Breaking News

BigTv News

ಪ್ರಿಪರೇಟರಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ

ಚಿಕ್ಕಮಗಳೂರು: ಪ್ರಿಪರೇಟರಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಪ್ಪ ತಾಲೂಕಿನ ಕೊಳೆಹಲಸು ಗ್ರಾಮದಲ್ಲಿ ನಡೆದಿದೆ.ಪ್ರಕೃತಿ(16) ಮೃತಪಟ್ಟ ವಿದ್ಯಾರ್ಥಿನಿ. ಕೆಪಿಎಸ್ ಪ್ರೌಢಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ ಪ್ರಕೃತಿ ಪ್ರಿಪರೇಟರಿ ಪರೀಕ್ಷೆಯಲ್ಲಿ ಮೂರು ವಿಷಯದಲ್ಲಿ ಕಡಿಮೆ ಅಂಕ ಗಳಿಸಿದ್ದರು.ಇದರಿಂದ ಮನನೊಂದ ಅವರು ಮನೆಯಲ್ಲಿದ್ದ ಕ್ರಿಮಿನಾಶಕ ಸೇವಿಸಿದ್ದಾರೆ. ನಂತರ ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಹರಿಹರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ವಿದ್ಯಾರ್ಥಿನಿ ಆತ್ಮಹತ್ಯೆ

ಉಡುಪಿ: ಪ್ರೌಢ ಶಾಲೆಯ ವಿದ್ಯಾರ್ಥಿನಿಯೊಬ್ಬಳು ತಾನು ವಾಸವಾಗಿದ್ದ ಬೀಡಾರದ ಜಂತಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಬೀಡಿನಗುಡ್ಡೆಯಲ್ಲಿ ನಡೆದಿದೆ. ಬರ್ಮವ್ವ (15) ಮೃತರು. ಗೀತಾ ಶೆಟ್ಟಿ ಎಂಬವರ ನಿವೇಶನದಲ್ಲಿದ್ದ ಜೋಪಡಿಯನ್ನು ಬಾಡಿಗೆ ಪಡೆದುಕೊಂಡು ಮೃತ ಬಾಲಕಿಯ ಹೆತ್ತವರು‌ ವಾಸವಾಗಿದ್ದರು. ಮನೆ ಮಂದಿ ಬೆಳಗ್ಗೆ ಕೆಲಸಕ್ಕೆ ಹೋದ ಸಂದರ್ಭದಲ್ಲಿ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈಕೆ ಬೋರ್ಡ್ ಹೈಸ್ಕೂಲಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ನಗರ ಪೋಲಿಸ್ ಠಾಣೆಯ ಎಸ್ ಐ ಗಂಗಪ್ಪ,‌ ಮುಖ್ಯ …

Read More »

ಧಾರವಾಡ: ಶೀತಲನಾಥ ಜೈನ ಮಂದಿರದ ಹುಂಡಿ ಒಡೆದು ಹಣ ಕಳವು

ಇಲ್ಲಿನ ಲೈನ್‌ಬಜಾರ್‌ನ ಶೀತಲನಾಥ ಮಂದಿರದ ಹುಂಡಿ ಒಡೆದು, ಹಣ ದೋಚಿ ಕಳ್ಳರು ಪರಾರಿಯಾಗಿರುವ ಘಟನೆ ಸೋಮವಾರ ತಡರಾತ್ರಿ ನಡೆದಿದೆ.ಮಂದಿರದ ಸಿಸಿಟಿವಿ ಕ್ಯಾಮೆರಾಗಳನ್ನು ಹಾಳುಗೆಡವಿ ನಂತರ ಕಳವು ಮಾಡಿದ್ದಾರೆ. ಹುಂಡಿಯಿಂದ ನೋಟುಗಳನ್ನು ಕದ್ದೊಯಿದ್ದಾರೆ.ನಾಣ್ಯಗಳು ಹುಂಡಿಯಲ್ಲಿವೆ. ಮಂದಿರದಲ್ಲಿದ್ದ ಬೆಳ್ಳಿ ವಸ್ತುಗಳನ್ನು (ದೀಪ, ತಟ್ಟೆ, ಆರತಿ ಬಟ್ಟಲು…) ತೆಗೆದುಕೊಂಡು ಹೋಗಿಲ್ಲ. ‘ರಾತ್ರಿ ಸುಮಾರು 2 ಗಂಟೆ ಹೊತ್ತಿನಲ್ಲಿ ಮಂದಿರಕ್ಕೆ ನುಗ್ಗಿ ಕೃತ್ಯ ಎಸಗಿದ್ದಾರೆ. ಅಂದಾಜು ₹1.5 ಲಕ್ಷ ಹಣ ಕದ್ದೊಯ್ದಿರಬಹುದು ಎಂದು ಮಂದಿರದವರು ತಿಳಿಸಿದ್ದಾರೆ. …

Read More »

ಧಾರವಾಡ: ಸಾರಿಗೆ ಬಸ್‌ಗಳ ಮೇಲೆ ಗುಟ್ಕಾ ಜಾಹಿರಾತು ತೆರವಿಗೆ ಆಗ್ರಹ

ಸಾರಿಗೆ ಬಸ್‌ಗಳಲ್ಲಿ ಅಂಟಿಸಿರುವ ಗುಟ್ಕಾ ಜಾಹಿರಾತು ತೆರವುಗೊಳಿಸಬೇಕು ಎಂದು ಆಗ್ರಹಿಸಿ ಎಐಡಿವೈಒ ಜಿಲ್ಲಾ ಘಟಕದ ಸದಸ್ಯರು ಮಂಗಳವಾರ ಪ್ರತಿಭಟನೆ ನಡೆಸಿದರು. ಸಿಬಿಟಿ (ಸಿಟಿ ಬಸ್‌ ಟರ್ಮಿನಲ್‌) ಎದುರು ಸಮಾವೇಶ‌ಗೊಂಡ ಪ್ರತಿಭಟನಾಕಾರರು ಘೋಷಣೆ ಕೂಗಿದರು. ಗುಟ್ಕಾ ಸೇವನೆಯು ಆರೋಗ್ಯಕ್ಕೆ ಮಾರಕ. ಕೂಡಲೇ ಗುಟ್ಕಾ ಜಾಹಿರಾತುಗಳನ್ನು ಸಾರಿಗೆ ಸಂಸ್ಥೆಯವರು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು. ‘ಜನರು ದುಶ್ಚಟಗಳ ಗೀಳು ಬೆಳೆಸಿಕೊಳ್ಳದಂತೆ ಜಾಗೃತಿ ಮೂಡಿಸುವುದು ಸರ್ಕಾರದ ಜವಾಬ್ದಾರಿ. ಆದರೆ, ಆದಾಯದ ನೆಪದಲ್ಲಿ ಸರ್ಕಾರಿ ಸಾರಿಗೆ ಬಸ್‌ಗಳಲ್ಲಿ …

Read More »

ಧರ್ಮಸ್ಥಳ ಬುರುಡೆ ಕೇಸ್​​: ಬಂಗ್ಲೆಗುಡ್ಡದಲ್ಲಿ ಸಿಕ್ಕ ಅಸ್ಥಿಪಂಜರಗಳು FSL ಪರೀಕ್ಷೆಗೆ ರವಾನೆ

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಗ್ಲೆಗುಡ್ಡದಲ್ಲಿ ಸಿಕ್ಕಂತ 7 ಅಸ್ಥಿಪಂಜರಗಳ್ನು ಎಸ್‌ಐಟಿ ಅಧಿಕಾರಿಗಳು ಎಫ್ ಎಸ್ ಎಲ್ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಧರ್ಮಸ್ಥಳ ಗ್ರಾಮದ ಸಮೀಪದಲ್ಲಿನ ಬಂಗ್ಲೆಗುಡ್ಡ ಅರಣ್ಯದಲ್ಲಿ ಎಸ್‌ಐಟಿ ಕಾರ್ಯಾಚರಣೆಯ ಸಂದರ್ಭದಲ್ಲಿ ಮಾನವನ 7 ಅಸ್ಥಿಪಂಜರಗಳು ಪತ್ತೆಯಾಗಿದ್ದವು.ಸೆಪ್ಟೆಂಬರ್.17, 2025ರಂದು 5, ಸೆ.18ರಂದು 2 ಸೇರಿದಂತೆ ಏಳು ಅಸ್ಥಿಪಂಜರಗಳು ಬಂಗ್ಲೆಗುಡ್ಡ ಅರಣ್ಯದಲ್ಲಿ ಎಸ್‌ಐಟಿಗೆ ಪತ್ತೆಯಾಗಿದ್ದವು. ಬಂಗ್ಲೆಗುಡ್ಡದ ಅರಣ್ಯದಲ್ಲಿ ಆತ್ಮಹತ್ಯೆ ರೀತಿಯಲ್ಲಿ ಪತ್ತೆಯಾದಂತ ಅಸ್ಥಿ ಪಂಚರಗಳನ್ನು ಬೆಳ್ತಂಗಡಿ …

Read More »

ಬೆಂಗಳೂರಿನ ಇಸ್ರೇಲ್ ರಾಯಭಾರಿ ಕಚೇರಿಗೆ ಹುಸಿ ಬಾಂಬ್ ಬೆದರಿಕೆ ಇ-ಮೇಲ್

ಬೆಂಗಳೂರಿನ ಹಲಸೂರು ಠಾಣಾ ವ್ಯಾಪ್ರಿಯಲ್ಲಿರುವ ಇಸ್ರೇಲ್ ರಾಯಭಾರಿ ಕಚೇರಿಗೆ ಹುಸಿ ಬಾಂಬ್ ಬೆದರಿಕೆ ಬಂದಿದೆ ಎಂದು ತಿಳಿದು ಬಂದಿದೆ. ಕಚೇರಿ ಆವರಣದಲ್ಲಿ ಆರ್ ಡಿ ಎಕ್ಸ್ ಬಾಂಬ್ ಇಡಲಾಗಿದೆ. ಕೆಲವೇ ಗಂಟೆಗಳಲ್ಲಿ ಅದು ಬ್ಲಾಸ್ಟ್ ಆಗುತ್ತದೆ ಎಂದು ಇ-ಮೇಲ್ ಕಳುಹಿಸಲಾಗಿದೆ.ರಾಯಭಾರಿ ಕಚೇರಿಯ ಅಧಿಕಾರಿಗಳು ಇ ಮೇಲ್ ಪರಿಶೀಲನೆ ನಡೆಸುವಾಗ ಬಾಂಬ್ ಬೆದರಿಕೆ ಸಂದೇಶ ನೋಡಿದ್ದಾರೆ. ಕೂಡಲೇ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಾಂಬ್ ಸ್ಕ್ವಾಡ್ ಸಮೇತ ಬಂದ ಪೊಲೀಸರು …

Read More »

ರಾಜ್ಯದಲ್ಲಿ ಮತ್ತೊಂದು ಘೋರ ದುರಂತ: ಲಾರಿ, 2 ಗೂಡ್ಸ್ ವಾಹನ ಮಧ್ಯೆ ಸರಣಿ ಅಪಘಾತ: 5 ಜನ ಸಾವು

ರಾಯಚೂರು: ಲಾರಿ, ಎರಡು ಗೂಡ್ಸ್ ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿದ್ದು, ಐದು ಜನ ಸಾವನ್ನಪ್ಪಿದ್ದಾರೆ.ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಕನ್ನಾರಿ ಕ್ರಾಸ್ ಬಳಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದು, ಸಿಂಧನೂರು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.ಸಿಂಧನೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ.

Read More »

ಗೋಕರ್ಣ: ಸಮುದ್ರದಲ್ಲಿ ಮುಳುಗಿ ವಿದೇಶಿ ಮಹಿಳೆ ಸಾವು

ಇಲ್ಲಿನ ಸಮುದ್ರದಲ್ಲಿ ಭಾನುವಾರ ಈಜಲು ತೆರಳಿದ್ದ ಝೆಕ್ ದೇಶದ ಮಿಲೋಸ್ಲಾವ್ ಹೋರಾಕೋವಾ (78) ಎಂಬ ಮಹಿಳೆ ಅಲೆಗಳ ಅಬ್ಬರಕ್ಕೆ ಸಿಲುಕಿ, ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.ವಾರದ ಹಿಂದೆ ಗೋಕರ್ಣಕ್ಕೆ ಬಂದಿದ್ದ ಮಿಲೋಸ್ಲಾವ್ ಅವರು ಮೇನ್‌ ಬೀಚ್‌ನಲ್ಲಿ ಇರುವ ಅತಿಥಿಗೃಹದಲ್ಲಿ ಉಳಿದಿದ್ದರು.ಝೆಕ್ ರಾಯಭಾರಿ ಕಚೇರಿಗೆ ವಿಷಯ ತಿಳಿಸಲಾಗಿದೆ. ಅವರ ಸೂಚನೆಯಂತೆ ಮುಂದಿನ ಕ್ರಮ ಜರುಗಿಸಲಾಗುವುದು’ ಎಂದು ಪೊಲೀಸರು ತಿಳಿಸಿದ್ದಾರೆ.

Read More »

ಬೆಂಗಳೂರು: ಆಕಸ್ಮಿಕ ಬೆಂಕಿಗೆ ಹೊತ್ತಿ ಉರಿದ ಶಂಕಿತ ಬಾಂಗ್ಲಾ ವಲಸಿಗರ ಶೆಡ್​ಗಳು

ಆನೇಕಲ್​​: ಶಂಕಿತ ಬಾಂಗ್ಲಾ ವಲಸಿಗರು ವಾಸವಿದ್ದ ಶೆಡ್​ಗಳಿಗೆ ಬೆಂಕಿ ಬಿದ್ದಿರುವಂತಹ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್​ಸಿಟಿ ಬಳಿಯ ಎಸ್​​.ಬಿಂಗೀಪುರ ಕೆರೆ ಸಮೀಪ ಅವಘಡ ಸಂಭವಿಸಿದೆ.ಆಕಸ್ಮಿಕ ಬೆಂಕಿಯಿಂದಾಗಿ ಗುಜರಿ ಶೆಡ್​ಗಳು ಹೊತ್ತಿ ಉರಿದಿವೆ. ಒಂದು ವಾರದ ಹಿಂದೆ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಶಂಕಿತ ಬಾಂಗ್ಲಾ ವಲಸಿಗರನ್ನು ತೆರವುಗೊಳಿಸಿದ್ದರು. ಸದ್ಯ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಬನ್ನೇರುಘಟ್ಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಶಂಕಿತ ಬಾಂಗ್ಲಾ ವಲಸಿಗರನ್ನ ವಶಕ್ಕೆ …

Read More »

ಆರ್‌ಎಫ್‌ಒ ಅನುಮಾನಾಸ್ಪದ ಸಾವು

ಮೈಸೂರು: ನಗರದ ಗ್ರಾಮಾಂತರ ಬಸ್ ನಿಲ್ದಾಣದ ಸಮೀಪದಲ್ಲಿರುವ ಲಾಡ್ಜ್‌ನ ಹಿಂಭಾಗದ ಕಾರಿಡಾರ್‌ನಲ್ಲಿ ಆರ್‌ಎಫ್‌ಒ ಮೃತದೇಹ ಪತ್ತೆಯಾಗಿದೆ.ತಿ.ನರಸೀಪುರದ ಸಾಮಾಜಿಕ ಅರಣ್ಯ ವಲಯದ ಆರ್‌ಎಫ್‌ಒ, ವಿಜಯಪುರದ ಇಂಡಿ ಮೂಲದ ಕಾಂತರಾಜ್ ಚೌಹಾಣ್ (32) ಮೃತರು. ಇವರು 15 ದಿನಗಳ ಹಿಂದೆ ತಿ.ನರಸೀಪುರಕ್ಕೆ ವರ್ಗಾವಣೆಗೊಂಡಿದ್ದರು.ಲಷ್ಕರ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ. ಗಂಗಾವತಿ ಮೂಲದ ಮಲ್ಲನಗೌಡ ಪಾಟೀಲ್ ಅವರು ನಗರದ ಲಾಡ್ಜ್ ಒಂದರಲ್ಲಿ ಕೊಠಡಿ ಬಾಡಿಗೆಗೆ ಪಡೆದಿದ್ದರು. ಅಲ್ಲಿಗೆ ಕಾಂತರಾಜ್ ಸಹ ಬಂದಿದ್ದಾರೆ. ರಾತ್ರಿ ಪಾನಮತ್ತರಾದ …

Read More »