Breaking News

BigTv News

ಬೆಂಗಳೂರಲ್ಲಿ ಕಟ್ಟಡದಿಂದ ಜಿಗಿದು ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ.!

16 ನೇ ಮಹಡಿಯಿಂದ ಜಿಗಿದು ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಬಾಗಲಗುಂಟೆಯ ಪ್ರಿನ್ಸ್ ಅಪಾರ್ಟ್ ಮೆಂಟ್ ಒಂದರಲ್ಲಿ ನಡೆದಿದೆ.ಮಂಗಳೂರು ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿ ನಿಕ್ಷೇಪ್ ಬಂಗೇರಾ (26) ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ನಿಕ್ಷೇಪ್ ಬಂಗೇರಾ ತನ್ನ ತಂದೆ ತಾಯಿ ಜೊತೆ ಬೆಂಗಳೂರಿನ ಬಾಗಲಗುಂಟೆಯ ಪ್ರಿನ್ಸ್ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದನು. ವಿದೇಶದಲ್ಲಿ ಇಂಜಿನಿಯರಿಂಗ್ ಮುಗಿಸಿ ವಾಪಸ್ ಆಗಿದ್ದ ನಿಕ್ಷೇಪ್ ಏಕಾಏಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅನಾರೋಗ್ಯದಿಂದ ನಿಕ್ಷೇಪ್ ಆತ್ಮಹತ್ಯೆ ಮಾಡಿಕೊಂಡಿರುವ …

Read More »

ಕೆಲಸ ಮುಗಿಸಿ ಮನೆಗೆ ಬಂದ ಪತಿಗೆ ಬಿಗ್ ಶಾಕ್: ನೀರಿನ ಸಂಪ್ ನಲ್ಲಿ ಪತ್ನಿ, ಇಬ್ಬರು ಮಕ್ಕಳ ಶವ ಪತ್ತೆ

ನೀರಿನ ಸಂಪ್ ನಲ್ಲಿ ತಾಯಿ, ಇಬ್ಬರು ಮಕ್ಕಳ ಶವ ಪತ್ತೆಯಾಗಿವೆ. ತುಮಕೂರು ತಾಲೂಕಿನ ಸಿಂಗನಹಳ್ಳಿ ಕಾಲೋನಿಯಲ್ಲಿ ಘಟನೆ ನಡೆದಿದೆ.ನೀರಿನ ಸಂಪ್ ನಲ್ಲಿ 26 ವರ್ಷದ ವಿಜಯಲಕ್ಷ್ಮಿ, ಮಕ್ಕಳಾದ ಚೇತನ್(5), ಚೈತನ್ಯ(5) ಅವರ ಮೃತದೇಹ ಪತ್ತೆಯಾಗಿವೆ. ಫ್ಯಾಕ್ಟರಿಯೊಂದರಲ್ಲಿ ವಿಜಯಲಕ್ಷ್ಮಿ ಅವರ ಪ್ರತಿ ಕೆಲಸ ಮಾಡುತ್ತಿದ್ದಾರೆ.ಕೆಲಸ ಮುಗಿಸಿ ಪತಿ ಮನೆಗೆ ಬಂದಾಗ ಪತ್ನಿ, ಮಕ್ಕಳು ಇರಲಿಲ್ಲ. ಗಾಬರಿಯಾದ ಅವರು ಪತ್ನಿ ಹಾಗೂ ಮಕ್ಕಳಿಗಾಗಿ ಹುಡುಕಾಟ ನಡೆಸಿದ್ದಾರೆ. ಮನೆಯ ಹೊರಗಡೆಯ ಸಂಪ್ ನಲ್ಲಿ ಶವಗಳು …

Read More »

ಮದುವೆ ವಿಚಾರವಾಗಿ ಗಲಾಟೆ : ಬೆಂಗಳೂರಿನಲ್ಲಿ ಪ್ರಿಯಕರನ ಮನೆಯಲ್ಲಿಯೇ ನೇಣಿಗೆ ಶರಣಾದ ಯುವತಿ

ಮದುವೆ ವಿಚಾರವಾಗಿ ಗಲಾಟೆ : ಬೆಂಗಳೂರಿನಲ್ಲಿ ಪ್ರಿಯಕರನ ಮನೆಯಲ್ಲಿಯೇ ನೇಣಿಗೆ ಶರಣಾದ ಯುವತಿಪ್ರಿಯಕರ ರಾಘವೇಂದ್ರ ವಿರುದ್ಧ ನಿಕಿತಾ ಪೋಷಕರು ಆರೋಪಿಸಿದ್ದು.ಐದರಿಂದ ಆರು ವರ್ಷ ನಿಕಿತಾ ಹಾಗೂ ರಾಘವೇಂದ್ರ ಪ್ರೀತಿಸುತ್ತಿದ್ದರು. ಹೊಸ ವರ್ಷದ ದಿನ ನಿಕಿತಾ ರಾಘವೇಂದ್ರ ಮನೆಗೆ ತೆರಳಿದಾಗ ತಾಳಿ ಕಟ್ಟಿ ಮದುವೆಯಾಗು ಎಂದು ಒತಾಯಿಸಿದ್ದರಂತೆ ಪ್ರಿಯಕರ ಹಾಗೂ ಮನೆಯವರು ಇಲ್ಲದ ವೇಳೆ ನಿಕಿತಾ ನೇಣಿಗೆ ಶರಣಾಗಿದ್ದು, ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಹುಬ್ಬಳ್ಳಿಯಲ್ಲಿ ಪೊಲೀಸರ ಅಮಾನುಷ ಕೃತ್ಯ ಆರೋಪ! ಬಿಜೆಪಿ ಕಾರ್ಯಕರ್ತೆಯ ವಿವಸ್ತ್ರಗೊಳಿಸಿ ಥಳಿಸಿದರಾ?

ಹುಬ್ಬಳ್ಳಿಯಲ್ಲಿ ನಡೆದಿರುವ ಘಟನೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಕೇಶ್ವಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಿಜೆಪಿ ಕಾರ್ಯಕರ್ತೆಯ ಮೇಲೆ ಪೊಲೀಸರು ಅಮಾನುಷವಾಗಿ ವರ್ತಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.ಬಿಜೆಪಿ ಕಾರ್ಯಕರ್ತೆ ಸುಜಾತಾ @ ವಿಜಯಲಕ್ಷ್ಮಿ ಹಂಡಿ ಅವರನ್ನು ಬಂಧನದ ವೇಳೆ ವಿವಸ್ತ್ರಗೊಳಿಸಿ ಥಳಿಸಲಾಗಿದೆ ಎಂಬ ಆರೋಪಗಳು ಪೊಲೀಸರ ವಿರುದ್ಧ ಕೇಳಿಬರುತ್ತಿವೆ. ಈ ಘಟನೆಗೆ ಕಾಂಗ್ರೆಸ್ ಕಾರ್ಪೋರೆಟರ್ ಸುವರ್ಣ ಕಲ್ಲಕುಂಟ್ಲಾ ನೀಡಿದ ದೂರೇ ಕಾರಣ ಎನ್ನಲಾಗಿದೆ.ಮತದಾರರ ಪಟ್ಟಿ ಪರಿಷ್ಕರಣೆ – …

Read More »

ಚಾಮರಾಜನಗರ| ಕೆಎಸ್‌ಆರ್‌ಟಿಸಿ ಬಸ್‌ – ಲಾರಿ ಮಧ್ಯೆ ಅಪಘಾತ: ಹಲವರಿಗೆ ಗಾಯ

ಚಾಮರಾಜನಗರ: ತಾಲ್ಲೂಕಿನ ಬೆಂಡರವಾಡಿಯ ಬಳಿ ಮಂಗಳವಾರ ರಾತ್ರಿ ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಲಾರಿ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ಹಲವು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.ಮೈಸೂರಿನಿಂದ ಚಾಮರಾಜನಗರದ ಕಡಗೆ ಬರುತ್ತಿದ್ದ ಅಶ್ವಮೇಧ ಬಸ್‌ ಹಾಗೂ ನಗರದಿಂದ ನಂಜನಗೂಡಿನ ಕಡೆಗೆ ತೆರಳುತ್ತಿದ್ದ ಲಾರಿ ಮಧ್ಯೆ ಬೆಂಡರವಾಡಿ ಗ್ರಾಮದ ತಿರುವೊಂದರಲ್ಲಿ ಅಪಘಾತವಾಗಿದೆಅಪಘಾತದ ತೀವ್ರತೆಗೆ ಬಸ್‌ನ ಮುಂಭಾಗ ನಜ್ಜುಗುಜ್ಜಾಗಿದ್ದು ಲಾರಿ ಹಾಗೂ ಬಸ್‌ನ ಚಾಲಕ ಸೇರಿದಂತೆ ಹಲವು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಹೆಚ್ಚಿನವರು ನಗರ …

Read More »

ನೆಲಮಂಗಲದಲ್ಲಿ ಪತ್ನಿ ಕೊಲೆ: ಪತಿ ಸೆರೆ

ಕೇಬಲ್ ವೈರ್ ಬಳಸಿ ಪತ್ನಿಯ ಕುತ್ತಿಗೆಗೆ ಬಿಗಿದು ಕೊಲೆ ಮಾಡಿರುವ ಘಟನೆ ತಾಲ್ಲೂಕಿನ ಹುಣಸೆಘಟ್ಟೆಪಾಳ್ಯದಲ್ಲಿ ನಡೆದಿದೆ.ಕನಕಪುರದ ಅರ್ಚನಾ(24) ಕೊಲೆಯಾದವರು. ಪತಿ-ಪತ್ನಿ ಜಗಳ ಮಾಡಿಕೊಂಡಿದ್ದರು. ಜಗಳ ವಿಕೋಪಕ್ಕೆ ತಿರುಗಿ ಪತ್ನಿಯ ಕೊಲೆಯಲ್ಲಿ ಅಂತ್ಯವಾಗಿದೆ.ಸ್ಥಳೀಯ ತೋಟದ ಕೆಲಸಕ್ಕೆ ದಂಪತಿ ಇತ್ತೀಚೆಗೆ ಬಂದಿದ್ದರು. ಆತ್ಮಹತ್ಯೆ ಎಂದು ಬಿಂಬಿಸಿ ತಲೆಮರಿಸಿಕೊಂಡಿದ್ದ ಪತಿ ಆನಂದನನ್ನು ನೆಲಮಂಗಲ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

Read More »

ಕಾರು ಪಲ್ಟಿ: ಕಾರು ಸಹಿತ ಇಬ್ಬರ ದಹನ

ಹೊನ್ನಾವರ ಗೇರುಸೊಪ್ಪ ಬಳಿ ಕಾರು ಸಹಿತ ಇಬ್ಬರ ದಹನವಾದ ಘಟನೆ ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ.ಗೇರುಸೊಪ್ಪ ಸೂಳೆಮುರ್ಕಿ ಕ್ರಾಸ್ ಬಳಿ ಕಾರ್ ಪಲ್ಟಿಯಾಗಿ ಬೆಂಕಿ ಹೊತ್ತಿಕೊಂಡಿರಬೇಕು ಎಂದು ಶಂಕಿಸಲಾಗಿದೆ .ಕಾರ್ ನಲ್ಲಿದ್ದ ಇಬ್ಬರು ಸಜೀವ ದಹನವಾಗಿದ್ದಾರೆ.ಕಾರ್ ನಂಬರ್ ಪ್ಲೇಟ್ ಸಹ ಸುಟ್ಟು ಹೋಗಿದ್ದು, ಎಲ್ಲಿಯ ಕಾರ್? ಅದರಲ್ಲಿ ಇದ್ದವರು ಯಾರು ಎಂದು ಗುರುತಿಸುವುದು ಕಷ್ಟವಾಗುತ್ತಿದೆ. ಕಾರ್ ಸೂಳೆ ಮುರ್ಕಿ ಕ್ರಾಸ್ ಬಳಿ ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾಗಿ ಬೆಂಕಿ ಹತ್ತಿಕೊಂಡಿರಬಹುದು ಎಂದು …

Read More »

ಎರಡನೇ ಪತ್ನಿಯನ್ನು ಬಿಟ್ಟು ಬರುವಂತೆ ಹೇಳಿ ರೌಡಿಗೆ ಇರಿದ ಮೊದಲ ಪತ್ನಿ!

ಎರಡನೇ ಪತ್ನಿಯನ್ನು ಬಿಟ್ಟು ಬರುವಂತೆ ಹೇಳಿ ರೌಡಿಗೆ ಇರಿದ ಮೊದಲ ಪತ್ನಿ!ಸೈಯದ್ ಕೈಗೆ ಗಂಭೀರ ಗಾಯವಾಗಿದ್ದು ಕಣ್ಣಿನ ಭಾಗಕ್ಕೂ ಪೆಟ್ಟು ಬಿದ್ದಿದ್ದೆ.ಅವರು ಮೊದಲ ಪತ್ನಿಯ ವಿರುದ್ಧ ಜೆ.ಜೆ ನಗರ ಠಾಣೆಗೆ ದೂರು ನೀಡಿದ್ದಾರೆ. ಮೊದಲ ಪತ್ನಿ ಬೆದರಿಕೆ ಹಾಕಿ ವಿಡಿಯೊ ಮಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಜೈಲಿಗೆ ಹೋಗಿದ್ದ ಸೈಯದ್ ಇತ್ತೀಚೆಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಡುಗಡೆ ಆಗಿದ್ದರು. ‘ದೂರು ಸ್ವೀಕರಿಸಿ ತನಿಖೆ ನಡೆಸಲಾಗುತ್ತಿದೆ. ಎರಡನೇ ಪತ್ನಿಯನ್ನು ಬಿಟ್ಟು …

Read More »

ಬಾಗಿಲಿಗೆ ನೀರು ಹಾಕುತ್ತಿದ್ದ ಮಹಿಳೆಗೆ ಚಾಕು ತೋರಿಸಿ ಚಿನ್ನದ ಸರ ಕಸಿದು ಪರಾರಿ: 24 ಗಂಟೆಗಳಲ್ಲೇ ಆರೋಪಿ ಅರೆಸ್ಟ್

ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಸೋಮವಾರ ಬೆಳಗ್ಗೆ ಮನೆ ಬಾಗಿಲಿಗೆ ನೀರು ಹಾಕುತ್ತಿದ್ದ ಮಹಿಳೆಗೆ ಚಾಕು ತೋರಿಸಿ ಚಿನ್ನದ ಸರ ಕಸಿದುಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಭದ್ರಾವತಿ ಪೊಲೀಸರು 24 ಗಂಟೆಗಳಲ್ಲಿ ಬಂಧಿಸಿದ್ದಾರೆ.ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಕಡರನಾಯಕನಹಳ್ಳಿಯ ಹೊಸಪಾಳ್ಯ ಗ್ರಾಮದ ಬಿ.ಪ್ರತಾಪ್(25) ಬಂಧಿತ ಆರೋಪಿ. ಭದ್ರಾವತಿಯ ಜೆಡಿಕಟ್ಟೆಯ ಭಾಗ್ಯ(23) ಮನೆಯ ಬಳಿ ಬಾಗಿಲು ತೊಳೆಯಲು ಡ್ರಮ್ ನಿಂದ ನೀರು ತೆಗೆಯುತ್ತಿದ್ದ ವೇಳೆ ಬೈಕ್ ನಲ್ಲಿ ಬಂದ ಆರೋಪಿ ಚಾಕು ತೋರಿಸಿ ಬೆದರಿಸಿದ್ದಾನೆ. …

Read More »

ಹಾಡುಹಗಲೇ ಚಾಕು ಇರಿತ: ತಮ್ಮನ ಮೇಲೆ ಅಣ್ಣನ ಮಾರಣಾಂತಿಕ ಹಲ್ಲೆ..

ವಿದ್ಯಾಕಾಶಿ ಧಾರವಾಡದಲ್ಲಿ ಹಾಡುಹಗಲೇ ನಡೆದ ಭೀಕರ ಘಟನೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ರಕ್ತಸಂಬಂಧವನ್ನೇ ಮರೆತ ಅಣ್ಣನೊಬ್ಬ ತನ್ನ ಸ್ವಂತ ತಮ್ಮನನ್ನು ಕೊಲೆ ಮಾಡುವ ಉದ್ದೇಶದಿಂದ ಚಾಕುವಿನಿಂದ ಇರಿದ ಘಟನೆ ನಗರದಲ್ಲಿ ವರದಿಯಾಗಿದೆ. ಘಟನೆಯಲ್ಲಿ ಸೂಫಿಯಾನ್ ಎಂಬಾತ ತನ್ನ ಸಹೋದರ ಮೊಹ್ಮದ್ ನದೀಂ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಇಬ್ಬರ ನಡುವೆ ನಡೆದ ಮಾತಿನ ಚಕಮಕಿ ಕ್ಷಣಾರ್ಧದಲ್ಲಿ ವಿಕೋಪಕ್ಕೆ ತಿರುಗಿದ್ದು, ಆಕ್ರೋಶಗೊಂಡ ಸೂಫಿಯಾನ್ ಚಾಕುವಿನಿಂದ ನದೀಂಗೆ ಇರಿದಿದ್ದಾನೆ ಎಂದು ತಿಳಿದುಬಂದಿದೆ. ತೀವ್ರ …

Read More »