Breaking News

BigTv News

ಕಾಂಗ್ರೆಸ್ ಮುಖಂಡನ ಮನೆ ಮುಂದೆ ವಾಮಾಚಾರ: ಲಗ್ನ ಪತ್ರಿಕೆಯೊಂದಿಗೆ ನವದಂಪತಿಗೆ ಕೆಡುಕು ಮಾಡಲು ಯತ್ನ

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಸಕ್ಕನಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡ ಕುಪೇಂದ್ರ ಅವರ ಮನೆ ಮುಂದೆ ವಾಮಾಚಾರ ನಡೆಸಿರುವ ಘಟನೆ ನಡೆದಿದೆ. ಲಗ್ನ ಪತ್ರಿಕೆ, ಮೂಳೆ ಹಾಗೂ ಕಪ್ಪು ಅನ್ನ ಬಳಸಿ ವಾಮಾಚಾರ ಮಾಡಿರುವುದು ಪತ್ತೆಯಾಗಿದೆ. ಕುಪೇಂದ್ರ ಅವರು ಒಂದು ತಿಂಗಳ ಹಿಂದೆ ತಮ್ಮ ಮಗನ ವಿವಾಹ ಮಾಡಿದ್ದರು. ನವದಂಪತಿಗೆ ಕೆಡುಕು ಉಂಟುಮಾಡುವ ಉದ್ದೇಶದಿಂದ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಘಟನೆಯಿಂದ ಕುಪೇಂದ್ರ ಕುಟುಂಬ ಆತಂಕಕ್ಕೊಳಗಾಗಿದ್ದು, …

Read More »

ಮೊಬೈಲ್ ಅಂಗಡಿಯಲ್ಲಿ ಕಳವು, ನಾಲ್ವರು 10ನೇ ತರಗತಿ ವಿದ್ಯಾರ್ಥಿಗಳ ಬಂಧನ!

ಉತ್ತರ ಕನ್ನಡದ ಮುಂಡಗೋಡಿನಲ್ಲಿ ಮೊಬೈಲ್ ಅಂಗಡಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ವಸತಿ ಶಾಲೆಯ 10ನೇ ತರಗತಿಯ ನಾಲ್ವರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸಿಸಿಟಿವಿ ದೃಶ್ಯ ಆಧರಿಸಿ ವಿದ್ಯಾರ್ಥಿಗಳನ್ನು ಪತ್ತೆಹಚ್ಚಿ, ₹63,920 ಮೌಲ್ಯದ ಮೊಬೈಲ್ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳು ರಾತ್ರಿ ವಸತಿ ನಿಲಯದಿಂದ ಹೊರಬಂದು, ಮೊಬೈಲ್ ಅಂಗಡಿಯ ಬೀಗ ಮುರಿದು ಮೊಬೈಲ್‌ಗಳು, ಪವರ್ ಬ್ಯಾಂಕ್, ಇಯರ್‌ಬಡ್ಸ್, ಸ್ಪೀಕರ್ ಹಾಗೂ ಚಾರ್ಜರ್‌ಗಳನ್ನು ಕಳವು ಮಾಡಿದ್ದರು. ಕೃತ್ಯಕ್ಕೆ ಬಳಸಿದ ಉಪಕರಣಗಳನ್ನೂ ಪೊಲೀಸರು …

Read More »

‘KPSC’ ನೇಮಕಾತಿ ಅಕ್ರಮ: ಆರೋಪಿ ಬಸವರಾಜ್ ಕನ್ನಾಳೆ ಡೈರಿಯಲ್ಲಿ ಬಯಲಾಯ್ತು ಲಕ್ಷ ಲಕ್ಷ ಹಣದ ಲೆಕ್ಕ!

ಬೆಂಗಳೂರು: KPSC ನೇಮಕಾತಿ ಪರೀಕ್ಷೆಯ ಅಕ್ರಮ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಪ್ರಮುಖ ಆರೋಪಿ ಬಸವರಾಜ್ ಕನ್ನಾಳೆ ಮನೆಯಲ್ಲಿ ಸಿಐಡಿಗೆ ಮಹತ್ವದ ಡೈರಿ ಪತ್ತೆಯಾಗಿದೆ. ಡೈರಿಯಲ್ಲಿ ಅಕ್ರಮವಾಗಿ ಪರೀಕ್ಷೆ ಬರೆದ ಅಭ್ಯರ್ಥಿಗಳ ಹೆಸರು, ಪಡೆದ ಹಣ ಹಾಗೂ ಬಾಕಿ ಹಣದ ವಿವರಗಳಿವೆ. 20ಕ್ಕೂ ಅಧಿಕ ಅಭ್ಯರ್ಥಿಗಳಿಗೆ ರಹಸ್ಯ ತರಬೇತಿ ನೀಡಲು ಕನ್ನಾಳೆ ಮೂರು ಐಷಾರಾಮಿ ವಿಲ್ಲಾಗಳನ್ನು ಬುಕ್ ಮಾಡಿದ್ದ ಎನ್ನಲಾಗಿದೆ. ಅಭ್ಯರ್ಥಿಗಳಿಂದ ಮುಂಗಡವಾಗಿ ಲಕ್ಷಾಂತರ ರೂಪಾಯಿ ಪಡೆದು, ಉಳಿದ ಹಣದ ವಿವರಗಳನ್ನು …

Read More »

ರೌಡಿಶೀಟರ್ ಗಳ ನಡುವೆ ಹೊಡೆದಾಟ: ಓರ್ವ ರೌಡಿಶೀಟರ್ ನ ಕೊಲೆ

ಬೆಂಗಳೂರು: ಗಣೇಶ ವಿಸರ್ಜನೆ ವೇಳೆ ಎರಡು ರೌಡಿಶೀಟರ್‌ಗಳ ಗುಂಪಿನ ನಡುವೆ ನಡೆದ ಹೊಡೆದಾಟದಲ್ಲಿ ದೀಪಕ್‌ ಎಂಬ ರೌಡಿಶೀಟರ್‌ ಕೊಲೆಯಾದ ಘಟನೆ ಪೀಣ್ಯ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಶನಿವಾರ ದೀಪಕ್‌ ಹಾಗೂ ಈಶ್ವರ್‌, ನೇಪಾಳಿ ಸುಮನ್‌ ಗುಂಪಿನ ನಡುವೆ ಗಲಾಟೆ ನಡೆದಿತ್ತು. ಭಾನುವಾರ ಚೊಕ್ಕಸಂದ್ರ ಕೆರೆಯಲ್ಲಿ ಗಣೇಶ ವಿಸರ್ಜನೆ ವೇಳೆ ಮತ್ತೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ಕಾಲು ತುಳಿದ ವಿಚಾರಕ್ಕೆ ದೀಪಕ್‌ಗೆ ಡ್ರಾಗರ್‌ನಿಂದ ಇರಿಯಲಾಗಿದೆ ಎನ್ನಲಾಗಿದೆ. ಗಂಭೀರವಾಗಿ …

Read More »

ಕುಂದಾಪುರ : ಬಾರ್‌ನಲ್ಲಿ ಊಟ ಮಾಡುತ್ತಿದ್ದವರ ಗಲಾಟೆ, ಸೋಡಾ ಬಾಟಲಿಯಿಂದ ಹಲ್ಲೆ

ಕುಂದಾಪುರ: ಬಗ್ವಾಡಿ ಕ್ರಾಸ್‌ನ ಬಾರ್‌ನಲ್ಲಿ ಊಟ ಮಾಡುತ್ತಿದ್ದ ವೇಳೆ ಜೋರಾಗಿ ಮಾತನಾಡುತ್ತಿದ್ದವರಿಗೆ ನಿಧಾನವಾಗಿ ಮಾತನಾಡುವಂತೆ ತಿಳಿಸಿದ್ದಕ್ಕೆ ಮಾತಿಗೆ ಮಾತು ಬೆಳೆದು ದಿನೇಶ್‌ ಲೂವಿಸ್‌ (36) ಎಂಬುವರ ಮೇಲೆ ನಾಲ್ವರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ವೇಳೆ ಸಚಿನ್‌ ಎಂಬಾತ ಸೋಡಾ ಬಾಟಲಿಯಿಂದ ದಿನೇಶ್‌ ತಲೆಗೆ ಹೊಡೆದಿದ್ದು, ಬಾಟಲಿ ಒಡೆದು ತಲೆ ಹಾಗೂ ಕೆನ್ನೆಗೆ ಗಂಭೀರ ಗಾಯಗಳಾಗಿವೆ. ಶ್ರೀಕಾಂತ್‌ ಶೆಟ್ಟಿ ಹಾಗೂ ಮಂಜು ಶೆಟ್ಟಿ ಕೂಡ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ …

Read More »

ಹನೂರು : ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಬೆಳೆದಿದ್ದ 292 ಗಾಂಜಾ ಗಿಡಗಳು ವಶ

ಚಾಮರಾಜನಗರ: ತಾಲೂಕಿನ ಕೂಳಿಹಟ್ಟಿ, ಬೆಳ್ಳಾಜಿ ಬೀಟ್‌ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಬೆಳೆದಿದ್ದ 292 ಗಾಂಜಾ ಗಿಡಗಳನ್ನು ಅಬಕಾರಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ. ವಶಪಡಿಸಿಕೊಂಡ ಗಾಂಜಾ ಗಿಡಗಳ ಒಟ್ಟು ತೂಕ 213 ಕೆ.ಜಿ. 600 ಗ್ರಾಂ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಖಚಿತ ಮಾಹಿತಿ ಆಧರಿಸಿ ನಡೆದ ಕಾರ್ಯಾಚರಣೆಯಲ್ಲಿ ಅರಣ್ಯ ಪ್ರದೇಶದಲ್ಲಿ ಗಾಂಜಾ ಬೆಳೆದಿರುವುದು ಪತ್ತೆಯಾಗಿದೆ. ಈ ಸಂಬಂಧ ನೆಲ್ಲಿಕತ್ರಿ ಗ್ರಾಮದ ಐವರ ವಿರುದ್ಧ …

Read More »

ಬೆಂಗಳೂರಲ್ಲಿ ಹೆಂಡತಿ ಹೊಡೆದಿದ್ದಕ್ಕೆ, ಮನನೊಂದು ಆತ್ಮಹತ್ಯೆಗೆ ಶರಣಾದ ಪತಿ!

ಬೆಂಗಳೂರು: ಲಗ್ಗೆರೆಯ ಬಾಡಿಗೆ ಮನೆಯಲ್ಲಿ ನವೀನ್ ಎಂಬ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತದೇಹದಲ್ಲಿ ಗಾಯದ ಗುರುತುಗಳು ಕಂಡುಬಂದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿ ನಂದಿನಿ ಲೇಔಟ್ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸುಮಾರು 15 ವರ್ಷಗಳ ಹಿಂದೆ ನವೀನ್ ಹಾಗೂ ಕವಿತಾ ವಿವಾಹವಾಗಿದ್ದು, ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು. ನವೀನ್ ಚಾಲಕನಾಗಿ ಕೆಲಸ ಮಾಡುತ್ತಿದ್ದು, ದಂಪತಿ …

Read More »

ಹಾಲು ಉಕ್ಕಿಸುವ ಕಾರ್ಯಕ್ರಮ: ಸ್ನೇಹಿತೆ ಆಹ್ವಾನಿಸಿ ಚಿನ್ನ ದೋಚಿದ್ದ ಮೂವರ ಸೆರೆ

ಬೆಂಗಳೂರು: ಬಾಡಿಗೆ ಮನೆಯಲ್ಲಿ ಹಾಲು ಉಕ್ಕಿಸುವ ನೆಪದಲ್ಲಿ ಸ್ನೇಹಿತೆಯನ್ನು ಕರೆಸಿಕೊಂಡು ಹಲ್ಲೆ ಮಾಡಿ ನಗದು ಹಾಗೂ ಚಿನ್ನಾಭರಣ ದೋಚಿದ ಆರೋಪದ ಮೇಲೆ ಪೀಣ್ಯ ಠಾಣೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಕುಣಿಗಲ್ ತಾಲ್ಲೂಕಿನ ಬೋರೇಗೌಡ (32), ಚಂದ್ರಶೇಖರ ಅಲಿಯಾಸ್ ಅಭಿ (28) ಹಾಗೂ ಸತೀಶ್ (26) ಬಂಧಿತರು. ಬೋರೇಗೌಡನ ಪರಿಚಯವಿದ್ದ 34 ವರ್ಷದ ಮಹಿಳೆಯನ್ನು ನಾಗಸಂದ್ರದ ಬಾಡಿಗೆ ಮನೆಗೆ ಹಾಲು ಉಕ್ಕಿಸುವ ಕಾರ್ಯಕ್ರಮದ ನೆಪದಲ್ಲಿ ಕರೆಸಿಕೊಂಡಿದ್ದ. ಮಹಿಳೆ ಒಂದು ಲಕ್ಷ ರೂ. …

Read More »

ಲೈಂಗಿಕ ಕಿರುಕುಳ ಆರೋಪ; ಶಾಲಾ ಗೆಳೆಯನ ಜೊತೆ ಸೇರಿ ವ್ಯಕ್ತಿಯ ಹತ್ಯೆ, ಇಬ್ಬರು ಅರೆಸ್ಟ್

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮದಲ್ಲಿ ಸೆಪ್ಟೆಂಬರ್ 21ರಂದು ನಡೆದ ರಣವೀರ ರಜಪೂತ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಶ್ರೀದೇವಿ ರಜಪೂತ ಹಾಗೂ ಬೈರು ಪವಾರ್ ಎಂಬ ಇಬ್ಬರನ್ನು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ರಣವೀರ ಶ್ರೀದೇವಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದ್ದು, ಇದರಿಂದ ಆಕ್ರೋಶಗೊಂಡ ಶ್ರೀದೇವಿ ಮತ್ತು ಆಕೆಯ ಶಾಲಾ ಗೆಳೆಯ ಬೈರು ಪವಾರ್ ಸೇರಿಕೊಂಡು ಕೊಲೆಗೆ ಸಂಚು ರೂಪಿಸಿದ್ದರು ಎನ್ನಲಾಗಿದೆ. ಘಟನೆ ನಡೆದ ರಾತ್ರಿ ಬೈಕ್ ಸ್ಟಾರ್ಟ್ …

Read More »

ಸುಳ್ಯ | ಬಾಲಕಿಗೆ ಲೈಂಗಿಕ ಕಿರುಕುಳ ಪ್ರಕರಣ; ಆರೋಪಿಗೆ ನ್ಯಾಯಾಂಗ ಬಂಧನ

ಸುಳ್ಯದಲ್ಲಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಕೃಷ್ಣಕುಮಾರ್ ಎಂಬಾತನ ವಿರುದ್ಧ ಬಾಲಕಿಯ ಮನೆಯವರು ದೂರು ನೀಡಿದ್ದಾರೆ. ಮನೆಯಲ್ಲಿ ಇಬ್ಬರು ಬಾಲಕಿಯರು ಮಾತ್ರ ಇದ್ದ ಸಂದರ್ಭದಲ್ಲಿ ಮನೆಗೆ ಬಂದ ಆರೋಪಿ, ಬಾಲಕಿಯ ಬಳಿ ನೀರು ಕೇಳಿ ಬಳಿಕ ಆಕೆಯ ಕೈ ಹಿಡಿದು ಎಳೆದಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಬಾಲಕಿಯರು ಬೊಬ್ಬೆ ಹಾಕಿದಾಗ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಬಳಿಕ ಬಾಲಕಿಯ ಮನೆಯವರು ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದು, …

Read More »