

ಬೆಳಗಾವಿ: ನಗರ ಪ್ರದೇಶದಲ್ಲಿ ನಂಬರ ಪ್ಲೇಟ್ ಇಲ್ಲದ ಹಾಗೂ ದೋಷಪೂರಿತ ನಂಬರ ಪ್ಲೇಟ್ ಅಳವಡಿಸಿಕೊಂಡು ಸಂಚರಿಸುವ ವಾಹನಗಳ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಕೊಂಡಿರುವ ಪೊಲೀಸರು, ವಿವಿಧ ಠಾಣೆ ವ್ಯಾಪ್ತಿಯಲ್ಲಿ ಒಟ್ಟು 126 ದ್ವಿಚಕ್ರ ವಾಹನಗಳ ವಿರುದ್ಧ ಮೋಟಾರು ವಾಹನ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು 63 ಸಾವಿರ ರೂ.ದಂಡ ವಿಧಿಸಿದ್ದಾರೆ. ಬೆಳಗಾವಿ ನಗರದ ವಿವಿಧೆಡೆ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಿದ ಆರೋಪದಲ್ಲಿ ಬ್ರಹ್ಮನಗರದ ಸತೀಶ ಬೆನ್ನಾಳಿ(32) ಮತ್ತು ಉಮೇಶ ಪಾಲಕರ(38), …

Read More »

ಮಹಾರಾಷ್ಟ್ರದಲ್ಲಿ ಭೀಕರ ಸ್ಫೋಟ: 15 ಮಂದಿ ದಾರುಣ ಸಾವು

ಮಹಾರಾಷ್ಟ್ರದಲ್ಲಿ ನಾಗ್ಪುರ ಜಿಲ್ಲೆಯಲ್ಲಿ ರಾಸಾಯನಿಕ ಕಾರ್ಖಾನೆಯಲ್ಲಿ ಭಾರೀ ಸ್ಫೋಟ ಸಂಭವಿಸಿದ್ದು, 15 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಈ ದುರ್ಘಟನೆ ಕಲ್ಮೇಶ್ವರ ತಾಲೂಕಿನ ರೌಲ್ಗಾಂವ್ ಬಳಿ ನಡೆದಿದೆ. ಸ್ಫೋಟಕಗಳನ್ನು ತಯಾರಿಸುವ ಕಾರ್ಖಾನೆಯಲ್ಲಿ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಮಹಿಳೆಯರು ಸೇರಿದಂತೆ 15 ಮಂದಿ ಸಾವನ್ನಪ್ಪಿದ್ದರೆ, 18 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಗ್ಗೆ 6 ಗಂಟೆಯ ಪಾಳಿಗೆ ಸುಮಾರು 35 ಕಾರ್ಮಿಕರು ಕೆಲಸಕ್ಕೆ ಬಂದಿದ್ದು, …

Read More »

ಸಿರಿಗೆರೆ | ಠಾಣೆ ಮೆಟ್ಟಿಲೇರಿದ ಯುವತಿ; ಹೆದರಿ ಮದುವೆಯಾದ ಶಿಕ್ಷಕ

ಪ್ರೀತಿಸಿ, ಬಳಿಕ ನಿಶ್ಚಿತಾರ್ಥವನ್ನೂ ಮಾಡಿಕೊಂಡಿದ್ದ ಶಿಕ್ಷಕ ಮದುವೆಯಾಗಲು ನಿರಾಕರಿಸಿದ ಕಾರಣ ಯುವತಿಯೊಬ್ಬರು ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದು, ಈ ವಿಚಾರ ಗೊತ್ತಾದ ಕೂಡಲೇ ಶಿಕ್ಷಕ ವಿವಾಹವಾಗಲು ಮುಂದಾದ ಪ್ರಸಂಗ ಶುಕ್ರವಾರ ಭರಮಸಾಗರದಲ್ಲಿ ನಡೆದಿದೆ. ಚಳ್ಳಕೆರೆ ತಾಲ್ಲೂಕಿನ ಪರಶುರಾಂಪುರ ಸರ್ಕಾರಿ ಶಾಲೆಯ ಶಿಕ್ಷಕ ಹರೀಶ್‌ ವಿರುದ್ಧ ಇಸಾಮುದ್ರ ಗೊಲ್ಲರಹಟ್ಟಿಯ ಕಾವ್ಯ ಅವರು ಭರಮಸಾಗರ ಪೊಲೀಸರಿಗೆ ದೂರು ನೀಡಿದ್ದರು. ಕಾವ್ಯ ಹಾಗೂ ತಣಿಗೇಹಳ್ಳಿಯ ಹರೀಶ್‌ ಸಂಬಂಧಿಕರಾಗಿದ್ದು, 8 ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಕುಟುಂಬಸ್ಥರ ಸಮ್ಮಖದಲ್ಲಿ …

Read More »

ಅಣ್ಣ-ತಂಗಿ ಮೇಲೆ ಹಲ್ಲೆ ಮಾಡಿ ಚಿನ್ನಾಭರಣ ನಗದು ದರೋಡೆ

ಹಾವೇರಿ: ಅಣ್ಣ-ತಂಗಿ ಮೇಲೆ ಹಲ್ಲೆ ಮಾಡಿ 4 ಲಕ್ಷ ರೂ. ಮೌಲ್ಯದ ಚಿನ್ನದ ಸರ ಹಾಗೂ 1.20 ಲಕ್ಷ ರೂ. ದರೋಡೆ ಮಾಡಿಕೊಂಡು ಹೋದ ಘಟನೆ ತಾಲೂಕಿನ ಕುಣಿಮೆಳ್ಳಿಹಳ್ಳಿ ಬಳಿ ವರದಾ ನದಿ ಹತ್ತಿರ ನಡೆದಿದೆ. ಬಂಕಾಪುರದ ಮಾಬುಬಲಿ ಪೀರಸಾಬ ಗಂಜಿಗಟ್ಟಿ (40) ಹಾಗೂ ಈತನ ಸಹೋದರಿ ಜಾಯಾದಾಬಾನು ಎಂಬುವರ ಮೇಲೆ ಹಲ್ಲೆ ಮಾಡಿ ಚಿನ್ನಾಭರಣ ದೋಚಿರುವುದು. ಇವರು ವರದಾ ನದಿಯಲ್ಲಿ ಹಳೆಯ ಖುರಾನ ಪುಸ್ತಕ ಹಾಕಿ ವಾಪಸ್ ಬರುತ್ತಿದ್ದ …

Read More »

ಕುಡಿದ ಎಳೆನೀರಿನ ಹಣ ಕೇಳಿದ್ದಕ್ಕೆ ಕೊಲೆ..!

ಇಂಡಿ : ತಾಲೂಕಿನ ತಡವಲಗಾ-ಬೋಳೆಗಾಂವ ಗ್ರಾಮದ ಜೋಡಗುಡಿಯ ಹತ್ತಿರ ಎಳೆನೀರು ಕುಡಿದ ಹಣ ಕೊಡಿ ಎಂದಿದ್ದಕ್ಕೆ ಕೋಪಗೊಂಡು ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ ಘಟನೆ ಗುರುವಾರ ರಾತ್ರಿ ನಡೆದಿದೆ.ರಾಜಕುಮಾರ ನಾಗಪ್ಪ ವಾಗಶೆಟ್ಟಿ (23) ಸಾ. ಬೋಳೆಗಾಂವ ಮೃತ ದುರ್ದೈವಿಯಾಗಿದ್ದು, ತಡವಲಗಾ ಗ್ರಾಮದ ಪ್ರವೀಣ ಹೊಸಮನಿ, ಪ್ರಶಾಂತ ಹೊಸಮನಿ ಎಂಬುವವರೇ ಕೊಲೆ ಮಾಡಿದ ದುಷ್ಕರ್ಮಿಗಳಾಗಿದ್ದಾರೆ. ತಡವಲಗಾ-ಬೋಳೆಗಾಂವ ಜೋಡಗುಡಿಯ ಸಮೀಪವಿರುವ ರಾಜಕುಮಾರ ಅವರ ಕೋಲ್ಡ್ಡ್ರಿಂಕ್ಸ್ ಹಾಗೂ ಎಳೆನೀರು ಅಂಗಡಿಗೆ ಬಂದ ದುಷ್ಕರ್ಮಿಗಳು ಎಳೆನೀರು ಕುಡಿದಿದ್ದಾರೆ. …

Read More »

ಪಳ್ಳಿ: ಪಡು ಕಲ್ಲಾಪು ಗ್ರಾಮದಲ್ಲಿ ಅಗ್ನಿ ಅವಘಡ

ಕಾರ್ಕಳ: ಪಳ್ಳಿ ಗ್ರಾಮದ ಪಡು ಕಲ್ಲಾಪು ಎಂಬಲ್ಲಿ ಶನಿವಾರ ಮಧ್ಯಾಹ್ನ ಮೂರು ಎಕ್ರೆ ಜಾಗದಲ್ಲಿ ಹಲವೆಡೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ದಳದ ಸಿಬಂದಿ ತ್ವರಿತ ಕಾರ್ಯಾಚರಣೆಯಿಂದಾಗಿ ಸಮೀಪದ ವಸತಿ ಪ್ರದೇಶಗಳಿಗೆ ವ್ಯಾಪಿಸಬಹುದಾಗಿದ್ದ ಬೆಂಕಿಯನ್ನು ನಂದಿಸಿ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ. ಮರದ ಗೆಲ್ಲುಗಳು ವಿದ್ಯುತ್ ಲೈನ್‌ಗೆ ತಗಲಿದ ಪರಿಣಾಮ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಮೈದಾನದಲ್ಲಿದ್ದ ಒಣಗಿದ ಹುಲ್ಲು ಹಾಗೂ ಕಾಡು ಗಿಡಗಳಿಗೆ ಬೆಂಕಿ ಕ್ಷಣಾರ್ಧದಲ್ಲಿ …

Read More »